Bible

Matthew 2 - WEB (Kannada)

1 Now when Jesus was born in Bethlehem of Judea in the days of Herod the king, behold, wise men{The word for "wise men" (magoi) can also mean teachers, priests, physicians, astrologers, seers, interpreters of dreams, or sorcerers.} from the east came to Jerusalem, saying,ಅರಸನಾದ ಹೆರೋದನ ದಿನಗಳಲ್ಲಿ ಯೂದಾಯದ ಬೇತ್ಲೆಹೇಮಿನಲ್ಲಿ ಯೇಸು ಹುಟ್ಟಿದಾಗ ಇಗೋ, ಮೂಡಲದಿಂದ ಜ್ಞಾನಿಗಳು ಯೆರೂಸಲೇಮಿಗೆ ಬಂದು --

2 "Where is he who is born King of the Jews? For we saw his star in the east, and have come to worship him."ಯೆಹೂದ್ಯರ ಅರಸ ನಾಗಿ ಹುಟ್ಟಿದಾತನು ಎಲ್ಲಿದ್ದಾನೆ? ಯಾಕೆಂದರೆ ನಾವು ಮೂಡಲದಲ್ಲಿ ಆತನ ನಕ್ಷತ್ರವನ್ನು ನೋಡಿ ಆತನನ್ನು ಆರಾಧಿಸುವದಕ್ಕೆ ಬಂದಿದ್ದೇವೆ ಅಂದರು.

3 When Herod the king heard it, he was troubled, and all Jerusalem with him.ಅರಸನಾದ ಹೆರೋದನು ಇವುಗಳನ್ನು ಕೇಳಿ ಅವನು ಯೆರೂಸ ಲೇಮಿನವರೆಲ್ಲರೊಂದಿಗೆ ಕಳವಳಪಟ್ಟನು.

4 Gathering together all the chief priests and scribes of the people, he asked them where the Christ would be born.ಇದಲ್ಲದೆ ಅವನು ಜನರ ಎಲ್ಲಾ ಪ್ರಧಾನ ಯಾಜಕರನ್ನೂ ಶಾಸ್ತ್ರಿಗಳನ್ನೂ ಒಟ್ಟುಗೂಡಿಸಿ ಕ್ರಿಸ್ತನು ಹುಟ್ಟತಕ್ಕದ್ದು ಎಲ್ಲಿ ಎಂದು ಅವರನ್ನು ವಿಚಾರಿಸಿದನು.

5 They said to him, "In Bethlehem of Judea, for thus it is written through the prophet,ಅದಕ್ಕೆ ಅವರು ಅವನಿಗೆ--ಯೂದಾಯದ ಬೇತ್ಲೆಹೇಮಿ ನಲ್ಲಿಯೇ; ಯಾಕಂದರೆ ಪ್ರವಾದಿಯಿಂದ ಹೀಗೆ ಬರೆಯಲ್ಪಟ್ಟಿದೆ--

6 'You Bethlehem, land of Judah, Are in no way least among the princes of Judah: For out of you shall come forth a governor, Who shall shepherd my people, Israel.'"ಯೂದಾಯದ ಸೀಮೆಯಲ್ಲಿನ ಬೇತ್ಲೆಹೇಮೇ, ಯೂದಾಯದ ಮುಖ್ಯ ಪಟ್ಟಣಗಳಲ್ಲಿ ನೀನು ಎಷ್ಟು ಮಾತ್ರವೂ ಸಣ್ಣದಲ್ಲ; ಯಾಕಂದರೆ ನನ್ನ ಜನರಾದ ಇಸ್ರಾಯೇಲ್ಯರನ್ನು ಆಳುವ ಒಬ್ಬ ಅಧಿಪತಿಯು ನಿನ್ನೊಳಗಿಂದ ಬರುವನು ಎಂದು ಹೇಳಿದರು.

7 Then Herod secretly called the wise men, and learned from them exactly what time the star appeared.ಆಗ ಹೆರೋದನು ರಹಸ್ಯವಾಗಿ ಆ ಜ್ಞಾನಿಗಳನ್ನು ಕರೆಯಿಸಿ ಆ ನಕ್ಷತ್ರವು ಯಾವ ಕಾಲದಲ್ಲಿ ಕಾಣಿಸಿಕೊಂಡಿತೆಂದು ಅವರನ್ನು ಪರಿಷ್ಕಾರವಾಗಿ ವಿಚಾರಿಸಿಕೊಂಡು

8 He sent them to Bethlehem, and said, "Go and search diligently for the young child. When you have found him, bring me word, so that I also may come and worship him."ಅವರನ್ನು ಬೇತ್ಲೆಹೇಮಿಗೆ ಕಳುಹಿ ಸುವಾಗ--ನೀವು ಹೋಗಿ ಆ ಶಿಶುವಿನ ವಿಷಯದಲ್ಲಿ ಪರಿಷ್ಕಾರವಾಗಿ ಹುಡುಕಿ ಆತನನ್ನು ಕಂಡುಕೊಂಡ ಮೇಲೆ ತಿರಿಗಿ ಬಂದು ನನಗೆ ತಿಳಿಸಿರಿ; ಆಗ ನಾನು ಸಹ ಬಂದು ಆತನನ್ನು ಆರಾಧಿಸುವೆನು ಅಂದನು.

9 They, having heard the king, went their way; and behold, the star, which they saw in the east, went before them, until it came and stood over where the young child was.ಅವರು ಅರಸನ ಮಾತನ್ನು ಕೇಳಿ ಹೊರಟಾಗ ಇಗೋ, ಮೂಡಲದಲ್ಲಿ ಅವರು ಕಂಡ ನಕ್ಷತ್ರವು ಶಿಶುವು ಇದ್ದ ಸ್ಥಳದ ಮೇಲೆ ಬಂದು ನಿಲ್ಲುವ ತನಕ ಅವರ ಮುಂದೆ ಹೋಯಿತು.

10 When they saw the star, they rejoiced with exceedingly great joy.ಅವರು ಆ ನಕ್ಷತ್ರವನ್ನು ಕಂಡು ಅತ್ಯಧಿಕವಾದ ಆನಂದದಿಂದ ಸಂತೋಷಪಟ್ಟರು.

11 They came into the house and saw the young child with Mary, his mother, and they fell down and worshiped him. Opening their treasures, they offered to him gifts: gold, frankincense, and myrrh.ಅವರು ಮನೆಯೊಳಕ್ಕೆ ಬಂದಾಗ ಆ ಶಿಶುವನ್ನು ಆತನ ತಾಯಿಯಾದ ಮರಿಯಳೊಂದಿಗೆ ಕಂಡುಕೊಂಡು ಸಾಷ್ಟಾಂಗವೆರಗಿ ಆತನನ್ನು ಆರಾಧಿಸಿದರು; ತರುವಾಯ ತಮ್ಮ ಬೊಕ್ಕಸಗಳನ್ನು ತೆರೆದು ಚಿನ್ನ ಧೂಪ ರಕ್ತಬೋಳಗಳನ್ನು ಆತನಿಗೆ ಕಾಣಿಕೆಯಾಗಿ ಅರ್ಪಿಸಿದರು.

12 Being warned in a dream that they shouldn't return to Herod, they went back to their own country another way.ಆಮೇಲೆ ಅವರು ಹೆರೋದನ ಬಳಿಗೆ ಹಿಂತಿರುಗಬಾರದೆಂದು ಕನಸಿನಲ್ಲಿ ದೇವರಿಂದ ಎಚ್ಚರಿಸಲ್ಪಟ್ಟು ಬೇರೊಂದು ದಾರಿಯಿಂದ ತಮ್ಮ ಸ್ವದೇಶಕ್ಕೆ ಹೊರಟುಹೋದರು.

13 Now when they had departed, behold, an angel of the Lord appeared to Joseph in a dream, saying, "Arise and take the young child and his mother, and flee into Egypt, and stay there until I tell you, for Herod will seek the young child to destroy him."ಅವರು ಹೋದಮೇಲೆ ಇಗೋ, ಕರ್ತನ ದೂತನು ಕನಸಿನಲ್ಲಿ ಯೋಸೇಫನಿಗೆ ಕಾಣಿಸಿ ಕೊಂಡು -- ಎದ್ದು ಈ ಶಿಶುವನ್ನೂ ಇದರ ತಾಯಿ ಯನ್ನೂ ಕರಕೊಂಡು ಐಗುಪ್ತಕ್ಕೆ ಓಡಿಹೋಗಿ ನಾನು ನಿನಗೆ ತಿಳಿಸುವ ತನಕ ಅಲ್ಲೇ ಇರು; ಯಾಕಂದರೆ ಹೆರೋದನು ಈ ಶಿಶುವನ್ನು ಕೊಲ್ಲಬೇಕೆಂದು

14 He arose and took the young child and his mother by night, and departed into Egypt,ಆಗ ಅವನು ಎದ್ದು ಆ ಶಿಶುವನ್ನೂ ಅದರ ತಾಯಿಯನ್ನೂ ಕರ ಕೊಂಡು ರಾತ್ರಿಯಲ್ಲಿ ಐಗುಪ್ತಕ್ಕೆ ಹೊರಟುಹೋಗಿ ಹೆರೋದನು ಸಾಯುವ ವರೆಗೆ ಅಲ್ಲೇ ಇದ್ದನು.

15 and was there until the death of Herod; that it might be fulfilled which was spoken by the Lord through the prophet, saying, "Out of Egypt I called my son."ಅದು--ನಾನು ನನ್ನ ಮಗನನ್ನು ಐಗುಪ್ತದಿಂದ ಕರೆದೆನು ಎಂದು ಪ್ರವಾದಿಯ ಮುಖಾಂತರ ಕರ್ತನಿಂದ ಹೇಳಲ್ಪಟ್ಟ ಮಾತು ನೆರವೇರುವಂತೆ ಹೀಗಾಯಿತು.

16 Then Herod, when he saw that he was mocked by the wise men, was exceedingly angry, and sent out, and killed all the male children who were in Bethlehem and in all the surrounding countryside, from two years old and under, according to the exact time which he had learned from the wise men.ಆಗ ಜ್ಞಾನಿಗಳು ತನ್ನನ್ನು ಪರಿಹಾಸ್ಯ ಮಾಡಿ ದರೆಂದು ಹೆರೋದನು ತಿಳಿದು ಅತಿ ರೋಷಗೊಂಡ ವನಾಗಿ ತಾನು ಅವರ ಮೂಲಕ ಪರಿಷ್ಕಾರವಾಗಿ ಶೋಧಿಸಿದ ಕಾಲಕ್ಕನುಸಾರ ಬೆತ್ಲೆಹೇಮಿನಲ್ಲಿಯೂ ಅದರ ಎಲ್ಲಾ ಪ್ರಾಂತ್ಯಗಳ ಮೇರೆಗಳಲ್ಲಿಯೂ ಎರಡು ವರುಷ ಮತ್ತು ಅದರೊಳಗಿದ್ದ ಎಲ್ಲಾ ಮಕ್ಕ

17 Then that which was spoken by Jeremiah the prophet was fulfilled, saying,ಆಗ ಪ್ರವಾದಿಯಾದ ಯೆರೆವಿಾಯ ನಿಂದ ಹೇಳಲ್ಪಟ್ಟದ್ದು ನೆರವೇರಿತು;

18 "A voice was heard in Ramah, Lamentation, weeping and great mourning, Rachel weeping for her children; She wouldn't be comforted, Because they are no more."ಅದೇನಂದರೆ--ರಾಮದಲ್ಲಿ ಪ್ರಲಾಪವೂ ಅಳುವಿಕೆಯೂ ಬಹು ಶೋಕದ ಧ್ವನಿಯೂ ಕೇಳಿಸಿತು; ರಾಹೇಲಳು ತನ್ನ ಮಕ್ಕಳಿಗೋಸ್ಕರ ಅಳುತ್ತಾ ಅವರು ಇಲ್ಲದ್ದರಿಂದ ಆದರಣೆ ಹೊಂದಲೊಲ್ಲದೆ ಇದ್ದಳು ಎಂಬದೇ.

19 But when Herod was dead, behold, an angel of the Lord appeared in a dream to Joseph in Egypt, saying,ಹೆರೋದನು ಸತ್ತ ಮೇಲೆ ಇಗೋ, ಐಗುಪ್ತದಲ್ಲಿ ಕರ್ತನ ದೂತನು ಯೋಸೇಫನಿಗೆ ಕನಸಿನಲ್ಲಿ ಕಾಣಿಸಿ ಕೊಂಡು--

20 "Arise and take the young child and his mother, and go into the land of Israel, for those who sought the young child's life are dead."ಎದ್ದು ಶಿಶುವನ್ನೂ ಅದರ ತಾಯಿಯನ್ನೂ ಕರಕೊಂಡು ಇಸ್ರಾಯೇಲ್‌ ದೇಶಕ್ಕೆ ಹೋಗು; ಯಾಕಂದರೆ ಶಿಶುವಿನ ಪ್ರಾಣವನ್ನು ತೆಗೆಯಬೇಕೆಂದು ಹುಡುಕುವವರು ಸತ್ತುಹೋದರು ಎಂದು ಹೇಳಿದನು.

21 He arose and took the young child and his mother, and came into the land of Israel.ಆಗ ಅವನು ಎದ್ದು ಆ ಶಿಶುವನ್ನೂ ಅದರ ತಾಯಿ ಯನ್ನೂ ಕರಕೊಂಡು ಇಸ್ರಾಯೇಲ್‌ ದೇಶಕ್ಕೆ ಬಂದಾಗ

22 But when he heard that Archelaus was reigning over Judea in the place of his father, Herod, he was afraid to go there. Being warned in a dream, he withdrew into the region of Galilee,ಅರ್ಖೆಲಾಯನು ತನ್ನ ತಂದೆಯಾದ ಹೆರೋದನಿಗೆ ಬದಲಾಗಿ ಯೂದಾಯದಲ್ಲಿ ಆಳುತ್ತಿದ್ದಾನೆಂದು ಕೇಳಿ ಅಲ್ಲಿಗೆ ಹೋಗುವದಕ್ಕೆ ಭಯಪಟ್ಟನು; ಆದಾಗ್ಯೂ ಕನಸಿನಲ್ಲಿ ದೇವರಿಂದ ಎಚ್ಚರಿಸಲ್ಪಟ್ಟವನಾಗಿ ಗಲಿಲಾಯ ಪ್ರಾಂತ್ಯದ ಕಡೆಗೆ ತಿರುಗಿಕೊಂಡನು.

23 and came and lived in a city called Nazareth; that it might be fulfilled which was spoken through the prophets: "He will be called a Nazarene."ಅವನು ನಜರೇತೆಂಬ ಪಟ್ಟಣಕ್ಕೆ ಬಂದು ಅಲ್ಲಿ ವಾಸಿಸಿದನು; ಇದರಿಂದ--ಆತನು ನಜರಾಯನೆಂದು ಕರೆಯಲ್ಪ ಡುವನು ಎಂಬದಾಗಿ ಪ್ರವಾದಿಗಳಿಂದ ಹೇಳಲ್ಪಟ್ಟದ್ದು ನೆರವೇರುವಂತೆ ಹೀಗಾಯಿತು.

Kannada Bible