Kannada Bible

Proverbs 1:1-7 in Kannada

Proverbs 1:1
ಇಸ್ರಾಯೇಲ್ಯರ ಅರಸನೂ ದಾವೀದನ ಮಗನೂ ಆದ ಸೊಲೊಮೋನನ ಸಾಮ ತಿಗಳು.

Proverbs 1:2
ಜ್ಞಾನವನ್ನು ಶಿಕ್ಷಣವನ್ನು ತಿಳುಕೊಳ್ಳುವದಕ್ಕೂ ವಿವೇಕದ ಮಾತುಗಳನ್ನು ಗ್ರಹಿಸುವದಕ್ಕೂ

Proverbs 1:3
ಜ್ಞಾನ ನ್ಯಾಯತೀರ್ಪು ನೀತಿ ಇವುಗಳ ಬೋಧನೆಯನ್ನು ಹೊಂದುವದಕ್ಕೂ

Proverbs 1:4
ಇವು ಮೂಢರಿಗೆ ಜಾಣತನ ವನ್ನೂ ಯೌವನಸ್ಥನಿಗೆ ತಿಳುವಳಿಕೆಯನ್ನೂ ವಿವೇಕ ವನ್ನೂ ಕೊಡುವವುಗಳಾಗಿವೆ.

Proverbs 1:5
ಜ್ಞಾನಿಯು ಕೇಳಿ ಜ್ಞಾನ ವನ್ನು ಹೆಚ್ಚಿಸಿಕೊಳ್ಳುವನು; ತಿಳುವಳಿಕೆಯ ಮನುಷ್ಯನು ಜ್ಞಾನದ ಆಲೋಚನೆಗಳನ್ನು ಸಂಪಾದಿಸಿಕೊಳ್ಳುವನು.

Proverbs 1:6
ಸಾಮತಿಯನ್ನು ಅದರ ಅರ್ಥವನ್ನು ಜ್ಞಾನಿಗಳ ಮಾತು ಗಳನ್ನು ಅವರ ಗೂಢವಾದ ಮಾತುಗಳನ್ನು ಗ್ರಹಿಸು ವಂತೆ ಇವು ಮಾಡುವವುಗಳಾಗಿವೆ.

Proverbs 1:7
ಕರ್ತನ ಭಯವೇ ಜ್ಞಾನದ ಮೂಲ; ಮೂರ್ಖರು ಜ್ಞಾನವನ್ನೂ ಶಿಕ್ಷೆಯನ್ನೂ ಅಸಡ್ಡೆಮಾಡುತ್ತಾರೆ.