Bible

Amos 2 - BBE (Kannada)

1 These are the words of the Lord: For three crimes of Moab, and for four, I will not let its fate be changed; because he had the bones of the king of Edom burned to dust.ಕರ್ತನು ಹೀಗೆ ಹೇಳುತ್ತಾನೆ--ಮೋವಾಬಿನ ಮೂರು ಮತ್ತು ನಾಲ್ಕರ ಅಪರಾಧ ಗಳ ನಿಮಿತ್ತವಾಗಿ ನಾನು ಅದಕ್ಕಾಗುವ ದಂಡನೆಯಿಂದ ತಪ್ಪಿಸುವದಿಲ್ಲ; ಅವನು ಎದೋಮಿನ ಅರಸನ ಎಲುಬುಗಳನ್ನು ಸುಟ್ಟು ಸುಣ್ಣ ಮಾಡಿದ್ದಾನೆ.

2 And I will send a fire on Moab, burning up the great houses of Kerioth: and death will come on Moab with noise and outcries and the sound of the horn:ನಾನು ಮೋವಾಬಿನ ಮೇಲೆ ಬೆಂಕಿಯನ್ನು ಕಳುಹಿಸುತ್ತೇನೆ. ಅದು ಕೆರೀಯೋತಿನ ಅರಮನೆಗಳನ್ನು ನುಂಗಿಬಿಡು ವದು. ಮೋವಾಬು ಆರ್ಭಟದ ಸಂಗಡವೂ ತುತೂ ರಿಯ ಧ್ವನಿಯ ಸಂಗಡವೂ ಗಲಿಬಿಲಿಯಲ್ಲಿ ಸಾಯು ವದು.

3 And I will have the judge cut off from among them, and all their captains I will put to death with him, says the Lord.ನಾನು ಅದರ ಮಧ್ಯದಿಂದ ನ್ಯಾಯಾಧಿಪತಿ ಯನ್ನು ಕಡಿದುಹಾಕುವೆನು. ಎಲ್ಲಾ ಪ್ರಧಾನರುಗಳನ್ನು ಅಲ್ಲಿ ಅವನೊಂದಿಗೆ ಕೊಲ್ಲುವೆನೆಂದು ಕರ್ತನು ಹೇಳುತ್ತಾನೆ.

4 These are the words of the Lord: For three crimes of Judah, and for four, I will not let its fate be changed; because they have given up the law of the Lord, and have not kept his rules; and their false ways, in which their fathers went, have made them go out of the right way.ಕರ್ತನು ಹೀಗೆ ಹೇಳುತ್ತಾನೆ--ಯೆಹೂದದ ಮೂರು ಮತ್ತು ನಾಲ್ಕರ ಅಪರಾಧಗಳ ನಿಮಿತ್ತವಾಗಿ ಅದಕ್ಕಾಗುವ ದಂಡನೆಯನ್ನು ತಪ್ಪಿಸುವದಿಲ್ಲ; ಅವರು ಕರ್ತನ ನ್ಯಾಯ ಪ್ರಮಾಣವನ್ನು ನಿರಾಕರಿಸಿದರು. ಆತನ ಆಜ್ಞೆಗಳನ್ನು ಕೈಗೊಳ್ಳಲಿಲ್ಲ. ಅವರ ಪಿತೃಗಳು ಅನುಸರಿಸಿದ ಸುಳ್ಳುಗಳೇ ಇವರನ್ನು ತಪ್ಪಿಗಸ್ತರನ್ನಾಗಿ ಮಾಡಿವೆ.

5 And I will send a fire on Judah, burning up the great houses of Jerusalem.ನಾನು ಯೆಹೂದದ ಮೇಲೆ ಬೆಂಕಿಯನ್ನು ಕಳುಹಿಸುವೆನು; ಅದು ಯೆರೂಸಲೇಮಿನ ಅರಮನೆ ಗಳನ್ನು ನುಂಗಿ ಬಿಡುವದು.

6 These are the words of the Lord: For three crimes of Israel, and for four, I will not let its fate be changed; because they have given the upright man for silver, and the poor for the price of two shoes;ಕರ್ತನು ಹೀಗೆ ಹೇಳುತ್ತಾನೆ--ಇಸ್ರಾಯೇಲಿನ ಮೂರು ಮತ್ತು ನಾಲ್ಕರ ಅಪರಾಧಗಳ ನಿಮಿತ್ತವಾಗಿ ನಾನು ಅವರನ್ನು ದಂಡನೆಯಿಂದ ತಪ್ಪಿಸುವದಿಲ್ಲ. ಅವರು ನೀತಿವಂತರನ್ನು ಬೆಳ್ಳಿಗೆ ಬಡವರನ್ನು ಕೆರಗಳ ಜೋಡಿಗೆ ಮಾರಿದರು.

7 Crushing the head of the poor, and turning the steps of the gentle out of the way: and a man and his father go in to the same young woman, putting shame on my holy name:ಅವರು ಬಡವರ ತಲೆಯ ಮೇಲಿರುವ ಭೂಮಿಯ ಧೂಳನ್ನು ಆಶಿಸಿ ದೀನರ ಮಾರ್ಗವನ್ನು ತಪ್ಪಿಸುತ್ತಾರೆ; ನನ್ನ ಪರಿಶುದ್ಧ ಹೆಸರನ್ನು ಅಪವಿತ್ರಗೊಳಿಸುವದಕ್ಕೆ ತಂದೆ ಮಗ ಇಬ್ಬರೂ ಒಬ್ಬ ಯೌವನಸ್ಥಳ ಬಳಿಗೆ ಹೋಗುತ್ತಾರೆ.

8 By every altar they are stretched on clothing taken from those who are in their debt, drinking in the house of their god the wine of those who have made payment for wrongdoing.ಅವರು ಅಡ ಇಟ್ಟ ವಸ್ತ್ರಗಳ ಮೇಲೆ ಪ್ರತಿಯೊಂದು ಬಲಿಪೀಠಗಳ ಬಳಿಯಲ್ಲೂ ಮಲಗುತ್ತಾರೆ ಮತ್ತು ನಿಷೇಧಿಸಿದ ದ್ರಾಕ್ಷಾರಸವನ್ನು ತಮ್ಮ ದೇವರ ಆಲಯದಲ್ಲಿ ಕುಡಿ ಯುತ್ತಾರೆ. ಬಳಿಯಲ್ಲೂ ಮಲಗುತ್ತಾರೆ ಮತ್ತು ನಿಷೇಧಿಸಿದ ದ್ರಾಕ್ಷಾರಸವನ್ನು ತಮ್ಮ ದೇವರ ಆಲಯದಲ್ಲಿ ಕುಡಿ ಯುತ್ತಾರೆ.

9 Though I sent destruction on the Amorite before them, who was tall as the cedar and strong as the oak-tree, cutting off his fruit from on high and his roots from under the earth.ಆದಾಗ್ಯೂ ನಾನು ಅಮೋರಿಯನನ್ನು ಅವರ ಮುಂದೆ ನಾಶಮಾಡಿದೆನು; ಅವನ ಎತ್ತರವು ದೇವದಾರುಗಳ ಎತ್ತರದಷ್ಟಿತ್ತು. ಅವನು ಓಕ್‌ ಮರದ ಹಾಗೆ ಬಲವಾಗಿದ್ದನು. ಆದರೂ ನಾನು ಅವನ ಮೇಲೆ ಫಲವನ್ನೂ ಕೆಳಗಿನ ಬೇರುಗಳನ್ನೂ ನಾಶ ಮಾಡಿದೆನು.

10 And I took you up out of the land of Egypt, guiding you for forty years in the waste land, so that you might take for your heritage the land of the Amorite.ನಾನೇ ಐಗುಪ್ತದೇಶದಿಂದ ಕರೆ ತಂದೆನು. ನೀವು ಅಮೋರಿಯರ ದೇಶವನ್ನು ಸ್ವಾಧೀನಪಡಿಸಿಕೊಳ್ಳಲು ನಿಮ್ಮನ್ನು ನಾಲ್ವತ್ತು ವರುಷ ಅರಣ್ಯದಲ್ಲಿ ನಡಿಸಿನು.

11 And some of your sons I made prophets, and some of your young men I made separate for myself. Is it not even so, O children of Israel? says the Lord.ನಾನು ನಿಮ್ಮ ಕುಮಾರ ರಲ್ಲಿ ಪ್ರವಾದಿಗಳನ್ನು ನಿಮ್ಮ ಯೌವನಸ್ಥರಲ್ಲಿ ನಾಜೀರರನ್ನು ಎಬ್ಬಿಸಿದೆನು. ಓ ಇಸ್ರಾಯೇಲಿನ ಮಕ್ಕಳೇ, ಇದು ಹೀಗಲ್ಲವೋ ಎಂದು ಕರ್ತನು ಹೇಳುತ್ತಾನೆ.

12 But to those who were separate you gave wine for drink; and to the prophets you said, Be prophets no longer.ಆದರೆ ನೀವು ನಾಜೀರರಿಗೆ ಕುಡಿ ಯಲು ದ್ರಾಕ್ಷಾರಸವನ್ನು ಕೊಟ್ಟಿರಿ; ಪ್ರವಾದಿಗಳಿಗೆಪ್ರವಾದಿಸಬೇಡಿರೆಂದು ಆಜ್ಞಾಪಿಸಿದಿರಿ.

13 See, I am crushing you down, as one is crushed under a cart full of grain.ಇಗೋ, ಸಿವುಡು ತುಂಬಿದ ಬಂಡಿ ಒತ್ತುವ ಪ್ರಕಾರ ನಾನು ನಿಮ್ಮನ್ನು ಕೆಳಗೆ ಹಾಕಿ ಒತ್ತುವೆನು.

14 And flight will be impossible for the quick-footed, and the force of the strong will become feeble, and the man of war will not get away safely:ಆದ ದರಿಂದ ತ್ವರೆಯಾಗಿ ಓಡುವವನು ನಾಶವಾಗುವನು. ಬಲಿಷ್ಠನು ತನ್ನ ತ್ರಾಣವನ್ನು ಬಲಪಡಿಸಿಕೊಳ್ಳಲಾರನು; ಪರಾಕ್ರಮಿಯು ತನ್ನ ಪ್ರಾಣವನ್ನು ಉಳಿಸಿಕೊಳ್ಳನು.

15 And the bowman will not keep his place; he who is quick-footed will not get away safely: and the horseman will not keep his life.ಬಿಲ್ಲು ಹಿಡಿಯುವವನು ನಿಲ್ಲನು; ಪಾದ ತ್ವರಿತನು ತಪ್ಪಿಸಿಕೊಳ್ಳನು, ಅಶ್ವಾರೂಢನು ತನ್ನ ಪ್ರಾಣವನ್ನು ತಪ್ಪಿಸಿಕೊಳ್ಳನು.

16 And he who is without fear among the fighting men will go in flight without his clothing in that day, says the Lord.ಶೂರರಲ್ಲಿ ಧೈರ್ಯ ಹೃದಯ ವುಳ್ಳವನು ಆ ದಿನದಲ್ಲಿ ಬೆತ್ತಲೆಯಾಗಿ ಓಡಿ ಹೋಗುವನು ಎಂದು ಕರ್ತನು ಹೇಳುತ್ತಾನೆ.

Kannada Bible