1 Timothy 6

fullscreen11 ಓ ದೇವರ ಮನುಷ್ಯನೇ, ನೀನಾದರೋ ಇವುಗಳಿಂದ ದೂರ ಓಡಿಹೋಗು; ನೀತಿ ಭಕ್ತಿ ನಂಬಿಕೆ ಪ್ರೀತಿ ತಾಳ್ಮೆ ಸಾತ್ವಿಕತ್ವ ಇವುಗಳನ್ನು ಅನುಸರಿಸು.

fullscreen12 ನಂಬಿಕೆಯ ಶ್ರೇಷ್ಠ ಹೋರಾಟವನ್ನು ಮಾಡು, ನಿತ್ಯಜೀವವನ್ನು ಹಿಡಿದುಕೋ; ಅದಕ್ಕಾಗಿಯೇ ನೀನು ಕರೆಯಲ್ಪಟ್ಟಿದ್ದೀ. ನೀನು ಅನೇಕ ಸಾಕ್ಷಿಗಳ ಮುಂದೆ ಒಳ್ಳೇ ಅರಿಕೆಯನ್ನು ಮಾಡಿದ್ದೀಯಲ್ಲಾ.

fullscreen13 ಎಲ್ಲರನ್ನು ಬದುಕಿಸುವ ದೇವರ ಮುಂದೆಯೂ ಪೊಂತ್ಯ ಪಿಲಾತನ ಮುಂದೆ ಶ್ರೇಷ್ಠ ಅರಿಕೆಯನ್ನು ಸಾಕ್ಷೀಕರಿಸಿದ ಕ್ರಿಸ್ತ ಯೇಸುವಿನ ಮುಂದೆಯೂ ನಾನು ನಿನಗೆ ಖಂಡಿತವಾಗಿ ಹೇಳುವದೇನಂದರೆ--

fullscreen14 ನಮ್ಮ ಕರ್ತನಾದ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವ ತನಕ ಈ ಆಜ್ಞೆಯನ್ನು ನಿಷ್ಕಳಂಕವಾಗಿಯೂ ನಿಂದಾರಹಿತವಾಗಿಯೂ ನೀನು ಕಾಪಾಡಬೇಕು.

fullscreen15 ಸ್ತುತಿ ಹೊಂದತಕ್ಕ ಒಬ್ಬನೇ ಸರ್ವ ಶಕ್ತನು. ತನ್ನ ಸಮಯಗಳಲ್ಲೇ ಆತನನ್ನು ಪ್ರತ್ಯಕ್ಷ ಪಡಿಸುವನು; ಆ ಸರ್ವಶಕ್ತನು ರಾಜಾಧಿರಾಜನೂ ಕರ್ತರ ಕರ್ತನೂ ಆಗಿದ್ದಾನೆ;

fullscreen16 ಆತನೊಬ್ಬನೇ ಅಮರತ್ವವುಳ್ಳವನೂ ಯಾರೂ ಸವಿಾಪಿಸಲಾರದಂತ ಬೆಳಕಿನಲ್ಲಿ ವಾಸಿಸುವಾತನೂ ಆಗಿದ್ದಾನೆ; ಯಾವ ಮನುಷ್ಯನೂ ಆತನನ್ನು ಕಾಣಲಿಲ್ಲ; ಯಾರೂ ಕಾಣ ಲಾರರು; ಆತನಿಗೆ ಮಾನವೂ ನಿತ್ಯಾಧಿಕಾರವೂ ಇರಲಿ. ಆಮೆನ್‌.

fullscreen17 ಈ ಲೋಕದಲ್ಲಿ ಐಶ್ವರ್ಯವುಳ್ಳವರು ಅಹಂಕಾರಿ ಗಳಾಗಿರದೆ, ಅಸ್ಥಿರವಾದ ಐಶ್ವರ್ಯದ ಮೇಲೆ ಭರವಸ ವನ್ನಿಡದೆ ನಮ್ಮ ಅನುಭೋಗಕ್ಕೋಸ್ಕರ ನಮಗೆ ಎಲ್ಲ ವನ್ನೂ ಹೇರಳವಾಗಿ ದಯಪಾಲಿಸುವ ಜೀವವುಳ್ಳ ದೇವರ ಮೇಲೆ ಭರವಸವನ್ನಿಡಬೇಕೆಂತಲೂ

fullscreen18 ಅವರು ಒಳ್ಳೇದನ್ನು ಮಾಡುವವರೂ ಸತ್ಕಾರ್ಯಗಳಲ್ಲಿ ಐಶ್ವರ್ಯವಂತರೂ ಪಾಲುಕೊಡುವದರಲ್ಲಿ ಸಿದ್ಧವಾಗಿ ರುವವರೂ ಪರೋಪಕಾರ ಮಾಡುವವರೂ ಆಗಿದ್ದು.

fullscreen19 ಮುಂದಿನ ಕಾಲಕ್ಕೆ ಒಳ್ಳೇ ಅಸ್ತಿವಾರವಾಗುವಂಥ ವುಗಳನ್ನು ತಮಗೆ ಕೂಡಿಸಿಟ್ಟುಕೊಳ್ಳಬೇಕೆಂತಲೂ ನಿತ್ಯಜೀವವನ್ನು ಹಿಡಿದುಕೊಳ್ಳುವವರಾಗಿರ ಬೇಕೆಂತಲೂ ಅವರಿಗೆ ಆಜ್ಞಾಪಿಸು.

fullscreen20 ಓ ತಿಮೊಥೆಯನೇ, ಅಪಭ್ರಷ್ಟವಾದ ವ್ಯರ್ಥ ಮಾತುಗಳಿಗೂ ಸುಳ್ಳು ಹೆಸರುಳ್ಳ ಜ್ಞಾನದ ತರ್ಕ ಗಳಿಗೂ ತಪ್ಪಿಸಿಕೊಂಡು ನಿನ್ನ ವಶಕ್ಕೆ ಕೊಟ್ಟಿರುವದನು ಕಾಪಾಡು.

fullscreen21 ಕೆಲವರು ಆ ಸುಳ್ಳಾದ ಜ್ಞಾನವನ್ನು ಹೇಳಿಕೊಂಡು ನಂಬಿಕೆಯಿಂದ ತಪ್ಪಿಹೋದರು. ಕೃಪೆಯು ನಿಮ್ಮೊಂದಿಗಿರಲಿ. ಆಮೆನ್‌.

11 But thou, O man of God, flee these things; and follow after righteousness, godliness, faith, love, patience, meekness.

12 Fight the good fight of faith, lay hold on eternal life, whereunto thou art also called, and hast professed a good profession before many witnesses.

13 I give thee charge in the sight of God, who quickeneth all things, and before Christ Jesus, who before Pontius Pilate witnessed a good confession;

14 That thou keep this commandment without spot, unrebukeable, until the appearing of our Lord Jesus Christ:

15 Which in his times he shall shew, who is the blessed and only Potentate, the King of kings, and Lord of lords;

16 Who only hath immortality, dwelling in the light which no man can approach unto; whom no man hath seen, nor can see: to whom be honour and power everlasting. Amen.

17 Charge them that are rich in this world, that they be not highminded, nor trust in uncertain riches, but in the living God, who giveth us richly all things to enjoy;

18 That they do good, that they be rich in good works, ready to distribute, willing to communicate;

19 Laying up in store for themselves a good foundation against the time to come, that they may lay hold on eternal life.

20 O Timothy, keep that which is committed to thy trust, avoiding profane and vain babblings, and oppositions of science falsely so called:

21 Which some professing have erred concerning the faith. Grace be with thee. Amen.

1 Timothy 6 in Tamil and English

11 ಓ ದೇವರ ಮನುಷ್ಯನೇ, ನೀನಾದರೋ ಇವುಗಳಿಂದ ದೂರ ಓಡಿಹೋಗು; ನೀತಿ ಭಕ್ತಿ ನಂಬಿಕೆ ಪ್ರೀತಿ ತಾಳ್ಮೆ ಸಾತ್ವಿಕತ್ವ ಇವುಗಳನ್ನು ಅನುಸರಿಸು.
But thou, O man of God, flee these things; and follow after righteousness, godliness, faith, love, patience, meekness.

12 ನಂಬಿಕೆಯ ಶ್ರೇಷ್ಠ ಹೋರಾಟವನ್ನು ಮಾಡು, ನಿತ್ಯಜೀವವನ್ನು ಹಿಡಿದುಕೋ; ಅದಕ್ಕಾಗಿಯೇ ನೀನು ಕರೆಯಲ್ಪಟ್ಟಿದ್ದೀ. ನೀನು ಅನೇಕ ಸಾಕ್ಷಿಗಳ ಮುಂದೆ ಒಳ್ಳೇ ಅರಿಕೆಯನ್ನು ಮಾಡಿದ್ದೀಯಲ್ಲಾ.
Fight the good fight of faith, lay hold on eternal life, whereunto thou art also called, and hast professed a good profession before many witnesses.

13 ಎಲ್ಲರನ್ನು ಬದುಕಿಸುವ ದೇವರ ಮುಂದೆಯೂ ಪೊಂತ್ಯ ಪಿಲಾತನ ಮುಂದೆ ಶ್ರೇಷ್ಠ ಅರಿಕೆಯನ್ನು ಸಾಕ್ಷೀಕರಿಸಿದ ಕ್ರಿಸ್ತ ಯೇಸುವಿನ ಮುಂದೆಯೂ ನಾನು ನಿನಗೆ ಖಂಡಿತವಾಗಿ ಹೇಳುವದೇನಂದರೆ--
I give thee charge in the sight of God, who quickeneth all things, and before Christ Jesus, who before Pontius Pilate witnessed a good confession;

14 ನಮ್ಮ ಕರ್ತನಾದ ಯೇಸು ಕ್ರಿಸ್ತನು ಪ್ರತ್ಯಕ್ಷನಾಗುವ ತನಕ ಈ ಆಜ್ಞೆಯನ್ನು ನಿಷ್ಕಳಂಕವಾಗಿಯೂ ನಿಂದಾರಹಿತವಾಗಿಯೂ ನೀನು ಕಾಪಾಡಬೇಕು.
That thou keep this commandment without spot, unrebukeable, until the appearing of our Lord Jesus Christ:

15 ಸ್ತುತಿ ಹೊಂದತಕ್ಕ ಒಬ್ಬನೇ ಸರ್ವ ಶಕ್ತನು. ತನ್ನ ಸಮಯಗಳಲ್ಲೇ ಆತನನ್ನು ಪ್ರತ್ಯಕ್ಷ ಪಡಿಸುವನು; ಆ ಸರ್ವಶಕ್ತನು ರಾಜಾಧಿರಾಜನೂ ಕರ್ತರ ಕರ್ತನೂ ಆಗಿದ್ದಾನೆ;
Which in his times he shall shew, who is the blessed and only Potentate, the King of kings, and Lord of lords;

16 ಆತನೊಬ್ಬನೇ ಅಮರತ್ವವುಳ್ಳವನೂ ಯಾರೂ ಸವಿಾಪಿಸಲಾರದಂತ ಬೆಳಕಿನಲ್ಲಿ ವಾಸಿಸುವಾತನೂ ಆಗಿದ್ದಾನೆ; ಯಾವ ಮನುಷ್ಯನೂ ಆತನನ್ನು ಕಾಣಲಿಲ್ಲ; ಯಾರೂ ಕಾಣ ಲಾರರು; ಆತನಿಗೆ ಮಾನವೂ ನಿತ್ಯಾಧಿಕಾರವೂ ಇರಲಿ. ಆಮೆನ್‌.
Who only hath immortality, dwelling in the light which no man can approach unto; whom no man hath seen, nor can see: to whom be honour and power everlasting. Amen.

17 ಈ ಲೋಕದಲ್ಲಿ ಐಶ್ವರ್ಯವುಳ್ಳವರು ಅಹಂಕಾರಿ ಗಳಾಗಿರದೆ, ಅಸ್ಥಿರವಾದ ಐಶ್ವರ್ಯದ ಮೇಲೆ ಭರವಸ ವನ್ನಿಡದೆ ನಮ್ಮ ಅನುಭೋಗಕ್ಕೋಸ್ಕರ ನಮಗೆ ಎಲ್ಲ ವನ್ನೂ ಹೇರಳವಾಗಿ ದಯಪಾಲಿಸುವ ಜೀವವುಳ್ಳ ದೇವರ ಮೇಲೆ ಭರವಸವನ್ನಿಡಬೇಕೆಂತಲೂ
Charge them that are rich in this world, that they be not highminded, nor trust in uncertain riches, but in the living God, who giveth us richly all things to enjoy;

18 ಅವರು ಒಳ್ಳೇದನ್ನು ಮಾಡುವವರೂ ಸತ್ಕಾರ್ಯಗಳಲ್ಲಿ ಐಶ್ವರ್ಯವಂತರೂ ಪಾಲುಕೊಡುವದರಲ್ಲಿ ಸಿದ್ಧವಾಗಿ ರುವವರೂ ಪರೋಪಕಾರ ಮಾಡುವವರೂ ಆಗಿದ್ದು.
That they do good, that they be rich in good works, ready to distribute, willing to communicate;

19 ಮುಂದಿನ ಕಾಲಕ್ಕೆ ಒಳ್ಳೇ ಅಸ್ತಿವಾರವಾಗುವಂಥ ವುಗಳನ್ನು ತಮಗೆ ಕೂಡಿಸಿಟ್ಟುಕೊಳ್ಳಬೇಕೆಂತಲೂ ನಿತ್ಯಜೀವವನ್ನು ಹಿಡಿದುಕೊಳ್ಳುವವರಾಗಿರ ಬೇಕೆಂತಲೂ ಅವರಿಗೆ ಆಜ್ಞಾಪಿಸು.
Laying up in store for themselves a good foundation against the time to come, that they may lay hold on eternal life.

20 ಓ ತಿಮೊಥೆಯನೇ, ಅಪಭ್ರಷ್ಟವಾದ ವ್ಯರ್ಥ ಮಾತುಗಳಿಗೂ ಸುಳ್ಳು ಹೆಸರುಳ್ಳ ಜ್ಞಾನದ ತರ್ಕ ಗಳಿಗೂ ತಪ್ಪಿಸಿಕೊಂಡು ನಿನ್ನ ವಶಕ್ಕೆ ಕೊಟ್ಟಿರುವದನು ಕಾಪಾಡು.
O Timothy, keep that which is committed to thy trust, avoiding profane and vain babblings, and oppositions of science falsely so called:

21 ಕೆಲವರು ಆ ಸುಳ್ಳಾದ ಜ್ಞಾನವನ್ನು ಹೇಳಿಕೊಂಡು ನಂಬಿಕೆಯಿಂದ ತಪ್ಪಿಹೋದರು. ಕೃಪೆಯು ನಿಮ್ಮೊಂದಿಗಿರಲಿ. ಆಮೆನ್‌.
Which some professing have erred concerning the faith. Grace be with thee. Amen.