1 Peter 2:13-17 in Kannada
1 Peter 2:13
ಮನುಷ್ಯನ ಪ್ರತಿಯೊಂದು ಕಟ್ಟಳೆಗೂ ಕರ್ತನ ನಿಮಿತ್ತ ನೀವು ಅಧೀನರಾಗಿರ್ರಿ. ಅರಸನು ಸರ್ವಾಧಿಕಾರಿ ಎಂತಲೂ
1 Peter 2:14
ಅಧಿಪತಿಗಳು ಕೆಟ್ಟವರನ್ನು ದಂಡಿಸು ವದಕ್ಕೂ ಒಳ್ಳೆಯವರನ್ನು ಪ್ರೋತ್ಸಾಹಪಡಿಸುವದಕ್ಕೂ (ಅರಸನಿಂದ) ಅವರು ಕಳುಹಿಸಲ್ಪಟ್ಟವರೆಂತಲೂ ತಿಳಿದು ಅವರಿಗೆ ಅಧೀನರಾಗಿರ್ರಿ.
1 Peter 2:15
ನೀವು ಒಳ್ಳೇ ನಡತೆಯಿಂದ ತಿಳುವಳಿಕೆಯಿಲ್ಲದ ಮೂಢಜನರ ಬಾಯಿ ಮುಚ್ಚುವಂತೆ ಮಾಡುವದೇ ದೇವರ ಚಿತ್ತ.
1 Peter 2:16
ಸ್ವತಂತ್ರರಾಗಿರ್ರಿ; ಆದರೆ ಕೆಟ್ಟತನವನ್ನು ಮರೆಮಾಡು ವದಕ್ಕೆ ನಿಮ್ಮ ಸ್ವಾತಂತ್ರ್ಯವನ್ನು ಉಪಯೋಗಿಸಬೇಡಿರಿ; ನೀವು ದೇವರ ದಾಸರಾಗಿದ್ದೀರಿ.
1 Peter 2:17
ಎಲ್ಲರನ್ನು ಸನ್ಮಾನಿ ಸಿರಿ, ಸಹೋದರರನ್ನು ಪ್ರೀತಿಸಿರಿ, ದೇವರಿಗೆ ಭಯ ಪಡಿರಿ, ಅರಸನನ್ನು ಸನ್ಮಾನಿಸಿರಿ.
Kannada Bible