John 8 - KANNADA (Telugu)
1 ಯೇಸು ಎಣ್ಣೇಮರಗಳ ಗುಡ್ಡಕ್ಕೆ ಹೋದನು.యేసు ఒలీవలకొండకు వెళ్లెను.
2 ಬೆಳಿಗ್ಗೆ ಆತನು ತಿರಿಗಿ ದೇವಾಲಯಕ್ಕೆ ಬಂದಾಗ ಎಲ್ಲಾ ಜನರು ಆತನ ಬಳಿಗೆ ಬಂದರು; ಆತನು ಕೂತುಕೊಂಡು ಅವರಿಗೆ ಬೋಧಿಸಿ ದನು.తెల్లవారగానే యేసు తిరిగి దేవాలయములోనికి రాగా ప్రజలందరు ఆయన యొద్దకు వచ్చిరి గనుక ఆయన కూర్చుండి వారికి బోధించు చుండెను.
3 ಆಗ ವ್ಯಭಿಚಾರದಲ್ಲಿ ಸಿಕ್ಕಿದ ಒಬ್ಬ ಹೆಂಗಸನ್ನು ಶಾಸ್ತ್ರಿಗಳು ಮತ್ತು ಫರಿಸಾಯರು ಆತನ ಬಳಿಗೆ ತಂದು ಆಕೆಯನ್ನು ನಡುವೆ ನಿಲ್ಲಿಸಿశాస్త్రులును పరిసయ్యులును, వ్యభిచారమందు పట్టబడిన యొక స్త్రీని తోడు కొనివచ్చి ఆమెను మధ్య నిలువబెట్టి
4 ಆತನಿಗೆ -- ಬೋಧಕನೇ, ಈ ಹೆಂಗಸು ವ್ಯಭಿಚಾರ ಮಾಡುವಾಗಲೇ ಹಿಡಿಯ ಲ್ಪಟ್ಟಳು.బోధకుడా, యీ స్త్రీ వ్యభిచారము చేయుచుండగా పట్టబడెను;
5 ಇಂಥವರು ಕಲ್ಲೆಸೆಯಲ್ಪಡಬೇಕೆಂದು ಮೋಶೆಯು ನ್ಯಾಯಪ್ರಮಾಣದಲ್ಲಿ ನಮಗೆ ಅಪ್ಪಣೆ ಕೊಟ್ಟಿದ್ದಾನೆ; ಆದರೆ ನೀನು ಏನು ಹೇಳುತ್ತೀ ಎಂದು ಕೇಳಿದರು.అట్టివారిని రాళ్లు రువి్వ చంపవలెనని ధర్మశాస్త్రములో మోషే మన కాజ్ఞాపించెను గదా; అయినను నీవేమి చెప్పుచున్నావని ఆయన నడిగిరి.
6 ಅವರು ಆತನನ್ನು ಶೋಧಿಸುವವರಾಗಿ ಆತನ ಮೇಲೆ ತಪ್ಪು ಹೊರಿಸಬೇಕೆಂದು ಹೀಗೆ ಹೇಳಿ ದರು. ಆದರೆ ಯೇಸು ಅವರ ಮಾತುಗಳನ್ನು ಕೇಳದವ ನಂತೆ ಬೊಗ್ಗಿಕೊಂಡು ತನ್ನ ಬೆರಳಿನಿಂದ ನೆಲದ ಮೇಲೆ ಬರೆದನು.ఆయనమీద నేరము మోపవలెనని ఆయనను శోధించుచు ఈలాగున అడిగిరి. అయితే యేసు వంగి, నేలమీద వ్రేలితో ఏమో వ్రాయుచుండెను.
7 ಆದರೆ ಅವರು ಬಿಡದೆ ಆತನನ್ನು ಕೇಳುತ್ತಿರಲು ಆತನು ಮೇಲಕ್ಕೆ ನೋಡಿ--ನಿಮ್ಮೊಳಗೆ ಯಾವನು ಪಾಪವಿಲ್ಲದವನಾಗಿದ್ದಾನೋ ಅವನೇ ಮೊದಲು ಆಕೆಯ ಮೇಲೆ ಕಲ್ಲನ್ನು ಹಾಕಲಿ ಎಂದು ಅವರಿಗೆ ಹೇಳಿದನು.వారాయనను పట్టువదలక అడుగుచుండగా ఆయన తలయెత్తి చూచిమీలో పాపము లేనివాడు మొట్టమొదట ఆమెమీద రాయి వేయ వచ్చునని వారితో చెప్పి
8 ತಿರಿಗಿ ಆತನು ಬೊಗ್ಗಿಕೊಂಡು ನೆಲದ ಮೇಲೆ ಬರೆದನು.మరల వంగి నేలమీద వ్రాయు చుండెను.
9 ಅದನ್ನು ಕೇಳಿದವರು ತಮ್ಮ ಸ್ವಂತ ಮನಸ್ಸಾಕ್ಷಿಯಿಂದ ಮನವರಿಕೆಯಾಗಿ ಹಿರಿಯವನು ಮೊದಲುಗೊಂಡು ಕಡೆಯವನವರೆಗೂ ಒಬ್ಬೊಬ್ಬರಾಗಿ ಹೊರಗೆಹೋದರು; ಆಗ ಯೇಸು ಒಬ್ಬನೇ ಉಳಿದನು; ಆ ಹೆಂಗಸು ನಡುವೆ ನಿಂತು ಕೊಂಡಿದ್ದಳು.వారామాట విని, పెద్దవారు మొదలుకొని చిన్నవారివరకు ఒకని వెంట ఒకడు బయటికి వెళ్లిరి; యేసు ఒక్కడే మిగిలెను; ఆ స్త్రీ మధ్యను నిలువబడియుండెను.
10 ಯೇಸು ಮೇಲಕ್ಕೆ ನೋಡಿ ಆ ಹೆಂಗಸಿನ ಹೊರತು ಯಾರನ್ನೂ ಕಾಣದೆ ಆಕೆಗೆ--ಸ್ತ್ರೀಯೇ, ನಿನ್ನ ಮೇಲೆ ದೂರು ಹೊರಿಸಿದವರು ಎಲ್ಲಿ ದ್ದಾರೆ? ನಿನಗೆ ಯಾರೂ ಶಿಕ್ಷೆ ವಿಧಿಸಲಿಲ್ಲವೋ? ಅಂದನು.యేసు తలయెత్తి చూచి అమ్మా, వారెక్కడ ఉన్నారు? ఎవరును నీకు శిక్ష విధింపలేదా? అని అడిగినప్పుడు
11 ಅದಕ್ಕೆ ಆಕೆಯು-- ಕರ್ತನೇ, ಯಾರೂ ವಿಧಿಸಲಿಲ್ಲ ಅಂದಳು. ಯೇಸು ಆಕೆಗೆ--ನಾನೂ ನಿನಗೆ ಶಿಕ್ಷೆ ವಿಧಿಸುವದಿಲ್ಲ; ಹೋಗು, ಇನ್ನು ಮೇಲೆ ಪಾಪಮಾಡಬೇಡ ಅಂದನು.ఆమెలేదు ప్రభువా అనెను. అందుకు యేసునేనును నీకు శిక్ష విధింపను; నీవు వెళ్లి ఇక పాపము చేయకుమని ఆమెతో చెప్పెను.
12 ತರುವಾಯ ಯೇಸು ತಿರಿಗಿ ಮಾತನಾಡಿ ಅವರಿಗೆ--ನಾನೇ ಲೋಕಕ್ಕೆ ಬೆಳಕಾಗಿದ್ದೇನೆ; ನನ್ನನ್ನು ಹಿಂಬಾಲಿಸುವವನು ಕತ್ತಲೆಯಲ್ಲಿ ನಡೆಯುವದಿಲ್ಲ; ಆದರೆ ಜೀವದ ಬೆಳಕನ್ನು ಹೊಂದುವನು ಎಂದು ಹೇಳಿದನು.మరల యేసు నేను లోకమునకు వెలుగును, నన్ను వెంబడించువాడు చీకటిలో నడువక జీవపు వెలుగుగలిగి యుండునని వారితో చెప్పెను.
13 ಆದಕಾರಣ ಫರಿಸಾಯರು ಆತ ನಿಗೆ--ನಿನ್ನ ವಿಷಯವಾಗಿ ನೀನೇ ಸಾಕ್ಷಿಕೊಡುತ್ತೀ; ನಿನ್ನ ಸಾಕ್ಷಿಯು ನಿಜವಲ್ಲ ಎಂದು ಹೇಳಿದರು.కాబట్టి పరిసయ్యులు నిన్నుగూర్చి నీవే సాక్ష్యము చెప్పుకొనుచున్నావు; నీ సాక్ష్యము సత్యము కాదని ఆయనతో అనగా
14 ಯೇಸು ಪ್ರತ್ಯುತ್ತರವಾಗಿ ಅವರಿಗೆ--ನನ್ನ ವಿಷಯ ವಾಗಿ ನಾನು ಸಾಕ್ಷಿಕೊಟ್ಟಾಗ್ಯೂ ನನ್ನ ಸಾಕ್ಷಿ ನಿಜವೇ; ಯಾಕಂದರೆ ನಾನು ಎಲ್ಲಿಂದ ಬಂದೆನೋ ಮತ್ತು ಎಲ್ಲಿಗೆ ಹೋಗುತ್ತೇನೋ ನಾನು ಬಲ್ಲೆನು; ಆದರೆ ನಾನು ಎಲ್ಲಿಂದ ಬಂದೆನೋ ಇಲ್ಲವೆ ಎಲ್ಲಿಗೆ ಹೋಗುತ್ತೇನೋ ನೀವು ಹೇಳಲಾರಿರಿ.యేసునేను ఎక్కడనుండి వచ్చితినో యెక్కడికి వెళ్లుదునో నేనెరుగుదును గనుక నన్నుగూర్చి నేను సాక్ష్యము చెప్పు కొనినను నా సాక్ష్యము సత్యమే; నేను ఎక్కడనుండి వచ్చుచున్నానో యెక్కడికి వెళ్లుచున్నానో మీరు ఎరుగరు.
15 ನೀವು ಶಾರೀರಿಕ ರೀತಿಯಲ್ಲಿ ತೀರ್ಪು ಮಾಡುತ್ತೀರಿ; ಆದರೆ ಯಾವ ಮನುಷ್ಯನಿಗೂ ನಾನು ತೀರ್ಪುಮಾಡುವದಿಲ್ಲ.మీరు శరీరమునుబట్టి తీర్పు తీర్చుచున్నారు; నేనెవరికిని తీర్పు తీర్చను.
16 ನಾನು ತೀರ್ಪು ಮಾಡಿದರೂ ನನ್ನ ತೀರ್ಪು ನಿಜ ವಾದದ್ದೇ; ಯಾಕಂದರೆ ನಾನು ಒಂಟಿಗನಲ್ಲ, ಆದರೆ ನಾನೂ ನನ್ನನ್ನು ಕಳುಹಿಸಿದ ತಂದೆಯೂ ಇದ್ದೇವೆ.నేను ఒక్కడనైయుండక, నేనును నన్ను పంపిన తండ్రియు కూడ నున్నాము గనుక నేను తీర్పు తీర్చినను నా తీర్పు సత్యమే.
17 ಇಬ್ಬರ ಸಾಕ್ಷಿಯು ನಿಜವೆಂದು ನಿಮ್ಮ ನ್ಯಾಯ ಪ್ರಮಾಣದಲ್ಲಿಯೂ ಬರೆದದೆ.మరియు ఇద్దరు మనుష్యుల సాక్ష్యము సత్యమని మీ ధర్మశాస్త్రములో వ్రాయబడియున్నది గదా.
18 ನನ್ನ ವಿಷಯವಾಗಿ ನಾನೇ ಸಾಕ್ಷಿ ಕೊಡುತ್ತೇನೆ ಮತ್ತು ನನ್ನನ್ನು ಕಳುಹಿಸಿದ ತಂದೆಯೂ ನನ್ನ ವಿಷಯವಾಗಿ ಸಾಕ್ಷಿಕೊಡುತ್ತಾನೆ ಅಂದನು.నన్నుగూర్చి నేను సాక్ష్యము చెప్పుకొను వాడను; నన్ను పంపిన తండ్రియు నన్నుగూర్చి సాక్ష్యమిచ్చుచున్నాడని చెప్పెను.
19 ತರುವಾಯ ಅವರು ಆತನಿಗೆ--ನಿನ್ನ ತಂದೆ ಎಲ್ಲಿ ಅಂದರು. ಅದಕ್ಕೆ ಯೇಸು ಪ್ರತ್ಯುತ್ತರ ವಾಗಿ--ನನ್ನನ್ನಾಗಲಿ ನನ್ನ ತಂದೆಯನ್ನಾಗಲಿ ನೀವು ಅರಿತಿಲ್ಲ; ನೀವು ನನ್ನನ್ನು ಅರಿತುಕೊಂಡಿದ್ದರೆ ನನ್ನ ತಂದೆಯನ್ನು ಸಹ ಅರಿತುಕೊಳ್ಳುತ್ತಿದ್ದಿರಿ ಅಂದನು.వారు నీ తండ్రి యెక్కడ ఉన్నాడని ఆయనను అడుగగా యేసు మీరు నన్నైనను నా తండ్రినైనను ఎరుగరు; నన్ను ఎరిగి యుంటిరా నా తండ్రినికూడ ఎరిగి యుందురని వారితో చెప్పెను.
20 ಯೇಸು ದೇವಾಲಯದಲ್ಲಿ ಬೋಧಿಸುತ್ತಿದ್ದಾಗ ಬೊಕ್ಕಸದ ಬಳಿಯಲ್ಲಿ ಈ ಮಾತುಗಳನ್ನು ಆಡಿದನು; ಆದರೆ ಆತನ ಗಳಿಗೆ ಇನ್ನೂ ಬಾರದೆ ಇದ್ದದರಿಂದ ಯಾರೂ ಆತನ ಮೇಲೆ ಕೈಹಾಕಲಿಲ್ಲ.ఆయన దేవాలయములో బోధించుచుండగా, కానుక పెట్టె యున్నచోట ఈ మాటలు చెప్పెను. ఆయన గడియ యింకను రాలేదు గనుక ఎవడును ఆయనను పట్టుకొనలేదు.
21 ಯೇಸು ತಿರಿಗಿ ಅವರಿಗೆ--ನಾನು ಹೋಗುತ್ತೇನೆ; ನೀವು ನನ್ನನ್ನು ಹುಡುಕುವಿರಿ ಮತ್ತು ನಿಮ್ಮ ಪಾಪ ಗಳಲ್ಲಿ ಸಾಯುವಿರಿ; ನಾನು ಹೋಗುವಲ್ಲಿಗೆ ನೀವು ಬರಲಾರಿರಿ ಅಂದನು.మరియొకప్పుడు ఆయననేను వెళ్లిపోవుచున్నాను; మీరు నన్ను వెదకుదురు గాని మీ పాపములోనే యుండి చనిపోవుదురు; నేను వెళ్లుచోటికి మీరు రాలేరని వారితో చెప్పెను.
22 ಅದಕ್ಕೆ ಯೆಹೂದ್ಯರು--ಇವನು ತನ್ನನ್ನು ತಾನೇ ಕೊಂದುಕೊಳ್ಳಬೇಕೆಂದಿ ದ್ದಾನೋ? ಯಾಕಂದರೆ--ನಾನು ಹೋಗುವಲ್ಲಿಗೆ ನೀವು ಬರಲಾರಿರಿ ಎಂದು ಹೇಳುತ್ತಾನಲ್ಲಾ ಅಂದರು.అందుకు యూదులునేను వెళ్లుచోటికి మీరు రాలేరని యీయన చెప్పుచున్నాడే; తన్ను తానే చంపు కొనునా అని చెప్పుకొనుచుండిరి.
23 ಆತನು ಅವರಿಗೆ--ನೀವು ಕೆಳಗಿನವರು, ನಾನು ಮೇಲಿನವನು; ನೀವು ಈ ಲೋಕದವರು, ನಾನು ಈ ಲೋಕದವನಲ್ಲ.అప్పుడాయనమీరు క్రిందివారు, నేను పైనుండువాడను; మీరు ఈ లోక సంబంధులు, నేను ఈ లోకసంబంధుడను కాను.
24 ಆದದರಿಂದ ನೀವು ನಿಮ್ಮ ಪಾಪಗಳಲ್ಲಿಯೇ ಸಾಯುವಿರಿ ಎಂದು ನಾನು ನಿಮಗೆ ಹೇಳಿದೆನು. ಯಾಕಂದರೆ ನನ್ನನ್ನು ಆತನೆಂದು ನೀವು ನಂಬದೆ ಹೋದರೆ ನೀವು ನಿಮ್ಮ ಪಾಪಗಳಲ್ಲಿಯೇ ಸಾಯುವಿರಿ ಎಂದು ಹೇಳಿದನು.కాగా మీ పాపములలోనేయుండి మీరు చనిపోవుదురని మీతో చెప్పితిని. నేను ఆయననని మీరు విశ్వసించనియెడల మీరు మీ పాపములోనేయుండి చనిపోవుదురని వారితో చెప్పెను.
25 ತರುವಾಯ ಅವರು ಆತನಿಗೆ--ನೀನು ಯಾರಾಗಿದ್ದೀ ಅಂದರು. ಅದಕ್ಕೆ ಯೇಸು ಅವರಿಗೆ--ಮೊದಲಿನಿಂದಲೂ ನಾನು ನಿಮಗೆ ಹೇಳಿದಂತವನೇ.కాబట్టి వారునీ వెవరవని ఆయన నడుగగా యేసు వారితోమొదటనుండి నేను మీతో ఎవడనని చెప్పుచుంటినో వాడనే.
26 ನಿಮ್ಮ ವಿಷಯವಾಗಿ ಹೇಳುವದಕ್ಕೂ ತೀರ್ಪುಮಾಡುವದಕ್ಕೂ ನನಗೆ ಅನೇಕ ವಿಷಯಗಳಿವೆ. ಆದರೆ ನನ್ನನ್ನು ಕಳುಹಿಸಿದಾತನು ಸತ್ಯವಂತನು. ನಾನು ಆತನಿಂದ ಕೇಳಿದವುಗಳನ್ನೇ ಲೋಕಕ್ಕೆ ಹೇಳುತ್ತೇನೆ ಅಂದನು.మిమ్మునుగూర్చి చెప్పుటకును తీర్పు తీర్చుటకును చాల సంగతులు నాకు కలవు గాని నన్ను పంపినవాడు సత్యవంతుడు; నేను ఆయనయొద్ద వినిన సంగతులే లోకమునకు బోధించుచున్నానని చెప్పెను.
27 ಆತನು ತಂದೆಯ ವಿಷಯವಾಗಿ ತಮ್ಮ ಸಂಗಡ ಮಾತನಾಡಿದನೆಂದು ಅವರು ಗ್ರಹಿಸಲಿಲ್ಲ.తండ్రిని గూర్చి తమతో ఆయన చెప్పెనని వారు గ్రహింపక పోయిరి.
28 ಆಮೇಲೆ ಯೇಸು ಅವ ರಿಗೆ--ಮನುಷ್ಯಕುಮಾರನನ್ನು ನೀವು ಮೇಲಕ್ಕೆತ್ತಿದಾಗ ನಾನೇ ಆತನೆಂದೂ ನನ್ನಷ್ಟಕ್ಕೆ ನಾನೇ ಏನೂ ಮಾಡದೆ ನನ್ನ ತಂದೆಯು ನನಗೆ ತಿಳಿಸಿದ ಹಾಗೆ ಈ ಸಂಗತಿ ಗಳನ್ನು ಹೇಳುತ್ತೇನೆಂದೂ ನೀವು ತಿಳಿದುಕೊಳ್ಳುವಿರಿ.కావున యేసుమీరు మనుష్యకుమారుని పైకెత్తినప్పుడు నేనే ఆయనననియు, నా అంతట నేనే యేమియు చేయక, తండ్రి నాకు నేర్పినట్టు ఈ సంగతులు మాటలాడుచున్నాననియు మీరు గ్రహించెదరు.
29 ಇದಲ್ಲದೆ ನನ್ನನ್ನು ಕಳುಹಿಸಿದಾತನು ನನ್ನ ಸಂಗಡ ಇದ್ದಾನೆ; ತಂದೆಯು ನನ್ನನ್ನು ಒಂಟಿಯಾಗಿ ಬಿಡಲಿಲ್ಲ;ಯಾಕಂದರೆ ಆತನು ಮೆಚ್ಚುವವುಗಳನ್ನೇ ನಾನು ಯಾವಾಗಲೂ ಮಾಡುತ್ತೇನೆ ಅಂದನು.నన్ను పంపినవాడు నాకు తోడైయున్నాడు; ఆయన కిష్టమైన కార్యము నేనెల్లప్పుడును చేయుదును గనుక ఆయన నన్ను ఒంటరిగా విడిచిపెట్టలేదని చెప్పెను.
30 ಆತನು ಈ ಮಾತುಗಳನ್ನು ಹೇಳುತ್ತಿದ್ದಾಗಲೇ ಅನೇಕರು ಆತನಲ್ಲಿ ನಂಬಿಕೆಯಿಟ್ಟರು.ఆయన యీ సంగతులు మాటలాడుచుండగా అనేకు లాయనయందు విశ్వాసముంచిరి.
31 ಆತನ ಮೇಲೆ ನಂಬಿಕೆಯಿಟ್ಟ ಆ ಯೆಹೂದ್ಯರಿಗೆ ಯೇಸು ನೀವು ನನ್ನ ವಾಕ್ಯದಲ್ಲಿ ನೆಲೆಗೊಂಡಿದ್ದರೆ ನಿಜವಾ ಗಿಯೂ ನೀವು ನನ್ನ ಶಿಷ್ಯರಾಗುವಿರಿ.కాబట్టి యేసు, తనను నమి్మన యూదులతోమీరు నా వాక్యమందు నిలిచినవారైతే నిజముగా నాకు శిష్యులై యుండి సత్యమును గ్రహించెదరు;
32 ಇದಲ್ಲದೆ ನೀವು ಸತ್ಯವನ್ನು ತಿಳಿದುಕೊಳ್ಳುವಿರಿ; ಆ ಸತ್ಯವು ನಿಮ್ಮನ್ನು ಬಿಡುಗಡೆ ಮಾಡುವದು ಎಂದು ಹೇಳಿದನು.అప్పుడు సత్యము మిమ్మును స్వతంత్రులనుగా చేయునని చెప్పగా
33 ಅದಕ್ಕೆ ಅವರು ಪ್ರತ್ಯುತ್ತರವಾಗಿ ಆತನಿಗೆ--ನಾವು ಅಬ್ರಹಾಮನ ಸಂತತಿಯವರಾಗಿರಲಾಗಿ ಯಾವ ಮನುಷ್ಯನಿಗೂ ಎಂದಿಗೂ ಗುಲಾಮರಾಗಿರಲಿಲ್ಲ; ಹಾಗಾದರೆ--ನಿಮಗೆ ಬಿಡುಗಡೆಯಾಗುವದೆಂದು ನೀನು ಹೇಗೆ ಹೇಳುತ್ತೀ ಅಂದರು.వారుమేము అబ్రాహాము సంతానము, మేము ఎన్నడును ఎవనికిని దాసులమై యుండలేదే; మీరు స్వతంత్రులుగా చేయ బడుదురని యేల చెప్పుచున్నావని ఆయనతో అనిరి.
34 ಆಗ ಯೇಸು ಪ್ರತ್ಯುತ್ತರವಾಗಿ ಅವರಿಗೆ--ನಾನು ನಿಮಗೆ ನಿಜನಿಜ ವಾಗಿ ಹೇಳುತ್ತೇನೆ--ಪಾಪ ಮಾಡುವವನು ಪಾಪಕ್ಕೆ ಗುಲಾಮನಾಗಿದ್ದಾನೆ.అందుకు యేసుపాపము చేయు ప్రతివాడును పాపమునకు దాసుడని మీతో నిశ్చయముగా చెప్పుచున్నాను.
35 ಗುಲಾಮನು ಮನೆಯಲ್ಲಿ ಯಾವಾಗಲೂ ಇರುವದಿಲ್ಲ; ಆದರೆ ಮಗನು ಯಾವಾಗಲೂ ಇರುತ್ತಾನೆ.దాసుడెల్లప్పుడును ఇంటిలో నివాసముచేయడు; కుమారు డెల్లప్పుడును నివాసముచేయును.
36 ಆದದರಿಂದ ಮಗನು ನಿಮ್ಮನ್ನು ಬಿಡುಗಡೆ ಮಾಡಿದರೆ ನಿಜವಾಗಿಯೂ ನೀವು ಬಿಡುಗಡೆಯಾಗುವಿರಿ.కుమారుడు మిమ్మును స్వతంత్రులనుగా చేసినయెడల మీరు నిజముగా స్వతంత్రులై యుందురు.
37 ನೀವು ಅಬ್ರಹಾಮನ ಸಂತತಿಯವರೆಂದು ನಾನು ಬಲ್ಲೆನು; ಆದರೆ ನಿಮ್ಮಲ್ಲಿ ನನ್ನ ವಾಕ್ಯಕ್ಕೆ ಸ್ಥಳವಿಲ್ಲದ ಕಾರಣ ನೀವು ನನ್ನನ್ನು ಕೊಲ್ಲುವದಕ್ಕೆ ನೋಡುತ್ತೀರಿ.మీరు అబ్రాహాము సంతానమని నాకు తెలియును; అయినను మీలో నా వాక్యమునకు చోటులేదు గనుక నన్ను చంప వెదకుచున్నారు.
38 ನನ್ನ ತಂದೆಯ ಬಳಿ ಯಲ್ಲಿ ನಾನು ನೋಡಿದ್ದನ್ನೇ ಮಾತನಾಡುತ್ತೇನೆ; ನೀವು ನಿಮ್ಮ ತಂದೆಯ ಬಳಿಯಲ್ಲಿ ನೋಡಿದ್ದನ್ನು ಮಾಡುತ್ತೀರಿ ಅಂದನು.నేను నా తండ్రియొద్ద చూచిన సంగతులే బోధించుచున్నాను; ఆ ప్రకారమే మీరు మీ తండ్రియొద్ద వినినవాటినే జరి గించుచున్నారని వారితో చెప్పెను.
39 ಅವರು ಪ್ರತ್ಯುತ್ತರವಾಗಿ ಆತನಿಗೆ--ಅಬ್ರಹಾಮನು ನಮ್ಮ ತಂದೆ ಅಂದರು; ಅದಕ್ಕೆ ಯೇಸು ಅವರಿಗೆ--ನೀವು ಅಬ್ರಹಾಮನ ಮಕ್ಕಳಾಗಿದ್ದರೆ ಅಬ್ರಹಾಮನ ಕ್ರಿಯೆಗಳನ್ನು ಮಾಡು ತ್ತಿದ್ದಿರಿ.అందుకు వారు ఆయనతోమా తండ్రి అబ్రాహామనిరి; యేసుమీరు అబ్రాహాము పిల్లలైతే అబ్రాహాము చేసిన క్రియలు చేతురు.
40 ಆದರೆ ದೇವರಿಂದ ಕೇಳಿದ ಸತ್ಯವನ್ನು ನಿಮಗೆ ಹೇಳಿದ ನನ್ನನ್ನು ಈಗ ಕೊಲ್ಲುವದಕ್ಕೆ ನೋಡುತ್ತೀರಿ; ಇದನ್ನು ಅಬ್ರಹಾಮನು ಮಾಡಲಿಲ್ಲ.దేవునివలన వినిన సత్యము మీతో చెప్పినవాడనైన నన్ను మీరిప్పుడు చంప వెదకుచున్నారే; అబ్రాహాము అట్లు చేయలేదు
41 ನೀವು ನಿಮ್ಮ ತಂದೆಯ ಕ್ರಿಯೆಗಳನ್ನು ಮಾಡುತ್ತೀರಿ ಅಂದನು. ಅದಕ್ಕವರು ಆತನಿಗೆ--ನಾವು ವ್ಯಭಿಚಾರದಿಂದ ಹುಟ್ಟಿ ದವರಲ್ಲ; ನಮಗೆ ಒಬ್ಬನೇ ತಂದೆ, ಆತನು ದೇವರೇ ಅಂದರು.మీరు మీ తండ్రి క్రియలే చేయుచున్నారని వారితో చెప్పెను; అందుకు వారుమేము వ్యభిచారమువలన పుట్టినవారము కాము, దేవుడొక్కడే మాకు తండ్రి అని చెప్పగా
42 ಯೇಸು ಅವರಿಗೆ--ದೇವರು ನಿಮ್ಮ ತಂದೆಯಾಗಿದ್ದರೆ ನೀವು ನನ್ನನ್ನು ಪ್ರೀತಿಸುತ್ತಿದ್ದಿರಿ; ಯಾಕಂದರೆ ನಾನು ದೇವರಿಂದ ಹೊರಟುಬಂದಿದ್ದೇನೆ. ನನ್ನಷ್ಟಕ್ಕೆ ನಾನೇ ಬರಲಿಲ್ಲ; ಆದರೆ ಆತನೇ ನನ್ನನ್ನು ಕಳುಹಿಸಿದನು.యేసు వారితో ఇట్లనెనుదేవుడు మీ తండ్రియైనయెడల మీరు నన్ను ప్రేమింతురు; నేను దేవుని యొద్దనుండి బయలుదేరి వచ్చి యున్నాను, నా అంతట నేనే వచ్చియుండలేదు, ఆయన నన్ను పంపెను.
43 ನೀವು ನನ್ನ ಮಾತನ್ನು ಯಾಕೆ ಗ್ರಹಿ ಸದೆ ಇದ್ದೀರಿ? ನೀವು ನನ್ನ ವಾಕ್ಯವನ್ನು ಕೇಳದೆ ಇರುವದರಿಂದಲೇ.మీరేల నా మాటలు గ్రహింపకున్నారు? మీరు నా బోధ విననేరకుండుటవలననేగదా?
44 ನೀವು ನಿಮ್ಮ ತಂದೆಯಾದ ಸೈತಾನನಿಗೆ ಸಂಬಂಧಪಟ್ಟವರಾಗಿದ್ದೀರಿ. ನಿಮ್ಮ ತಂದೆಯ ದುರಾಶೆಗಳನ್ನೇ ನೀವು ಮಾಡುವದಕ್ಕೆ ಇಚ್ಛೈಸುತ್ತೀರಿ; ಅವನು ಆದಿಯಿಂದಲೂ ಕೊಲೆಗಾರನಾಗಿದ್ದು ಸತ್ಯ ದಲ್ಲಿ ನಿಲ್ಲಲಿಲ್ಲ. ಯಾಕಂದರೆ ಅವನಲ್ಲಿ ಸತ್ಯವೇ ಇಲ್ಲ; ಅವನು ಸುಳ್ಳಾಡುವಾಗ ತನ್ನ ಸ್ವಂತವಾದವುಗಳಿಂದ ಮಾమీరు మీ తండ్రియగు అపవాది సంబంధులు; మీ తండ్రి దురాశలు నెరవేర్చ గోరుచున్నారు. ఆదినుండి వాడు నరహంత కుడైయుండి సత్యమందు నిలిచినవాడు కాడు; వానియందు సత్యమేలేదు; వాడు అబద్ధమాడునప్పుడు తన స్వభావము అనుసరించియే మాటలాడును; వాడు అబద్ధి కుడును అబద్ధమునకు జనకుడునై యున్నాడు.
45 ನಾನು ನಿಮಗೆ ಸತ್ಯವನ್ನು ಹೇಳುವವನಾದದರಿಂದ ನೀವು ನನ್ನನ್ನು ನಂಬುವದಿಲ್ಲ.నేను సత్యమునే చెప్పుచున్నాను గనుక మీరు నన్ను నమ్మరు.
46 ನನ್ನಲ್ಲಿ ಪಾಪವಿದೆ ಎಂದು ನಿಮ್ಮಲ್ಲಿ ಯಾರು ಸ್ಥಾಪಿಸುವಿರಿ? ಮತ್ತು ನಾನು ಸತ್ಯವನ್ನು ಹೇಳಿದರೆ ನೀವು ನನ್ನನ್ನು ಯಾಕೆ ನಂಬುವದಿಲ್ಲ?నాయందు పాపమున్నదని మీలో ఎవడు స్థాపించును? నేను సత్యము చెప్పుచున్నయెడల మీరెందుకు నన్ను నమ్మరు?
47 ದೇವರಿಗೆ ಸಂಬಂಧಪಟ್ಟವನು ದೇವರ ವಾಕ್ಯಗಳನ್ನು ಕೇಳುತ್ತಾನೆ. ಆದರೆ ನೀವು ದೇವರಿಗೆ ಸಂಬಂಧಪಟ್ಟವರಲ್ಲದ ಕಾರಣ ಅವುಗಳನ್ನು ಕೇಳುವದಿಲ್ಲ ಎಂದು ಹೇಳಿದನು.దేవుని సంబంధియైనవాడు దేవుని మాటలు వినును. మీరు దేవుని సంబంధులు కారు గనుకనే మీరు వినరని చెప్పెను.
48 ಆಗ ಯೆಹೂದ್ಯರು ಪ್ರತ್ಯುತ್ತರವಾಗಿ ಆತನಿಗೆ--ನೀನು ಸಮಾರ್ಯನು ಮತ್ತು ನಿನಗೆ ದೆವ್ವ ಹಿಡಿದದೆ ಎಂದು ನಾವು ಹೇಳುವದು ಸರಿಯಲ್ಲವೋ ಎಂದು ಹೇಳಿದರು.అందుకు యూదులు నీవు సమరయు డవును దయ్యముపట్టినవాడవును అని మేము చెప్పుమాట సరియేగదా అని ఆయనతో చెప్పగా
49 ಅದಕ್ಕೆ ಯೇಸು ಪ್ರತ್ಯುತ್ತರವಾಗಿ-- ನನಗೆ ದೆವ್ವ ಹಿಡಿದಿಲ್ಲ; ಆದರೆ ನನ್ನ ತಂದೆಯನ್ನು ಸನ್ಮಾನಿಸುತ್ತೇನೆ, ನೀವು ನನ್ನನ್ನು ಅವಮಾನ ಪಡಿಸುತ್ತೀರಿ.యేసు నేను దయ్యముపట్టిన వాడను కాను, నా తండ్రిని ఘనపరచువాడను; మీరు నన్ను అవమానపరచుచున్నారు.
50 ಇದಲ್ಲದೆ ನಾನು ನನ್ನ ಸ್ವಂತ ಮಹಿಮೆಯನ್ನು ಹುಡುಕುವದಿಲ್ಲ; ಆದರೆ ಹುಡುಕು ವವನೂ ನ್ಯಾಯತೀರಿಸುವವನೂ ಒಬ್ಬನಿದ್ದಾನೆ.నేను నా మహిమను వెదకుటలేదు; వెదకుచు తీర్పు తీర్చుచు ఉండువా డొకడు కలడు.
51 ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ--ಒಬ್ಬನು ನನ್ನ ಮಾತನ್ನು ಕೈಕೊಂಡರೆ ಅವನು ಎಂದಿಗೂ ಮರಣವನ್ನು ಕಾಣುವದಿಲ್ಲ ಅಂದನು.ఒకడు నా మాట గైకొనిన యెడలవాడెన్నడును మరణము పొందడని3 మీతో నిశ్చయముగా చెప్పుచున్నానని ఉత్తరమిచ్చెను.
52 ಆಗ ಯೆಹೂದ್ಯರು ಆತನಿಗೆ--ನಿನಗೆ ದೆವ್ವ ಹಿಡಿದದೆ ಎಂದು ನಮಗೆ ಈಗ ತಿಳಿಯಿತು; ಅಬ್ರಹಾಮನು ಮತ್ತು ಪ್ರವಾದಿಗಳು ಸತ್ತರು; ಆದರೆ--ಯಾವನಾದರೂ ನನ್ನ ಮಾತನ್ನು ಕೈಕೊಂಡರೆ ಅವನು ಎಂದಿಗೂ ಮರಣವನ್ನು ಅನುಭವಿಸುವದಿಲ್ಲವೆಂದು ನೀನು ಹೇಳುತ್ತೀಯಲ್ಲಾ;అందుకు యూదులునీవు దయ్యము పట్టినవాడవని యిప్పుడెరుగు దుము; అబ్రాహామును ప్రవక్తలును చనిపోయిరి; అయినను ఒకడు నా మాట గైకొనినయెడల వాడు ఎన్నడును మరణము రుచిచూడ
53 ಸತ್ತುಹೋದ ನಮ್ಮ ತಂದೆ ಯಾದ ಅಬ್ರಹಾಮನಿಗಿಂತಲೂ ನೀನು ದೊಡ್ಡ ವನೋ? ಪ್ರವಾದಿಗಳೂ ಸತ್ತುಹೋದರು. ನಿನ್ನನ್ನು ಯಾರೆಂದು ನೀನು ಮಾಡಿಕೊಳ್ಳುತ್ತೀ ಎಂದು ಕೇಳಲುమన తండ్రియైన అబ్రాహాము చనిపోయెను గదా; నీవతనికంటె గొప్పవాడవా? ప్రవక్తలును చనిపోయిరి; నిన్ను నీ వెవడవని చెప్పుకొనుచున్నావని ఆయన నడిగిరి.
54 ಯೇಸು--ನನ್ನನ್ನು ನಾನೇ ಸನ್ಮಾನಿಸಿಕೊಂಡರೆ ನನ್ನ ಸನ್ಮಾನವು ಏನೂ ಅಲ್ಲ; ನೀವು ಯಾವಾತನನ್ನು ನಿಮ್ಮ ದೇವರೆಂದು ಹೇಳುತ್ತೀರೋ ಆ ನನ್ನ ತಂದೆಯೇ ನನ್ನನ್ನು ಸನ್ಮಾನಿಸುತ್ತಾನೆ.అందుకు యేసు నన్ను నేనే మహిమపరచుకొనినయెడల నా మహిమ వట్టిది; మా దేవుడని మీరెవరినిగూర్చి చెప్పుదురో ఆ నా తండ్రియే నన్ను మహిమపరచుచున్నాడు.
55 ಆದಾಗ್ಯೂ ನೀವು ಆತನನ್ನು ಅರಿತುಕೊಂಡಿಲ್ಲ; ಆದರೆ ನಾನು ಆತನನ್ನು ಅರಿತಿದ್ದೇನೆ. ನಾನು ಆತನನ್ನು ಅರಿಯಲಿಲ್ಲವೆಂದು ಹೇಳಿದರೆ ನಿಮ್ಮ ಹಾಗೆ ನಾನೂ ಸುಳ್ಳುಗಾರನಾಗಿ ರುವೆನು; ಆದರೆ ನಾನು ಆತನನ್ನು ಅರಿತಿದ್ದೇನೆ; ಆತನ ಮಾತನ್ನು ಕೈಕೊಂಡಿದ್ದೇನೆ.మీరు ఆయనను ఎరుగరు, నేనాయనను ఎరుగుదును; ఆయనను ఎరుగనని నేను చెప్పినయెడల మీవలె నేనును అబద్ధికుడనై యుందును గాని, నేనాయనను ఎరుగుదును, ఆయన మాట గైకొనుచున్నాను.
56 ನಿಮ್ಮ ತಂದೆಯಾದ ಅಬ್ರಹಾಮನು ನನ್ನ ದಿನವನ್ನು ನೋಡಲು ಸಂತೋಷಿ ಸಿದನು, ಅದನ್ನು ನೋಡಿ ಅವನು ಉಲ್ಲಾಸಗೊಂಡನು ಎಂದು ಹೇಳಿದನು.మీ తండ్రియైన అబ్రా హాము నా దినము చూతునని మిగుల ఆనందించెను; అది చూచి సంతోషించెను అనెను.
57 ಆಗ ಯೆಹೂದ್ಯರು ಆತ ನಿಗೆ--ನಿನಗೆ ಇನ್ನೂ ಐವತ್ತು ವರುಷವಾಗಿಲ್ಲ; ನೀನು ಅಬ್ರಹಾಮನನ್ನು ನೋಡಿದ್ದೀಯೋ ಅಂದರು.అందుకు యూదులునీకింకను ఏబది సంవత్సరములైన లేవే, నీవు అబ్రాహామును చూచితివా అని ఆయనతో చెప్పగా,
58 ಯೇಸು ಅವರಿಗೆ--ನಾನು ನಿಮಗೆ ನಿಜನಿಜವಾಗಿ ಹೇಳುತ್ತೇನೆ, ಅಬ್ರಹಾಮನಿಗಿಂತ ಮುಂಚೆಯೇ ನಾನು ಇದ್ದೇನೆ ಅಂದನು.యేసు అబ్రాహాము పుట్టకమునుపే నేను ఉన్నానని మీతో నిశ్చయముగా చెప్పుచున్నాననెను.
59 ಆಗ ಅವರು ಆತನ ಮೇಲೆ ಕಲ್ಲುಗಳನ್ನು ಎಸೆಯಲು ತಕ್ಕೊಂಡರು; ಆದರೆ ಯೇಸು ಅಡಗಿಕೊಂಡು ಅವರ ಮಧ್ಯದಿಂದ ದೇವಾಲಯದ ಹೊರಗೆ ಬಂದು ಅಲ್ಲಿಂದ ಹಾದು ಹೊರಟು ಹೋದನು.కాబట్టి వారు ఆయనమీద రువ్వుటకు రాళ్లు ఎత్తిరి గాని యేసు దాగి దేవాలయములో నుండి బయటికి వెళ్లిపోయెను.
Telugu Bible