Zechariah 3 - YLT (Kannada)
1 And he sheweth me Joshua the high priest standing before the messenger of Jehovah, and the Adversary standing at his right hand, to be an adversary to him.ಇದಲ್ಲದೆ ಆತನು ನನಗೆ--ಕರ್ತನ ದೂತನ ಮುಂದೆ ನಿಂತಿರುವ ಪ್ರಧಾನ ಯಾಜಕನಾದ ಯೆಹೋಶುವನನ್ನೂ ಅವನನ್ನು ಎದುರಿಸುವದಕ್ಕೆ ಅವನ ಬಲಪಾರ್ಶ್ವದಲ್ಲಿ ನಿಂತ ಸೈತಾನನನ್ನೂ ತೋರಿಸಿದನು.
2 And Jehovah saith unto the Adversary: `Jehovah doth push against thee, O Adversary, Yea, push against thee doth Jehovah, Who is fixing on Jerusalem, Is not this a brand delivered from fire?'ಆಗ ಕರ್ತನ ದೂತನು ಸೈತಾನನಿಗೆ--ಸೈತಾನನೇ, ಕರ್ತನು ನಿನ್ನನ್ನು ಗದರಿಸಲಿ; ಹೌದು, ಯೆರೂಸಲೇಮನ್ನು ಆದುಕೊಂಡ ಕರ್ತನು ನಿನ್ನನ್ನು ಗದರಿಸಲಿ; ಅದು ಬೆಂಕಿಯೊಳಗಿಂದ ಎಳೆದ ಕೊಳ್ಳೆಯಾಗಿದೆಯಲ್ಲವೋ ಅಂದನು.
3 And Joshua was clothed with filthy garments, and is standing before the messenger.ಯೆಹೋಶು ವನು ಮೈಲಿಗೆಯಾದ ವಸ್ತ್ರಗಳನ್ನು ತೊಟ್ಟುಕೊಂಡವ ನಾಗಿ ದೂತನ ಮುಂದೆ ನಿಂತನು.
4 And he answereth and speaketh unto those standing before him, saying: `Turn aside the filthy garments from off him.' And he saith unto him, `See, I have caused thine iniquity to pass away from off thee, so as to clothe thee with costly apparel.'ಆಗ ಅವನು ಉತ್ತರಕೊಟ್ಟು ತನ್ನ ಮುಂದೆ ನಿಂತವರಿಗೆ--ಇವನ ಮೇಲಿನಿಂದ ಮೈಲಿಗೆಯಾದ ವಸ್ತ್ರಗಳನ್ನು ತೆಗೆದು ಹಾಕಿರಿ ಅಂದನು. ಅವನಿಗೆ--ಇಗೋ, ನಿನ್ನ ಅಕ್ರಮವು ನಿನ್ನನ್ನು ಬಿಟ್ಟುಹೋಗುವಂತೆ ಮಾಡಿದ್ದೇನೆ; ಬದಲು ವಸ್ತ್ರಗಳನ್ನು ನಿನಗೆ ತೊಡಿಸುವೆನು ಅಂದನು.
5 He also said, `Let them set a pure diadem on his head. And they set the pure diadem on his head, and clothe him with garments. And the messenger of Jehovah is standing,ಆಗ ನಾನು--ಅವನ ತಲೆಯ ಮೇಲೆ ಶುದ್ಧ ಮುಂಡಾಸವನ್ನು ಇಡಿರಿ ಅಂದೆನು. ಆಗ ಅವರು ಅವನ ತಲೆಯ ಮೇಲೆ ಶುದ್ಧ ಮುಂಡಾಸವನ್ನು ಇಟ್ಟು ಅವನಿಗೆ ನಿಲು ವಂಗಿಗಳನ್ನು ತೊಡಿಸಿದರು; ಕರ್ತನ ದೂತನು ಪಕ್ಕ ದಲ್ಲಿ ನಿಂತಿದ್ದನು.
6 and the messenger of Jehovah doth protest to Joshua, saying:ಆಗ ಕರ್ತನ ದೂತನು ಯೆಹೋ ಶುವನಿಗೆ ಸಾಕ್ಷಿ ಕೊಟ್ಟದ್ದೇನಂದರೆ--
7 `Thus said Jehovah of Hosts: If in My ways thou dost walk, And if My charge thou dost keep, Then also thou dost judge My house, And also thou dost keep My courts, And I have given to thee conductors among these standing by.ಸೈನ್ಯಗಳ ಕರ್ತನು ಹೀಗೆ ಹೇಳುತ್ತಾನೆ--ನೀನು ನನ್ನ ಮಾರ್ಗಗಳಲ್ಲಿ ನಡೆದು ನನ್ನ ಆಜ್ಞೆಯನ್ನು ಕೈಕೋ, ಆಗ ನೀನು ನನ್ನ ಮನೆಗೂ ನ್ಯಾಯತೀರಿಸಿ ನನ್ನ ಅಂಗಳಗಳನ್ನೂ ಕಾಯುವಿ; ಇಲ್ಲಿ ನಿಂತವರ ಬಳಿಯಲ್ಲಿ ನಡೆದಾಡುವ ನಿನಗೆ ಸ್ಥಳಗಳನ್ನು ಕೊಡುವೆನು.
8 Hear, I pray thee, Joshua, the high priest, Thou and thy companions sitting before thee, (For men of type `are' they,) For lo, I am bringing in My servant -- a Shoot.ಪ್ರಧಾನ ಯಾಜಕ ನಾದ ಓ ಯೆಹೋಶುವನೇ, ನೀನೂ ನಿನ್ನ ಮುಂದೆ ಕೂತುಕೊಳ್ಳುವ ನಿನ್ನ ಸಂಗಡಿಗರೂ ಈಗ ಕೇಳಿರಿ; ಅವರು ಆಶ್ಚರ್ಯವನ್ನುಂಟು ಮಾಡುವ ಮನುಷ್ಯರಾಗಿ ದ್ದಾರೆ; ಇಗೋ, ನಾನು ಕೊಂಬೆಯೆಂಬ ನನ್ನ ಸೇವಕ ನನ್ನು ಬರಮಾಡುವೆನು.
9 For lo, the stone that I put before Joshua, On one stone `are' seven eyes, Lo, I am graving its graving, An affirmation of Jehovah of Hosts, And I have removed the iniquity of that land in one day.ನಾನು ಯೆಹೋಶುವನ ಮುಂದೆ ಇಟ್ಟಿರುವ ಕಲ್ಲನ್ನು ನೋಡು. ಒಂದು ಕಲ್ಲಿನ ಮೇಲೆ ಏಳು ಕಣ್ಣುಗಳು ಇರುವವು; ಇಗೋ, ನಾನು ಅದರ ಕೆತ್ತನೆಯಿಂದ ಕೆತ್ತುವೆನು; ಆ ದೇಶದ ಅಪರಾಧ ವನ್ನು ಒಂದೇ ದಿನದಲ್ಲಿ ತೊಲಗಿಸುವೆನು ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ.
10 In that day -- an affirmation of Jehovah of Hosts, Ye do call, each unto his neighbour, Unto the place of the vine, And unto the place of the fig-tree!'ಆ ದಿನದಲ್ಲಿ ನೀವು ನಿಮ್ಮ ನಿಮ್ಮ ನೆರೆಯವರನ್ನು ದ್ರಾಕ್ಷೇಬಳ್ಳಿಯ ಕೆಳಗೂ ಅಂಜೂರ ಮರದ ಕೆಳಗೂ ಕರೆಯುವಿರಿ ಎಂದು ಸೈನ್ಯಗಳ ಕರ್ತನು ಅನ್ನುತ್ತಾನೆ.
Kannada Bible