Zechariah 11 - DBY (Kannada)
1 Open thy doors, O Lebanon, that the fire may devour thy cedars.ಓ ಲೆಬನೋನೇ, ಬೆಂಕಿ ನಿನ್ನ ದೇವದಾರುಗಳನ್ನು ನುಂಗುವ ಹಾಗೆ ನಿನ್ನ ಬಾಗಲು ಗಳನ್ನು ತೆರೆ.
2 Howl, cypress, for the cedar is fallen; because the noble ones are spoiled. Howl, ye oaks of Bashan; for the strong forest is come down.ತುರಾಯಿ ಗಿಡವೇ, ಗೋಳಿಡು; ದೇವದಾರು ಬಿದ್ದುಹೋಯಿತು, ಬಲವಾದವುಗಳು ಹಾಳಾದವು; ಬಾಷಾನಿನ ಓಕ್ ಮರಗಳೇ, ಗೋಳಾ ಡಿರಿ; ದ್ರಾಕ್ಷೆಯ ಅಡವಿಯು ಇಳಿದು ಬಂದಿದೆ.
3 A voice of howling of the shepherds; for their glory is spoiled: a voice of roaring of young lions; for the pride of Jordan is spoiled.ಕುರುಬರು ಗೋಳಿಡುವ ಶಬ್ದವುಂಟು; ಅವರ ಗೌರವವು ಕೆಡಿಸಲ್ಪಟ್ಟಿದೆ, ಪ್ರಾಯದ ಸಿಂಹಗಳ ಘರ್ಜಿಸುವ ಶಬ್ದವುಂಟು; ಯೊರ್ದನಿನ ಗರ್ವ ಕೆಡಿಸಲ್ಪಟ್ಟಿದೆ.
4 Thus saith Jehovah my God: Feed the flock of slaughter,ನನ್ನ ದೇವರಾದ ಕರ್ತನು ಹೀಗೆ ಹೇಳುತ್ತಾನೆ --ಕೊಲೆಯ ಮಂದೆಯನ್ನು ಮೇಯಿಸು.
5 whose possessors slay them without being held guilty; and they that sell them say, Blessed be Jehovah! for I am become rich; and their own shepherds pity them not.ಅವುಗಳನ್ನು ಸಂಪಾದಿಸಿದವರು ಅವುಗಳನ್ನು ಕೊಂದು ತಮ್ಮನ್ನು ನಿರಪರಾಧಿಗಳೆಂದೆಣಿಸುತ್ತಾರೆ; ಅವುಗಳನ್ನು ಮಾರುವ ವರು--ನಾನು ಐಶ್ವರ್ಯವಂತನಾದೆನು, ಕರ್ತನಿಗೆ ಸ್ತೋತ್ರ ಎಂದನ್ನುತ್ತಾರೆ; ಅವರ ಸ್ವಂತ ಕುರುಬರು ಅವುಗಳನ್ನು ಕನಿಕರಿಸುವದಿಲ್ಲ.
6 For I will no more pity the inhabitants of the land, saith Jehovah, and behold, I will deliver men, every one into his neighbour's hand, and into the hand of his king; and they shall smite the land, and I will not deliver out of their hand.ನಾನು ದೇಶದ ನಿವಾಸಿಗಳನ್ನು ಇನ್ನು ಕನಿಕರಿಸುವದೇ ಇಲ್ಲ ಎಂದು ಕರ್ತನು ಅನ್ನುತ್ತಾನೆ; ಆದರೆ ಇಗೋ, ನಾನು ಒಬ್ಬೊ ಬ್ಬನನ್ನು ತನ್ನ ತನ್ನ ನೆರೆಯವನ ಕೈಗೂ ತನ್ನ ಅರಸನ ಕೈಗೂ ಒಪ್ಪಿಸುವೆನು; ಅವರು ದೇಶವನ್ನು ಹೊಡೆ ಯುವರು; ಅವರ ಕೈಯೊಳಗಿಂದ ನಾನು ಅವರನ್ನು ತಪ್ಪಿಸುವದಿಲ್ಲ.
7 So I fed the flock of slaughter, truly the poor of the flock. And I took unto me two staves; the one I called Beauty, and the other I called Bands; and I fed the flock.ಆಗ ಕೊಯ್ಗುರಿಗಳ ಮಂದೆ ಯನ್ನು ಹೌದು, ಬಡವಾದ ಮಂದೆಯನ್ನೇ ಮೇಯಿಸಿದೆನು; ನನಗಾಗಿ ಎರಡು ಕೋಲುಗಳನ್ನು ತಕ್ಕೊಂಡೆನು; ಒಂದಕ್ಕೆ ಸೌಂದರ್ಯ ಎಂದೂ ಮತ್ತೊಂದಕ್ಕೆ ಬಂಧ ಗಳೆಂದೂ ಹೆಸರಿಟ್ಟೆನು; ಹೀಗೆ ಮಂದೆಯನ್ನು ಮೇಯಿ ಸಿದೆನು.
8 And I destroyed three shepherds in one month; and my soul was vexed with them, and their soul also loathed me.ಇದಲ್ಲದೆ ಒಂದೇ ತಿಂಗಳಲ್ಲಿ ಮೂರು ಕುರುಬರನ್ನು ತೆಗೆದುಹಾಕಿದೆನು; ನನ್ನ ಆತ್ಮವು ಅವರನ್ನು ಹೇಸಿಕೊಂಡಿತು; ಅವರ ಆತ್ಮವು ಸಹ ನನ್ನನ್ನು ಹೇಸಿ ಕೊಂಡಿತು.
9 And I said, I will not feed you: that which dieth, let it die; and that which perisheth let it perish; and let them which are left eat every one the flesh of another.ಆಗ ನಾನು ಹೇಳಿದ್ದೇನಂದರೆ-- ನಾನು ನಿಮ್ಮನ್ನು ಮೇಯಿಸುವದಿಲ್ಲ; ಸಾಯುವಂಥದ್ದು ಸಾಯಲಿ; ಕೆಡುವಂಥದ್ದು ಕೆಡಲಿ; ಮಿಕ್ಕಾದವುಗಳ ಒಂದರ ಮಾಂಸವನ್ನು ಒಂದು ತಿನ್ನಲಿ.
10 And I took my staff, Beauty, and cut it asunder, that I might break my covenant which I had made with all the peoples.ಆಗ ಸೌಂದರ್ಯವೆಂಬ ನನ್ನ ಕೋಲನ್ನು ತಕ್ಕೊಂಡು ಅದನ್ನು ಮುರಿದುಬಿಟ್ಟೆನು; ಹೀಗೆ ಜನರೆಲ್ಲರ ಸಂಗಡ ನಾನು ಮಾಡಿದ್ದ ನನ್ನ ಒಡಂಬಡಿಕೆಯನ್ನು ಮುರಿದುಬಿಟ್ಟೆನು,
11 And it was broken in that day; and so the poor of the flock that gave heed to me knew that it was the word of Jehovah.ಅದೇ ದಿನದಲ್ಲಿ ಅದು ಮುರಿಯಲ್ಪಟ್ಟಿತು; ಆಗ ನನ್ನಲ್ಲಿ ನಿರೀಕ್ಷೆಯಿಟ್ಟ ಬಡ ಕುರಿಮಂದೆಯು ಅದು ಕರ್ತನ ವಾಕ್ಯವೆಂದು ತಿಳಿದುಕೊಂಡಿತು.
12 And I said unto them, If ye think good, give [me] my hire; and if not, forbear. And they weighed for my hire thirty silver-pieces.ಆಗ ನಾನು ಅವರಿಗೆ--ನಿಮ್ಮ ಕಣ್ಣುಗಳಲ್ಲಿ ಒಳ್ಳೇದಾಗಿ ತೋರಿದರೆ ನನ್ನ ಸಂಬಳವನ್ನು ಕೊಡಿರಿ, ಇಲ್ಲದಿದ್ದರೆ ಬಿಡಿರಿ ಅಂದೆನು. ಆಗ ಅವರು ನನ್ನ ಸಂಬಳಕ್ಕಾಗಿ ಮೂವತ್ತು ರೂಪಾಯಿಗಳನ್ನು ತೂಕಮಾಡಿದರು.
13 And Jehovah said unto me, Cast it unto the potter: a goodly price that I was prized at by them. And I took the thirty silver-pieces, and cast them to the potter in the house of Jehovah.ಆಗ ಕರ್ತನು ನನಗೆ--ಅದನ್ನು ಕುಂಬಾರನಿಗೆ ಹಾಕು; ನಾನು ಅವರಿಂದ ಬೆಲೆ ಮಾಡಲ್ಪಟ್ಟದ್ದು ಸರಿಯಾದ ಬೆಲೆ ಅಲ್ಲವೋ ಅಂದನು; ಆಗ ನಾನು ಆ ಮೂವತ್ತು ರೂಪಾಯಿಗಳನ್ನು ತಕ್ಕೊಂಡು ಕರ್ತನ ಆಲಯದಲ್ಲಿ ಅವುಗಳನ್ನು ಕುಂಬಾರನಿಗೆ ಹಾಕಿದೆನು.
14 And I cut asunder mine other staff, Bands, to break the brotherhood between Judah and Israel.ಆಗ ನನ್ನ ಎರಡನೇ ಕೋಲಾದ ಬಂಧಗಳನ್ನು ಮುರಿದುಬಿಟ್ಟೆನು; ಹೀಗೆ ಯೆಹೂದಕ್ಕೂ ಇಸ್ರಾಯೇ ಲಿಗೂ ಮಧ್ಯೆ ಇರುವ ಸಹೋದರತನವನ್ನು ಇಲ್ಲದ ಹಾಗೆ ಮಾಡಿದೆನು.
15 And Jehovah said unto me, Take unto thee yet the instruments of a foolish shepherd.ಇದಲ್ಲದೆ ಕರ್ತನು ನನಗೆ ಹೇಳಿದ್ದೇನಂದರೆ --ಇನ್ನು ಬುದ್ಧಿಹೀನವಾದ ಕುರುಬನ ಆಯುಧಗ ಳನ್ನು ತಕ್ಕೋ.
16 For behold, I will raise up a shepherd in the land, who shall not visit those that are about to perish, neither shall seek that which is strayed away, nor heal that which is wounded, nor feed that which is sound; but he will eat the flesh of the fat, and tear their hoofs in pieces.ಇಗೋ, ನಾನು ದೇಶದಲ್ಲಿ ಒಬ್ಬ ಕುರುಬನನ್ನು ಎಬ್ಬಿಸುವೆನು; ಅವನು ಕೆಟ್ಟು ಹೋಗುವ ವುಗಳನ್ನು ವಿಚಾರಿಸುವದಿಲ್ಲ; ಇಲ್ಲವೆ ಮರಿಯನ್ನು ಅವನು ಹುಡುಕುವದಿಲ್ಲ; ಮುರಿದದ್ದನ್ನು ಅವನು ಗುಣಮಾಡುವದಿಲ್ಲ; ಇನ್ನೂ ನಿಂತಿರುವದನ್ನು ಅವನು ಪೋಷಿಸುವದಿಲ್ಲ; ಆದರೆ ಕೊಬ್ಬಿದವುಗಳ ಮಾಂಸ ವನ್ನು ತಿನ್ನುವನು; ಅವುಗಳ ಗೊರಸುಗಳನ್ನು ಮುರಿದು ಬಿಡುವನು.
17 Woe to the worthless shepherd that leaveth the flock! The sword shall be upon his arm, and upon his right eye; his arm shall be clean dried up, and his right eye utterly darkened.ಮಂದೆಯನ್ನು ಕೈಬಿಡುವಂಥ ಮೈಗಳ್ಳನಾದ ಕುರುಬನಿಗೆ ಅಯ್ಯೋ! ಕತ್ತಿಯು ಅವನ ತೋಳಿನ ಮೇಲೆಯೂ ಅವನ ಬಲಗಣ್ಣಿನ ಮೇಲೆಯೂ ಇರುವದು; ಅವನ ತೋಳು ತೀರಾ ಒಣಗುವದು; ಅವನ ಬಲಗಣ್ಣು ಪೂರ್ಣವಾಗಿ ಕತ್ತಲಾಗುವದು.
Kannada Bible