Bible

Leviticus 3 - DBY (Kannada)

1 And if his offering be a sacrifice of peace-offering, -- if he present [it] of the herd, whether a male or female, he shall present it without blemish before Jehovah.ಅವನ ಕಾಣಿಕೆಯು ಸಮಾಧಾನದ ಬಲಿಯ ಅರ್ಪಣೆಯಾಗಿದ್ದು ಅದನ್ನು ಮಂದೆಯಿಂದ ಅರ್ಪಿಸುವದಾದರೆ ಅದು ಗಂಡಾಗಲಿ ಇಲ್ಲವೆ ಹೆಣ್ಣಾಗಲಿ ಅದನ್ನು ಅವನು ಕರ್ತನ ಮುಂದೆ ದೋಷವಿಲ್ಲದ್ದಾಗಿ ಸಮರ್ಪಿಸಲಿ.

2 And he shall lay his hand on the head of his offering, and slaughter it at the entrance of the tent of meeting; and Aaron's sons, the priests, shall sprinkle the blood on the altar round about.ಅವನು ಸಮರ್ಪಿ ಸುವದರ ತಲೆಯ ಮೇಲೆ ತನ್ನ ಕೈಯನ್ನು ಇಟ್ಟು ಅದನ್ನು ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ವಧಿಸ ಬೇಕು; ಯಾಜಕರಾದ ಆರೋನನ ಕುಮಾರರು ಯಜ್ಞವೇದಿಯ ಮೇಲೆ ಸುತ್ತಲೂ ರಕ್ತವನ್ನು ಚಿಮುಕಿಸ ಬೇಕು.

3 And he shall present of the sacrifice of peace-offering an offering by fire to Jehovah; the fat that covereth the inwards, and all the fat that is on the inwards,ಅವನು ಸಮಾಧಾನದ ಕಾಣಿಕೆಯ ಯಜ್ಞಾ ರ್ಪಣೆಯನ್ನು ಅಂದರೆ ಕರುಳುಗಳನ್ನು ಮುಚ್ಚುವ ಕೊಬ್ಬನ್ನೂ ಕರುಳುಗಳ ಮೇಲಿರುವ ಎಲ್ಲಾ ಕೊಬ್ಬನ್ನೂ

4 and the two kidneys, and the fat that is on them, which is by the flanks, and the net above the liver which he shall take away as far as the kidneys;ಎರಡು ಮೂತ್ರಜನಕಾಂಗಗಳನ್ನೂ ಪಕ್ಕೆಯ ಬದಿ ಯಲ್ಲಿ ಅವುಗಳ ಮೇಲಿರುವ ಕೊಬ್ಬನ್ನೂ ಮೂತ್ರಜನ ಕಾಂಗಗಳ ಮೇಲಿರುವ ಪೊರೆಯನ್ನೂ ಮೂತ್ರಜನ ಕಾಂಗಗಳೊಂದಿಗೆ ಅದನ್ನು ತೆಗೆದುಕೊಂಡು ಕರ್ತನಿಗೆ ಬೆಂಕಿಯಿಂದ ಕಾಣಿಕೆಯಾಗಿ ಸಮರ್ಪಿಸಬೇಕು.

5 and Aaron's sons shall burn it on the altar upon the burnt-offering which [lieth] on the wood that is upon the fire: [it is] an offering by fire to Jehovah of a sweet odour.ಆರೋನನ ಕುಮಾರರು ಅದನ್ನು ಯಜ್ಞವೇದಿಯಲ್ಲಿ ಬೆಂಕಿಯ ಮೇಲಿರುವ ಕಟ್ಟಿಗೆಯ ಮೇಲೆ ದಹನ ಬಲಿಯಾಗಿ ಸುಡಬೇಕು; ಅದು ಬೆಂಕಿಯಿಂದ ಮಾಡಿದ ಕಾಣಿಕೆಯಾಗಿದ್ದು ಕರ್ತನಿಗೆ ಸುವಾಸನೆಯಾಗಿರುವದು.

6 And if his offering for a sacrifice of peace-offering to Jehovah be of small cattle, male or female, he shall present it without blemish.ಅವನ ಕಾಣಿಕೆಯು ಸಮಾಧಾನದ ಸಮರ್ಪಣೆಯ ಯಜ್ಞವಾಗಿ ಅದು ತನ್ನ ಹಿಂಡಿನಿಂದಾದ ಕಾಣಿಕೆ ಯಾಗಿದ್ದರೆ ಗಂಡಾಗಲಿ ಇಲ್ಲವೆ ಹೆಣ್ಣಾಗಲಿ ದೋಷ ವಿಲ್ಲದ್ದಾಗಿ ಅದನ್ನು ಅವನು ಕರ್ತನಿಗೆ ಸಮರ್ಪಿಸಬೇಕು.

7 If he present a sheep for his offering, then shall he present it before Jehovah,ಅವನು ಕುರಿಮರಿಯನ್ನು ಅರ್ಪಣೆಗೋಸ್ಕರ ಅರ್ಪಿಸುವದಾದರೆ ಅದನ್ನು ಅವನು ಕರ್ತನ ಎದುರಿ ನಲ್ಲಿ ಸಮರ್ಪಿಸಬೇಕು.

8 and shall lay his hand on the head of his offering, and slaughter it before the tent of meeting; and Aaron's sons shall sprinkle the blood thereof upon the altar round about.ಅವನು ತನ್ನ ಅರ್ಪಣೆಯ ತಲೆಯ ಮೇಲೆ ತನ್ನ ಕೈಯನ್ನು ಇಟ್ಟು ಅದನ್ನು ಸಭೆಯ ಗುಡಾರದ ಎದುರಿನಲ್ಲಿ ವಧಿಸಬೇಕು. ಇದಲ್ಲದೆ ಆರೋನನ ಕುಮಾರರು ಯಜ್ಞವೇದಿಯ ಮೇಲೆ ಸುತ್ತಲೂ ರಕ್ತವನ್ನು ಚಿಮುಕಿಸಬೇಕು.

9 And he shall present of the sacrifice of peace-offering an offering by fire to Jehovah; the fat thereof, the whole fat tail, which he shall take off close by the backbone, and the fat that covereth the inwards, and all the fat that is on the inwards,ಅದರ ಇಡೀ ಹಿಂಭಾಗವನ್ನೂ ಕೊಬ್ಬನ್ನೂ ಅವನು ಬೆನ್ನೆಲುಬಿನಿಂದ ತೆಗೆದು ಕರುಳುಗಳನ್ನು ಮುಚ್ಚುವ ಕೊಬ್ಬನ್ನೂ ಕರುಳು ಗಳ ಮೇಲಿರುವ ಎಲ್ಲಾ ಕೊಬ್ಬನ್ನೂ

10 and the two kidneys, and the fat that is on them, which is by the flanks, and the net above the liver which he shall take away as far as the kidneys;ಎರಡು ಮೂತ್ರ ಜನಕಾಂಗಗಳನ್ನೂ ಪಕ್ಕೆಯ ಬದಿಗಳಲ್ಲಿರುವವುಗಳ ಮೇಲಿರುವ ಕೊಬ್ಬನ್ನೂ ಪೊರೆಯನ್ನೂ ಮೂತ್ರಜನ ಕಾಂಗಗಳೊಂದಿಗೆ ತೆಗೆದುಕೊಂಡು ಸಮಾಧಾನದ ಕಾಣಿಕೆಯ ಯಜ್ಞಾರ್ಪಣೆಯನ್ನು ಬೆಂಕಿಯಿಂದ ಮಾಡಿದ ಕಾಣಿಕೆಯಾಗಿ ಕರ್ತನಿಗೆ ಸಮರ್ಪಿಸಬೇಕು.

11 and the priest shall burn it on the altar: [it is] the food of the offering by fire to Jehovah.ಯಾಜಕನು ಅದನ್ನು ಯಜ್ಞವೇದಿಯ ಮೇಲೆ ಸುಡಬೇಕು; ಅದು ಕರ್ತನಿಗೆ ಬೆಂಕಿಯಿಂದ ಮಾಡಿದ ಸಮರ್ಪಣೆಯ ಆಹಾರವಾಗಿರುತ್ತದೆ.

12 And if his offering be a goat, then he shall present it before Jehovah.ಅವನ ಸಮರ್ಪಣೆಯು ಮೇಕೆಯಾಗಿದ್ದರೆ ಅದನ್ನು ಅವನು ಕರ್ತನ ಎದುರಿನಲ್ಲಿ ಸಮರ್ಪಿಸಬೇಕು.

13 And he shall lay his hand on the head of it, and slaughter it before the tent of meeting; and the sons of Aaron shall sprinkle the blood thereof on the altar round about.ಅವನು ಅದರ ತಲೆಯ ಮೇಲೆ ತನ್ನ ಕೈಯನ್ನಿಟ್ಟು ಸಭೆಯ ಗುಡಾರದ ಮುಂದೆ ಅದನ್ನು ವಧಿಸಬೇಕು; ಆಗ ಆರೋನನ ಕುಮಾರರು ಅದರ ರಕ್ತವನ್ನು ಯಜ್ಞ ವೇದಿಯ ಸುತ್ತಲೂ ಚಿಮುಕಿಸಬೇಕು.

14 And he shall present thereof his offering, an offering by fire to Jehovah; the fat that covereth the inwards and all the fat that is on the inwards,ಕರುಳುಗಳನ್ನು ಮುಚ್ಚುವ ಕೊಬ್ಬನ್ನೂ ಕರುಳುಗಳ ಮೇಲಿರುವ ಎಲ್ಲಾ ಕೊಬ್ಬನ್ನೂ

15 and the two kidneys, and the fat that is on them, which is by the flanks, and the net above the liver which he shall take away as far as the kidneys;ಎರಡು ಮೂತ್ರಜನಕಾಂಗ ಗಳನ್ನೂ ಪಕ್ಕೆಯ ಬದಿಗಳಲ್ಲಿ ಅವುಗಳ ಮೇಲಿರುವ ಕೊಬ್ಬನ್ನೂ ಮೂತ್ರಜನಕಾಂಗಗಳೊಂದಿಗೆ ಕಲಿಜದ ಮೇಲಿರುವ ಪೊರೆಯನ್ನೂ ಅವನು ತೆಗೆದುಕೊಂಡು ಅರ್ಪಿಸುವ ಸಮರ್ಪಣೆಯನ್ನು ಬೆಂಕಿಯಿಂದ ಮಾಡಿದ ಸಮರ್ಪಣೆಯನ್ನಾಗಿ ಕರ್ತನಿಗೆ ಅರ್ಪಿಸಬೇಕು.

16 and the priest shall burn them on the altar: [it is] the food of the offering by fire for a sweet odour. All the fat [shall be] Jehovah's.ಯಾಜಕನು ಅವುಗಳನ್ನು ಯಜ್ಞವೇದಿಯ ಮೇಲೆ ಸುಡಬೇಕು; ಅದು ಬೆಂಕಿಯಿಂದ ಮಾಡಿದ ಯಜ್ಞಾ ರ್ಪಣೆಯು ಸುವಾಸನೆಯ ಆಹಾರವಾಗಿರುವದು. ಎಲ್ಲಾ ಕೊಬ್ಬು ಕರ್ತನದೇ.

17 [It is] an everlasting statute for your generations throughout all your dwellings: no fat and no blood shall ye eat.ನೀವು ಕೊಬ್ಬನ್ನಾಗಲಿ ರಕ್ತವನ್ನಾಗಲಿ ತಿನ್ನದಂತೆ ಇದು ನಿಮ್ಮ ಸಂತತಿಯ ವರಿಗೆಲ್ಲಾ ಎಲ್ಲಾ ನಿವಾಸಗಳಲ್ಲಿ ನಿರಂತರವಾದ ಕಟ್ಟಳೆಯಾಗಿರುವದು.

Kannada Bible