Bible

Genesis 8 - WEB (Kannada)

1 God remembered Noah, all the animals, and all the cattle that were with him in the ark; and God made a wind to pass over the earth. The waters subsided.ಆಗ ದೇವರು ನೋಹನನ್ನೂ ಅವನ ಸಂಗಡ ನಾವೆಯಲ್ಲಿದ್ದ ಎಲ್ಲಾ ಜೀವರಾಶಿ ಗಳನ್ನೂ ಪಶುಗಳನ್ನೂ ಜ್ಞಾಪಕಮಾಡಿಕೊಂಡು ದೇವರು ಭೂಮಿಯ ಮೇಲೆ ಗಾಳಿ ಬೀಸುವಂತೆ ಮಾಡಲಾಗಿ ನೀರು ತಗ್ಗಿತು.

2 The deep's fountains and the sky's windows were also stopped, and the rain from the sky was restrained.ಅಗಾಧದ ಬುಗ್ಗೆಗಳೂ ಆಕಾಶದ ಕಿಟಕಿಗಳೂ ಮುಚ್ಚಲ್ಪಟ್ಟವು. ಇದಲ್ಲದೆ ಆಕಾಶದಿಂದ ಬೀಳುವ ಮಳೆಯೂ ನಿಂತಿತು.

3 The waters receded from off the earth continually. After the end of one hundred fifty days the waters decreased.ಹೀಗೆ ಭೂಮಿಯ ಮೇಲಿದ್ದ ಜಲವು ಕ್ರಮವಾಗಿ ತಗ್ಗಿಹೋಯಿತು. ನೂರೈವತ್ತು ದಿನಗಳಾದ ಮೇಲೆ ನೀರು ಕಡಿಮೆ ಯಾಯಿತು.

4 The ark rested in the seventh month, on the seventeenth day of the month, on Ararat's mountains.ಏಳನೆಯ ತಿಂಗಳಿನ ಹದಿನೇಳನೆಯ ದಿನದಲ್ಲಿ ನಾವೆಯು ಅರಾರಾಟ್‌ ಬೆಟ್ಟಗಳ ಮೇಲೆ ನೆಲೆಸಿತ್ತು.

5 The waters receded continually until the tenth month. In the tenth month, on the first day of the month, the tops of the mountains were seen.ಹತ್ತನೆಯ ತಿಂಗಳಿನ ವರೆಗೆ ನೀರು ಕ್ರಮವಾಗಿ ಕಡಿಮೆಯಾಗುತ್ತಾ ಬಂತು. ಹತ್ತನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಬೆಟ್ಟಗಳ ತುದಿಗಳು ಕಾಣ ಬಂದವು.

6 It happened at the end of forty days, that Noah opened the window of the ark which he had made,ನಾಲ್ವತ್ತು ದಿವಸಗಳಾದ ತರುವಾಯ ಆದದ್ದೇ ನಂದರೆ, ನೋಹನು ತಾನು ಮಾಡಿದ ನಾವೆಯ ಕಿಟಕಿಯನ್ನು ತೆರೆದು

7 and he sent forth a raven. It went back and forth, until the waters were dried up from off the earth.ಒಂದು ಕಾಗೆಯನ್ನು ಹೊರಗೆ ಬಿಟ್ಟನು; ಅದು ಹೊರಟು ಭೂಮಿಯ ಮೇಲಿದ್ದ ಜಲವು ಆರಿಹೋಗುವ ವರೆಗೆ ಹೋಗುತ್ತಾ ಬರುತ್ತಾ ಇತ್ತು.

8 He sent forth a dove from him, to see if the waters were abated from off the surface of the ground,ಭೂಮುಖದ ಮೇಲೆ ನೀರು ಕಡಿಮೆ ಆಯಿತೋ ಇಲ್ಲವೋ ಎಂದು ನೋಡುವಂತೆ ಒಂದು ಪಾರಿವಾಳವನ್ನು ಬಿಟ್ಟನು.

9 but the dove found no place to rest her foot, and she returned to him into the ark; for the waters were on the surface of the whole earth. He put forth his hand, and took her, and brought her to him into the ark.ಆದರೆ ನೀರು ಭೂಮುಖದಲ್ಲೆಲ್ಲಾ ಇದ್ದದ್ದರಿಂದ ಪಾರಿವಾಳದ ಅಂಗಾಲಿಗೆ ವಿಶ್ರಮಿಸುವದಕ್ಕೆ ಸ್ಥಳವು ಸಿಕ್ಕದೆ ಅದು ತಿರಿಗಿ ಅವನ ಬಳಿಗೆ ನಾವೆಗೆ ಬಂತು. ಅವನು ಕೈಚಾಚಿ ಅದನ್ನು ಹಿಡಿದು ನಾವೆಯೊಳಗೆ ಸೇರಿಸಿ ಕೊಂಡನು.

10 He stayed yet another seven days; and again he sent forth the dove out of the ark.ಅವನು ಇನ್ನು ಏಳು ದಿನಗಳಾದ ಮೇಲೆ ತಿರಿಗಿ ನಾವೆಯೊಳಗಿಂದ ಪಾರಿವಾಳವನ್ನು ಬಿಟ್ಟನು.

11 The dove came back to him at evening, and, behold, in her mouth was an olive leaf plucked off. So Noah knew that the waters were abated from off the earth.ಸಾಯಂಕಾಲದಲ್ಲಿ ಪಾರಿವಾಳವು ಅವನ ಬಳಿಗೆ ಬರಲಾಗಿ ಇಗೋ, ಕಿತ್ತಿದ್ದ ಹಿಪ್ಪೆ ಎಲೆಯು ಅದರ ಬಾಯಲ್ಲಿತ್ತು; ಆಗ ನೋಹನು ಭೂಮಿಯ ಮೇಲಿನಿಂದ ನೀರು ಕಡಿಮೆಯಾಯಿತೆಂದು ತಿಳು ಕೊಂಡನು.

12 He stayed yet another seven days, and sent forth the dove; and she didn't return to him any more.ಇನ್ನೂ ಏಳು ದಿನಗಳು ತಡೆದು ಪಾರಿವಾಳವನ್ನು ಬಿಟ್ಟಾಗ ಅದು ತಿರಿಗಿ ಅವನ ಬಳಿಗೆ ಬರಲೇ ಇಲ್ಲ.

13 It happened in the six hundred first year, in the first month, the first day of the month, the waters were dried up from off the earth. Noah removed the covering of the ark, and looked. He saw that the surface of the ground was dried.ಆರುನೂರ ಒಂದನೆಯ ವರುಷದ ಮೊದಲನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಆದದ್ದೇನಂದರೆ, ನೀರು ಭೂಮಿಯ ಮೇಲಿನಿಂದ ಒಣಗಿಹೋಗಿತ್ತು. ನೋಹನು ನಾವೆಯ ಮುಚ್ಚಳವನ್ನು ತೆಗೆದು ನೋಡಲಾಗಿ, ಇಗೋ, ಭೂಮಿಯು ಒಣಗಿಹೋಗಿತ್ತು.

14 In the second month, on the twenty-seventh day of the month, the earth was dry.ಎರಡನೆಯ ತಿಂಗಳಿನ ಇಪ್ಪತ್ತೇಳನೆಯ ದಿನದಲ್ಲಿ ಭೂಮಿಯು ಒಣಗಿತ್ತು.

15 God spoke to Noah, saying,ಆಗ ದೇವರು ನೋಹನೊಂದಿಗೆ ಮಾತನಾಡಿ ಹೇಳಿದ್ದೇನಂದರೆ--

16 "Go forth from the ark, you, and your wife, and your sons, and your sons' wives with you.ನೀನೂ ನಿನ್ನ ಸಂಗಡ ನಿನ್ನ ಹೆಂಡತಿಯೂ ನಿನ್ನ ಕುಮಾರರೂ ಅವರ ಹೆಂಡತಿ ಯರೂ ನಾವೆಯೊಳಗಿಂದ ಹೊರಗೆ ಹೋಗಿರಿ.

17 Bring forth with you every living thing that is with you of all flesh, including birds, cattle, and every creeping thing that creeps on the earth; that they may breed abundantly in the earth, and be fruitful, and multiply on the earth."ನಿನ್ನ ಸಂಗಡ ಇರುವ ಎಲ್ಲಾ ಶರೀರದ ಪಕ್ಷಿಗಳೂ ಮೃಗಗಳೂ ಭೂಮಿಯ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಗಳೂ ಎಲ್ಲಾ ಜೀವಜಂತುಗಳೂ ಭೂಮಿಯ ಮೇಲೆ ಅಭಿವೃದ್ಧಿಯಾಗಿ ಭೂಮಿಯಲ್ಲಿ ಹೆಚ್ಚುವ ಹಾಗೆ ಅವು ನಿನ್ನ ಸಂಗಡ ಹೊರಗೆ ಬರಮಾಡು ಅಂದನು.

18 Noah went forth, with his sons, his wife, and his sons' wives with him.ಆಗ ನೋಹನ ಸಂಗಡ ಅವನ ಹೆಂಡತಿ ಕುಮಾರರು ಸೊಸೆಯರು ಹೊರಗೆ ಬಂದರು.

19 Every animal, every creeping thing, and every bird, whatever moves on the earth, after their families, went forth out of the ark.ಎಲ್ಲಾ ಮೃಗಗಳೂ ಕ್ರಿಮಿಗಳೂ ಪಕ್ಷಿಗಳೂ ಭೂಮಿ ಯಲ್ಲಿ ಹರಿದಾಡುವ ಎಲ್ಲವುಗಳು ತಮ್ಮತಮ್ಮ ಜಾತ್ಯಾ ನುಸಾರವಾಗಿ ನಾವೆಯೊಳಗಿಂದ ಹೊರಬಂದವು.

20 Noah built an altar to Yahweh, and took of every clean animal, and of every clean bird, and offered burnt offerings on the altar.ನೋಹನು ಕರ್ತನಿಗೆ ಬಲಿಪೀಠವನ್ನು ಕಟ್ಟಿ ಶುದ್ಧವಾದ ಎಲ್ಲಾ ಪಶು ಪಕ್ಷಿಗಳಿಂದಲೂ (ಕೆಲವನ್ನು) ತೆಗೆದು ಬಲಿಪೀಠದ ಮೇಲೆ ದಹನಬಲಿಗಳನ್ನು ಅರ್ಪಿಸಿದನು.

21 Yahweh smelled the sweet savor. Yahweh said in his heart, "I will not again curse the ground any more for man's sake, because the imagination of man's heart is evil from his youth; neither will I ever again strike everything living, as I have done.ಆಗ ಕರ್ತನಿಗೆ ಅದರ ಸುವಾಸನೆಯು ಗಮಗಮಿಸಲು ತನ್ನ ಹೃದಯದಲ್ಲಿ--ಇನ್ನು ಮೇಲೆ ನಾನು ಮನುಷ್ಯನಿಗೋಸ್ಕರ ಭೂಮಿಯನ್ನು ಶಪಿಸುವ ದಿಲ್ಲ; ಯಾಕಂದರೆ ಮನುಷ್ಯನ ಹೃದಯದ ಕಲ್ಪನೆಯು ಅವನ ಚಿಕ್ಕತನದಿಂದಲೇ ಕೆಟ್ಟದ್ದು. ನಾನು ಈಗ ಮಾಡಿದ ಪ್ರಕಾರ ಇನ್ನು ಮೇಲೆ ಜೀವಿಗಳನ್ನೆಲ್ಲಾ ಸಂಹರಿಸುವದಿಲ್ಲ.

22 While the earth remains, seed time and harvest, and cold and heat, and summer and winter, and day and night shall not cease."ಭೂಮಿಯು ಇರುವ ವರೆಗೆ ಬಿತ್ತುವ ಕಾಲವೂ ಕೊಯ್ಯುವ ಕಾಲವೂ ತಂಪೂ ಶೆಕೆಯೂ ಬೇಸಿಗೆಯೂ ಚಳಿಗಾಲವೂ ಹಗಲೂ ರಾತ್ರಿಯೂ ನಿಂತು ಹೋಗವು ಎಂದು ಅಂದು ಕೊಂಡನು.

Kannada Bible