Bible

Romans 6 - YLT (Kannada)

1 What, then, shall we say? shall we continue in the sin that the grace may abound?ಹಾಗಾದರೆ ಏನು ಹೇಳೋಣ? ಕೃಪೆಯು ಹೆಚ್ಚಲಿ ಎಂದು ನಾವು ಪಾಪದಲ್ಲಿ ಇನ್ನೂ ಇರಬೇಕೋ?

2 let it not be! we who died to the sin -- how shall we still live in it?ಹಾಗೆ ಎಂದಿಗೂ ಅಲ್ಲ; ಪಾಪದ ಪಾಲಿಗೆ ಸತ್ತವರಾದ ನಾವು ಇನ್ನೂ ಅದರಲ್ಲಿ ಬದುಕು ವದು ಹೇಗೆ?

3 are ye ignorant that we, as many as were baptized to Christ Jesus, to his death were baptized?ಯೇಸು ಕ್ರಿಸ್ತನಲ್ಲಿ ಸೇರುವದಕ್ಕೆ ಬಾಪ್ತಿಸ್ಮ ಮಾಡಿಸಿಕೊಂಡವರಾದ ನಾವೆಲ್ಲರು ಆತನ ಮರಣದಲ್ಲಿ ಸೇರುವದಕ್ಕೆ ಬಾಪ್ತಿಸ್ಮ ಮಾಡಿಸಿಕೊಂಡೆವೆಂದು ನಿಮಗೆ ತಿಳಿಯದೋ?

4 we were buried together, then, with him through the baptism to the death, that even as Christ was raised up out of the dead through the glory of the Father, so also we in newness of life might walk.ಹೀಗಿರಲಾಗಿ ನಾವು ಬಾಪ್ತಿಸ್ಮ ಮಾಡಿಸಿ ಕೊಂಡಾಗ ಆತನ ಮರಣದಲ್ಲಿ ಪಾಲುಗಾರರಾಗು ವದಕ್ಕೆ ಆತನೊಂದಿಗೆ ಹೂಣಲ್ಪಟ್ಟೆವು; ಕ್ರಿಸ್ತನು ತಂದೆಯ ಮಹಿಮೆಯಿಂದ ಹೇಗೆ ಸತ್ತವರೊಳಗಿಂದ ಎಬ್ಬಿಸಲ್ಪಟ್ಟನೋ ಹಾಗೆಯೇ ನಾವು ಕೂಡ ಜೀವ ದಿಂದೆದ್ದು ನೂತನ ಜೀವದಲ್ಲಿ ನಡೆದುಕೊಳ್ಳಬೇಕು.

5 For, if we have become planted together to the likeness of his death, `so' also we shall be of the rising again;ಹೇಗಂದರೆ ಆತನ ಮರಣದ ಹೋಲಿಕೆಯಲ್ಲಿ ನಾವು ಒಟ್ಟಾಗಿ ನೆಲೆಸಿದ್ದರೆ ಆತನ ಪುನರುತ್ಥಾನದ ಹೋಲಿಕೆ ಯಲ್ಲಿಯೂ ಇರುವೆವು.

6 this knowing, that our old man was crucified with `him', that the body of the sin may be made useless, for our no longer serving the sin;ಪಾಪದ ಶರೀರವು ನಾಶ ವಾಗಿ ನಾವು ಇನ್ನೂ ಪಾಪಕ್ಕೆ ದಾಸರಾಗಿರದಂತೆ ನಮ್ಮ ಹಳೇ ಮನುಷ್ಯನು ಕ್ರಿಸ್ತನ ಕೂಡ ಶಿಲುಬೆಗೆ ಹಾಕಲ್ಪಟ್ಟ ನೆಂದು ತಿಳಿದಿದ್ದೇವೆ.

7 for he who hath died hath been set free from the sin.ಯಾಕಂದರೆ ಸತ್ತವನು ಪಾಪ ದಿಂದ ಬಿಡುಗಡೆ ಹೊಂದಿದ್ದಾನೆ.

8 And if we died with Christ, we believe that we also shall live with him,ಇದಲ್ಲದೆ ನಾವು ಕ್ರಿಸ್ತನೊಡನೆ ಸತ್ತ ಪಕ್ಷದಲ್ಲಿ ಆತನೊಡನೆ ನಾವು ಸಹ ಜೀವಿಸುವೆವೆಂದು ನಂಬು ತ್ತೇವೆ.

9 knowing that Christ, having been raised up out of the dead, doth no more die, death over him hath no more lordship;ಯಾಕಂದರೆ ಕ್ರಿಸ್ತನು ಸತ್ತಮೇಲೆ ಜೀವಿತ ನಾಗಿ ಎದ್ದು ಬಂದದ್ದರಿಂದ ಆತನು ಇನ್ನು ಮುಂದೆ ಸಾಯತಕ್ಕವನಲ್ಲ; ಮರಣವು ಇನ್ನು ಮುಂದೆ ಆತ ನನ್ನು ಆಳುವದಿಲ್ಲವೆಂದು ನಮಗೆ ತಿಳಿದದೆ.

10 for in that he died, to the sin he died once, and in that he liveth, he liveth to God;ಆತನು ಸತ್ತಿದ್ದರಲ್ಲಿ ಪಾಪಕ್ಕಾಗಿ ಒಂದೇ ಸಾರಿ ಸತ್ತನು. ಆದರೆ ಆತನು ಜೀವಿಸುವದರಲ್ಲಿ ದೇವರಿಗಾಗಿ ಜೀವಿಸುತ್ತಾನೆ.

11 so also ye, reckon yourselves to be dead indeed to the sin, and living to God in Jesus Christ our Lord.ಅದೇ ಪ್ರಕಾರ ನೀವು ಸಹ ಪಾಪದ ಪಾಲಿಗೆ ನಿಜವಾಗಿ ಸತ್ತವರೂ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರಿಗಾಗಿ ಜಿವಿಸುವವರೂ ಎಂದು ಎಣಿಸಿಕೊಳ್ಳಿರಿ.

12 Let not then the sin reign in your mortal body, to obey it in its desires;ಹೀಗಿರುವದರಿಂದ ಸಾಯತಕ್ಕ ನಿಮ್ಮ ದೇಹದ ಮೇಲೆ ಪಾಪವನ್ನು ಆಳಗೊಡಿಸಿ ನೀವು ಅದರ ದುರಾಶೆಗಳಿಗೆ ಒಳಪಡಬೇಡಿರಿ;

13 neither present ye your members instruments of unrighteousness to the sin, but present yourselves to God as living out of the dead, and your members instruments of righteousness to God;ಇಲ್ಲವೆ ನೀವು ನಿಮ್ಮ ಅಂಗಗಳನ್ನು ಪಾಪಕ್ಕೆ ಒಳಪಡಿಸುವವರಾಗಿದ್ದು ಅನೀತಿಯನ್ನು ನಡಿಸುವ ಸಾಧನಗಳಾಗಮಾಡಬೇಡಿರಿ; ಆದರೆ ಸತ್ತವರೊಳಗಿಂದ ಜೀವಿಸುವವರೋ ಎಂಬಂತೆ ನೀತಿಕಾರ್ಯಗಳನ್ನು ನಡಿಸುವ ಸಾಧನಗಳನ್ನಾಗಿ ನಿಮ್ಮ ಅಂಗಗಳನ್ನು ದೇವರಿಗೆ ಒಳಪಡಿಸಿರಿ.

14 for sin over you shall not have lordship, for ye are not under law, but under grace.ಯಾಕಂದರೆ ಪಾಪವು ನಿಮ್ಮ ಮೇಲೆ ಪ್ರಭುತ್ವ ನಡಿಸಬಾರದು; ಕಾರಣವೇನಂದರೆ ನೀವು ನ್ಯಾಯಪ್ರಮಾಣಾಧೀನ ರಲ್ಲ, ಕೃಪೆಗೆ ಅಧೀನರಾಗಿದ್ದೀರಿ.

15 What then? shall we sin because we are not under law but under grace? let it not be!ಹಾಗಾದರೇನು? ನಾವು ನ್ಯಾಯಪ್ರಮಾಣಾ ಧೀನರಲ್ಲ, ಕೃಪೆಗೆ ಅಧೀನರಾಗಿದ್ದೇವೆಂದು ಪಾಪವನ್ನು ಮಾಡಬಹುದೋ? ಹಾಗೆ ಎಂದಿಗೂ ಅಲ್ಲ.

16 have ye not known that to whom ye present yourselves servants for obedience, servants ye are to him to whom ye obey, whether of sin to death, or of obedience to righteousness?ನೀವು ಯಾರಿಗೆ ದಾಸರಂತೆ ವಿಧೇಯರಾಗುತ್ತೇವೆಂದು ನಿಮ್ಮನ್ನು ಒಪ್ಪಿಸಿಕೊಡುತ್ತಿರೋ ಅವರಿಗೆ ದಾಸರಾಗಿಯೇ ವಿಧೇ ಯರಾಗಿರುವಿರೆಂಬದು ನಿಮಗೆ ಗೊತ್ತಿಲ್ಲವೋ? ಪಾಪಕ್ಕೆ ದಾಸರಾದರೆ ಮರಣವೇ; ಇಲ್ಲವೆ ವಿಧೇಯತ್ವಕ್ಕೆ ದಾಸ ರಾದರೆ ನೀತಿಯೇ.

17 and thanks to God, that ye were servants of the sin, and -- were obedient from the heart to the form of teaching to which ye were delivered up;ಆದರೆ ನೀವು ಪಾಪಕ್ಕೆ ದಾಸ ರಾಗಿದ್ದರೂ ನಿಮಗೆ ಒಪ್ಪಿಸಲ್ಪಟ್ಟ ಬೋಧನೆಗೆ ನೀವು ಹೃದಯಪೂರ್ವಕವಾಗಿ ಅಧೀನರಾದದರಿಂದ ದೇವ ರಿಗೆ ಸ್ತೋತ್ರವಾಗಲಿ.

18 and having been freed from the sin, ye became servants to the righteousness.ಹೀಗೆ ನೀವು ಪಾಪದಿಂದ ಬಿಡುಗಡೆಯನ್ನು ಹೊಂದಿ ನೀತಿಗೆ ದಾಸರಾದಿರಿ.

19 In the manner of men I speak, because of the weakness of your flesh, for even as ye did present your members servants to the uncleanness and to the lawlessness -- to the lawlessness, so now present your members servants to the righteousness -- to sanctification,ನಿಮ್ಮ ಶರೀರದ ಬಲಹೀನತೆಯ ದೆಸೆಯಿಂದ ಮನುಷ್ಯ ರೀತಿಯಾಗಿ ನಾನು ಮಾತನಾಡುತ್ತೇನೆ. ಅಶುದ್ಧತ್ವಕ್ಕೆ ದಾಸರನ್ನಾಗಿ ನಿಮ್ಮ ಅಂಗಗಳನ್ನು ದುಷ್ಟತ್ವ ದಿಂದ ದುಷ್ಟತ್ವಕ್ಕೆ ಒಳಪಡಿಸಿದಂತೆಯೇ ಈಗ ಪರಿಶುದ್ಧತೆ ಗಾಗಿ ನಿಮ್ಮ ಅಂಗಗಳನ್ನು ನೀತಿಗೆ ದಾಸರನ್ನಾಗಿ ಒಳಪಡಿಸಿರಿ.

20 for when ye were servants of the sin, ye were free from the righteousness,ನೀವು ಪಾಪಕ್ಕೆ ದಾಸರಾಗಿದ್ದಾಗ ನೀತಿಯ ಹಂಗಿನವರಾಗಿರಲಿಲ್ಲ.

21 what fruit, therefore, were ye having then, in the things of which ye are now ashamed? for the end of those `is' death.ನೀವು ಆಗ ಮಾಡಿ ದವುಗಳಿಂದ ನಿಮಗುಂಟಾದ ಫಲವೇನು? ಈಗ ಅವುಗಳ ವಿಷಯದಲ್ಲಿ ನಿಮಗೆ ನಾಚಿಕೆಯುಂಟಷ್ಟೆ; ಅವುಗಳ ಅಂತ್ಯವು ಮರಣವೇ.

22 And now, having been freed from the sin, and having become servants to God, ye have your fruit -- to sanctification, and the end life age-during;ಈಗಲಾದರೋ ನೀವು ಪಾಪದಿಂದ ಬಿಡುಗಡೆಯನ್ನು ಹೊಂದಿ ದೇವರಿಗೆ ದಾಸರಾದದರಿಂದ ಪರಿಶುದ್ಧತೆಯೇ ನಿಮಗೆ ಫಲ; ಅದರ ಅಂತ್ಯವು ನಿತ್ಯಜೀವವೇ.

23 for the wages of the sin `is' death, and the gift of God `is' life age-during in Christ Jesus our Lord.ಯಾಕಂದರೆ ಪಾಪದ ಸಂಬಳ ಮರಣ. ಆದರೆ ದೇವರ ದಾನವು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮುಖಾಂತರ ನಿತ್ಯಜೀವವು.

Kannada Bible