Romans 6 - BBE (Kannada)
1 What may we say, then? are we to go on in sin so that there may be more grace?ಹಾಗಾದರೆ ಏನು ಹೇಳೋಣ? ಕೃಪೆಯು ಹೆಚ್ಚಲಿ ಎಂದು ನಾವು ಪಾಪದಲ್ಲಿ ಇನ್ನೂ ಇರಬೇಕೋ?
2 In no way. How may we, who are dead to sin, be living in it any longer?ಹಾಗೆ ಎಂದಿಗೂ ಅಲ್ಲ; ಪಾಪದ ಪಾಲಿಗೆ ಸತ್ತವರಾದ ನಾವು ಇನ್ನೂ ಅದರಲ್ಲಿ ಬದುಕು ವದು ಹೇಗೆ?
3 Or are you without the knowledge that all we who had baptism into Christ Jesus, had baptism into his death?ಯೇಸು ಕ್ರಿಸ್ತನಲ್ಲಿ ಸೇರುವದಕ್ಕೆ ಬಾಪ್ತಿಸ್ಮ ಮಾಡಿಸಿಕೊಂಡವರಾದ ನಾವೆಲ್ಲರು ಆತನ ಮರಣದಲ್ಲಿ ಸೇರುವದಕ್ಕೆ ಬಾಪ್ತಿಸ್ಮ ಮಾಡಿಸಿಕೊಂಡೆವೆಂದು ನಿಮಗೆ ತಿಳಿಯದೋ?
4 We have been placed with him among the dead through baptism into death: so that as Christ came again from the dead by the glory of the Father, we, in the same way, might be living in new life.ಹೀಗಿರಲಾಗಿ ನಾವು ಬಾಪ್ತಿಸ್ಮ ಮಾಡಿಸಿ ಕೊಂಡಾಗ ಆತನ ಮರಣದಲ್ಲಿ ಪಾಲುಗಾರರಾಗು ವದಕ್ಕೆ ಆತನೊಂದಿಗೆ ಹೂಣಲ್ಪಟ್ಟೆವು; ಕ್ರಿಸ್ತನು ತಂದೆಯ ಮಹಿಮೆಯಿಂದ ಹೇಗೆ ಸತ್ತವರೊಳಗಿಂದ ಎಬ್ಬಿಸಲ್ಪಟ್ಟನೋ ಹಾಗೆಯೇ ನಾವು ಕೂಡ ಜೀವ ದಿಂದೆದ್ದು ನೂತನ ಜೀವದಲ್ಲಿ ನಡೆದುಕೊಳ್ಳಬೇಕು.
5 For, if we have been made like him in his death, we will, in the same way, be like him in his coming to life again;ಹೇಗಂದರೆ ಆತನ ಮರಣದ ಹೋಲಿಕೆಯಲ್ಲಿ ನಾವು ಒಟ್ಟಾಗಿ ನೆಲೆಸಿದ್ದರೆ ಆತನ ಪುನರುತ್ಥಾನದ ಹೋಲಿಕೆ ಯಲ್ಲಿಯೂ ಇರುವೆವು.
6 Being conscious that our old man was put to death on the cross with him, so that the body of sin might be put away, and we might no longer be servants to sin.ಪಾಪದ ಶರೀರವು ನಾಶ ವಾಗಿ ನಾವು ಇನ್ನೂ ಪಾಪಕ್ಕೆ ದಾಸರಾಗಿರದಂತೆ ನಮ್ಮ ಹಳೇ ಮನುಷ್ಯನು ಕ್ರಿಸ್ತನ ಕೂಡ ಶಿಲುಬೆಗೆ ಹಾಕಲ್ಪಟ್ಟ ನೆಂದು ತಿಳಿದಿದ್ದೇವೆ.
7 Because he who is dead is free from sin.ಯಾಕಂದರೆ ಸತ್ತವನು ಪಾಪ ದಿಂದ ಬಿಡುಗಡೆ ಹೊಂದಿದ್ದಾನೆ.
8 But if we are dead with Christ, we have faith that we will be living with him;ಇದಲ್ಲದೆ ನಾವು ಕ್ರಿಸ್ತನೊಡನೆ ಸತ್ತ ಪಕ್ಷದಲ್ಲಿ ಆತನೊಡನೆ ನಾವು ಸಹ ಜೀವಿಸುವೆವೆಂದು ನಂಬು ತ್ತೇವೆ.
9 Having knowledge that because Christ has come back from the dead, he will never again go down to the dead; death has no more power over him.ಯಾಕಂದರೆ ಕ್ರಿಸ್ತನು ಸತ್ತಮೇಲೆ ಜೀವಿತ ನಾಗಿ ಎದ್ದು ಬಂದದ್ದರಿಂದ ಆತನು ಇನ್ನು ಮುಂದೆ ಸಾಯತಕ್ಕವನಲ್ಲ; ಮರಣವು ಇನ್ನು ಮುಂದೆ ಆತ ನನ್ನು ಆಳುವದಿಲ್ಲವೆಂದು ನಮಗೆ ತಿಳಿದದೆ.
10 For his death was a death to sin, but his life now is a life which he is living to God.ಆತನು ಸತ್ತಿದ್ದರಲ್ಲಿ ಪಾಪಕ್ಕಾಗಿ ಒಂದೇ ಸಾರಿ ಸತ್ತನು. ಆದರೆ ಆತನು ಜೀವಿಸುವದರಲ್ಲಿ ದೇವರಿಗಾಗಿ ಜೀವಿಸುತ್ತಾನೆ.
11 Even so see yourselves as dead to sin, but living to God in Christ Jesus.ಅದೇ ಪ್ರಕಾರ ನೀವು ಸಹ ಪಾಪದ ಪಾಲಿಗೆ ನಿಜವಾಗಿ ಸತ್ತವರೂ ನಮ್ಮ ಕರ್ತನಾದ ಯೇಸು ಕ್ರಿಸ್ತನ ಮೂಲಕ ದೇವರಿಗಾಗಿ ಜಿವಿಸುವವರೂ ಎಂದು ಎಣಿಸಿಕೊಳ್ಳಿರಿ.
12 For this cause do not let sin be ruling in your body which is under the power of death, so that you give way to its desires;ಹೀಗಿರುವದರಿಂದ ಸಾಯತಕ್ಕ ನಿಮ್ಮ ದೇಹದ ಮೇಲೆ ಪಾಪವನ್ನು ಆಳಗೊಡಿಸಿ ನೀವು ಅದರ ದುರಾಶೆಗಳಿಗೆ ಒಳಪಡಬೇಡಿರಿ;
13 And do not give your bodies to sin as the instruments of wrongdoing, but give yourselves to God, as those who are living from the dead, and your bodies as instruments of righteousness to God.ಇಲ್ಲವೆ ನೀವು ನಿಮ್ಮ ಅಂಗಗಳನ್ನು ಪಾಪಕ್ಕೆ ಒಳಪಡಿಸುವವರಾಗಿದ್ದು ಅನೀತಿಯನ್ನು ನಡಿಸುವ ಸಾಧನಗಳಾಗಮಾಡಬೇಡಿರಿ; ಆದರೆ ಸತ್ತವರೊಳಗಿಂದ ಜೀವಿಸುವವರೋ ಎಂಬಂತೆ ನೀತಿಕಾರ್ಯಗಳನ್ನು ನಡಿಸುವ ಸಾಧನಗಳನ್ನಾಗಿ ನಿಮ್ಮ ಅಂಗಗಳನ್ನು ದೇವರಿಗೆ ಒಳಪಡಿಸಿರಿ.
14 For sin may not have rule over you: because you are not under law, but under grace.ಯಾಕಂದರೆ ಪಾಪವು ನಿಮ್ಮ ಮೇಲೆ ಪ್ರಭುತ್ವ ನಡಿಸಬಾರದು; ಕಾರಣವೇನಂದರೆ ನೀವು ನ್ಯಾಯಪ್ರಮಾಣಾಧೀನ ರಲ್ಲ, ಕೃಪೆಗೆ ಅಧೀನರಾಗಿದ್ದೀರಿ.
15 What then? are we to go on in sin because we are not under law but under grace? Let it not be so.ಹಾಗಾದರೇನು? ನಾವು ನ್ಯಾಯಪ್ರಮಾಣಾ ಧೀನರಲ್ಲ, ಕೃಪೆಗೆ ಅಧೀನರಾಗಿದ್ದೇವೆಂದು ಪಾಪವನ್ನು ಮಾಡಬಹುದೋ? ಹಾಗೆ ಎಂದಿಗೂ ಅಲ್ಲ.
16 Are you not conscious that you are the servants of him to whom you give yourselves to do his desire? if to sin, the end being death, or if to do the desire of God, the end being righteousness.ನೀವು ಯಾರಿಗೆ ದಾಸರಂತೆ ವಿಧೇಯರಾಗುತ್ತೇವೆಂದು ನಿಮ್ಮನ್ನು ಒಪ್ಪಿಸಿಕೊಡುತ್ತಿರೋ ಅವರಿಗೆ ದಾಸರಾಗಿಯೇ ವಿಧೇ ಯರಾಗಿರುವಿರೆಂಬದು ನಿಮಗೆ ಗೊತ್ತಿಲ್ಲವೋ? ಪಾಪಕ್ಕೆ ದಾಸರಾದರೆ ಮರಣವೇ; ಇಲ್ಲವೆ ವಿಧೇಯತ್ವಕ್ಕೆ ದಾಸ ರಾದರೆ ನೀತಿಯೇ.
17 But praise be to God that though you were the servants of sin, you have now given yourselves freely to that form of teaching under which you were placed;ಆದರೆ ನೀವು ಪಾಪಕ್ಕೆ ದಾಸ ರಾಗಿದ್ದರೂ ನಿಮಗೆ ಒಪ್ಪಿಸಲ್ಪಟ್ಟ ಬೋಧನೆಗೆ ನೀವು ಹೃದಯಪೂರ್ವಕವಾಗಿ ಅಧೀನರಾದದರಿಂದ ದೇವ ರಿಗೆ ಸ್ತೋತ್ರವಾಗಲಿ.
18 And being made free from sin you have been made the servants of righteousness.ಹೀಗೆ ನೀವು ಪಾಪದಿಂದ ಬಿಡುಗಡೆಯನ್ನು ಹೊಂದಿ ನೀತಿಗೆ ದಾಸರಾದಿರಿ.
19 I am using words in the way of men, because your flesh is feeble: as you gave your bodies as servants to what is unclean, and to evil to do evil, so now give them as servants to righteousness to do what is holy.ನಿಮ್ಮ ಶರೀರದ ಬಲಹೀನತೆಯ ದೆಸೆಯಿಂದ ಮನುಷ್ಯ ರೀತಿಯಾಗಿ ನಾನು ಮಾತನಾಡುತ್ತೇನೆ. ಅಶುದ್ಧತ್ವಕ್ಕೆ ದಾಸರನ್ನಾಗಿ ನಿಮ್ಮ ಅಂಗಗಳನ್ನು ದುಷ್ಟತ್ವ ದಿಂದ ದುಷ್ಟತ್ವಕ್ಕೆ ಒಳಪಡಿಸಿದಂತೆಯೇ ಈಗ ಪರಿಶುದ್ಧತೆ ಗಾಗಿ ನಿಮ್ಮ ಅಂಗಗಳನ್ನು ನೀತಿಗೆ ದಾಸರನ್ನಾಗಿ ಒಳಪಡಿಸಿರಿ.
20 When you were servants of sin you were free from righteousness.ನೀವು ಪಾಪಕ್ಕೆ ದಾಸರಾಗಿದ್ದಾಗ ನೀತಿಯ ಹಂಗಿನವರಾಗಿರಲಿಲ್ಲ.
21 What fruit had you at that time in the things which are now a shame to you? for the end of such things is death.ನೀವು ಆಗ ಮಾಡಿ ದವುಗಳಿಂದ ನಿಮಗುಂಟಾದ ಫಲವೇನು? ಈಗ ಅವುಗಳ ವಿಷಯದಲ್ಲಿ ನಿಮಗೆ ನಾಚಿಕೆಯುಂಟಷ್ಟೆ; ಅವುಗಳ ಅಂತ್ಯವು ಮರಣವೇ.
22 But now, being free from sin, and having been made servants to God, you have your fruit in that which is holy, and the end is eternal life.ಈಗಲಾದರೋ ನೀವು ಪಾಪದಿಂದ ಬಿಡುಗಡೆಯನ್ನು ಹೊಂದಿ ದೇವರಿಗೆ ದಾಸರಾದದರಿಂದ ಪರಿಶುದ್ಧತೆಯೇ ನಿಮಗೆ ಫಲ; ಅದರ ಅಂತ್ಯವು ನಿತ್ಯಜೀವವೇ.
23 For the reward of sin is death; but what God freely gives is eternal life in Jesus Christ our Lord.ಯಾಕಂದರೆ ಪಾಪದ ಸಂಬಳ ಮರಣ. ಆದರೆ ದೇವರ ದಾನವು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮುಖಾಂತರ ನಿತ್ಯಜೀವವು.
Kannada Bible