Bible

Romans 10 - ASV (Kannada)

1 Brethren, my heart's desire and my supplication to God is for them, that they may be saved.ಸಹೊದರರೇ, ಇಸ್ರಾಯೇಲ್ಯರು ರಕ್ಷಣೆ ಹೊಂದಬೇಕೆಂಬದೇ ನನ್ನ ಮನೋಭಿ ಲಾಷೆಯೂ ದೇವರಿಗೆ ನಾನು ಮಾಡುವ ಪ್ರಾರ್ಥನೆ ಯೂ ಆಗಿದೆ;

2 For I bear them witness that they have a zeal for God, but not according to knowledge.ದೇವರಲ್ಲಿ ಆಸಕ್ತರಾಗಿದ್ದಾರೆಂದು ನಾನು ಅವರ ವಿಷಯದಲ್ಲಿ ಸಾಕ್ಷಿಕೊಡುತ್ತೇನೆ; ಆದರೂ ಅವರ ಆಸಕ್ತಿಯು ಜ್ಞಾನಾನುಸಾರವಾದದ್ದಲ್ಲ.

3 For being ignorant of God's righteousness, and seeking to establish their own, they did not subject themselves to the righteousness of God.ಅವರು ದೇವ ರಿಂದ ದೊರಕುವ ನೀತಿಯನ್ನರಿಯದೆ ಸ್ವನೀತಿಯನ್ನೇ ಸ್ಥಾಪಿಸಬೇಕೆಂದು ಪ್ರಯತ್ನಿಸುತ್ತಾ ಇದ್ದದರಿಂದ ದೇವರ ನೀತಿಗೆ ಅಧೀನರಾಗಲಿಲ್ಲ.

4 For Christ is the end of the law unto righteousness to every one that believeth.ನಂಬುವ ಪ್ರತಿಯೊಬ್ಬನು ನೀತಿವಂತನಾಗುವಂತೆ ಕ್ರಿಸ್ತನು ನ್ಯಾಯಪ್ರಮಾಣದ ಅಂತ್ಯವಾಗಿದ್ದಾನೆ.

5 For Moses writeth that the man that doeth the righteousness which is of the law shall live thereby.ಇದಲ್ಲದೆ-- ನ್ಯಾಯಪ್ರಮಾಣವು ಹೇಳುವವುಗಳನ್ನು ಮಾಡುವವನು ಅವುಗಳಿಂದಲೇ ಜೀವಿಸುವನು ಎಂದು ಮೋಶೆಯು ಅದರ ನೀತಿಯ ವಿಷಯವಾಗಿ ವಿವರಿಸುತ್ತಾನೆ.

6 But the righteousness which is of faith saith thus, Say not in thy heart, Who shall ascend into heaven? (that is, to bring Christ down:)ಆದರೆ ನಂಬಿಕೆ ಯಿಂದುಂಟಾಗುವ ನೀತಿಯು ಹೇಳುವದೇನಂದರೆ, (ಮೇಲಿನಿಂದ ಕ್ರಿಸ್ತನನ್ನು ತರುವಂತೆ) ಪರಲೋಕಕ್ಕೆ ಏರಿ ಹೋಗುವವನು ಯಾರು?

7 or, Who shall descend into the abyss? (That is, to bring Christ up from the dead.)ಇಲ್ಲವೆ (ಸತ್ತವರೊ ಳಗಿಂದ ಕ್ರಿಸ್ತನನ್ನು ಮೇಲಕ್ಕೆ ತರುವದಕ್ಕಾಗಿ) ಅಗಾಧಕ್ಕೆ ಇಳಿದು ಹೋಗುವವನು ಯಾರು ಎಂದು ನಿನ್ನ ಹೃದಯ ದಲ್ಲಿ ಅಂದುಕೊಳ್ಳಬೇಡ.

8 But what saith it? The word is nigh thee, in thy mouth, and in thy heart: that is, the word of faith, which we preach:ಆದರೆ ಅದು ಏನು ಹೇಳುತ್ತದೆ? ವಾಕ್ಯವು ನಿನ್ನ ಸವಿಾಪದಲ್ಲಿಯೂ ನಿನ್ನ ಬಾಯಲ್ಲಿಯೂ ನಿನ್ನ ಹೃದಯದಲ್ಲಿಯೂ ಇದೆ ಎಂದು ಅನ್ನುತ್ತದೆ; ಅದೇನಂದರೆ--ನಾವು ಸಾರುವ ನಂಬಿಕೆಯ ವಿಷಯವಾದ ವಾಕ್ಯವೇ.

9 because if thou shalt confess with thy mouth Jesus `as' Lord, and shalt believe in thy heart that God raised him from the dead, thou shalt be saved:ನೀನು ಕರ್ತನಾದ ಯೇಸು ವನ್ನು ಬಾಯಿಂದ ಅರಿಕೆಮಾಡಿ ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದ್ದಾನೆಂದು ನಿನ್ನ ಹೃದಯದಲ್ಲಿ ನಂಬಿದರೆ ನಿನಗೆ ರಕ್ಷಣೆಯಾಗುವದು ಎಂಬದೇ.

10 for with the heart man believeth unto righteousness; and with the mouth confession is made unto salvation.ಹೃದಯದಿಂದ ನಂಬುವದರ ಮೂಲಕ ನೀತಿಯು ದೊರೆಯುತ್ತದೆ. ಬಾಯಿಂದ ಅರಿಕೆಮಾಡುವದರ ಮೂಲಕ ರಕ್ಷಣೆಯಾಗುತ್ತದೆ.

11 For the scripture saith, Whosoever believeth on him shall not be put to shame.ಆತನ ಮೇಲೆ ನಂಬಿಕೆ ಇಡುವ ಯಾವನಾದರೂ ನಾಚಿಕೆಪಡುವದಿಲ್ಲ ಎಂದು ಬರಹವು ಹೇಳುತ್ತದೆ.

12 For there is no distinction between Jew and Greek: for the same `Lord' is Lord of all, and is rich unto all that call upon him:ಇದರಲ್ಲಿ ಯೆಹೂದ್ಯರಿಗೂ ಗ್ರೀಕರಿಗೂ ಹೆಚ್ಚು ಕಡಿಮೆ ಏನೂ ಇಲ್ಲ; ಎಲ್ಲರ ಮೇಲೆ ಕರ್ತನಾಗಿರುವ ಆತನೇ ತನ್ನನ್ನು ಬೇಡಿಕೊಳ್ಳು ವವರೆಲ್ಲರಿಗೆ ಐಶ್ವರ್ಯವಂತನಾಗಿದ್ದಾನೆ.

13 for, Whosoever shall call upon the name of the Lord shall be saved.ಕರ್ತನ ನಾಮದಲ್ಲಿ ಬೇಡಿಕೊಳ್ಳುವ ಯಾರಿಗಾದರೂ ರಕ್ಷಣೆ ಯಾಗುವದು.

14 How then shall they call on him in whom they have not believed? and how shall they believe in him whom they have not heard? and how shall they hear without a preacher?ಆದರೆ ತಾವು ಯಾವಾತನನ್ನು ನಂಬಲಿಲ್ಲವೋ ಆತನನ್ನು ಬೇಡಿಕೊಳ್ಳುವದು ಹೇಗೆ? ಆತನ ವಿಷಯ ವಾಗಿ ಕೇಳದಿರುವಲ್ಲಿ ಆತನನ್ನು ನಂಬುವದು ಹೇಗೆ? ಸಾರಿ ಹೇಳುವವನಿಲ್ಲದೆ ಕೇಳುವದು ಹೇಗೆ?

15 and how shall they preach, except they be sent? even as it is written, How beautiful are the feet of them that bring glad tidings of good things!ಇದ ಲ್ಲದೆ ಸಾರುವವರನ್ನು ಕಳುಹಿಸದಿದ್ದರೆ ಅವರು ಸಾರು ವದು ಹೇಗೆ? ಮತ್ತು--ಸಮಾಧಾನದ ಸುವಾರ್ತೆ ಯನ್ನು ಸಾರುವವರ ಮತ್ತು ಸಂತೋಷದ ಸುವರ್ತ ಮಾನವನ್ನು ತರುವವರ ಪಾದಗಳು ಎಷ್ಟೋ ಅಂದ ವಾಗಿವೆ ಎಂದು ಬರೆದದೆ.

16 But they did not all hearken to the glad tidings. For Isaiah saith, Lord, who hath believed our report?ಆದರೆ ಅವರೆಲ್ಲರೂ ಸುವಾರ್ತೆಗೆ ವಿಧೇಯರಾಗಲಿಲ್ಲ. ಆದದರಿಂದ ಯೆಶಾಯನು--ಕರ್ತನೇ, ನಮ್ಮ ವಾರ್ತೆಯನ್ನು ಯಾರು ನಂಬಿದರು ಅನ್ನುತ್ತಾನೆ.

17 So belief `cometh' of hearing, and hearing by the word of Christ.ಕೇಳುವದರಿಂದ ನಂಬಿಕೆಯುಂಟಾಗುತ್ತದೆ. ದೇವರ ವಾಕ್ಯವನ್ನು ಕೇಳುವದ ರಿಂದಲೇ.

18 But I say, Did they not hear? Yea, verily, Their sound went out into all the earth, And their words unto the ends of the world.ಆದರೆ--ಅವರು ಕೇಳಲಿಲ್ಲವೇನು ಎಂದು ನಾನು ಕೇಳುತ್ತೇನೆ. ಹೌದು ನಿಜವೇ, ಅವರ ಧ್ವನಿಯು ಭೂಮಿಯಲ್ಲೆಲ್ಲಾ ಪ್ರಸರಿಸಿತು, ಅವರ ನುಡಿಗಳು ಲೋಕದ ಕಟ್ಟಕಡೆಯ ವರೆಗೂ ವ್ಯಾಪಿಸಿದವು.

19 But I say, Did Israel not know? First Moses saith, I will provoke you to jealousy with that which is no nation, With a nation void of understanding will I anger you.ಆದರೆ--ಇಸ್ರಾಯೇಲ್ಯರು ತಿಳುಕೊಳ್ಳಲಿಲ್ಲವೇನು ಎಂದು ನಾನು ಕೇಳುತ್ತೇನೆ. ಈ ವಿಷಯದಲ್ಲಿ--ನನ್ನ ಜನಾಂಗವಲ್ಲದವರ ಮೂಲಕ ನಿಮ್ಮಲ್ಲಿ ಹುರುಡು ಹುಟ್ಟಿಸುವೆನು; ವಿವೇಕವಿಲ್ಲದ ಜನರ ಮೂಲಕ ನಿಮ್ಮನ್ನು ಸಿಟ್ಟಿಗೆಬ್ಬಿಸುವೆನು ಎಂದು ಮೊದಲು ಮೋಶೆಯು ಹೇಳುತ್ತಾನೆ.

20 And Isaiah is very bold, and saith, I was found of them that sought me not; I became manifest unto them that asked not of me.ಇದಲ್ಲದೆ ಯೆಶಾಯನು ಧೈರ್ಯವಾಗಿ ಮಾತನಾಡಿ--ನನ್ನನ್ನು ಹುಡುಕದವರಿಗೆ ಸಿಕ್ಕಿದೆನು, ನನ್ನ ವಿಷಯವಾಗಿ ವಿಚಾರ ಮಾಡದವರಿಗೂ ಪ್ರತ್ಯಕ್ಷನಾದೆನು ಎಂದು ಹೇಳುತ್ತಾನೆ.

21 But as to Israel he saith, All the day long did I spread out my hands unto a disobedient and gainsaying people.ಆದರೆ ಅವನು ಇಸ್ರಾಯೇಲ್ಯರ ವಿಷಯವಾಗಿ--ನನಗೆ ಅವಿಧೇಯ ರಾಗಿ ಎದುರು ಮಾತನಾಡುವ ಜನರ ಕಡೆಗೆ ನಾನು ದಿನವೆಲ್ಲಾ ಕೈ ಚಾಚಿದೆನು ಎಂದು ಹೇಳುತ್ತಾನೆ.

Kannada Bible