Bible

Revelation 18 - WEB (Kannada)

1 After these things, I saw another angel coming down out of the sky, having great authority. The earth was illuminated with his glory.ಇವುಗಳಾದ ಮೇಲೆ ಮಹಾ ಅಧಿಕಾರವುಳ್ಳ ಮತ್ತೊಬ್ಬ ದೂತನು ಪರಲೋಕದಿಂದ ಇಳಿಯುವದನ್ನು ಕಂಡೆನು; ಅವನ ಪ್ರಭಾವದಿಂದ ಭೂಮಿಗೆ ಪ್ರಕಾಶವುಂಟಾಯಿತು.

2 He cried with a mighty voice, saying, "Fallen, fallen is Babylon the great, and she has become a habitation of demons, a prison of every unclean spirit, and a prison of every unclean and hateful bird!ಅವನು ಗಟ್ಟಿ ಯಾದ ಶಬ್ದದಿಂದ ಕೂಗುತ್ತಾ--ಮಹಾಬಾಬೆಲ್‌ ಬಿದ್ದಳು, ಬಿದ್ದಳು; ದೆವ್ವಗಳ ವಾಸಸ್ಥಾನವೂ ಅಶುದ್ಧಾತ್ಮಗಳ ಆಶ್ರಯವೂ ಅಪವಿತ್ರವಾಗಿಯೂ ಅಸಹ್ಯವಾಗಿಯೂ ಇರುವ ಸಕಲ ವಿಧವಾದ ಪಕ್ಷಿಗಳ ಪಂಜರವೂ ಆದಳು.

3 For all the nations have drunk of the wine of the wrath of her sexual immorality, the kings of the earth committed sexual immorality with her, and the merchants of the earth grew rich from the abundance of her luxury."ಎಲ್ಲಾ ಜನಾಂಗಗಳು ಅವಳ ಜಾರತ್ವವೆಂಬ ಕೋಪದ ದ್ರಾಕ್ಷಾರಸವನ್ನು ಕುಡಿದು ಮತ್ತರಾದರು; ಅವಳೊಂದಿಗೆ ಭೂರಾಜರು ಜಾರತ್ವ ಮಾಡಿದರು; ಅವಳ ಅತಿಶಯವಾದ ವೈಭವದಿಂದ ಭೂಲೋಕದ ವರ್ತಕರು ಐಶ್ವರ್ಯವಂತರಾದರು ಎಂದು ಹೇಳಿದನು.

4 I heard another voice from heaven, saying, "Come out of her, my people, that you have no participation in her sins, and that you don't receive of her plagues,ಪರಲೋಕದಿಂದ ಮತ್ತೊಂದು ಶಬ್ದವನ್ನು ನಾನು ಕೇಳಿದೆನು; ಅದು--ನನ್ನ ಜನರೇ, ಅವಳಿಂದ ಹೊರಗೆ ಬನ್ನಿರಿ; ನೀವು ಅವಳ ಪಾಪಗಳಲ್ಲಿ ಪಾಲುಗಾರರಾಗ ಬಾರದು; ಅವಳಿಗಾಗುವ ಉಪದ್ರವಗಳಿಗೆ ಗುರಿ ಯಾಗಬಾರದು.

5 for her sins have reached to the sky, and God has remembered her iniquities.ಅವಳ ಪಾಪಗಳು ಆಕಾಶದ ವರೆಗೂ ಮುಟ್ಟಿವೆ. ದೇವರು ಅವಳ ದ್ರೋಹಗಳನ್ನು ಜ್ಞಾಪಿಸಿಕೊಂಡಿದ್ದಾನೆ.

6 Return to her just as she returned, and repay her double as she did, and according to her works. In the cup which she mixed, mix to her double.ನಿಮಗೆ ಅವಳು ಮಾಡಿದ ಪ್ರಕಾರ ನೀವು ಅವಳಿಗೆ ಪ್ರತೀಕಾರ ಮಾಡಿರಿ; ಅವಳ ಕೃತ್ಯಗಳಿಗೆ ಸರಿಯಾಗಿ ಅವಳಿಗೆ ಎರಡರಷ್ಟು ಕೊಡಿರಿ. ಅವಳು ತುಂಬಿಸಿದ ಪಾತ್ರೆಯಲ್ಲಿ ಅವಳಿಗೆ ಎರಡರಷ್ಟು ತುಂಬಿಸಿರಿ.

7 However much she glorified herself, and grew wanton, so much give her of torment and mourning. For she says in her heart, 'I sit a queen, and am no widow, and will in no way see mourning.'ಅವಳು ಎಷ್ಟರಮಟ್ಟಿಗೆ ತನ್ನನ್ನು ಘನಪಡಿಸಿ ಕೊಂಡು ವೈಭವದಲ್ಲಿ ಜೀವಿಸಿದ್ದಳೋ ಅಷ್ಟರಮಟ್ಟಿಗೆ ಅವಳಿಗೆ ಯಾತನೆಯನ್ನೂ ದುಃಖವನ್ನೂ ಕೊಡಿರಿ; ಯಾಕಂದರೆ ಅವಳು ತನ್ನ ಹೃದಯದಲ್ಲಿ--ನಾನು ರಾಣಿ ಯಾಗಿ ಕೂತುಕೊಂಡಿದ್ದೇನೆ, ನಾನು ವಿಧವೆಯಲ್ಲ, ದುಃಖವನ್ನು ಕಾಣುವದೇ ಇಲ್ಲ ಎಂದು ಹೇಳಿಕೊಳ್ಳು

8 Therefore in one day her plagues will come: death, mourning, and famine; and she will be utterly burned with fire; for the Lord God who has judged her is strong.ಆದದರಿಂದ ಅವಳಿಗೆ ಮರಣ ದುಃಖ ಕ್ಷಾಮ ಎಂಬೀ ಉಪದ್ರವಗಳು ಒಂದೇ ದಿನದಲ್ಲಿ ಸಂಭವಿ ಸುವವು; ಅವಳು ಬೆಂಕಿಯಿಂದ ಸಂಪೂರ್ಣವಾಗಿ ಸುಟ್ಟುಹೋಗುವಳು. ಅವಳಿಗೆ ದಂಡನೆಯನ್ನು ವಿಧಿಸಿದ ದೇವರಾಗಿರುವ ಕರ್ತನು ಬಲಿಷ್ಠನಾಗಿದ್ದಾನೆ.

9 The kings of the earth, who committed sexual immorality and lived wantonly with her, will weep and wail over her, when they look at the smoke of her burning,ಅವಳೊಂದಿಗೆ ಜಾರತ್ವ ಮಾಡಿ ವೈಭವದಲ್ಲಿ ಬದುಕಿದ ಭೂರಾಜರು ಅವಳ ದಹನದ ಹೊಗೆಯನ್ನು ನೋಡು ವಾಗ ಅವಳಿಗಾಗಿ ಗೋಳಾಡುತ್ತಾ ಪ್ರಲಾಪಿಸುವರು.

10 standing far away for the fear of her torment, saying, 'Woe, woe, the great city, Babylon, the strong city! For your judgment has come in one hour.'ಅವರು ದೂರದಲ್ಲಿ ನಿಂತು ಅವಳಿಗುಂಟಾದ ಯಾತ ನೆಯ ಭಯದಿಂದ--ಅಯ್ಯೋ, ಅಯ್ಯೋ, ಆ ಮಹಾಪಟ್ಟಣವಾದ ಬಾಬೆಲೇ, ಬಲಿಷ್ಠವಾದ ನಗ ರಿಯೇ, ಒಂದೇ ಗಳಿಗೆಯಲ್ಲಿ ನಿನಗೆ ತೀರ್ಪಾಯಿತಲ್ಲಾ ಎಂದು ಹೇಳುವರು.

11 The merchants of the earth weep and mourn over her, for no one buys their merchandise any more;ಇದಲ್ಲದೆ ಭೂಲೋಕದ ವರ್ತಕರು ಅವಳ ನಿಮಿತ್ತವಾಗಿ ಅತ್ತು ಗೋಳಾಡುವರು. ಯಾಕಂದರೆ ಅವರ ಸರಕುಗಳನ್ನು ಅಂದರೆ

12 merchandise of gold, silver, precious stones, pearls, fine linen, purple, silk, scarlet, all expensive wood, every vessel of ivory, every vessel made of most precious wood, and of brass, and iron, and marble;ಚಿನ್ನ, ಬೆಳ್ಳಿ, ಅಮೂಲ್ಯವಾದ ಕಲ್ಲುಗಳು, ಮುತ್ತುಗಳು, ನಯವಾದ ನಾರುಮಡಿ, ಧೂಮ್ರವರ್ಣದ ವಸ್ತ್ರ, ರೇಶ್ಮೆ, ರಕ್ತಾಂಬರ, ಸಕಲ ವಿಧವಾದ ಅಗಿಲುಮರ, ಸಕಲ ವಿಧವಾದ ದಂತದ ಪಾತ್ರೆಗಳು, ಬಹು ಅಮೂಲ್ಯವಾದ ಮರ, ಹಿತ್ತಾಳೆ, ಸಕಲ ವಿಧವಾದ ಪಾತ್ರೆಗಳು, ಕಬ್ಬಿಣ, ಚಂದ್ರಕಾಂತ,

13 and cinnamon, incense, perfume, frankincense, wine, olive oil, fine flour, wheat, sheep, horses, chariots, bodies, and people's souls.ಲವಂಗ, ಚೆಕ್ಕೆ, ಧೂಪ, ಸುಗಂಧ ತೈಲ, ಸಾಂಬ್ರಾಣಿ, ದ್ರಾಕ್ಷಾರಸ, ಎಣ್ಣೆ, ನಯವಾದಹಿಟ್ಟು, ಗೋಧಿ, ದನಗಳು, ಕುರಿ ಗಳು, ಕುದುರೆಗಳು, ರಥಗಳು, ಗುಲಾಮರು, ಮನುಷ್ಯರ ಪ್ರಾಣಗಳು ಇವೇ ಮೊದಲಾದವುಗಳನ್ನು ಯಾರೂ ಎಂದೂ ಕೊಂಡುಕೊಳ್ಳುವರಿಲ್ಲ ಎಂದು ದುಃಖಿಸುವರು.

14 The fruits which your soul lusted after have been lost to you, and all things that were dainty and sumptuous have perished from you, and you will find them no more at all.ನಿನ್ನ ಜೀವವು ಅಪೇಕ್ಷಿಸಿದ ಹಣ್ಣು ಗಳು ನಿನ್ನನ್ನು ಬಿಟ್ಟು ಹೋದವು; ಸೊಗಸಾಗಿಯೂ ಶೋಭಾಯಮಾನವಾಗಿಯೂ ಇರುವವುಗಳೆಲ್ಲವೂ ನಿನ್ನನ್ನು ಬಿಟ್ಟು ಹೋದವು. ಅವು ಇನ್ನು ಮೇಲೆ ನಿನಗೆ ಸಿಕ್ಕುವದೇ ಇಲ್ಲ.

15 The merchants of these things, who were made rich by her, will stand far away for the fear of her torment, weeping and mourning;ಅವಳಿಂದ ಐಶ್ವರ್ಯವಂತ ರಾದ ಈ ಸರಕುಗಳ ವರ್ತಕರು ಅವಳ ಯಾತನೆಗೆ ಭಯಪಟ್ಟು ದೂರದಲ್ಲಿ ನಿಂತು ಅಳುತ್ತಾ ಗೋಳಾ ಡುತ್ತಾ--

16 saying, 'Woe, woe, the great city, she who was dressed in fine linen, purple, and scarlet, and decked with gold and precious stones and pearls!ಅಯ್ಯೋ, ಅಯ್ಯೋ, ಮಹಾನಗರಿಯೇ, ನಯವಾದ ನಾರುಮಡಿಯನ್ನೂ ಧೂಮ್ರವರ್ಣದ ವಸ್ತ್ರವನ್ನೂ ರಕ್ತಾಂಬರವನ್ನೂ ಧರಿಸಿಕೊಂಡು ಚಿನ್ನ ಅಮೂಲ್ಯವಾದ ಕಲ್ಲುಗಳು ಮುತ್ತುಗಳು ಇವುಗಳಿಂದ ಅಲಂಕರಿಸಲ್ಪಟ್ಟವಳೇ,

17 For in an hour such great riches are made desolate.' Every shipmaster, and everyone who sails anywhere, and mariners, and as many as gain their living by sea, stood far away,ಅಷ್ಟು ದೊಡ್ಡ ಐಶ್ವರ್ಯವು ಒಂದೇ ಗಳಿಗೆಯಲ್ಲಿ ಇಲ್ಲದೆ ಹೋಯಿತಲ್ಲಾ ಅನ್ನುವರು. ಇದಲ್ಲದೆ ಹಡಗುಗಳ ಯಜಮಾನರೂ ಹಡಗುಗಳಲ್ಲಿ ಜೊತೆಯಾಗಿರುವವರೂ ನಾವಿಕರೂ ಸಮುದ್ರದ ಮೇಲೆ ವ್ಯಾಪಾರ ಮಾಡುವವರೆಲ್ಲರೂ ದೂರದಲ್ಲಿ ನಿಂತು

18 and cried out as they looked at the smoke of her burning, saying, 'What is like the great city?'ಅವಳ ದಹನದ ಹೊಗೆಯನ್ನು ನೋಡುತ್ತಾ--ಈ ಮಹಾ ಪಟ್ಟಣಕ್ಕೆ ಸಮಾನವಾದ ಪಟ್ಟಣವು ಯಾವದು ಎಂದು ಕೂಗಿ ಹೇಳಿದರು.

19 They cast dust on their heads, and cried, weeping and mourning, saying, 'Woe, woe, the great city, in which all who had their ships in the sea were made rich by reason of her great wealth!' For in one hour is she made desolate.ಆಗ ಅವರು ತಮ್ಮ ತಲೆಗಳ ಮೇಲೆ ಧೂಳನು ಹೊಯಿದುಕೊಂಡು ಕೂಗುತ್ತಾ ಅಳುತ್ತಾ, ಗೋಳಾ ಡುತ್ತಾ--ಅಯ್ಯೋ, ಅಯ್ಯೋ ಸಮುದ್ರದ ಮೇಲೆ ಹಡಗುಗಳಿದ್ದವರೆಲ್ಲರನ್ನು ತನ್ನ ಅಮೂಲ್ಯ ದ್ರವ್ಯ ಗಳಿಂದ ಐಶ್ವರ್ಯವಂತರನ್ನಾಗಿ ಮಾಡಿದ ಆ ಮಹಾ ನಗರಿಯು ಒಂದೇ ಗಳಿಗೆಯಲ್ಲಿ ಹಾಳಾದಳಲ್ಲಾ ಎಂದು

20 Rejoice over her, O heaven, you saints, apostles, and prophets; for God has judged your judgment on her."ಪರಲೋಕವೇ, ಪರಿಶುದ್ಧರಾದ ಅಪೊಸ್ತಲರೇ, ಪ್ರವಾದಿಗಳೇ, ಅವಳ ವಿಷಯವಾಗಿ ಆನಂದಪಡಿರಿ. ಯಾಕಂದರೆ ನಿಮ್ಮ ನಿಮಿತ್ತವಾಗಿ ದೇವರು ಇವಳಿಗೆ ಪ್ರತಿ ದಂಡನೆಯನ್ನು ಮಾಡಿದನು ಎಂದು ಹೇಳಿತು.

21 A mighty angel took up a stone like a great millstone and cast it into the sea, saying, "Thus with violence will Babylon, the great city, be thrown down, and will be found no more at all.ಆಗ ಬಲಿಷ್ಠನಾದ ಒಬ್ಬ ದೂತನು ಬೀಸುವ ದೊಡ್ಡ ಕಲ್ಲಿನಂತಿರುವ ಒಂದು ಕಲ್ಲನ್ನು ಎತ್ತಿ ಸಮುದ್ರ ದೊಳಗೆ ಹಾಕಿ--ಮಹಾ ಪಟ್ಟಣವಾದ ಆ ಬಾಬೆಲು ಹೀಗೆಯೇ ಬಲಾತ್ಕಾರದಿಂದ ಕೆಡವಲ್ಲಟ್ಟು ಇನ್ನೆಂದಿಗೂ ಕಾಣಿಸುವದಿಲ್ಲ.

22 The voice of harpists, minstrels, flute players, and trumpeters will be heard no more at all in you. No craftsman, of whatever craft, will be found any more at all in you. The sound of a mill will be heard no more at all in you.ನಿನ್ನಲ್ಲಿ ವೀಣೆಗಾರರೂ ವಾದ್ಯ ಗಾರರೂ ಕೊಳಲೂದುವವರೂ ತುತೂರಿಯವರು ಮಾಡುವ ಧ್ವನಿಯೂ ಇನ್ನೆಂದಿಗೂ ಕೇಳಿಸುವದಿಲ್ಲ. ಯಾವ ವಿಧವಾದ ಕೈಗಾರಿಕೆಯನ್ನು ಮಾಡುವವರು ನಿಮ್ಮಲ್ಲಿ ಇನ್ನೆಂದಿಗೂ ಸಿಕ್ಕುವದಿಲ್ಲ; ಬೀಸುವ ಕಲ್ಲಿನ ಶಬ್ದವೂ ನಿನ್ನಲ್ಲಿ ಇನ್ನೆಂದಿಗೂ ಕೇಳಿಸುವದಿಲ್ಲ.

23 The light of a lamp will shine no more at all in you. The voice of the bridegroom and of the bride will be heard no more at all in you; for your merchants were the princes of the earth; for with your sorcery all the nations were deceived.ದೀಪದ ಬೆಳಕು ನಿನ್ನಲ್ಲಿ ಇನ್ನೆಂದಿಗೂ ಪ್ರಕಾಶಿಸು ವದಿಲ್ಲ. ವಧೂವರರ ಸ್ವರವು ನಿನ್ನಲ್ಲಿ ಇನ್ನೆಂದಿಗೂ ಕೇಳಿಸುವದಿಲ್ಲ; ನಿನ್ನ ವರ್ತಕರು ಭೂಮಿಯ ಪ್ರಧಾನ ರಾಗಿದ್ದದ್ದಲ್ಲದೆ ನಿನ್ನ ಮಾಟದಿಂದ ಎಲ್ಲಾ ಜನಾಂಗ ದವರು ಮೋಸ ಹೋದರು.

24 In her was found the blood of prophets and of saints, and of all who have been slain on the earth."ಪ್ರವಾದಿಗಳ, ಪರಿ ಶುದ್ಧರ ಮತ್ತು ಭೂಮಿಯ ಮೇಲೆ ಕೊಲ್ಲಲ್ಪಟ್ಟವರೆಲ್ಲರ ರಕ್ತವು ನಿನ್ನಲ್ಲಿ ಸಿಕ್ಕಿತು ಎಂದು ಹೇಳಿದನು.

Kannada Bible