Psalm 91 - BBE (Kannada)
1 Happy is he whose resting-place is in the secret of the Lord, and under the shade of the wings of the Most High;ಮಹೋನ್ನತನ ಮರೆಯಾದ ಸ್ಥಳದಲ್ಲಿ ವಾಸಿಸುವವನು ಸರ್ವಶಕ್ತನ ನೆರಳಿನಲ್ಲಿ ತಂಗುವನು.
2 Who says of the Lord, He is my safe place and my tower of strength: he is my God, in whom is my hope.ನನ್ನ ಆಶ್ರಯವೂ ಕೋಟೆಯೂ ನಾನು ಭರವಸವಿಟ್ಟಿರುವ ನನ್ನ ದೇವರೂ ಎಂದು ನಾನು ಕರ್ತನಿಗೆ ಹೇಳುತ್ತೇನೆ.
3 He will take you out of the bird-net, and keep you safe from wasting disease.ನಿಶ್ಚಯವಾಗಿ ಆತನು ನಿನ್ನನ್ನು ಬೇಡನ ಉರ್ಲಿ ನಿಂದಲೂ ಅಪಾಯದ ಜಾಡ್ಯದಿಂದಲೂ ಬಿಡಿಸು ವನು.
4 You will be covered by his feathers; under his wings you will be safe: his good faith will be your salvation.ತನ್ನ ರೆಕ್ಕೆಗಳಿಂದ ನಿನ್ನನ್ನು ಹೊದಗಿಸುವನು; ಆತನ ರೆಕ್ಕೆಗಳ ಕೆಳಗೆ ಆಶ್ರಯಿಸಿಕೊಳ್ಳುವಿ; ಆತನ ಸತ್ಯವು ನಿನ್ನ ಖೇಡ್ಯವೂ ಡಾಲೂ ಆಗಿದೆ.
5 You will have no fear of the evil things of the night, or of the arrow in flight by day,ರಾತ್ರಿಯ ಭಯಂಕರತೆಗೂ ಹಗಲಲ್ಲಿ ಹಾರುವ ಬಾಣಕ್ಕೂ
6 Or of the disease which takes men in the dark, or of the destruction which makes waste when the sun is high.ಅಂಧಕಾರದಲ್ಲಿ ನಡೆಯುವ ಜಾಡ್ಯಕ್ಕೂ ಇಲ್ಲವೆ ಮಧ್ಯಾಹ್ನದಲ್ಲಿ ಹಾಳು ಮಾಡುವ ನಾಶನಕ್ಕೂ ನೀನು ಭಯಪಡದೆ ಇರುವಿ.
7 You will see a thousand falling by your side, and ten thousand at your right hand; but it will not come near you.ನಿನ್ನ ಕಡೆಯಲ್ಲಿ ಸಾವಿರ ಜನರೂ ನಿನ್ನ ಬಲಗಡೆಯಲ್ಲಿ ಹತ್ತು ಸಾವಿರ ಜನರೂ ಬಿದ್ದಾಗ್ಯೂ ನಿನ್ನ ಸವಿಾಪಕ್ಕೆ ಅದು ಬರುವದಿಲ್ಲ.
8 Only with your eyes will you see the reward of the evil-doers.ನಿನ್ನ ಕಣ್ಣುಗಳಿಂದ ಮಾತ್ರ ನೀನು ದೃಷ್ಟಿಸಿ ದುಷ್ಟರಿಗೆ ಮುಯ್ಯಿಗೆ ಮುಯ್ಯಿ ಆಗುವದನ್ನು ನೋಡುವಿ.
9 Because you have said, I am in the hands of the Lord, the Most High is my safe resting-place;ಮಹೋನ್ನತನಾದ ಕರ್ತನನ್ನು ನಿನ್ನ ಆಶ್ರಯ ವಾಗಿಯೂ ನಿವಾಸಸ್ಥಾನವಾಗಿಯೂ ಮಾಡಿಕೊಂಡ ದ್ದರಿಂದ
10 No evil will come on you, and no disease will come near your tent.ಕೇಡು ನಿನ್ನನ್ನು ಮುಟ್ಟದು; ಯಾವ ವ್ಯಾಧಿಯೂ ನಿನ್ನ ನಿವಾಸಕ್ಕೆ ಸವಿಾಪಿಸದು.
11 For he will give you into the care of his angels to keep you wherever you go.ನಿನ್ನ ಎಲ್ಲಾ ಮಾರ್ಗಗಳಲ್ಲಿ ನಿನ್ನನ್ನು ಕಾಪಾಡುವದಕ್ಕೆ ಆತನು ತನ್ನ ದೂತರಿಗೆ ನಿನ್ನ ವಿಷಯವಾಗಿ ಆಜ್ಞಾಪಿಸುವನು.
12 In their hands they will keep you up, so that your foot may not be crushed against a stone.ನಿನ್ನ ಪಾದವು ಕಲ್ಲಿಗೆ ತಗಲದ ಹಾಗೆ ಅವರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು.
13 You will put your foot on the lion and the snake; the young lion and the great snake will be crushed under your feet.ಸಿಂಹ ಸರ್ಪ ಮೇಲೆ ನಡೆಯುವಿ; ಯೌವನದ ಸಿಂಹವನ್ನೂ ಘಟಸರ್ಪವನ್ನೂ ತುಳಿದು ಬಿಡುವಿ.
14 Because he has given me his love, I will take him out of danger: I will put him in a place of honour, because he has kept my name in his heart.ಅವನು ತನ್ನ ಪ್ರೀತಿಯನ್ನು ನನ್ನ ಮೇಲೆ ಇಟ್ಟಿದ್ದಾನೆ; ಆದದರಿಂದ ಅವನನ್ನು ತಪ್ಪಿಸುವೆನು; ಅವನು ನನ್ನ ಹೆಸರನ್ನು ತಿಳಿದಿರುವದರಿಂದ ಅವನನ್ನು ಉನ್ನತದಲ್ಲಿಡುವೆನು.
15 When his cry comes up to me, I will give him an answer: I will be with him in trouble; I will make him free from danger and give him honour.ಅವನು ನನ್ನನ್ನು ಕರೆಯುವನು; ನಾನು ಅವನಿಗೆ ಉತ್ತರ ಕೊಡುವೆನು; ಇಕ್ಕಟ್ಟಿನಲ್ಲಿ ನಾನು ಅವನ ಸಂಗಡ ಇದ್ದು ಅವನನ್ನು ತಪ್ಪಿಸಿ; ಘನಪಡಿಸುವೆನು.
16 With long life will he be rewarded; and I will let him see my salvation.ದೀರ್ಘಾಯುಷ್ಯದಿಂದ ಅವನನ್ನು ತೃಪ್ತಿಪಡಿಸಿ ನನ್ನ ರಕ್ಷಣೆಯನ್ನು ಅವನಿಗೆ ತೋರಿಸುವೆನು.
Kannada Bible