Bible

Psalm 76 - WEB (Kannada)

1 > In Judah, God is known. His name is great in Israel.ದೇವರು ಯೆಹೂದದಲ್ಲಿ ಪ್ರಸಿದ್ಧವಾಗಿದ್ದಾನೆ; ಇಸ್ರಾಯೇಲಿನಲ್ಲಿ ಆತನ ಹೆಸರು ದೊಡ್ಡದಾಗಿದೆ.

2 His tent is also in Salem; His dwelling place in Zion.ಸಾಲೇಮಿನಲ್ಲಿ ಆತನ ಗುಡಾರವೂ ಚೀಯೋನಿನಲ್ಲಿ ಆತನ ವಾಸಸ್ಥಾನವೂ ಉಂಟು.

3 There he broke the flaming arrows of the bow, The shield, and the sword, and the weapons of war. Selah.ಅಲ್ಲಿಯೇ ಬಿಲ್ಲಿನ ಬಾಣಗಳನ್ನೂ ಗುರಾಣಿಯನ್ನೂ ಕತ್ತಿಯನ್ನೂ ಯುದ್ಧವನ್ನೂ ಮುರಿದುಬಿಟ್ಟನು. ಸೆಲಾ.

4 Glorious are you, and excellent, More than mountains of game.ಬೇಟೆಗಳಿರುವ ಬೆಟ್ಟಗಳಿಗಿಂತ ನೀನು ಪ್ರಕಾಶವು ಳ್ಳವನೂ ಶ್ರೇಷ್ಠನೂ ಆಗಿದ್ದೀ.

5 Valiant men lie plundered, They have slept their last sleep. None of the men of war can lift their hands.ಬಲವಾದ ಹೃದಯ ದವರು ಕೊಳ್ಳೆ ಮಾಡಲ್ಪಟ್ಟಿದ್ದಾರೆ, ತೂಕಡಿಸಿ ನಿದ್ರೆ ಹೋಗಿದ್ದಾರೆ; ಪರಾಕ್ರಮಿಗಳಲ್ಲಿ ಒಬ್ಬನೂ ತನ್ನ ಕೈಗ ಳನ್ನು ಕಂಡುಕೊಳ್ಳಲಿಲ್ಲ.

6 At your rebuke, God of Jacob, Both chariot and horse are cast into a deep sleep.ಓ ಯಾಕೋಬನ ದೇವರೇ, ನಿನ್ನ ಗದರಿಕೆಯಿಂದ ರಥವೂ ಕುದುರೆಯೂ ಗಾಢ ನಿದ್ರೆಯಲ್ಲಿ ಬಿದ್ದಿವೆ.

7 You, even you, are to be feared. Who can stand in your sight when you are angry?ನೀನು, ನೀನೇ, ಭಯಹುಟ್ಟಿಸುತ್ತೀ; ನೀನು ಒಂದು ಸಾರಿ ಕೋಪಿಸಿಕೊಂಡರೆ ನಿನ್ನ ಮುಂದೆ ನಿಲ್ಲುವವನಾರು?

8 You pronounced judgment from heaven. The earth feared, and was silent,ಆಕಾಶದಿಂದ ನ್ಯಾಯತೀರ್ವಿಕೆಯನ್ನು ಕೇಳಮಾಡಿದಿ.

9 When God arose to judgment, To save all the afflicted ones of the earth. Selah.ದೇವರು ನ್ಯಾಯತೀರಿಸುವದಕ್ಕೂ ಭೂಮಿಯ ದೀನರೆಲ್ಲರನ್ನು ರಕ್ಷಿಸುವದಕ್ಕೂ ಏಳುವಾಗ ಭೂಮಿಯ ನಿವಾಸಿಗಳು ಭಯಪಟ್ಟು ಸ್ತಬ್ಧ ರಾದರು. ಸೆಲಾ.

10 Surely the wrath of man praises you. The survivors of your wrath are restrained.ನಿಶ್ಚಯವಾಗಿ ಮನುಷ್ಯನ ಕೋಪವು ನಿನ್ನನ್ನು ಕೊಂಡಾಡುವದು; ಕೋಪಶೇಷವನ್ನು ನೀನು ಬಿಗಿ ಹಿಡಿದು ಕೊಳ್ಳುವಿ.

11 Make vows to Yahweh your God, and fulfill them! Let all of his neighbors bring presents to him who is to be feared.ನಿಮ್ಮ ದೇವರಾದ ಕರ್ತನಿಗೆ ಪ್ರಮಾಣಮಾಡಿ ಸಲ್ಲಿಸಿರಿ; ಆತನ ಸುತ್ತಲಿರುವವ ರೆಲ್ಲರು ಭಯಪಡಿಸುವಾತನಿಗೆ ಕಾಣಿಕೆಗಳನ್ನು ತರಲಿ.

12 He will cut off the spirit of princes. He is feared by the kings of the earth.ಆತನು ಪ್ರಧಾನರ ಪ್ರಾಣವನ್ನು ತೆಗೆದು ಹಾಕು ತ್ತಾನೆ; ಭೂಮಿಯ ಅರಸುಗಳಿಗೆ ಭಯಂಕರ ನಾಗಿದ್ದಾನೆ.

Kannada Bible