Psalm 72 - DBY (Kannada)
1 {For Solomon.} O God, give the king thy judgments, and thy righteousness unto the king's son.ಓ ದೇವರೇ, ನಿನ್ನ ನ್ಯಾಯತೀರ್ಪುಗಳನ್ನು ಅರಸನಿಗೂ ನೀತಿಯನ್ನು ಅರಸನ ಮಗನಿಗೂ ಕೊಡು.
2 He will judge thy people with righteousness, and thine afflicted with judgment.ನಿನ್ನ ಜನರಿಗೆ ನೀತಿಯಿಂದಲೂ ದೀನರಿಗೆ ನ್ಯಾಯದಿಂದಲೂ ಆತನು ತೀರ್ಪು ಮಾಡು ವನು.
3 The mountains shall bring peace to the people, and the hills, by righteousness.ಬೆಟ್ಟಗಳೂ ಚಿಕ್ಕ ಗುಡ್ಡಗಳೂ ನೀತಿಯಿಂದ ಸಮಾಧಾನವನ್ನು ಜನರಿಗೆ ತರುವವು.
4 He will do justice to the afflicted of the people; he will save the children of the needy, and will break in pieces the oppressor.ಆತನು ಜನರಲ್ಲಿ ದೀನರಿಗೆ ನ್ಯಾಯತೀರಿಸುವನು; ಬಡವನ ಮಕ್ಕಳನ್ನು ರಕ್ಷಿಸುವನು; ಬಲಾತ್ಕಾರಿಯನ್ನು ಮುರಿದು ತುಂಡು ಮಾಡುವನು.
5 They shall fear thee as long as sun and moon endure, from generation to generation.ಸೂರ್ಯನೂ ಚಂದ್ರನೂ ಇರುವ ವರೆಗೆ ತಲ ತಲಾಂತರಗಳು ನಿನಗೆ ಭಯಪಡುವರು.
6 He shall come down like rain on the mown grass, as showers that water the earth.ಕೊಯ್ದ ಹುಲ್ಲಿನ ಮೇಲೆ ಬೀಳುವ ಮಳೆಯ ಹಾಗೆಯೂ ಭೂಮಿಯನ್ನು ನೆನಸುವ ಸುರಿಯುವ ಮಳೆಗಳ ಹಾಗೆಯೂ ಆತನು ಇಳಿದು ಬರುವನು.
7 In his days shall the righteous flourish, and abundance of peace till the moon be no more.ಆತನ ದಿವಸಗಳಲ್ಲಿ ನೀತಿವಂತನು ವೃದ್ಧಿಯಾಗುವನು. ಸಮೃದ್ಧಿ ಯಾದ ಸಮಾಧಾನವು ಚಂದ್ರನು ಇರುವ ವರೆಗೂ ಇರುವದು.
8 And he shall have dominion from sea to sea, and from the river unto the ends of the earth.ಸಮುದ್ರದಿಂದ ಸಮುದ್ರದ ವರೆಗೂ ನದಿಯಿಂದ ಭೂಮಿಯ ಕೊನೆಗಳವರೆಗೂ ಆತನು ಆಳುವನು.
9 The dwellers in the desert shall bow before him, and his enemies shall lick the dust.ಆತನ ಮುಂದೆ ಅರಣ್ಯ ನಿವಾಸಿಗಳು ಎರಗುವರು; ಆತನ ಶತ್ರುಗಳು ಧೂಳನ್ನು ನೆಕ್ಕುವರು.
10 The kings of Tarshish and of the isles shall render presents; the kings of Sheba and Seba shall offer tribute:ತಾರ್ಷೀಷಿನ ಅರಸರೂ ದ್ವೀಪಗಳ ಅರಸರೂ ಕಾಣಿಕೆಗಳನ್ನು ತರುವರು; ಶೆಬಾ ಮತ್ತು ಸೆಬಾದ ಅರಸರು ದಾನಗಳನ್ನು ಅರ್ಪಿಸುವರು.
11 Yea, all kings shall bow down before him; all nations shall serve him.ಹೌದು, ಎಲ್ಲಾ ಅರಸರು ಆತನ ಮುಂದೆ ಅಡ್ಡ ಬೀಳುವರು; ಎಲ್ಲಾ ಜನಾಂಗಗಳು ಆತನನ್ನು ಸೇವಿಸುವವು.
12 For he will deliver the needy who crieth, and the afflicted, who hath no helper;ಆತನಿಗೆ ಮೊರೆ ಇಡುವ ಬಡವರನ್ನೂ ಸಹಾಯ ಕನಿಲ್ಲದ ದೀನನನ್ನೂ ಬಿಡಿಸುವನು.
13 He will have compassion on the poor and needy, and will save the souls of the needy:ದರಿದ್ರನನ್ನೂ ಬಡವನನ್ನೂ ಕರುಣಿಸುವನು; ಬಡವರ ಪ್ರಾಣಗ ಳನ್ನು ರಕ್ಷಿಸುವನು.
14 He will redeem their souls from oppression and violence, and precious shall their blood be in his sight.ಮೋಸದಿಂದಲೂ ಬಲಾತ್ಕಾರ ದಿಂದಲೂ ಅವರ ಪ್ರಾಣವನ್ನು ಬಿಡುಗಡೆ ಮಾಡು ವನು; ಅವರ ರಕ್ತವು ಆತನ ದೃಷ್ಟಿಯಲ್ಲಿ ಅಮೂಲ್ಯ ವಾಗಿರುವದು.
15 And he shall live; and to him shall be given of the gold of Sheba; and prayer shall be made for him continually: all the day shall he be blessed.ಅವನು ಬಾಳುವನು; ಅವನಿಗೆ ಶೆಬಾದ ಚಿನ್ನ ವನ್ನು ಕೊಡುವರು; ಅವನಿಗೋಸ್ಕರ ಯಾವಾಗಲೂ ಪ್ರಾರ್ಥನೆ ಮಾಡುವರು; ಪ್ರತಿದಿನ ಅವನನ್ನು ಕೊಂಡಾಡುವರು.
16 There shall be abundance of corn in the earth, upon the top of the mountains; the fruit thereof shall shake like Lebanon; and they of the city shall bloom like the herb of the earth.ಧಾನ್ಯದ ಸಮೃದ್ಧಿಯು ದೇಶದಲ್ಲಿ ಬೆಟ್ಟಗಳ ತುದಿಯ ಮೇಲೆ ಇರುವದು; ಅದರ ಫಲವು ಲೆಬನೋನಿನ ಹಾಗೆ ಕದಲುವದು. ಪಟ್ಟಣದ ವರು ಭೂಮಿಯ ಸೊಪ್ಪಿನ ಹಾಗೆ ವೃದ್ಧಿಯಾಗುವರು.
17 His name shall endure for ever; his name shall be continued as long as the sun: and [men] shall bless themselves in him; all nations shall call him blessed.ಆತನ ನಾಮವು ಎಂದೆಂದಿಗೂ ಇರುವದು; ಸೂರ್ಯನು ಇರುವವರೆಗೂ ಆತನ ಹೆಸರು ಇರು ವದು. ಮನುಷ್ಯರು ಆತನಲ್ಲಿ ಆಶೀರ್ವಾದ ಹೊಂದು ವರು. ಎಲ್ಲಾ ಜನಾಂಗಗಳು ಆತನನ್ನು ಭಾಗ್ಯವಂತ ನೆಂದು ಕರೆಯುವರು.
18 Blessed be Jehovah Elohim, the God of Israel, who alone doeth wondrous things!ಒಬ್ಬನೇ ಅದ್ಭುತಗಳನ್ನು ಮಾಡುವ ಇಸ್ರಾಯೇಲಿನ ದೇವರಾಗಿರುವ ಕರ್ತನಾದ ದೇವರಿಗೆ ಸ್ತೋತ್ರವಾಗಲಿ.
19 And blessed be his glorious name for ever! and let the whole earth be filled with his glory! Amen, and Amen.ಆತನ ಮಹಿಮೆಯುಳ್ಳ ಹೆಸರಿಗೆ ಎಂದೆಂದಿಗೂ ಸ್ತೋತ್ರವಾಗಲಿ; ಆತನ ಮಹಿ ಮೆಯು ಭೂಮಿಯನ್ನೆಲ್ಲಾ ತುಂಬಲಿ. ಆಮೆನ್. ಆಮೆನ್.
20 The prayers of David the son of Jesse are ended.ಇಷಯನ ಮಗನಾದ ದಾವೀದನ ಪ್ರಾರ್ಥನೆಗಳು ಮುಗಿದವೆ.
Kannada Bible