Bible

Psalm 66 - ASV (Kannada)

1 Make a joyful noise unto God, all the earth:ಸಮಸ್ತ ದೇಶಗಳೇ, ದೇವರಿಗೆ ಉತ್ಸಾಹ ಧ್ವನಿಗೈಯಿರಿ;

2 Sing forth the glory of his name: Make his praise glorious.ಆತನ ಹೆಸರಿನ ಘನವನ್ನು ಕೀರ್ತಿಸಿರಿ; ಆತನ ಸ್ತೋತ್ರವನ್ನು ಘನವುಳ್ಳದ್ದಾಗಿ ಮಾಡಿರಿ.

3 Say unto God, How terrible are thy works! Through the greatness of thy power shall thine enemies submit themselves unto thee.ದೇವರಿಗೆ--ನಿನ್ನ ಕೆಲಸಗಳಿಂದ ನೀನು ಎಷ್ಟು ಭಯಂಕರನಾಗಿದ್ದೀ ಎಂದು ಹೇಳಿರಿ. ನಿನ್ನ ಮಹಾಬಲದ ನಿಮಿತ್ತ ನಿನ್ನ ಶತ್ರುಗಳು ತಾವೇ ನಿನಗೆ ಅಧೀನರಾಗುವರು;

4 All the earth shall worship thee, And shall sing unto thee; They shall sing to thy name. Selahಭೂನಿವಾಸಿಗಳೆಲ್ಲ ನಿನ್ನನ್ನು ಹಾಡಿ ಆರಾಧಿಸಿ ನಿನ್ನ ನಾಮವನ್ನು ಕೀರ್ತಿಸುವರು. ಸೆಲಾ.

5 Come, and see the works of God; `He is' terrible in his doing toward the children of men.ಬನ್ನಿರಿ, ದೇವರ ಕಾರ್ಯಗಳನ್ನು ನೋಡಿರಿ; ಮನುಷ್ಯರ ಮಕ್ಕಳ ಕಡೆಗೆ ಆತನು ತನ್ನ ಕಾರ್ಯಗಳಲ್ಲಿ ಭಯಂಕರನಾಗಿದ್ದಾನೆ.

6 He turned the sea into dry land; They went through the river on foot: There did we rejoice in him.ಆತನು ಸಮುದ್ರವನ್ನು ಒಣ ಗಿದ ಭೂಮಿಗೆ ತಿರುಗಿಸಿದನು; ಅವರು ಕಾಲು ನಡಿಗೆ ಯಾಗಿ ಪ್ರವಾಹವನ್ನು ದಾಟಿದರು; ಅಲ್ಲಿ ನಾವು ಆತನಲ್ಲಿ ಸಂತೋಷಿಸಿದೆವು.

7 He ruleth by his might for ever; His eyes observe the nations: Let not the rebellious exalt themselves. Selahಆತನು ತನ್ನ ಪರಾಕ್ರಮ ದಿಂದ ಎಂದೆಂದಿಗೂ ಆಳುವವನಾಗಿದ್ದಾನೆ; ಆತನ ಕಣ್ಣುಗಳು ಜನಾಂಗಗಳನ್ನು ದೃಷ್ಟಿಸುತ್ತವೆ; ಎದುರು ಬೀಳುವವರು ತಮ್ಮನ್ನು ತಾವೇ ಹೆಚ್ಚಿಸಿಕೊಳ್ಳದೆ ಇರಲಿ. ಸೆಲಾ.

8 Oh bless our God, ye peoples, And make the voice of his praise to be heard;ಓ ಜನರೇ, ನೀವು ದೇವರನ್ನು ಸ್ತುತಿಸಿರಿ; ಆತನ ಸ್ತೊತ್ರದ ಸ್ವರವು ಕೇಳಲ್ಪಡುವಂತೆ ಮಾಡಿರಿ.

9 Who holdeth our soul in life, And suffereth not our feet to be moved.ಆತನು ನಮ್ಮ ಪ್ರಾಣವನ್ನು ಜೀವದಲ್ಲಿಟ್ಟು ನಮ್ಮ ಪಾದಗಳನ್ನು ಕದಲುವಂತೆ ಬಿಡಲಿಲ್ಲ.

10 For thou, O God, hast proved us: Thou hast tried us, as silver is tried.ಓ ದೇವರೇ, ನೀನು ನಮ್ಮನ್ನು ಶೋಧಿಸಿದ್ದೀ. ಬೆಳ್ಳಿಯನ್ನು ಪುಟಕ್ಕೆ ಹಾಕುವ ಪ್ರಕಾರ ನಮ್ಮನ್ನು ಶೋಧಿಸಿದ್ದೀ.

11 Thou broughtest us into the net; Thou layedst a sore burden upon our loins.ನೀನು ಬಲೆಯೊಳಗೆ ನಮ್ಮನ್ನು ಬರಮಾಡಿದ್ದಲ್ಲದೆ ನಮ್ಮ ಸೊಂಟಗಳ ಮೇಲೆ ವ್ಯಥೆಯನ್ನು ಹೊರಿಸಿದ್ದೀ;

12 Thou didst cause men to ride over our heads; We went through fire and through water; But thou broughtest us out into a wealthy place.ಮನುಷ್ಯರು ನಮ್ಮ ತಲೆಗಳ ಮೇಲೆ ಸವಾರಿ ಮಾಡುವಂತೆ ಮಾಡಿದ್ದೀ. ನಾವು ಬೆಂಕಿಯಲ್ಲಿಯೂ ನೀರಿನಲ್ಲಿಯೂ ದಾಟಿದೆವು; ಆದರೆ ನೀನು ನಮ್ಮನ್ನು ಐಶ್ವರ್ಯದ ಸ್ಥಳಕ್ಕೆ ಬರಮಾಡಿದ್ದೀ;

13 I will come into thy house with burnt-offerings; I will pay thee my vows,ನಾನು ದಹನ ಬಲಿಗಳೊಂದಿಗೆ ನಿನ್ನ ಆಲಯಕ್ಕೆ ಹೋಗುವೆನು.

14 Which my lips uttered, And my mouth spake, when I was in distress.ನನ್ನ ಇಕ್ಕಟ್ಟಿನಲ್ಲಿ ತುಟಿಗಳು ಉಚ್ಚರಿಸಿದಂಥ, ಬಾಯಿ ನುಡಿದಂಥ, ಹರಕೆಗಳನ್ನು ನಾನು ನಿನಗೆ ಸಲ್ಲಿಸುವೆನು.

15 I will offer unto thee burnt-offerings of fatlings, With the incense of rams; I will offer bullocks with goats. Selahಕೊಬ್ಬಿದ ದಹನಬಲಿಗಳನ್ನು ಟಗರುಗಳ ಧೂಪದ ಸಂಗಡ ನಿನಗೆ ಅರ್ಪಿಸುವೆನು; ಹೋತಗಳ ಸಂಗಡ ಎತ್ತುಗಳನ್ನು ಅರ್ಪಿಸುವೆನು. ಸೆಲಾ.

16 Come, and hear, all ye that fear God, And I will declare what he hath done for my soul.ದೇವರಿಗೆ ಭಯಪಡುವವರೆಲ್ಲರೇ, ಬನ್ನಿರಿ, ಕೇಳಿರಿ; ಆತನು ನನ್ನ ಪ್ರಾಣಕ್ಕೆ ಮಾಡಿದ್ದನ್ನು ಪ್ರಕಟಿ ಸುವೆನು.

17 I cried unto him with my mouth, And he was extolled with my tongue.ನನ್ನ ಬಾಯಿಂದ ಆತನನ್ನು ಕೂಗಿದೆನು; ನನ್ನ ನಾಲಿಗೆಯಿಂದ ಆತನನ್ನು ಉನ್ನತಪಡಿಸಿದೆನು.

18 If I regard iniquity in my heart, The Lord will not hear:ನನ್ನ ಹೃದಯದಲ್ಲಿ ಅಪರಾಧವನ್ನು ನಾನು ಆಶಿಸಿದ್ದರೆ ಕರ್ತನು ನನ್ನ ಪ್ರಾರ್ಥನೆಯನ್ನು ಕೇಳುವದಿಲ್ಲ.

19 But verily God hath heard; He hath attended to the voice of my prayer.ಆದರೆ ನಿಜವಾಗಿ ನನ್ನ ಪ್ರಾರ್ಥನೆಯನ್ನು ದೇವರು ಕೇಳಿದ್ದಾನಲ್ಲಾ! ಆತನು ನನ್ನ ಪ್ರಾರ್ಥನೆಯ ಸ್ವರವನ್ನು ಆಲೈಸಿದ್ದಾನಲ್ಲಾ!

20 Blessed be God, Who hath not turned away my prayer, Nor his lovingkindness from me. Psalm 67 For the Chief Musician; on stringed instruments. A Psalm, a song.ನನ್ನ ಪ್ರಾರ್ಥನೆಯನ್ನೂ ನನ್ನ ಬಳಿಯಿಂದ ತನ್ನ ಕರುಣೆಯನ್ನೂ ತೊಲಗಿಸದೆ ಇರುವ ದೇವರಿಗೆ ಸ್ತೋತ್ರವಾಗಲಿ.

Kannada Bible