Bible

Psalm 63 - ASV (Kannada)

1 O God, thou art my God; earnestly will I seek thee: My soul thirsteth for thee, my flesh longeth for thee, In a dry and weary land, where no water is.ಓ ದೇವರೇ, ನೀನೇ ನನ್ನ ದೇವರು ಹೊತ್ತಾರೆ ನಿನ್ನನ್ನು ಹುಡುಕುತ್ತೇನೆ; ನೀರಿಲ್ಲದೆ ಒಣಗಿದ ಭೂಮಿಯಲ್ಲಿದ್ದವನು ನೀರಿ ಗಾಗಿಯೋ ಎಂಬಂತೆ ನನ್ನ ಆತ್ಮವು ನಿನಗಾಗಿ ಆತುರ ಗೊಳ್ಳುತ್ತದೆ; ಶರೀರವು ಕಂದಿಹೋಗುತ್ತದೆ.

2 So have I looked upon thee in the sanctuary, To see thy power and thy glory.ಹೀಗೆ ನಿನ್ನ ಬಲವನ್ನೂ ಘನವನ್ನೂ ನೋಡಿ ಪರಿಶುದ್ಧ ಸ್ಥಳ ದಲ್ಲಿ ನಾನು ನಿನ್ನನ್ನು ನೋಡಿದ್ದೇನೆ.

3 Because thy lovingkindness is better than life, My lips shall praise thee.ನಿನ್ನ ಪ್ರೀತಿ ಕರುಣೆಯು ಜೀವಕ್ಕಿಂತ ಶ್ರೇಷ್ಠ ವಾದದ್ದು; ನನ್ನ ತುಟಿಗಳು ನಿನ್ನನ್ನು ಹೊಗಳುವವು.

4 So will I bless thee while I live: I will lift up my hands in thy name.ನನ್ನ ಜೀವಮಾನದಲ್ಲೆಲ್ಲಾ ಹೀಗೆಯೇ ನಿನ್ನನ್ನು ಹಾಡಿಹರಸುತ್ತಾ ನಿನ್ನ ಹೆಸರೆತ್ತಿ ಕೈಮುಗಿಯುವೆನು.

5 My soul shall be satisfied as with marrow and fatness; And my mouth shall praise thee with joyful lips;ನಾನು ರಾತ್ರಿ ಜಾವಗಳಲ್ಲಿ ನಿನ್ನನ್ನು ಧ್ಯಾನಿಸುವಾಗ

6 When I remember thee upon my bed, `And' meditate on thee in the night-watches.ಸಾರದಿಂದಲೂ ಕೊಬ್ಬಿನಿಂದಲೂ ನನ್ನ ಪ್ರಾಣವು ತೃಪ್ತಿಯಾಗುವದು; ಆಗ ನನ್ನ ಬಾಯಿಯು ಉತ್ಸಾಹದ ತುಟಿಗಳಿಂದ ನಿನ್ನನ್ನು ಸ್ತುತಿಸುವದು.

7 For thou hast been my help, And in the shadow of thy wings will I rejoice.ನೀನು ನನ್ನ ಸಹಾಯಕನಾಗಿರುವದರಿಂದ ನಿನ್ನ ರೆಕ್ಕೆಗಳ ನೆರಳಿನಲ್ಲಿ ನಾನು ಉತ್ಸಾಹಪಡುವೆನು.

8 My soul followeth hard after thee: Thy right hand upholdeth me.ನನ್ನ ಪ್ರಾಣವು ನಿನ್ನನ್ನು ಹಿಂಬಾಲಿಸಿ ಬರುತ್ತದೆ; ನಿನ್ನ ಬಲಗೈ ನನ್ನನ್ನು ಗಟ್ಟಿ ಯಾಗಿ ಎತ್ತಿಹಿಡಿಯುತ್ತದೆ.

9 But those that seek my soul, to destroy it, Shall go into the lower parts of the earth.ಆದರೆ ನನ್ನ ಪ್ರಾಣವನ್ನು ನಾಶಮಾಡುವದಕ್ಕೆ ಹುಡುಕುವವರು ಭೂಮಿಯ ಕೆಳಭಾಗಗಳಿಗೆ ಹೋಗು ವರು.

10 They shall be given over to the power of the sword: They shall be a portion for foxes.ಕತ್ತಿಯಿಂದ ಅವರು ಬೀಳುವರು; ನರಿಗಳ ಪಾಲಾಗುವರು.

11 But the king shall rejoice in God: Every one that sweareth by him shall glory; For the mouth of them that speak lies shall be stopped. Psalm 64 For the Chief Musician. A Psalm of David.ಆದರೆ ಅರಸನು ದೇವರಲ್ಲಿ ಸಂತೋಷಿಸುವನು; ಆತನ ಮೇಲೆ ಆಣೆ ಇಡುವ ವರೆಲ್ಲರು ಹೆಚ್ಚಳಪಡುವರು; ಆದರೆ ಸುಳ್ಳಾಡುವವರ ಬಾಯಿ ಮುಚ್ಚಲ್ಪಡುವದು.

Kannada Bible