Bible

Psalm 61 - DBY (Kannada)

1 {To the chief Musician. On a stringed instrument. [A Psalm] of David.} Hear, O God, my cry; attend unto my prayer.1 ಓ ದೇವರೇ, ನನ್ನ ಕೂಗನ್ನು ಕೇಳು; ನನ್ನ ಪ್ರಾರ್ಥನೆಯನ್ನು ಆಲೈಸು.

2 From the end of the earth will I call unto thee, when my eart is overwhelmed: thou wilt lead me on to a rock which is too high for me.ನನ್ನ ಹೃದಯವು ಕುಂದಿಹೋಗಿರಲಾಗಿ, ಭೂಮಿಯ ಕಡೇ ಭಾಗದಿಂದ ನಿನ್ನನ್ನು ಕೂಗುವೆನು; ನನಗಿಂತ ಎತ್ತರ ವಾದ ಬಂಡೆಗೆ ನನ್ನನ್ನು ನಡಿಸು.

3 For thou hast been a refuge for me, a strong tower from before the enemy.ನೀನು ನನಗೆ ಆಶ್ರಯವೂ ಶತ್ರುವಿನಿಂದ ತಪ್ಪಿಸುವ ಬಲವಾದ ಬುರುಜೂ ಆಗಿದ್ದೀ;

4 I will sojourn in thy tent for ever; I will take refuge in the covert of thy wings. Selah.ನಿನ್ನ ಗುಡಾರದಲ್ಲಿ ನಾನು ಎಂದೆಂದಿಗೂ ವಾಸಿಸುವೆನು; ನಿನ್ನ ರೆಕ್ಕೆಗಳ ಮರೆಯಲ್ಲಿ ಭರವಸವುಳ್ಳವನಾಗಿರುವೆನು. ಸೆಲಾ.

5 For thou, O God, hast heard my vows; thou hast given [me] the inheritance of those that fear thy name.ಓ ದೇವರೇ, ನೀನು ನನ್ನ ಹರಕೆಗಳನ್ನು ಕೇಳಿದ್ದೀ; ನಿನ್ನ ಹೆಸರಿಗೆ ಭಯಪಡುವವರಿಗೆ ಸ್ವಾಸ್ಥ್ಯವನ್ನು ಕೊಟ್ಟಂತೆ ನನಗೂ ಕೊಟ್ಟಿದ್ದೀ.

6 Thou wilt add days to the days of the king: his years shall be as many generations.ಅರಸನ ಆಯುಷ್ಯ ವನ್ನು ಹೆಚ್ಚಿಸುವಿ; ಅವನ ವರುಷಗಳು ಅನೇಕ ತಲ ತಲಾಂತರಗಳ ಹಾಗೆ ಇರುವವು.

7 He shall abide before God for ever: bestow loving-kindness and truth, that they may preserve him.ಅವನು ಎಂದಿಗೂ ದೇವರ ಮುಂದೆ ವಾಸಿಸುವನು; ಅವನನ್ನು ಕಾಯು ವದಕ್ಕೆ ಕರುಣೆಯನ್ನೂ ಸತ್ಯವನ್ನೂ ಸಿದ್ಧಮಾಡು.

8 So will I sing forth thy name for ever, performing my vows from day to day.ಹಾಗಾದರೆ ನನ್ನ ಹರಕೆಗಳನ್ನು ದಿನ ದಿನಕ್ಕೆ ಸಲ್ಲಿ ಸುವ ಹಾಗೆ ನಿನ್ನ ಹೆಸರನ್ನು ಎಂದೆಂದಿಗೂ ನಾನು ಕೀರ್ತಿಸುವೆನು.

Kannada Bible