Bible

Psalm 48 - DBY (Kannada)

1 {A Song; a Psalm. Of the sons of Korah.} Great is Jehovah, and greatly to be praised in the city of our God, in the hill of his holiness.ನಮ್ಮ ದೇವರ ಪಟ್ಟಣದಲ್ಲಿ ಆತನ ಪರಿಶುದ್ಧ ಪರ್ವತದಲ್ಲಿ ಕರ್ತನು ದೊಡ್ಡ ವನೂ ಬಹಳವಾಗಿ ಸ್ತುತಿಸಲ್ಪಡುವಾತನೂ ಆಗಿದ್ದಾನೆ.

2 Beautiful in elevation, the joy of the whole earth, is mount Zion, [on] the sides of the north, the city of the great King.ಉತ್ತರದ ಪಾರ್ಶ್ವಗಳಲ್ಲಿ ದೊಡ್ಡ ಅರಸನ ಪಟ್ಟಣವಾದ ಚೀಯೋನ್‌ ಪರ್ವತವು ರಮಣೀಯವಾ ದದ್ದೂ ಎಲ್ಲಾ ಭೂಮಿಗೆ ಸಂತೋಷಕರವಾದದ್ದೂ ಆಗಿದೆ.

3 God is known in her palaces as a high fortress.ದೇವರು ಅದರ ಅರಮನೆಗಳಲ್ಲಿ ಆಶ್ರಯ ವೆಂದು ಗೊತ್ತಾಗಿದೆ.

4 For behold, the kings assembled themselves, they passed by together;ಇಗೋ, ಅರಸರುಗಳು ಕೂಡಿಕೊಂಡು ಒಟ್ಟಾಗಿ ಹಾದುಹೋದರು;

5 They saw, -- so they marvelled; they were troubled, they fled in consternation:ಅವರು ಅದನ್ನು ನೋಡಿ ಆಶ್ಚ ರ್ಯಪಟ್ಟರು; ಅವರು ಕಳವಳಪಟ್ಟು ಓಡಿ ಹೋದರು.

6 Trembling took hold upon them there; anguish, as of a woman in travail.ಭೀತಿಯೂ ಹೆರುವವಳ ಹಾಗೆ ನೋವೂ ಅಲ್ಲಿ ಅವರನ್ನು ಹಿಡಿಯಿತು.

7 With an east wind thou hast broken the ships of Tarshish.ಮೂಡಣ ಗಾಳಿಯಿಂದ ತಾರ್ಷಿಷ್‌ ಹಡಗುಗಳನ್ನು ನೀನು ಒಡೆಯುತ್ತೀ.

8 As we have heard, so have we seen, in the city of Jehovah of hosts, in the city of our God: God doth establish it for ever. Selah.ನಾವು ಹೇಗೆ ಕೇಳಿದೆವೋ ಹಾಗೆಯೇ ಸೈನ್ಯಗಳ ಕರ್ತನ ಪಟ್ಟಣದಲ್ಲಿ, ಅಂದರೆ ನಮ್ಮ ದೇವರ ಪಟ್ಟಣದಲ್ಲಿಯೇ ನೋಡಿದೆವು; ದೇವರು ಅದನ್ನು ಎಂದೆಂದಿಗೂ ಸ್ಥಿರಪಡಿಸುವನು. ಸೆಲಾ.

9 We have thought, O God, of thy loving-kindness, in the midst of thy temple.ಓ ದೇವರೇ, ನಿನ್ನ ಪ್ರೀತಿ ಕರುಣೆಯನ್ನು ನಿನ್ನ ಮಂದಿರದ ಮಧ್ಯದಲ್ಲಿ ನಾವು ಸ್ಮರಿಸಿದ್ದೇವೆ.

10 According to thy name, O God, so is thy praise unto the ends of the earth: thy right hand is full of righteousness.ಓ ದೇವರೇ, ನಿನ್ನ ಹೆಸರಿಗೆ ತಕ್ಕಂತಯೇ ನಿನ್ನ ಸ್ತೋತ್ರವು ಭೂಮಿಯ ಅಂತ್ಯಗಳ ವರೆಗೂ ಅದೆ. ನಿನ್ನ ಬಲಗೈ ನೀತಿಯಿಂದ ತುಂಬಿ ಅದೆ.

11 Let mount Zion rejoice, let the daughters of Judah be glad, because of thy judgments.ನಿನ್ನ ನ್ಯಾಯತೀರ್ವಿಕೆಗಳ ನಿಮಿತ್ತ ಚೀಯೋನ್‌ ಪರ್ವತವು ಸಂತೋಷಪಡಲಿ; ಯೆಹೂದದ ಕುಮಾರ್ತೆಯರು ಉಲ್ಲಾಸಪಡಲಿ.

12 Walk about Zion, and go round about her: count the towers thereof;ಚೀಯೋನನ್ನು ಸುತ್ತಿ ಅವಳ ಸುತ್ತಲು ತಿರುಗಿ ಅದರ ಬುರುಜುಗಳನ್ನು ಲೆಕ್ಕಿಸಿರಿ.

13 Mark ye well her bulwarks, consider her palaces: that ye may tell it to the generation following.ಮುಂದಿನ ತಲಾಂತರಕ್ಕೆ ತಿಳಿಸುವದಕ್ಕೋಸ್ಕರ ಅದರ ಬುರುಜುಗಳ ಮೇಲೆ ಮನಸ್ಸಿಟ್ಟು ಆಕೆಯ ಅರಮನೆಗಳನ್ನು ಲಕ್ಷಿಸಿರಿ.

14 For this God is our God for ever and ever; he will be our guide until death.ಈ ದೇವರು ಯುಗಯುಗಾಂತರಗಳಿಗೂ ನಮ್ಮ ದೇವ ರಾಗಿದ್ದಾನೆ. ಆತನು ಮರಣದ ವರೆಗೂ ನಮ್ಮನ್ನು ನಡಿಸುವನು.

Kannada Bible