Bible

Psalm 48 - BBE (Kannada)

1 <A Song. A Psalm. Of the sons of Korah.> Great is the Lord and greatly to be praised, in the town of our God, in his holy mountain.ನಮ್ಮ ದೇವರ ಪಟ್ಟಣದಲ್ಲಿ ಆತನ ಪರಿಶುದ್ಧ ಪರ್ವತದಲ್ಲಿ ಕರ್ತನು ದೊಡ್ಡ ವನೂ ಬಹಳವಾಗಿ ಸ್ತುತಿಸಲ್ಪಡುವಾತನೂ ಆಗಿದ್ದಾನೆ.

2 Beautiful in its high position, the joy of all the earth, is the mountain of Zion, the mountain of God, the town of the great King.ಉತ್ತರದ ಪಾರ್ಶ್ವಗಳಲ್ಲಿ ದೊಡ್ಡ ಅರಸನ ಪಟ್ಟಣವಾದ ಚೀಯೋನ್‌ ಪರ್ವತವು ರಮಣೀಯವಾ ದದ್ದೂ ಎಲ್ಲಾ ಭೂಮಿಗೆ ಸಂತೋಷಕರವಾದದ್ದೂ ಆಗಿದೆ.

3 In its buildings God is seen to be a high tower.ದೇವರು ಅದರ ಅರಮನೆಗಳಲ್ಲಿ ಆಶ್ರಯ ವೆಂದು ಗೊತ್ತಾಗಿದೆ.

4 For see! the kings came together by agreement, they were joined together.ಇಗೋ, ಅರಸರುಗಳು ಕೂಡಿಕೊಂಡು ಒಟ್ಟಾಗಿ ಹಾದುಹೋದರು;

5 They saw it, and so were full of wonder; they were troubled, and went quickly away in fear.ಅವರು ಅದನ್ನು ನೋಡಿ ಆಶ್ಚ ರ್ಯಪಟ್ಟರು; ಅವರು ಕಳವಳಪಟ್ಟು ಓಡಿ ಹೋದರು.

6 Shaking came on them and pain, as on a woman in childbirth.ಭೀತಿಯೂ ಹೆರುವವಳ ಹಾಗೆ ನೋವೂ ಅಲ್ಲಿ ಅವರನ್ನು ಹಿಡಿಯಿತು.

7 By you the ships of Tarshish are broken as by an east wind.ಮೂಡಣ ಗಾಳಿಯಿಂದ ತಾರ್ಷಿಷ್‌ ಹಡಗುಗಳನ್ನು ನೀನು ಒಡೆಯುತ್ತೀ.

8 As it came to our ears so have we seen it, in the town of the Lord of armies, in the town of our God; God will keep it fixed for ever. (Selah.)ನಾವು ಹೇಗೆ ಕೇಳಿದೆವೋ ಹಾಗೆಯೇ ಸೈನ್ಯಗಳ ಕರ್ತನ ಪಟ್ಟಣದಲ್ಲಿ, ಅಂದರೆ ನಮ್ಮ ದೇವರ ಪಟ್ಟಣದಲ್ಲಿಯೇ ನೋಡಿದೆವು; ದೇವರು ಅದನ್ನು ಎಂದೆಂದಿಗೂ ಸ್ಥಿರಪಡಿಸುವನು. ಸೆಲಾ.

9 Our thoughts were of your mercy, O God, while we were in your Temple.ಓ ದೇವರೇ, ನಿನ್ನ ಪ್ರೀತಿ ಕರುಣೆಯನ್ನು ನಿನ್ನ ಮಂದಿರದ ಮಧ್ಯದಲ್ಲಿ ನಾವು ಸ್ಮರಿಸಿದ್ದೇವೆ.

10 As your name is, O God, so is your praise to the ends of the earth; your right hand is full of righteousness.ಓ ದೇವರೇ, ನಿನ್ನ ಹೆಸರಿಗೆ ತಕ್ಕಂತಯೇ ನಿನ್ನ ಸ್ತೋತ್ರವು ಭೂಮಿಯ ಅಂತ್ಯಗಳ ವರೆಗೂ ಅದೆ. ನಿನ್ನ ಬಲಗೈ ನೀತಿಯಿಂದ ತುಂಬಿ ಅದೆ.

11 Let there be joy in the mountain of Zion, and let the daughters of Judah be glad, because of your wise decisions.ನಿನ್ನ ನ್ಯಾಯತೀರ್ವಿಕೆಗಳ ನಿಮಿತ್ತ ಚೀಯೋನ್‌ ಪರ್ವತವು ಸಂತೋಷಪಡಲಿ; ಯೆಹೂದದ ಕುಮಾರ್ತೆಯರು ಉಲ್ಲಾಸಪಡಲಿ.

12 Make your way about Zion, and go round it, numbering its towers.ಚೀಯೋನನ್ನು ಸುತ್ತಿ ಅವಳ ಸುತ್ತಲು ತಿರುಗಿ ಅದರ ಬುರುಜುಗಳನ್ನು ಲೆಕ್ಕಿಸಿರಿ.

13 Take note of its strong walls, looking well at its fair buildings; so that you may give word of it to the generation which comes after.ಮುಂದಿನ ತಲಾಂತರಕ್ಕೆ ತಿಳಿಸುವದಕ್ಕೋಸ್ಕರ ಅದರ ಬುರುಜುಗಳ ಮೇಲೆ ಮನಸ್ಸಿಟ್ಟು ಆಕೆಯ ಅರಮನೆಗಳನ್ನು ಲಕ್ಷಿಸಿರಿ.

14 Because this God is our God for ever and ever: he will be our guide.ಈ ದೇವರು ಯುಗಯುಗಾಂತರಗಳಿಗೂ ನಮ್ಮ ದೇವ ರಾಗಿದ್ದಾನೆ. ಆತನು ಮರಣದ ವರೆಗೂ ನಮ್ಮನ್ನು ನಡಿಸುವನು.

Kannada Bible