Psalm 41 - BBE (Kannada)
1 <To the chief music-maker. A Psalm. Of David.> Happy is the man who gives thought to the poor; the Lord will be his saviour in the time of trouble.ಬಡವನನ್ನು ಪರಾಂಬರಿಸುವವನು ಧನ್ಯನು; ಕೇಡಿನ ಸಮಯದಲ್ಲಿ ಕರ್ತನು ಅವನನ್ನು ತಪ್ಪಿಸುವನು.
2 The Lord will keep him safe, and give him life; the Lord will let him be a blessing on the earth, and will not give him into the hand of his haters.ಕರ್ತನು ಅವನನ್ನು ಕಾಪಾಡಿ ಜೀವದಲ್ಲಿಡುವನು; ಅವನು ಭೂಮಿಯಲ್ಲಿ ಧನ್ಯನಾಗಿ ರುವನು; ನೀನು ಅವನ ಶತ್ರುಗಳ ಇಷ್ಟಕ್ಕೆ ಅವನನ್ನು ಒಪ್ಪಿಸದೆ ಇರುವಿ.
3 The Lord will be his support on his bed of pain: by you will all his grief be turned to strength.ಹಾಸಿಗೆಯ ಮೇಲೆ ಕ್ಷೀಣಿಸುವ ವನನ್ನು ಕರ್ತನು ಬಲಪಡಿಸುವನು. ನೀನು ಅವನ ರೋಗದಲ್ಲಿ ಹಾಸಿಗೆಯನ್ನು ಸರಿಮಾಡುವಿ.
4 I said, Lord, have mercy on me; make my soul well, because my faith is in you.ಕರ್ತನೇ, ನನಗೆ ಕರುಣೆ ತೋರಿಸಿ ನನ್ನ ಪ್ರಾಣವನ್ನು ಸ್ವಸ್ಥಮಾಡು; ನಿನಗೆ ವಿರೋಧವಾಗಿ ಪಾಪಮಾಡಿದೆ ನೆಂದು ನಾನು ಹೇಳಿದೆನು.
5 My haters say evil against me, When will he be dead, and his name come to an end?ಅವನು ಸತ್ತು ಅವನ ಹೆಸರು ನಾಶವಾಗುವದು ಯಾವಾಗ ಎಂದು ನನ್ನ ಶತ್ರುಗಳು ನನ್ನನ್ನು ಕುರಿತು ಕೇಡನ್ನು ಮಾತನಾಡುತ್ತಾರೆ.
6 If one comes to see me, deceit is in his heart; he keeps a store of evil, which he makes public in every place.ನನ್ನನ್ನು ನೋಡುವದಕ್ಕೆ ಅವನು ಬಂದರೆ ವ್ಯರ್ಥ ಮಾತು ಆಡುತ್ತಾನೆ; ಅವನ ಹೃದಯವು ಅವನಿಗೆ ಅಕ್ರಮವನ್ನು ಕೂಡಿಸುತ್ತದೆ; ಅವನು ಹೊರಗೆ ಹೋದಾಗ ಅದನ್ನು ಹೇಳುತ್ತಾನೆ.
7 All my haters are talking secretly together against me; they are designing my downfall.ನನ್ನನ್ನು ಹಗೆ ಮಾಡುವವರೆಲ್ಲರು ಕೂಡಿ ನನ್ನ ಮೇಲೆ ಪಿಸುಗುಟ್ಟು ತ್ತಾರೆ; ನನಗೆ ವಿರೋಧವಾಗಿ ಕೇಡನ್ನು ಕಲ್ಪಿಸುತ್ತಾರೆ;
8 They say, He has an evil disease, which will not let him go: and now that he is down he will not get up again.ಕೆಟ್ಟ ರೋಗವು ಅವನನ್ನು ಹಿಡಿದದೆ, ಈಗ ಅವನು ಮಲಗಿಕೊಂಡವನಾಗಿ ಎಂದಿಗೂ ಏಳನು ಎಂದು ಅವರು ಅನ್ನುತ್ತಾರೆ.
9 Even my dearest friend, in whom I had faith, who took bread with me, is turned against me.ಹೌದು, ನನ್ನ ರೊಟ್ಟಿಯನ್ನು ತಿಂದಂಥ, ನಾನು ಭರವಸವಿಟ್ಟಂಥ, ನನ್ನ ಆಪ್ತ ಸ್ನೇಹಿತನು ನನಗೆ ವಿರೋಧವಾಗಿ ತನ್ನ ಕಾಲನ್ನು ಅಡ್ಡಗೊಟ್ಟಿದ್ದಾನೆ.
10 But you, O Lord, have mercy on me, lifting me up, so that I may give them their punishment.ಆದರೆ ನೀನು, ಓ ಕರ್ತನೇ, ನನ್ನ ಮೇಲೆ ಕರುಣೆತೋರಿಸಿ ನನ್ನನ್ನು ಏಳಮಾಡು; ಆಗ ನಾನು ಅವರಿಗೆ ಪ್ರತೀಕಾರವನ್ನು ಮಾಡುವೆನು.
11 By this I see that you have pleasure in me, because my hater does not overcome me.ನನ್ನ ಶತ್ರು ನನ್ನ ಮೇಲೆ ಜಯಧ್ವನಿ ಮಾಡದೆ ಇರುವದ ರಿಂದಲೇ ನಿನ್ನ ಒಲುಮೆಯು ನನಗಿರುವ ದೆಂದು ನಾನು ಬಲ್ಲೆನು.
12 And as for me, you are my support in my righteousness, giving me a place before your face for ever.ನನ್ನನ್ನಾದರೋ ನನ್ನ ಯಥಾರ್ಥ ತ್ವದಲ್ಲಿ ನೀನು ಉದ್ಧರಿಸಿ ನಿನ್ನ ಸಮ್ಮುಖದಲ್ಲಿ ಎಂದೆಂದಿಗೂ ನನ್ನನ್ನು ನಿಲ್ಲಿಸಿದ್ದೀ.
13 May the Lord God of Israel be praised, through eternal days and for ever. So be it. So be it.ಇಸ್ರಾಯೇಲಿನ ದೇವರಾದ ಕರ್ತನಿಗೆ ಯುಗಯುಗಕ್ಕೂ ಕೊಂಡಾಟ ವಾಗಲಿ. ಆಮೆನ್. ಆಮೆನ್.
Kannada Bible