Bible

Psalm 26 - WEB (Kannada)

1 > Judge me, Yahweh, for I have walked in my integrity. I have trusted also in Yahweh without wavering.ಓ ಕರ್ತನೇ, ನನಗೆ ನ್ಯಾಯತೀರಿಸು; ಯಾಕಂದರೆ ನಾನು ನನ್ನ ಯಥಾರ್ಥತ್ವ ದಲ್ಲಿ ನಡೆದುಕೊಂಡಿದ್ದೇನೆ. ನಾನು ಕರ್ತನಲ್ಲಿ ಭರ ವಸವಿಟ್ಟಿದ್ದೇನೆ; ನಾನು ಕದಲುವದಿಲ್ಲ.

2 Examine me, Yahweh, and prove me. Try my heart and my mind.ಓ ಕರ್ತನೇ ನನ್ನನ್ನು ಶೋಧಿಸಿ ಪರೀಕ್ಷಿಸು; ನನ್ನ ಅಂತರಿಂದ್ರಿ ಯಗಳನ್ನೂ ಹೃದಯವನ್ನೂ ಶೋಧಿಸು.

3 For your loving kindness is before my eyes. I have walked in your truth.ನಿನ್ನ ಪ್ರೀತಿಯೂ ಕೃಪೆಯೂ ನನ್ನ ಕಣ್ಣುಗಳ ಮುಂದೆ ಅವೆ; ನಾನು ನಿನ್ನ ಸತ್ಯದಲ್ಲಿ ನಡೆದುಕೊಂಡಿದ್ದೇನೆ.

4 I have not sat with deceitful men, Neither will I go in with hypocrites.ನಿಷ್ಪ್ರಯೋಜಕರೊಂದಿಗೆ ನಾನು ಕೂತುಕೊಳ್ಳ ಲಿಲ್ಲ; ವಂಚಕರ ಸಂಗಡ ನಾನು ಹೋಗುವದಿಲ್ಲ.

5 I hate the assembly of evil-doers, And will not sit with the wicked.ದುರ್ಮಾರ್ಗಿಗಳ ಸಭೆಯನ್ನು ಹಗೆಮಾಡಿದ್ದೇನೆ; ದುಷ್ಟರ ಸಂಗಡ ಕೂತುಕೊಳ್ಳುವದಿಲ್ಲ.

6 I will wash my hands in innocence, So I will go about your altar, Yahweh;ಓ ಕರ್ತನೇ, ಸ್ತೋತ್ರದ ಶಬ್ದದಿಂದ ಪ್ರಕಟಿಸಿ ನಿನ್ನ ಅದ್ಭುತಗಳ ನ್ನೆಲ್ಲಾ ತಿಳಿಸುವ ಹಾಗೆ

7 That I may make the voice of thanksgiving to be heard, And tell of all your wondrous works.ನನ್ನ ಕೈಗಳನ್ನು ನಿರ್ಮಲ ತ್ವದಲ್ಲಿ ತೊಳೆದು, ನಿನ್ನ ಬಲಿಪೀಠವನ್ನು ಸುತ್ತುವೆನು.

8 Yahweh, I love the habitation of your house, The place where your glory dwells.ಕರ್ತನೇ, ನಿನ್ನ ವಾಸಸ್ಥಾನವನ್ನೂ ಗೌರವದ ನಿವಾಸವನ್ನೂ ನಾನು ಪ್ರೀತಿಸಿದ್ದೇನೆ.

9 Don't gather my soul with sinners, Nor my life with bloodthirsty men;ಪಾಪಾತ್ಮರ ಸಂಗಡ ನನ್ನ ಪ್ರಾಣವನ್ನೂ ರಕ್ತ ಸುರಿಸುವವರ ಸಂಗಡ ನನ್ನ ಜೀವವನ್ನೂ ತೆಗೆಯಬೇಡ.

10 In whose hands is wickedness, Their right hand is full of bribes.ಅವರ ಕೈಗಳಲ್ಲಿ ಕೇಡು ಅದೆ; ಅವರ ಬಲಗೈ ಲಂಚಗಳಿಂದ ತುಂಬಿದೆ.

11 But as for me, I will walk in my integrity. Redeem me, and be merciful to me.ನಾನಾದರೋ ನನ್ನ ಯಥಾರ್ಥತ್ವದಲ್ಲಿ ನಡೆಯು ತ್ತೇನೆ: ನನ್ನನ್ನು ವಿಮೋಚಿಸು; ನನಗೆ ಕರುಣೆಯುಳ್ಳ ವನಾಗಿರು.

12 My foot stands in an even place. In the congregations I will bless Yahweh.ನನ್ನ ಪಾದವು ಸಮಸ್ಥಳದಲ್ಲಿ ನಿಲ್ಲುತ್ತದೆ; ಸಭೆಗಳಲ್ಲಿ ನಾನು ಕರ್ತನನ್ನು ಸ್ತುತಿಸುವೆನು.

Kannada Bible