Bible

Psalm 25 - BBE (Kannada)

1 <Of David.> To you, O Lord, my soul is lifted up.ಓ ಕರ್ತನೇ, ನಿನ್ನ ಕಡೆಗೆ ನನ್ನ ಪ್ರಾಣವನ್ನು ಎತ್ತುತ್ತೇನೆ.

2 O my God, I have put my faith in you, let me not be shamed; let not my haters be glorying over me.ಓ ನನ್ನ ದೇವರೇ, ನಾನು ನಿನ್ನಲ್ಲಿ ಭರವಸೆ ಇಡುತ್ತೇನೆ; ನಾನು ಆಶಾಭಂಗ ಪಡದಂತೆಮಾಡು; ನನ್ನ ಶತ್ರುಗಳು ನನ್ನ ಮೇಲೆ ಜಯೋತ್ಸಾಹ ಮಾಡದಿರಲಿ.

3 Let no servant of yours be put to shame; may those be shamed who are false without cause.ನಿನ್ನನ್ನು ನಿರೀಕ್ಷಿಸು ವವರಲ್ಲಿ ಯಾರೂ ಆಶಾಭಂಗಪಡದಿರಲಿ; ನಿಷ್ಕಾರಣ ವಾಗಿ ದ್ರೋಹ ಮಾಡುವವರು ನಾಚಿಕೆಗೊಳ್ಳಲಿ.

4 Make your steps clear to me, O Lord; give me knowledge of your ways.ಓ ಕರ್ತನೇ, ನಿನ್ನ ಮಾರ್ಗಗಳನ್ನು ನನಗೆ ತೋರಿ ಸು; ನಿನ್ನ ದಾರಿಗಳನ್ನು ನನಗೆ ಕಲಿಸು.

5 Be my guide and teacher in the true way; for you are the God of my salvation; I am waiting for your word all the day.ನಿನ್ನ ಸತ್ಯದಲ್ಲಿ ನನ್ನನ್ನು ನಡಿಸಿ ನನಗೆ ಕಲಿಸು; ನೀನು ನನ್ನ ರಕ್ಷಣೆಯ ದೇವರಾಗಿದ್ದೀ; ನಾನು ದಿನವೆಲ್ಲಾ ನಿನ್ನನ್ನು ನಿರೀಕ್ಷಿಸು ತ್ತೇನೆ.

6 O Lord, keep in mind your pity and your mercies; for they have been from the earliest times.ಓ ಕರ್ತನೇ, ನಿನ್ನ ಅಂತಃಕರಣಗಳನ್ನೂ ನಿನ್ನ ಪ್ರೀತಿಯ ದಯೆಯನ್ನೂ ಜ್ಞಾಪಕಮಾಡಿಕೋ; ಅವು ಆದಿಯಿಂದ ಇದ್ದವುಗಳು.

7 Do not keep in mind my sins when I was young, or my wrongdoing: let your memory of me be full of mercy, O Lord, because of your righteousness.ಓ ಕರ್ತನೇ, ನನ್ನ ಯೌವನದ ಪಾಪಗಳನ್ನೂ ದ್ರೋಹಗಳನ್ನೂ ಜ್ಞಾಪಕ ಮಾಡಿಕೊಳ್ಳದೆ ನಿನ್ನ ಕರುಣೆಯ ಪ್ರಕಾರ ನಿನ್ನ ಒಳ್ಳೇ ತನದ ನಿಮಿತ್ತ ನೀನು ನನ್ನನ್ನು ಜ್ಞಾಪಕ ಮಾಡಿಕೋ.

8 Good and upright is the Lord: so he will be the teacher of sinners in the way.ಕರ್ತನು ಒಳ್ಳೆಯವನೂ ನ್ಯಾಯವುಳ್ಳವನೂ ಆಗಿ ದ್ದಾನೆ; ಆದದರಿಂದ ಆತನು ಪಾಪದ ಮಾರ್ಗದಲ್ಲಿ ಇರುವವರಿಗೆ ಬೋಧಿಸುವನು.

9 He will be an upright guide to the poor in spirit: he will make his way clear to them.ದೀನರನ್ನು ನ್ಯಾಯ ದಲ್ಲಿ ನಡಿಸಿ ಅವರಿಗೆ ತನ್ನ ಮಾರ್ಗವನ್ನು ಕಲಿಸುವನು.

10 All the ways of the Lord are mercy and good faith for those who keep his agreement and his witness.ಆತನ ಒಡಂಬಡಿಕೆಯನ್ನೂ ಸಾಕ್ಷಿಗಳನ್ನೂ ಕೈಕೊಳ್ಳು ವವರಿಗೆ ಕರ್ತನ ದಾರಿಗಳೆಲ್ಲಾ ಕರುಣೆಯೂ ಸತ್ಯವೂ ಉಳ್ಳವು.

11 Because of your name, O Lord, let me have forgiveness for my sin, which is very great.ಓ ಕರ್ತನೇ, ನನ್ನ ಅಕ್ರಮವು ಬಹಳ ವಾಗಿದೆ. ನಿನ್ನ ಹೆಸರಿನ ನಿಮಿತ್ತ ಅದನ್ನು ಮನ್ನಿಸು;

12 If a man has the fear of the Lord, the Lord will be his teacher in the way of his pleasure.ಕರ್ತನಿಗೆ ಭಯಪಡುವ ಮನುಷ್ಯನು ಯಾರು? ಅವನು ಆದು ಕೊಳ್ಳುವ ಮಾರ್ಗದಲ್ಲಿ ಆತನು ಅವನಿಗೆ ಬೋಧಿಸುವನು.

13 His soul will be full of good things, and his seed will have the earth for its heritage.ಅವನ ಪ್ರಾಣವು ಸುಖದಲ್ಲಿ ಉಳುಕೊಳ್ಳುವದು; ಅವನ ಸಂತಾನವು ದೇಶವನ್ನು ಸ್ವಾಧೀನಮಾಡಿಕೊಳ್ಳುವದು.

14 The secret of the Lord is with those in whose hearts is the fear of him; he will make his agreement clear to them.ಕರ್ತನ ಗುಟ್ಟು ಆತ ನಿಗೆ ಭಯಪಡುವವರೊಂದಿಗೆ ಅದೆ; ತನ್ನ ಒಡಂಬಡಿಕೆ ಯನ್ನು ಆತನು ಅವರಿಗೆ ತಿಳಿಸುವನು.

15 My eyes are turned to the Lord at all times; for he will take my feet out of the net.ನನ್ನ ಕಣ್ಣುಗಳು ಯಾವಾಗಲೂ ಕರ್ತನ ಕಡೆಗೆ ಅವೆ; ಆತನೇ ನನ್ನ ಪಾದಗಳನ್ನು ಬಲೆಯಿಂದ ಹೊರಗೆ ಬರಮಾಡುವನು.

16 Be turned to me, and have mercy on me; for I am troubled and have no helper.ನೀನು ನನ್ನ ಕಡೆಗೆ ತಿರುಗಿ ನನ್ನ ಮೇಲೆ ಕರುಣೆಯಿಡು; ನಾನು ಒಂಟಿಗ ನಾಗಿಯೂ ಬಾಧೆಪಡುವವನಾಗಿಯೂ ಇದ್ದೇನೆ.

17 The troubles of my heart are increased: O take me out of my sorrows.ನನ್ನ ಮನೋವ್ಯಥೆಗಳು ಹೆಚ್ಚಾಗಿವೆ; ನೀನು ನನ್ನ ಸಂಕಟಗಳೊಳಗಿಂದ ನನ್ನನ್ನು ಹೊರಗೆ ಬರಮಾಡು.

18 Give thought to my grief and my pain; and take away all my sins.ನನ್ನ ಸಂಕಟವನ್ನೂ ನೋವನ್ನೂ ನೋಡು; ನನ್ನ ಪಾಪಗಳನ್ನೆಲ್ಲಾ ಕ್ಷಮಿಸು.

19 See how those who are against me are increased, for bitter is their hate of me.ನನ್ನ ಶತ್ರುಗಳನ್ನು ನೋಡು, ಅವರು ಹೆಚ್ಚಾಗಿದ್ದಾರೆ; ಕ್ರೂರವಾದ ಹಗೆ ಯಿಂದ ಅವರು ನನ್ನನ್ನು ಹಗೆಮಾಡುತ್ತಾರೆ.

20 O keep my soul, and take me out of danger: let me not be shamed, for I have put my faith in you.ಹಾ, ನನ್ನ ಪ್ರಾಣವನ್ನು ಕಾಪಾಡಿ ನನ್ನನ್ನು ಬಿಡಿಸು; ನಾನು ಆಶಾಭಂಗಪಡದಂತೆ ಮಾಡು; ನಾನು ನಿನ್ನಲ್ಲಿ ಭರವಸ ವಿಟ್ಟಿದ್ದೇನೆ.

21 For my clean and upright ways keep me safe, because my hope is in you.ಯಥಾರ್ಥತೆಯೂ ನಿರ್ಮಲತೆಯೂ ನನ್ನನ್ನು ಕಾಯಲಿ; ನಿನ್ನನ್ನು ನಿರೀಕ್ಷಿಸುತ್ತೇನೆ.

22 Give Israel salvation, O God, out of all his troubles.ಓ ದೇವರೇ, ಇಸ್ರಾಯೇಲ್ಯರನ್ನು ಅವರ ಎಲ್ಲಾ ಭಾದೆ ಗಳೊಳಗಿಂದ ವಿಮೋಚಿಸು.

Kannada Bible