Bible

Psalm 21 - WEB (Kannada)

1 > The king rejoices in your strength, Yahweh! How greatly he rejoices in your salvation!ಓ ಕರ್ತನೇ, ನಿನ್ನ ಬಲದಲ್ಲಿ ಅರಸನು ಸಂತೋಷಪಡುವನು; ನಿನ್ನ ರಕ್ಷಣೆಯಲ್ಲಿ ಎಷ್ಟೋ ಅಧಿಕವಾಗಿ ಉಲ್ಲಾಸಪಡುವನು.

2 You have given him his heart's desire, And have not withheld the request of his lips. Selah.ಅವನ ಹೃದಯದ ಆಶೆಯನ್ನು ನೀನು ಅವನಿಗೆ ಪೂರೈಸಿ ಅವನ ತುಟಿಗಳ ಬಿನ್ನಹವನ್ನು ತಡೆಯಲಿಲ್ಲ. ಸೆಲಾ.

3 For you meet him with the blessings of goodness; You set a crown of fine gold on his head.ಒಳ್ಳೇತನದ ಆಶೀರ್ವಾದಗಳೊಂದಿಗೆ ಅವನನ್ನು ಎದುರುಗೊಂಡು ಅಪರಂಜಿಯ ಕಿರೀಟವನ್ನು ಅವನ ತಲೆಗೆ ಇಡುತ್ತೀ.

4 He asked life of you, you gave it to him, Even length of days forever and ever.ಜೀವವನ್ನು ಅವನು ನಿನ್ನಿಂದ ಬೇಡಲು ನೀನು ಅವನಿಗೆ ಯುಗಯುಗಾಂತರಗಳಿಗೂ ದೀರ್ಘಾಯುಷ್ಯವನ್ನು ಕೊಟ್ಟೆ.

5 His glory is great in your salvation. You lay honor and majesty on him.ನ್ನ ರಕ್ಷಣೆಯಲ್ಲಿ ಅವನ ಹೆಚ್ಚಳವು ದೊಡ್ಡದಾಗಿದೆ, ಗೌರವವನ್ನೂ ಘನತೆಯನ್ನೂ ಅವನ ಮೇಲೆ ಇಡುತ್ತೀ.

6 For you make him most blessed forever. You make him glad with joy in your presence.ನೀನು ಎಂದೆಂದಿಗೂ ಅವನನ್ನು ಅಧಿಕವಾಗಿ ಆಶೀರ್ವಾದ ಮಾಡಿದ್ದೀ. ನಿನ್ನ ಮುಖದ ಮುಂದೆ ಅವನನ್ನು ಅಧಿಕ ವಾಗಿ ಸಂತೋಷಪಡುವಂತೆ ಮಾಡಿದ್ದೀ.

7 For the king trusts in Yahweh. Through the loving kindness of the Most High, he shall not be moved.ಅರಸನು ಕರ್ತನಲ್ಲಿ ಭರವಸವಿಡುತ್ತಾನೆ; ಮಹೋನ್ನತನ ಕೃಪೆ ಯಿಂದ ಅವನು ಕದಲದೆ ಇರುವನು.

8 Your hand will find out all of your enemies. Your right hand will find out those who hate you.ನಿನ್ನ ಶತ್ರು ಗಳೆಲ್ಲಾ ನಿನ್ನ ಕೈಗೆ ಸಿಕ್ಕುವರು; ನಿನ್ನ ಬಲಗೈಗೆ ನಿನ್ನನ್ನು ಹಗೆಮಾಡುವವರು ಸಿಕ್ಕುವರು.

9 You will make them as a fiery furnace in the time of your anger. Yahweh will swallow them up in his wrath. The fire shall devour them.ನೀನು ಕೋಪಿಸುವ ಕಾಲದಲ್ಲಿ ಅವರನ್ನು ಬೆಂಕಿಯ ಒಲೆಯ ಹಾಗೆ ಮಾಡುವಿ; ಕರ್ತನು ತನ್ನ ಕೋಪದಿಂದ ಅವರನ್ನು ನುಂಗಿಬಿಡುವನು; ಬೆಂಕಿಯು ಅವರನ್ನು ದಹಿಸಿ ಬಿಡು ವದು.

10 You will destroy their descendants from the earth, Their posterity from among the children of men.ನೀನು ಅವರ ಫಲವನ್ನು ಭೂಮಿಯೊಳ ಗಿಂದಲೂ ಅವರ ಸಂತತಿಯನ್ನು ಮನುಷ್ಯನ ಮಕ್ಕ ಳೊಳಗಿಂದಲೂ ನಾಶಮಾಡುವಿ.

11 For they intended evil against you. They plotted evil against you which cannot succeed.ಅವರು ನಿನಗೆ ವಿರೋಧವಾಗಿ ಕೇಡನ್ನು ಯತ್ನಿಸಿದರು; ಪೂರೈಸಲಾ ರದ ಯುಕ್ತಿಯನ್ನು ಕಲ್ಪಿಸಿದರು.

12 For you will make them turn their back, When you aim drawn bows at their face.ನೀನು ಅವರನ್ನು ಬೆನ್ನು ತಿರಿಗಿಸುವಂತೆ ಮಾಡುವಿ: ಅವರ ಮುಖಕ್ಕೆ ಎದುರಾಗಿ ನಿನ್ನ ಬಿಲ್ಲನೂ ಹಗ್ಗಗಳಲ್ಲಿ ಹೂಡುವಿ.

13 Be exalted, Yahweh, in your strength, So we will sing and praise your power.ಕರ್ತನೇ, ನಿನ್ನ ಸ್ವಂತ ಬಲದಿಂದ ನೀನು ಘನ ಹೊಂದಿದವನಾಗು; ಹೀಗೆ ನಾವು ನಿನ್ನ ಪರಾಕ್ರಮ ವನ್ನು ಹಾಡಿ ಕೀರ್ತಿಸುವೆವು.

Kannada Bible