Bible

Psalm 21 - DBY (Kannada)

1 {To the chief Musician. A Psalm of David.} The king shall joy in thy strength, Jehovah; and in thy salvation how greatly shall he rejoice.ಓ ಕರ್ತನೇ, ನಿನ್ನ ಬಲದಲ್ಲಿ ಅರಸನು ಸಂತೋಷಪಡುವನು; ನಿನ್ನ ರಕ್ಷಣೆಯಲ್ಲಿ ಎಷ್ಟೋ ಅಧಿಕವಾಗಿ ಉಲ್ಲಾಸಪಡುವನು.

2 Thou hast given him his heart's desire, and hast not withholden the request of his lips. Selah.ಅವನ ಹೃದಯದ ಆಶೆಯನ್ನು ನೀನು ಅವನಿಗೆ ಪೂರೈಸಿ ಅವನ ತುಟಿಗಳ ಬಿನ್ನಹವನ್ನು ತಡೆಯಲಿಲ್ಲ. ಸೆಲಾ.

3 For thou hast met him with the blessings of goodness; thou hast set a crown of pure gold on his head.ಒಳ್ಳೇತನದ ಆಶೀರ್ವಾದಗಳೊಂದಿಗೆ ಅವನನ್ನು ಎದುರುಗೊಂಡು ಅಪರಂಜಿಯ ಕಿರೀಟವನ್ನು ಅವನ ತಲೆಗೆ ಇಡುತ್ತೀ.

4 He asked life of thee; thou gavest [it] him, length of days for ever and ever.ಜೀವವನ್ನು ಅವನು ನಿನ್ನಿಂದ ಬೇಡಲು ನೀನು ಅವನಿಗೆ ಯುಗಯುಗಾಂತರಗಳಿಗೂ ದೀರ್ಘಾಯುಷ್ಯವನ್ನು ಕೊಟ್ಟೆ.

5 His glory is great through thy salvation; majesty and splendour hast thou laid upon him.ನ್ನ ರಕ್ಷಣೆಯಲ್ಲಿ ಅವನ ಹೆಚ್ಚಳವು ದೊಡ್ಡದಾಗಿದೆ, ಗೌರವವನ್ನೂ ಘನತೆಯನ್ನೂ ಅವನ ಮೇಲೆ ಇಡುತ್ತೀ.

6 For thou hast made him to be blessings for ever; thou hast filled him with joy by thy countenance.ನೀನು ಎಂದೆಂದಿಗೂ ಅವನನ್ನು ಅಧಿಕವಾಗಿ ಆಶೀರ್ವಾದ ಮಾಡಿದ್ದೀ. ನಿನ್ನ ಮುಖದ ಮುಂದೆ ಅವನನ್ನು ಅಧಿಕ ವಾಗಿ ಸಂತೋಷಪಡುವಂತೆ ಮಾಡಿದ್ದೀ.

7 For the king confideth in Jehovah: and through the loving-kindness of the Most High he shall not be moved.ಅರಸನು ಕರ್ತನಲ್ಲಿ ಭರವಸವಿಡುತ್ತಾನೆ; ಮಹೋನ್ನತನ ಕೃಪೆ ಯಿಂದ ಅವನು ಕದಲದೆ ಇರುವನು.

8 Thy hand shall find out all thine enemies; thy right hand shall find out those that hate thee.ನಿನ್ನ ಶತ್ರು ಗಳೆಲ್ಲಾ ನಿನ್ನ ಕೈಗೆ ಸಿಕ್ಕುವರು; ನಿನ್ನ ಬಲಗೈಗೆ ನಿನ್ನನ್ನು ಹಗೆಮಾಡುವವರು ಸಿಕ್ಕುವರು.

9 Thou shalt make them as a fiery furnace in the time of thy presence; Jehovah shall swallow them up in his anger, and the fire shall devour them:ನೀನು ಕೋಪಿಸುವ ಕಾಲದಲ್ಲಿ ಅವರನ್ನು ಬೆಂಕಿಯ ಒಲೆಯ ಹಾಗೆ ಮಾಡುವಿ; ಕರ್ತನು ತನ್ನ ಕೋಪದಿಂದ ಅವರನ್ನು ನುಂಗಿಬಿಡುವನು; ಬೆಂಕಿಯು ಅವರನ್ನು ದಹಿಸಿ ಬಿಡು ವದು.

10 Their fruit shalt thou destroy from the earth, and their seed from among the children of men.ನೀನು ಅವರ ಫಲವನ್ನು ಭೂಮಿಯೊಳ ಗಿಂದಲೂ ಅವರ ಸಂತತಿಯನ್ನು ಮನುಷ್ಯನ ಮಕ್ಕ ಳೊಳಗಿಂದಲೂ ನಾಶಮಾಡುವಿ.

11 For they intended evil against thee; they imagined a mischievous device, which they could not execute.ಅವರು ನಿನಗೆ ವಿರೋಧವಾಗಿ ಕೇಡನ್ನು ಯತ್ನಿಸಿದರು; ಪೂರೈಸಲಾ ರದ ಯುಕ್ತಿಯನ್ನು ಕಲ್ಪಿಸಿದರು.

12 For thou wilt make them turn their back; thou wilt make ready thy bowstring against their face.ನೀನು ಅವರನ್ನು ಬೆನ್ನು ತಿರಿಗಿಸುವಂತೆ ಮಾಡುವಿ: ಅವರ ಮುಖಕ್ಕೆ ಎದುರಾಗಿ ನಿನ್ನ ಬಿಲ್ಲನೂ ಹಗ್ಗಗಳಲ್ಲಿ ಹೂಡುವಿ.

13 Be thou exalted, Jehovah, in thine own strength: we will sing and celebrate thy power.ಕರ್ತನೇ, ನಿನ್ನ ಸ್ವಂತ ಬಲದಿಂದ ನೀನು ಘನ ಹೊಂದಿದವನಾಗು; ಹೀಗೆ ನಾವು ನಿನ್ನ ಪರಾಕ್ರಮ ವನ್ನು ಹಾಡಿ ಕೀರ್ತಿಸುವೆವು.

Kannada Bible