Bible

Psalm 149 - WEB (Kannada)

1 Praise Yahweh! Sing to Yahweh a new song, His praise in the assembly of the saints.1 ಕರ್ತನನ್ನು ಸ್ತುತಿಸಿರಿ. ಕರ್ತನಿಗೆ ಹೊಸ ಹಾಡನ್ನೂ ಪರಿಶುದ್ಧರ ಸಭೆ ಯಲ್ಲಿ ಆತನ ಸ್ತೋತ್ರವನ್ನೂ ಹಾಡಿರಿ.

2 Let Israel rejoice in him who made them. Let the children of Zion be joyful in their King.ಇಸ್ರಾಯೇಲು ತನ್ನನ್ನು ಉಂಟುಮಾಡಿದಾತನಲ್ಲಿ ಸಂತೋಷಿಸಲಿ; ಚೀಯೋನಿನ ಮಕ್ಕಳು ತಮ್ಮ ಅರಸನಲ್ಲಿ ಉಲ್ಲಾಸಿಸಲಿ.

3 Let them praise his name in the dance! Let them sing praises to him with tambourine and harp!ಆತನ ಹೆಸರನ್ನು ಕುಣಿಯುತ್ತಾ ಸ್ತುತಿಸಲಿ; ದಮ್ಮಡಿ ಯಿಂದಲೂ ಕಿನ್ನರಿಯಿಂದಲೂ ಆತನನ್ನು ಕೀರ್ತಿಸಲಿ.

4 For Yahweh takes pleasure in his people. He crowns the humble with salvation.ಕರ್ತನು ತನ್ನ ಜನರಲ್ಲಿ ಇಷ್ಟಪಡುತ್ತಾನೆ; ದೀನರನ್ನು ರಕ್ಷಣೆಯಿಂದ ಅಲಂಕರಿಸುತ್ತಾನೆ.

5 Let the saints rejoice in honor. Let them sing for joy on their beds.ಪರಿಶುದ್ಧರು ಘನತೆಯಿಂದ ಉತ್ಸಾಹಪಡಲಿ; ತಮ್ಮ ಹಾಸಿಗೆಗಳ ಮೇಲೆ ಉತ್ಸಾಹಧ್ವನಿಮಾಡಲಿ.

6 May the high praises of God be in their mouths, And a two-edged sword in their hand;ಉನ್ನತ ದೇವರ ಸ್ತೋತ್ರಗಳು ಅವರ ಬಾಯಿಯ ಲ್ಲಿಯೂ ಇಬ್ಬಾಯಿ ಕತ್ತಿಯು ಅವರ ಕೈಯಲ್ಲಿಯೂ ಇರಲಿ.

7 To execute vengeance on the nations, And punishments on the peoples;ಜನಾಂಗಗಳಲ್ಲಿ ಮುಯ್ಯಿಗೆಮುಯ್ಯನ್ನೂ ಪ್ರಜೆ ಗಳಲ್ಲಿ ಶಿಕ್ಷೆಗಳನ್ನೂ ಮಾಡಲಿ.

8 To bind their kings with chains, And their nobles with fetters of iron;ಅವರ ಅರಸುಗಳನ್ನು ಸಂಕೋಲೆಗಳಿಂದಲೂ ಅವರ ಘನವುಳ್ಳವರನ್ನು ಕಬ್ಬಿ ಣದ ಬೇಡಿಗಳಿಂದಲೂ ಬಂಧಿಸಲಿ;

9 To execute on them the written judgment. All his saints have this honor. Praise Yah!ಬರೆಯಲ್ಪಟ್ಟ ನ್ಯಾಯವಿಧಿಯನ್ನು ಅವರಿಗೆ ವಿಧಿಸಲಿ. ಆತನ ಪರಿಶುದ್ಧ ರೆಲ್ಲರಿಗೆ ಈ ಘನವಿರುತ್ತದೆ. ನೀವು ಕರ್ತನನ್ನು ಸ್ತುತಿಸಿರಿ.

Kannada Bible