Bible

Psalm 147 - WEB (Kannada)

1 Praise Yah, For it is good to sing praises to our God; For it is pleasant and fitting to praise him.1 ಕರ್ತನನ್ನು ಸ್ತುತಿಸಿರಿ; ನಮ್ಮ ದೇವರನ್ನು ಕೀರ್ತಿಸುವದು ಒಳ್ಳೇದು; ಸ್ತೋತ್ರವು ರಮ್ಯವೂ ಯೋಗ್ಯವೂ ಆಗಿದೆ.

2 Yahweh builds up Jerusalem. He gathers together the outcasts of Israel.ಕರ್ತನು ಯೆರೂಸಲೇಮನ್ನು ಕಟ್ಟುತ್ತಾನೆ; ಚದರಿಹೋದ ಇಸ್ರಾಯೇಲ್ಯರನ್ನು ಕೂಡಿಸುತ್ತಾನೆ.

3 He heals the broken in heart, And binds up their wounds.ಆತನು ಮುರಿದ ಹೃದಯದವರನ್ನು ಸ್ವಸ್ಥಮಾಡಿ ಅವರ ಗಾಯಗಳನ್ನು ಕಟ್ಟುತ್ತಾನೆ.

4 He counts the number of the stars. He calls them all by their names.ಆತನು ನಕ್ಷತ್ರಗಳ ಸಂಖ್ಯೆಯನ್ನು ಹೇಳು ತ್ತಾನೆ; ಅವೆಲ್ಲವುಗಳನ್ನು ಅವುಗಳ ಹೆಸರಿನಿಂದ ಕರೆ ಯುತ್ತಾನೆ.

5 Great is our Lord, and mighty in power. His understanding is infinite.ನಮ್ಮ ಕರ್ತನು ದೊಡ್ಡವನೂ, ಪರಾ ಕ್ರಮಿಯೂ, ವಿವೇಕಕ್ಕೆ ಎಣೆಯಿಲ್ಲ.

6 Yahweh upholds the humble. He brings the wicked down to the ground.ಕರ್ತನು ಸಾತ್ವಿಕರನ್ನು ಎತ್ತುತ್ತಾನೆ. ದುಷ್ಟರನ್ನು ನೆಲಕ್ಕೆ ಹಾಕುತ್ತಾನೆ.

7 Sing to Yahweh with thanksgiving. Sing praises on the harp to our God,ಕರ್ತನಿಗೆ ಸ್ತೋತ್ರದಿಂದ ಹಾಡಿರಿ; ನಮ್ಮ ದೇವ ರನ್ನು ಕಿನ್ನರಿಯಿಂದ ಕೀರ್ತಿಸಿರಿ.

8 Who covers the sky with clouds, Who prepares rain for the earth, Who makes grass grow on the mountains.ಆತನು ಆಕಾಶವನ್ನು ಮೋಡಗಳಿಂದ ಮುಚ್ಚುತ್ತಾನೆ; ಭೂಮಿಗೆ ಮಳೆ ಯನ್ನು ಸಿದ್ಧಮಾಡುತ್ತಾನೆ, ಬೆಟ್ಟಗಳಲ್ಲಿ ಹುಲ್ಲನ್ನು ಬೆಳೆಸುತ್ತಾನೆ.

9 He provides food for the cattle, And for the young ravens when they call.ಆತನು ಪಶುಗಳಿಗೂ ಕೂಗುವ ಕಾಗೆ ಮರಿಗಳಿಗೂ ಆಹಾರ ಕೊಡುತ್ತಾನೆ.

10 He doesn't delight in the strength of the horse. He takes no pleasure in the legs of a man.ಆತನು ಕುದು ರೆಯ ಶಕ್ತಿಯಲ್ಲಿ ಸಂತೋಷಿಸುವದಿಲ್ಲ; ಮನುಷ್ಯನ ತೊಡೆಯಬಲವನ್ನು ಮೆಚ್ಚುವದಿಲ್ಲ.

11 Yahweh takes pleasure in those who fear him, In those who hope in his loving kindness.ಕರ್ತನು ತನಗೆ ಭಯಪಡುವವರಲ್ಲಿಯೂ ತನ್ನ ಕರುಣೆಗೆ ಎದುರು ನೋಡುವವರಲ್ಲಿಯೂ ಇಷ್ಟಪಡುತ್ತಾನೆ.

12 Praise Yahweh, Jerusalem! Praise your God, Zion!ಓ ಯೆರೂ ಸಲೇಮೇ, ಕರ್ತನನ್ನು ಸ್ತುತಿಸು; ಓ ಚೀಯೋನೇ, ನಿನ್ನ ದೇವರನ್ನು ಸ್ತುತಿಸು.

13 For he has strengthened the bars of your gates. He has blessed your children within you.ನಿನ್ನ ಬಾಗಲುಗಳ ಅಗುಳಿ ಗಳನ್ನು ಬಲಮಾಡಿ ಆತನು ನಿನ್ನ ಮಕ್ಕಳನ್ನು ನಿನ್ನ ಮಧ್ಯದಲ್ಲಿ ಆಶೀರ್ವದಿಸುತ್ತಾನೆ.

14 He makes peace in your borders. He fills you with the finest of the wheat.ಆತನು ನಿನ್ನ ಮೇರೆಗಳನ್ನು ಸಮಾಧಾನಪಡಿಸುತ್ತಾನೆ. ಶ್ರೇಷ್ಠವಾದ ಗೋಧಿಯಿಂದ ನಿನ್ನನ್ನು ತೃಪ್ತಿಪಡಿಸುತ್ತಾನೆ.

15 He sends out his commandment to the earth. His word runs very swiftly.ಆತನು ತನ್ನ ಆಜ್ಞೆಯನ್ನು ಭೂಮಿಗೆ ಕಳುಹಿಸುತ್ತಾನೆ; ಅತಿ ತೀವ್ರವಾಗಿ ಆತನ ವಾಕ್ಯವು ಓಡುತ್ತದೆ;

16 He gives snow like wool, And scatters frost like ashes.ಆತನು ಹಿಮವನ್ನು ಉಣ್ಣೆಯ ಹಾಗೆ ಕೊಡುತ್ತಾನೆ; ಮಂಜನ್ನು ಬೂದಿಯ ಹಾಗೆ ಚದರಿಸುತ್ತಾನೆ.

17 He hurls down his hail like pebbles. Who can stand before his cold?ತನ್ನ ನೀರುಗಡ್ಡೆ ಯನ್ನು ತುಂಡುಗಳ ಹಾಗೆ ಹಾಕುತ್ತಾನೆ; ಆತನ ಚಳಿಯ ಮುಂದೆ ಯಾರು ನಿಲ್ಲುವರು?

18 He sends out his word, and melts them. He causes his wind to blow, and the waters flow.ಆತನು ತನ್ನ ವಾಕ್ಯವನ್ನು ಕಳುಹಿಸಿ ಅವುಗಳನ್ನು ಕರಗಿಸುತ್ತಾನೆ; ತನ್ನ ಗಾಳಿಯನ್ನು ಬೀಸಮಾಡುತ್ತಾನೆ; ನೀರು ಹರಿಯುತ್ತದೆ.

19 He shows his word to Jacob; His statutes and his ordinances to Israel.ಆತನು ಯಾಕೋಬರಿಗೆ ತನ್ನ ವಾಕ್ಯವನ್ನೂ ಇಸ್ರಾಯೇಲಿಗೆ ನಿಯಮಗಳನ್ನೂ ನ್ಯಾಯವಿಧಿಗಳನ್ನೂ ತಿಳಿಸುತ್ತಾನೆ.

20 He has not done this for just any nation. They don't know his ordinances. Praise Yah!ಯಾವ ಜನಾಂಗಕ್ಕಾದರೂ ಆತನು ಹೀಗೆ ಮಾಡ ಲಿಲ್ಲ; ನ್ಯಾಯವಿಧಿಗಳನ್ನು ಅವರು ತಿಳುಕೊಳ್ಳುವದಿಲ್ಲ. ನೀವು ಕರ್ತನನ್ನು ಸ್ತುತಿಸಿರಿ.

Kannada Bible