Psalm 130 - BBE (Kannada)
1 <A Song of the going up.> Out of the deep have I sent up my cry to you, O Lord.ಓ ಕರ್ತನೇ, ಆಗಾಧಗಳೊಳಗಿಂದ ನಿನಗೆ ಕೂಗುತ್ತೇನೆ.
2 Lord, let my voice come before you: let your ears be awake to the voice of my prayer.ಕರ್ತನೇ, ನನ್ನ ಸ್ವರವನ್ನು ಕೇಳು; ನಿನ್ನ ಕಿವಿಗಳು ನನ್ನ ವಿಜ್ಞಾಪನೆಗಳ ಮೊರೆಯನ್ನು ಆಲೈಸುತ್ತಾ ಇರಲಿ.
3 O Jah, if you took note of every sin, who would go free?ಕರ್ತನೇ, ನೀನು ಅಕ್ರಮಗಳ ಮೇಲೆ ಕಣ್ಣಿಟ್ಟರೆ ಓ ಕರ್ತನೇ, ಯಾರು ನಿಲ್ಲುವರು?
4 But there is forgiveness with you, so that you may be feared.ಆದರೆ ಜನರು ನಿನಗೆ ಭಯಪಡುವ ಹಾಗೆ ನಿನ್ನಲ್ಲಿ ಕ್ಷಮಾಪಣೆ ಉಂಟು.
5 I am waiting for the Lord, my soul is waiting for him, and my hope is in his word.ಕರ್ತನನ್ನು ನಿರೀಕ್ಷಿಸುತ್ತೇನೆ; ನನ್ನ ಪ್ರಾಣವು ನಿರೀಕ್ಷಿಸುತ್ತದೆ; ಆತನ ವಾಕ್ಯದಲ್ಲಿ ನಿರೀಕ್ಷಿಸುತ್ತೇನೆ.
6 My soul is watching for the Lord more than those who are watching for the morning; yes, more than the watchers for the morning.ಉದಯಕ್ಕಾಗಿ ಕಾದುಕೊಳ್ಳುವವ ರಿಗಿಂತ ಹೌದು, ಉದಯಕ್ಕಾಗಿ ಕಾದುಕೊಳ್ಳುವವರಿ ಗಿಂತ ನನ್ನ ಪ್ರಾಣವು ಕರ್ತನಿಗಾಗಿ ನಿರೀಕ್ಷಿಸುತ್ತದೆ.
7 O Israel, have hope in the Lord; for with the Lord is mercy and full salvation.ಇಸ್ರಾಯೇಲು ಕರ್ತನಲ್ಲಿ ನಿರೀಕ್ಷಿಸಲಿ; ಕರ್ತನ ಬಳಿಯಲ್ಲಿ ಕರುಣೆಯೂ ಆತನಲ್ಲಿ ವಿಮೋಚನೆಯೂ ಬಹಳವಾಗಿದೆ.
8 And he will make Israel free from all his sins.ಆತನು ಇಸ್ರಾಯೇಲನ್ನು ಅದರ ಎಲ್ಲಾ ಅಕ್ರಮಗಳಿಂದ ವಿಮೋಚಿಸುವನು.
Kannada Bible