Psalm 118 - WEB (Kannada)
1 Give thanks to Yahweh, for he is good, For his loving kindness endures forever.1 ಕರ್ತನಿಗೆ ಉಪಕಾರಸ್ತುತಿ ಮಾಡಿರಿ; ಆತನು ಒಳ್ಳೆಯವನು; ಆತನ ಕರು ಣೆಯು ಯುಗಯುಗಕ್ಕೂ ಇದೆ.
2 Let Israel now say That his loving kindness endures forever.ಆತನ ಕರುಣೆಯು ಯುಗಯುಗಕ್ಕೂ ಇದೆ ಎಂದು ಇಸ್ರಾಯೇಲ್ ಹೇಳಲಿ.
3 Let the house of Aaron now say That his loving kindness endures forever.ಆತನ ಕರುಣೆಯು ಯುಗಯುಗಕ್ಕೂ ಇದೆ ಎಂದು ಆರೋನನ ಮನೆಯವರು ಹೇಳಲಿ.
4 Now let those who fear Yahweh say That his loving kindness endures forever.ಆತನ ಕರುಣೆಯು ಯುಗಯುಗಕ್ಕೂ ಇದೆ ಎಂದು ಕರ್ತನಿಗೆ ಭಯಪಡುವವರು ಹೇಳಲಿ.
5 Out of my distress, I called on Yah. Yah answered me with freedom.ಇಕ್ಕಟ್ಟಿನೊಳಗಿಂದ ಕರ್ತನಿಗೆ ಕೂಗಿದೆನು; ಕರ್ತನು ಉತ್ತರ ಕೊಟ್ಟು ನನ್ನನ್ನು ವಿಶಾಲ ಸ್ಥಳದಲ್ಲಿ ನಿಲ್ಲಿಸಿ ದನು.
6 Yahweh is on my side. I will not be afraid. What can man do to me?ಕರ್ತನು ನನ್ನ ಪರವಾಗಿದ್ದಾನೆ; ನಾನು ಭಯಪಡೆನು; ಮನುಷ್ಯನು ನನಗೆ ಏನು ಮಾಡುವನು?
7 Yahweh is on my side among those who help me. Therefore I will look in triumph at those who hate me.ನನಗೆ ಸಹಾಯ ಮಾಡುವವರೊಂದಿಗೆ ಕರ್ತನು ನನ್ನ ಪಕ್ಷವನ್ನು ಹಿಡಿಯುತ್ತಾನೆ. ಆದದರಿಂದ ನಾನು ನನ್ನ ಹಗೆಯವರ ಮೇಲೆ ನನ್ನಾಶೆಯನ್ನು ತೀರಿಸು ವದನ್ನು ನಾನು ನೋಡುವೆನು.
8 It is better to take refuge in Yahweh, Than to put confidence in man.ಮನುಷ್ಯರಲ್ಲಿ ಭರ ವಸವಿಡುವದಕ್ಕಿಂತ ಕರ್ತನಲ್ಲಿ ನಂಬಿಕೆಯಿಡುವದು ಒಳ್ಳೇದು.
9 It is better to take refuge in Yahweh, Than to put confidence in princes.ಅಧಿಪತಿಗಳಲ್ಲಿ ಭರವಸವಿಡುವದಕ್ಕಿಂತ ಕರ್ತನನ್ನು ನಂಬಿಕೊಳ್ಳುವದು ಒಳ್ಳೇದು.
10 All the nations surrounded me, But in the name of Yahweh, I cut them off.ಎಲ್ಲಾ ಜನಾಂಗದವರು ನನ್ನನ್ನು ಸುತ್ತಿಕೊಂಡರು; ನಾನು ಕರ್ತನ ಹೆಸರಿನಲ್ಲಿ ಅವರನ್ನು ನಾಶಮಾಡು ವೆನು.
11 They surrounded me, yes, they surrounded me. In the name of Yahweh I indeed cut them off.ಅವರು ನನ್ನನ್ನು ಸುತ್ತಿಕೊಂಡರು; ಹೌದು, ನನ್ನನ್ನು ಸುತ್ತಿಕೊಂಡರು; ಕರ್ತನ ಹೆಸರಿನಲ್ಲಿ ಅವ ರನ್ನು ಸಂಹರಿಸುವೆನು.
12 They surrounded me like bees. They are quenched like the burning thorns. In the name of Yahweh I cut them off.ಜೇನ್ನೊಣಗಳ ಹಾಗೆ ನನ್ನನ್ನು ಸುತ್ತಿಕೊಂಡರೂ ಅವರು ಮುಳ್ಳುಗಳ ಬೆಂಕಿಯ ಹಾಗೆ ಆರಿಹೋಗುತ್ತಾರೆ, ಕರ್ತನ ಹೆಸರಿನಲ್ಲಿ ನಾನು ಅವ ರನ್ನು ಸಂಹರಿಸುವೆನು.
13 You pushed me back hard, to make me fall, But Yahweh helped me.ನಾನು ಬೀಳುವ ಹಾಗೆ ನೀನು ನನ್ನನ್ನು ಕಠಿಣವಾಗಿ ನೂಕಿದ್ದೀ; ಆದರೆ ಕರ್ತನು ನನಗೆ ಸಹಾಯ ಮಾಡಿ ದನು.
14 Yah is my strength and song. He has become my salvation.ನನ್ನ ಬಲವೂ ಕೀರ್ತನೆಯೂ ಕರ್ತನೇ; ಆತನೇ ನನಗೆ ರಕ್ಷಣೆಯಾದನು.
15 The voice of rejoicing and salvation is in the tents of the righteous. "The right hand of Yahweh does valiantly.ರಕ್ಷಣೆಯ ಉತ್ಸಾಹದ ಧ್ವನಿಯು ನೀತಿವಂತರ ಗುಡಾರಗಳಲ್ಲಿ ಅದೆ; ಕರ್ತನ ಬಲಗೈ ಪರಾಕ್ರಮವನ್ನು ನಡಿಸುತ್ತದೆ.
16 The right hand of Yahweh is exalted! The right hand of Yahweh does valiantly!"ಕರ್ತನ ಬಲಗೈ ಉನ್ನತವಾಗಿದೆ; ಕರ್ತನ ಬಲಗೈ ಪರಾಕ್ರಮವನ್ನು ನಡಿಸುತ್ತದೆ.
17 I will not die, but live, And declare Yah's works.ನಾನು ಸಾಯದೆ ಬದುಕಿ, ಕರ್ತನ ಕಾರ್ಯಗಳನ್ನು ಪ್ರಕಟಿಸುವೆನು.
18 Yah has punished me severely, But he has not given me over to death.ಕರ್ತನು ನನ್ನನ್ನು ಕಠಿಣವಾಗಿ ಶಿಕ್ಷಿಸಿದನು; ಮರಣಕ್ಕೆ ನನ್ನನ್ನು ಒಪ್ಪಿಸಲಿಲ್ಲ.
19 Open to me the gates of righteousness. I will enter into them. I will give thanks to Yah.ನೀತಿಯ ಬಾಗಲುಗಳನ್ನು ನನಗೆ ತೆರೆಯಿರಿ; ಅವುಗಳೊಳಗೆ ಪ್ರವೇಶಿಸಿ ಕರ್ತನನ್ನು ಕೊಂಡಾಡು ವೆನು.
20 This is the gate of Yahweh; The righteous will enter into it.ಇದೇ ಕರ್ತನ ಬಾಗಲು, ನೀತಿವಂತರು ಅದರಲ್ಲಿ ಪ್ರವೇಶಿಸುವರು.
21 I will give thanks to you, for you have answered me, And have become my salvation.ನಿನ್ನನ್ನು ಕೊಂಡಾಡು ವೆನು; ನನಗೆ ನೀನು ಉತ್ತರಕೊಟ್ಟು, ನನ್ನ ರಕ್ಷಣೆಯಾದಿ.
22 The stone which the builders rejected has become the head of the corner.ಮನೆ ಕಟ್ಟುವವರು ತಳ್ಳಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು.
23 This is Yahweh's doing. It is marvelous in our eyes.ಇದು ಕರ್ತನಿಂದುಂಟಾಗಿ ನಮ್ಮ ಕಣ್ಣುಗಳಿಗೆ ಆಶ್ಚರ್ಯವಾಗಿದೆ.
24 This is the day that Yahweh has made. We will rejoice and be glad in it!ಕರ್ತನು ಮಾಡಿದ ದಿನವು ಇದೇ; ಇದರಲ್ಲಿ ನಾವು ಉಲ್ಲಾಸಿಸಿ ಸಂತೋಷಪಡುವೆವು.
25 Save us now, we beg you, Yahweh; Yahweh, we beg you, now send prosperity.ಓ ಕರ್ತನೇ, ರಕ್ಷಿಸಬೇಕು ಎಂದು ನಾನು ನಿನ್ನನ್ನು ಬೇಡುತ್ತೇನೆ. ಓ ಕರ್ತನೇ, ಅಭಿವೃದ್ಧಿಯನ್ನು ಕೊಡು ಎಂದು ನಿನ್ನನ್ನು ಬೇಡುತ್ತೇನೆ.
26 Blessed is he who comes in the name of Yahweh! We have blessed you out of the house of Yahweh.ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದವಾಗಲಿ; ಕರ್ತನ ಆಲಯ ದೊಳಗಿಂದ ನಾವು ನಿಮ್ಮನ್ನು ಆಶೀರ್ವದಿಸಿದೆವು.
27 Yahweh is God, and he has given us light. Bind the sacrifice with cords, even to the horns of the altar.ದೇವರು ಕರ್ತನಾಗಿದ್ದಾನೆ. ಆತನು ನಮಗೆ ಬೆಳಕನ್ನು ತೋರಿಸಿದ್ದಾನೆ. ಬಲಿ (ಪಶುವನ್ನು) ಹಗ್ಗಗಳಿಂದ ಕಟ್ಟಿ ಬಲಿಪೀಠದ ಕೊಂಬುಗಳಿಗೆ ಕಟ್ಟಿರಿ,
28 You are my God, and I will give thanks to you. You are my God, I will exalt you.ನೀನು ನನ್ನ ದೇವರಾಗಿದ್ದೀ; ನಿನ್ನನ್ನು ಕೊಂಡಾಡುವೆನು; ನನ್ನ ದೇವರೇ, ನಿನ್ನನ್ನು ಘನಪಡಿಸುವೆನು.
29 Oh give thanks to Yahweh, for he is good, For his loving kindness endures forever.ಕರ್ತನನ್ನು ಕೊಂಡಾಡಿರಿ; ಆತನು ಒಳ್ಳೆಯವನು. ಆತನ ಕರು ಣೆಯು ಯುಗಯುಗಕ್ಕೂ ಅದೆ.
Kannada Bible