Philippians 4 - YLT (Kannada)
1 So then, my brethren, beloved and longed for, my joy and crown, so stand ye in the Lord, beloved.ಆದದರಿಂದ ಅತಿಪ್ರಿಯರೂ ಇಷ್ಟವಾದ ವರೂ ಆದ ನನ್ನ ಸಹೋದರರೇ, ನನ್ನ ಸಂತೋಷವೂ ಕಿರೀಟವೂ ಆಗಿರುವ ನನ್ನ ಅತಿ ಪ್ರಿಯರೇ, ಕರ್ತನಲ್ಲಿ ದೃಢವಾಗಿ ನಿಲ್ಲಿರಿ.
2 Euodia I exhort, and Syntyche I exhort, to be of the same mind in the Lord;ಕರ್ತನಲ್ಲಿ ಒಂದೇ ಮನಸ್ಸುಳ್ಳವರಾಗಿರಬೇಕೆಂದು ಯುವೊದ್ಯಳನ್ನೂ ಸಂತುಕೆಯನ್ನೂ ಬೇಡಿಕೊಳ್ಳುತ್ತೇನೆ.
3 and I ask also thee, genuine yoke-fellow, be assisting those women who in the good news did strive along with me, with Clement also, and the others, my fellow-workers, whose names `are' in the book of life.ನಿಜ ಜೊತೆಗಾರನೇ, ನೀನು ಆ ಸ್ತ್ರೀಯರಿಗೆ ಸಹಾಯಕ ನಾಗಿರಬೇಕೆಂದು ನಿನ್ನನ್ನೂ ಕೇಳಿಕೊಳ್ಳುತ್ತೇನೆ. ಅವರು ಕ್ಲೇಮೆನ್ಸ್ ಮುಂತಾದ ನನ್ನ ಜೊತೆಕೆಲಸದವರ ಸಹಿತವಾಗಿ ನನ್ನ ಕೂಡ ಸುವಾರ್ತೆಗೋಸ್ಕರ ಪ್ರಯಾಸ ಪಟ್ಟವರು. ಅವರ ಹೆಸರುಗಳು ಜೀವಗ್ರಂಥದಲ್ಲಿ ಬರೆದವೆ.
4 Rejoice in the Lord always; again I will say, rejoice;ಯಾವಾಗಲೂ ಕರ್ತನಲ್ಲಿ ಸಂತೋಷಿಸಿರಿ; ಸಂತೋಷಪಡಿರಿ ಎಂದು ನಾನು ತಿರಿಗಿ ಹೇಳುತ್ತೇನೆ.
5 let your forbearance be known to all men; the Lord `is' near;ನಿಮ್ಮ ಸೈರಣೆಯು ಎಲ್ಲಾ ಮನುಷ್ಯರಿಗೆ ಗೊತ್ತಾಗಲಿ; ಕರ್ತನು ಹತ್ತಿರವಾಗಿದ್ದಾನೆ.
6 for nothing be anxious, but in everything by prayer, and by supplication, with thanksgiving, let your requests be made known unto God;ಯಾವ ಸಂಬಂಧ ವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆ ವಿಜ್ಞಾಪನೆ ಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯ ಪಡಿಸಿರಿ.
7 and the peace of God, that is surpassing all understanding, shall guard your hearts and your thoughts in Christ Jesus.ಆಗ ಎಲ್ಲಾ ಗ್ರಹಿಕೆಯನ್ನೂ ವಿಾರುವ ದೇವರ ಶಾಂತಿಯು ನಿಮ್ಮ ಹೃದಯಗಳನ್ನೂ ಮನಸ್ಸು ಗಳನ್ನೂ ಕ್ರಿಸ್ತ ಯೇಸುವಿನ ಮೂಲಕ ಕಾಯುವದು.
8 As to the rest, brethren, as many things as are true, as many as `are' grave, as many as `are' righteous, as many as `are' pure, as many as `are' lovely, as many as `are' of good report, if any worthiness, and if any praise, these things think upon;ಕಡೇದಾಗಿ ಸಹೋದರರೇ, ಸತ್ಯವಾದವುಗಳು ಯಾವವೋ ಪ್ರಾಮಾಣಿಕವಾದವುಗಳು ಯಾವವೋ ನ್ಯಾಯವಾದವುಗಳು ಯಾವವೋ ಶುದ್ಧವಾದವುಗಳು ಯಾವವೋ ಪ್ರೀತಿಕರವಾದವುಗಳು ಯಾವವೋ ಮಾನ್ಯವಾದವುಗಳು ಯಾವವೋ ಅವುಗಳನ್ನು ಮತ್ತು ಸದ್ಗುಣವನ್ನೂ ಸ್ತುತ್ಯವಾದದ್ದನ್ನೂ ಯೊ
9 the things that also ye did learn, and receive, and hear, and saw in me, those do, and the God of the peace shall be with you.ನೀವು ಯಾವದನ್ನು ನನ್ನಿಂದ ಕಲಿತು ಹೊಂದಿದಿರೋ ಮತ್ತು ಯಾವದನ್ನು ನನ್ನಲ್ಲಿ ಕೇಳಿಕಂಡಿರೋ ಅದನ್ನೇ ಮಾಡುತ್ತಾ ಬನ್ನಿರಿ. ಆಗ ಶಾಂತಿದಾಯಕನಾದ ದೇವರು ನಿಮ್ಮೊಂದಿಗಿರುವನು.
10 And I rejoiced in the Lord greatly, that now at length ye flourished again in caring for me, for which also ye were caring, and lacked opportunity;ಈಗಲಾದರೋ ನನ್ನ ವಿಷಯವಾದ ನಿಮ್ಮ ಯೋಚನೆಯು ನಿಮ್ಮಲ್ಲಿ ಪುನಃ ಚಿಗುರಿದ್ದಕ್ಕೆ ನಾನು ಕರ್ತನಲ್ಲಿ ಬಹಳವಾಗಿ ಸಂತೋಷಪಟ್ಟೆನು. ಈ ವಿಷಯ ದಲ್ಲಿ ನೀವು ಯೋಚನೆಯುಳ್ಳವರಾಗಿದ್ದರೂ ನಿಮಗೆ ಸಂದರ್ಭ ಸಿಕ್ಕಲಿಲ್ಲವೇನೋ.
11 not that in respect of want I say `it', for I did learn in the things in which I am -- to be content;ಕೊರತೆಯಲ್ಲಿದ್ದೇ ನೆಂದು ನಾನು ಇದನ್ನು ಹೇಳುವದಿಲ್ಲ; ನಾನಂತೂ ಇದ್ದ ಸ್ಥಿತಿಯಲ್ಲಿಯೇ ಸಂತುಷ್ಟನಾಗಿರುವದನ್ನು ಕಲಿತು ಕೊಂಡಿದ್ದೇನೆ.
12 I have known both to be abased, and I have known to abound; in everything and in all things I have been initiated, both to be full and to be hungry, both to abound and to be in want.ನಾನು ಬಡವನಾಗಿರಲೂ ಬಲ್ಲೆನು, ಸಮೃದ್ಧಿಯುಳ್ಳವನಾಗಿರಲೂ ಬಲ್ಲೆನು, ನಾನು ತೃಪ್ತನಾಗಿ ದ್ದರೂ ಹಸಿದವನಾಗಿದ್ದರೂ ಸಮೃದ್ಧಿಯುಳ್ಳವನಾದರೂ ಕೊರತೆಯುಳ್ಳವನಾದರೂ ಯಾವ ತರದ ಸ್ಥಿತಿಯಲಿರುವವನಾದರೂ ಅವೆಲ್ಲವುಗಳನ್ನು ನಾನು ಕಲಿತು ಕೊಂಡಿದ್ದೇನೆ.
13 For all things I have strength, in Christ's strengthening me;ನನ್ನನ್ನು ಬಲಪಡಿಸುವ ಕ್ರಿಸ್ತನ ಮೂಲಕ ನಾನು ಎಲ್ಲವುಗಳನ್ನು ಮಾಡಬಲ್ಲೆನು.
14 but ye did well, having communicated with my tribulation;ಹೀಗಿದ್ದರೂ ನೀವು ನನ್ನ ಸಂಕಟದಲ್ಲಿ ಪಾಲುಗಾರ ರಾಗಿದ್ದದ್ದು ಒಳ್ಳೇದಾಯಿತು.
15 and ye have known, even ye Philippians, that in the beginning of the good news when I went forth from Macedonia, no assembly did communicate with me in regard to giving and receiving except ye only;ಇದಲ್ಲದೆ ಫಿಲಿಪ್ಪಿ ಯವರೇ, ಸುವಾರ್ತೆಯ ಪ್ರಾರಂಭದಲ್ಲಿ ನಾನು ಮಕೆದೋನ್ಯದಿಂದ ಹೊರಟಾಗ ಕೊಡುವದರ ಮತ್ತು ತೆಗೆದುಕೊಳ್ಳುವದರ ವಿಷಯದಲ್ಲಿ ನಿಮ್ಮ ಹೊರತು ಬೇರೆ ಸಭೆಯು ನನ್ನೊಂದಿಗೆ ಭಾಗವಹಿಸಲಿಲ್ಲವೆಂದು ನೀವು ಸಹ ಬಲ್ಲಿರಿ.
16 because also in Thessalonica, both once and again to my need ye sent;ನಾನು ಥೆಸಲೋನಿಕದಲ್ಲಿ ದ್ದಾಗಲೂ ನೀವು ಕೆಲವು ಸಾರಿ ನನ್ನ ಕೊರತೆಯನ್ನು ನೀಗಿಸುವದಕ್ಕೆ ಕೊಟ್ಟು ಕಳುಹಿಸಿದಿರಲ್ಲಾ.
17 not that I seek after the gift, but I seek after the fruit that is overflowing to your account;ನಾನು ನಿಮ್ಮಿಂದ ದಾನವನ್ನು ಅಪೇಕ್ಷಿಸುವೆನೆಂತಲ್ಲ ಆದರೆ ನಿಮ್ಮ ಲೆಕ್ಕಕ್ಕೆ ಸಮೃದ್ಧಿಯಾದ ಫಲವನ್ನೇ ಅಪೇಕ್ಷಿಸು ತ್ತೇನೆ. ಆದರೆ ಬೇಕಾದದ್ದೆಲ್ಲ ನನಗುಂಟು, ಸಮೃದ್ಧಿ ಯಾಯಿತು.
18 and I have all things, and abound; I am filled, having received from Epaphroditus the things from you -- an odour of a sweet smell -- a sacrifice acceptable, well-pleasing to God:ಎಪಫ್ರೊದೀತನ ಕೈಯಿಂದ ನೀವು ಕೊಟ್ಟು ಕಳುಹಿಸಿದ್ದು ನನಗೆ ತಲುಪಲಾಗಿ ನಾನು ತುಂಬಿತುಳುಕಿದವನಾಗಿದ್ದೇನೆ. ಅದು ದೇವರಿಗೆ ಮೆಚ್ಚಿಕೆ ಯಾದದ್ದು; ಸುಗಂಧವಾಸನೆಯೇ, ಇಷ್ಟಯಜ್ಞವೇ
19 and my God shall supply all your need, according to His riches in glory in Christ Jesus;ನನ್ನ ದೇವರು ಕ್ರಿಸ್ತ ಯೇಸುವಿನ ಮೂಲಕ ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕ ಹಾಗೆ ನಿಮ್ಮ ಪ್ರತಿ ಯೊಂದು ಕೊರತೆಯನ್ನು ನೀಗಿಸುವನು.
20 and to God, even our Father, `is' the glory -- to the ages of the ages. Amen.ನಮ್ಮ ತಂದೆಯೂ ದೇವರೂ ಆಗಿರುವಾತನಿಗೆ ಯುಗ ಯುಗಾಂತರಗಳಲ್ಲಿಯೂ ಮಹಿಮೆ ಇರಲಿ. ಆಮೆನ್.
21 Salute ye every saint in Christ Jesus; there salute you the brethren with me;ಕ್ರಿಸ್ತ ಯೇಸುವಿನಲ್ಲಿ ಪ್ರತಿಯೊಬ್ಬ ಪರಿಶುದ್ಧನಿಗೆ ವಂದನೆ. ನನ್ನ ಜೊತೆಯಲ್ಲಿರುವ ಸಹೋದರರು ನಿಮ್ಮನ್ನು ವಂದಿಸುತ್ತಾರೆ.
22 there salute you all the saints, and specially those of Caesar's house;ಪರಿಶುದ್ದರೆಲ್ಲರೂ ನಿಮ್ಮನ್ನು ವಂದಿಸುತ್ತಾರೆ. ಮುಖ್ಯವಾಗಿ ಕೈಸರನ ಮನೆಯವರು ನಿಮ್ಮನ್ನು ವಂದಿಸುತ್ತಾರೆ;
23 the grace of our Lord Jesus Christ `is' with you all. Amen.ಕರ್ತನಾದ ಯೇಸು ಕ್ರಿಸ್ತನ ಕೃಪೆಯು ನಿಮ್ಮೆಲ್ಲರೊಂದಿಗಿರಲಿ. ಆಮೆನ್.
Kannada Bible