Bible

Numbers 30 - DBY (Kannada)

1 And Moses spoke to the heads of the tribes of the children of Israel, saying, This is what Jehovah hath commanded.ಮೋಶೆಯು ಇಸ್ರಾಯೇಲ್‌ ಮಕ್ಕಳ ಗೋತ್ರಗಳ ಯಜಮಾನರ ಸಂಗಡ ಮಾತನಾಡಿ -- ಕರ್ತನು ಆಜ್ಞಾಪಿಸಿದ್ದೇನಂದರೆ,

2 If a man vow a vow to Jehovah, or swear an oath to bind his soul with a bond, he shall not break his word; according to all that hath gone out of his mouth shall he do.ಒಬ್ಬನು ಕರ್ತನಿಗೆ ಪ್ರಮಾಣವನ್ನು ಮಾಡಿದರೆ ಇಲ್ಲವೆ ಕಟ್ಟಳೆಯಿಂದ ತನ್ನ ಪ್ರಾಣವನ್ನು ಬಾಧಿಸುವ ಆಣೆ ಇಟ್ಟುಕೊಂಡರೆ ಅವನು ತನ್ನ ಮಾತನ್ನು ತಪ್ಪಿಸಬಾರದು, ಬಾಯಿಂದ ಹೊರಟ ಎಲ್ಲಾದರ ಪ್ರಕಾರ ಮಾಡಬೇಕು.

3 If a woman also vow a vow to Jehovah, and bind herself by a bond, in her father's house in her youth,ಸ್ತ್ರೀಯು ಕರ್ತನಿಗೆ ಪ್ರಮಾಣಮಾಡಿ ತನ್ನ ಕನ್ಯಾ ವಸ್ಥೆಯಲ್ಲಿ ತಂದೆಯ ಮನೆಯಲ್ಲಿ ಬಂಧಿಸಿಕೊಂಡರೆ

4 and her father hear her vow, and her bond wherewith she hath bound her soul, and her father shall be silent at her, then all her vows shall stand, and every bond wherewith she hath bound her soul shall stand.ಅವಳ ತಂದೆ ಅವಳ ಪ್ರಮಾಣವನ್ನೂ ಅವಳು ತನ್ನ ಪ್ರಾಣದ ಮೇಲೆ ಬಂಧಿಸಿಕೊಂಡದ್ದನ್ನೂ ಕೇಳಿ ಅದಕ್ಕೆ ಮೌನವಾಗಿರುವ ಪಕ್ಷದಲ್ಲಿ ಅವಳ ಪ್ರಮಾಣ ಗಳೆಲ್ಲವೂ ಅವಳು ತನ್ನ ಪ್ರಾಣದ ಮೇಲೆ ಮಾಡಿದ ಬಂಧನವೆಲ್ಲವೂ ನಿಲ್ಲುವವು.

5 But if her father prohibited her in the day that he heard, none of her vows, or of her bonds wherewith she hath bound her soul, shall stand; and Jehovah shall pardon her, because her father prohibited her.ಆದರೆ ಅವಳ ತಂದೆ ಕೇಳಿದ ದಿವಸದಲ್ಲಿ ಅವಳನ್ನು ತಡೆದರೆ ಅವಳ ಎಲ್ಲಾ ಪ್ರಮಾಣಗಳೂ ಅವಳು ತನ್ನ ಪ್ರಾಣದ ಮೇಲೆ ಇಟ್ಟುಕೊಂಡ ಎಲ್ಲಾ ಬಂಧನಗಳೂ ನಿಲ್ಲವು; ಅವಳ ತಂದೆ ಅವಳಿಗೆ ತಡೆದ ಕಾರಣ ಕರ್ತನು ಅವಳನ್ನು ಕ್ಷಮಿಸುವನು.

6 And if she have a husband, when she hath her vow upon her or ought that hath passed her lips wherewith she hath bound her soul,ಆದರೆ ಅವಳಿಗೆ ಗಂಡನಿರುವ ವೇಳೆಯಲ್ಲಿ ಅವಳ ಮೇಲೆ ಪ್ರಮಾಣಗಳು ಇಲ್ಲವೆ ಪ್ರಾಣವನ್ನು ಬಂಧಿ ಸುವ ಬಾಯಿಂದ ಬಂದ ಮಾತು ಇದ್ದರೆ

7 and her husband hear it and be silent at her in the day that he heareth it, then her vows shall stand, and her bonds wherewith she bound her soul shall stand.ಅವಳ ಗಂಡನು ಅದನ್ನು ಕೇಳಿ, ಕೇಳಿದ ದಿವಸದಲ್ಲಿ ಅವಳಿಗೆ ಸುಮ್ಮನಿದ್ದ ಪಕ್ಷದಲ್ಲಿ ಅವಳ ಪ್ರಮಾಣಗಳೂ ಅವಳು ತನ್ನ ಪ್ರಾಣದ ಮೇಲೆ ಬಂಧಿಸಿಕೊಂಡದ್ದೂ ನಿಲ್ಲುವವು.

8 But if her husband prohibit her on the day that he heareth it, and annul her vow which is upon her, and what hath passed her lips, wherewith she hath bound her soul, then Jehovah shall pardon her.ಆದರೆ ಅವಳ ಗಂಡನು ಅದನ್ನು ಕೇಳಿದ ದಿವಸದಲ್ಲಿ ಅವಳನ್ನು ತಡೆದು ಅವಳ ಮೇಲೆ ಇರುವ ಅವಳ ಪ್ರಮಾಣವನ್ನೂ ಪ್ರಾಣದ ಮೇಲೆ ಅವಳು ಬಂಧಿಸಿ ಕೊಂಡ ಬಾಯಿಂದ ಬಂದ ಮಾತನ್ನೂ ನಿರರ್ಥಕ ಮಾಡಿದ ಪಕ್ಷದಲ್ಲಿ ಕರ್ತನು ಅವಳಿಗೆ ಕ್ಷಮಿಸುವನು.

9 But the vow of a widow, and of her that is divorced, -- everything wherewith she hath bound her soul shall stand against her.ಇದಲ್ಲದೆ ವಿಧವೆಯಾದರೂ ಪರಿತ್ಯಾಗ ಮಾಡ ಲ್ಪಟ್ಟವಳಾದರೂ ತಮ್ಮ ಪ್ರಾಣಗಳನ್ನು ಬಂಧಿಸಿದ ಒಂದೊಂದು ಪ್ರಮಾಣವು ಅವರ ಮೇಲೆ ನಿಲ್ಲುವದು.

10 And if she have vowed in her husband's house, or have bound her soul by an oath with a bond,ಅವಳು ತನ್ನ ಗಂಡನ ಮನೆಯಲ್ಲಿ ಪ್ರಮಾಣ ಮಾಡಿದರೆ ಇಲ್ಲವೆ ಆಣೆಯಿಂದ ತನ್ನ ಪ್ರಾಣವನ್ನು ಬಂಧಿಸಿದರೆ

11 and her husband have heard it, and been silent at her, and hath not prohibited her, then all her vows shall stand, and every bond wherewith she hath bound her soul shall stand.ಅವಳ ಗಂಡನು ಅದನ್ನು ಕೇಳಿ ಅದಕ್ಕೆ ಮೌನವಾಗಿದ್ದು ಅವಳನ್ನು ತಡೆಯದ ಪಕ್ಷದಲ್ಲಿ ಅವಳ ಸಮಸ್ತ ಪ್ರಮಾಣಗಳೂ ಅವಳು ತನ್ನ ಪ್ರಾಣವನ್ನು ಬಂಧಿಸಿದ ಸಮಸ್ತ ಬಂಧನಗಳೂ ನಿಲ್ಲುವವು.

12 But if her husband have expressly annulled them on the day that he heard them, then nothing of that which is gone out of her lips as to her vows or the bond on her soul, shall stand: her husband hath annulled them; and Jehovah will pardon her.ಆದರೆ ಅವಳ ಗಂಡನು ಅವುಗಳನ್ನು ಕೇಳಿದ ದಿವಸದಲ್ಲೇ ಅವುಗಳನ್ನು ಪೂರ್ಣವಾಗಿ ನಿರರ್ಥಕಮಾಡಿದ ಪಕ್ಷ ದಲ್ಲಿ ಅವಳ ಪ್ರಮಾಣಗಳಿಗೋಸ್ಕರವೂ ಅವಳ ಪ್ರಾಣದ ಕಟ್ಟಳೆಗೋಸ್ಕರವೂ ಅವಳ ತುಟಿಗಳಿಂದ ಹೊರಟದ್ದು ಯಾವದಾಗಲಿ ನಿಲ್ಲದು, ಅವಳ ಗಂಡನು ಅವುಗಳನ್ನು ನಿರರ್ಥಕಮಾಡಿದ್ದಾನೆ; ಕರ್ತನು ಅವಳನ್ನು ಕ್ಷಮಿಸುವನು.

13 Every vow, and every binding oath to afflict the soul, her husband can establish it, or her husband can annul it.ಎಲ್ಲಾ ಪ್ರಮಾಣವನ್ನೂ ಪ್ರಾಣವನ್ನು ಕುಂದಿಸುವ ಕಟ್ಟಳೆಯ ಎಲ್ಲಾ ಆಣೆಗಳನ್ನೂ ಅವಳ ಗಂಡನು ಸಾರ್ಥಕಮಾಡಬಹುದು, ಇಲ್ಲವೆ ನಿರರ್ಥಕ ಮಾಡಬಹುದು.

14 And if her husband be altogether silent at her from day to day, then he hath established all her vows or all her bonds which are upon her; he hath confirmed them, for he hath been silent at her in the day that he heard them.ಆದರೆ ಅವಳ ಗಂಡನು ಅದಕ್ಕೆ ದಿನದಿನಕ್ಕೆ ಪೂರ್ಣವಾಗಿ ಸುಮ್ಮನಿದ್ದರೆ ಅವನು ಅವಳ ಸಮಸ್ತ ಪ್ರಮಾಣಗಳನ್ನೂ ಅವಳ ಮೇಲಿರುವ ಸಮಸ್ತ ಕಟ್ಟಳೆಗಳನ್ನೂ ಸ್ಥಾಪಿಸುತ್ತಾನೆ; ಅವನು ಕೇಳಿದ ದಿವಸ ದಲ್ಲಿ ಅವಳಿಗೆ ಸುಮ್ಮನಿರುವದರಿಂದ ಅವುಗಳನ್ನು ಸ್ಥಾಪಿಸಿದ್ದಾನೆ.

15 But if he in any way annul them after he hath heard them, then he shall bear her iniquity.ಆದರೆ ಅವನು ಕೇಳಿದ ತರುವಾಯ ಅವುಗಳನ್ನು ಹೇಗಾದರೂ ನಿರರ್ಥಕ ಮಾಡಿದರೆ ಅವಳ ಅಕ್ರಮವನ್ನು ಹೊರಬೇಕು.

16 These are the statutes, which Jehovah commanded Moses, between a man and his wife, between a father and his daughter, in her youth in her father's house.ಪತಿಪತ್ನಿಯರ ವಿಷಯದಲ್ಲಿಯೂ ತಂದೆಯೂ ತಂದೆ ಮನೆಯಲ್ಲಿ ಕನ್ಯಾವಸ್ತೆಯಾಗಿರುವ ಮಗಳೂ ಇವರ ವಿಷಯದಲ್ಲಿಯೂ ಕರ್ತನು ಮೋಶೆಗೆ ಆಜ್ಞಾಪಿಸಿದ ಕಟ್ಟಳೆಗಳು ಇವೇ.

Kannada Bible