Bible

Numbers 23 - WEB (Kannada)

1 Balaam said to Balak, Build me here seven altars, and prepare me here seven bulls and seven rams.ಆಗ ಬಿಳಾಮನು ಬಾಲಾಕನಿಗೆ--ಏಳು ಬಲಿಪೀಠಗಳನ್ನು ಕಟ್ಟಿ, ಏಳು ಹೋರಿ ಗಳನ್ನೂ ಏಳು ಟಗರುಗಳನ್ನೂ ನನಗೆ ಇಲ್ಲಿ ಸಿದ್ಧಮಾಡು ಅಂದನು.

2 Balak did as Balaam had spoken; and Balak and Balaam offered on every altar a bull and a ram.ಬಿಳಾಮನು ಹೇಳಿದ ಪ್ರಕಾರ ಬಾಲಾಕನು ಮಾಡಿದನು; ಬಾಲಾಕನೂ ಬಿಳಾಮನೂ ಒಂದೊಂದು ಬಲಿಪೀಠದ ಮೇಲೆ ಒಂದೊಂದು ಹೋರಿಯನ್ನೂ ಒಂದೊಂದು ಟಗರನ್ನೂ ಅರ್ಪಿಸಿದರು.

3 Balaam said to Balak, Stand by your burnt offering, and I will go: perhaps Yahweh will come to meet me; and whatever he shows me I will tell you. He went to a bare height.ಆಗ ಬಿಳಾಮನು ಬಾಲಾಕನಿಗೆ--ನೀನು ನಿನ್ನ ದಹನ ಬಲಿಯ ಹತ್ತಿರ ನಿಂತುಕೊ; ನಾನು ಹೋಗುತ್ತೇನೆ; ಒಂದು ವೇಳೆ ಕರ್ತನು ನನಗೆ ಎದುರಾಗಿ ಬರುವನು, ಆತನು ನನಗೆ ಏನು ತೋರಿಸುವನೋ ಅದನ್ನು ನಿನಗೆ ತಿಳಿಸುವೆನೆಂದು ಹೇಳಿ ಒಂದು ಎತ್ತರವಾದ ಸ್ಥಳಕ್ಕೆ ಹೋದನು.

4 God met Balaam: and he said to him, I have prepared the seven altars, and I have offered up a bull and a ram on every altar.ಆಗ ದೇವರು ಬಿಳಾಮನನ್ನು ಸಂಧಿಸಿದನು. ಅವನು ಆತನಿಗೆ--ನಾನು ಏಳು ಬಲಿ ಪೀಠಗಳನ್ನು ಸಿದ್ಧಮಾಡಿ, ಒಂದೊಂದು ಬಲಿಪೀಠದ ಮೇಲೆ ಒಂದೊಂದು ಹೋರಿಯನ್ನೂ ಒಂದೊಂದು ಟಗರನ್ನೂ ಅರ್ಪಿಸಿದ್ದೇನೆ ಅಂದನು.

5 Yahweh put a word in Balaam's mouth, and said, Return to Balak, and thus you shall speak.ಕರ್ತನು ಬಿಳಾಮನ ಬಾಯಲ್ಲಿ ತನ್ನ ಮಾತನ್ನು ಇಟ್ಟು ಅವನಿಗೆನೀನು ಬಾಲಾಕನ ಬಳಿಗೆ ತಿರಿಗಿ ಹೋಗಿ ಈ ಪ್ರಕಾರ ಮಾತನಾಡಬೇಕು ಅಂದನು.

6 He returned to him, and, behold, he was standing by his burnt-offering, he, and all the princes of Moab.ಆಗ ಅವನು ಬಾಲಾಕನ ಬಳಿಗೆ ತಿರಿಗಿ ಬಂದನು; ಅಗೋ, ಬಾಲಾಕನೂ ಮೋವಾಬಿನ ಸಕಲ ಪ್ರಭುಗಳೂ ಅವನು ಮಾಡಿದ ದಹನಬಲಿಯ ಹತ್ತಿರ ನಿಂತಿದ್ದರು.

7 He took up his parable, and said, From Aram has Balak brought me, The king of Moab from the mountains of the East: Come, curse me Jacob, Come, defy Israel.ಆಗ ಅವನು ಸಾಮ್ಯರೂಪವಾಗಿ--ಮೋವಾಬಿನ ಅರಸನಾದ ಬಾಲಾಕನು ನನ್ನನ್ನು ಅರಾಮಿನಿಂದಲೂ ಪೂರ್ವ ಪರ್ವತಗಳಿಂದಲೂ ಕರೆಯಿಸಿ--ನನಗೋ ಸ್ಕರ ಯಾಕೋಬನನ್ನು ಶಪಿಸ ಬಾ; ಇಸ್ರಾಯೇಲನ್ನು ಎದುರಿಸುವದಕ್ಕೆ ಬಾ ಎಂದು ನನಗೆ ಹೇಳಿದ್ದಾನೆ.

8 How shall I curse, whom God has not cursed? How shall I defy, whom Yahweh has not defied?ದೇವರು ಶಪಿಸದವನನ್ನು ನಾನು ಹೇಗೆ ಶಪಿಸಲಿ? ಕರ್ತನು ಎದುರಿಸದವನನ್ನು ನಾನು ಹೇಗೆ ಎದುರಿ ಸಲಿ?

9 For from the top of the rocks I see him, From the hills I see him: behold, it is a people that dwells alone, And shall not be reckoned among the nations.ಬಂಡೆಗಳ ತುದಿಯಿಂದ ಅವನನ್ನು ನೋಡು ತ್ತೇನೆ; ಗುಡ್ಡಗಳಿಂದ ಅವನನ್ನು ದೃಷ್ಟಿಸಿದ್ದೇನೆ; ಇಗೋ, ಆ ಜನಾಂಗವು ಒಂಟಿಯಾಗಿ ವಾಸಿಸುವದು, ಜನಾಂಗ ಗಳಲ್ಲಿ ಅದು ಎಣಿಸಲ್ಪಡುವದಿಲ್ಲ.

10 Who can count the dust of Jacob, Or number the fourth part of Israel? Let me die the death of the righteous, Let my last end be like his!ಯಾಕೋಬನ ಧೂಳನ್ನು ಎಣಿಸುವದಕ್ಕೂ ಇಸ್ರಾಯೇಲಿನ ನಾಲ್ಕನೇ ಒಂದು ಪಾಲನ್ನಾದರೂ ಲೆಕ್ಕ ಮಾಡುವದಕ್ಕೂ ಯಾರಿಂದಾದೀತು? ನೀತಿವಂತನು ಸಾಯುವಂತೆ ನಾನೂ ಸಾಯಬೇಕು, ನನ್ನ ಕಡೇ ಅಂತ್ಯವು ಅವನಂತೆಯೇ ಆಗಲಿ ಎಂದು ಹೇಳಿದನು.

11 Balak said to Balaam, What have you done to me? I took you to curse my enemies, and, behold, you have blessed them altogether.ಆಗ ಬಾಲಾಕನು ಬಿಳಾಮನಿಗೆ--ಇದೇನು ನೀನು ನನಗೆ ಮಾಡಿದ್ದು? ನನ್ನ ಶತ್ರುಗಳನ್ನು ಶಪಿಸುವದಕ್ಕೆ ನಿನ್ನನ್ನು ಕರೆಯಿಸಿದೆನು; ಇಗೋ, ನೀನು ಅವರನ್ನು ಸಂಪೂರ್ಣ ವಾಗಿ ಆಶೀರ್ವದಿಸಿದಿ ಅಂದನು.

12 He answered and said, Must I not take heed to speak that which Yahweh puts in my mouth?ಅದಕ್ಕೆ ಅವನು ಪ್ರತ್ಯುತ್ತರವಾಗಿ--ಕರ್ತನು ನನ್ನ ಬಾಯೊಳಗೆ ಇಡುವದನ್ನು ಹೇಳುವದಕ್ಕೆ ನಾನು ಜಾಗ್ರತೆಯಾಗಿರ ಬೇಕಲ್ಲವೋ ಅಂದನು.

13 Balak said to him, Please come with me to another place, from whence you may see them; you shall see but the utmost part of them, and shall not see them all: and curse me them from there.ಬಾಲಾಕನು ಅವನಿಗೆ--ನೀನು ಅವರನ್ನು ನೋಡತಕ್ಕ ಮತ್ತೊಂದು ಸ್ಥಳಕ್ಕೆ ನನ್ನೊಂದಿಗೆ ಬಾ; ಅವರನ್ನೆಲ್ಲಾ ನೋಡದೆ ಅವರ ಅಂತ್ಯ ಭಾಗವನ್ನು ಮಾತ್ರ ನೋಡುವಿ;

14 He took him into the field of Zophim, to the top of Pisgah, and built seven altars, and offered up a bull and a ram on every altar.ಅಲ್ಲಿಂದ ಅವರನ್ನು ನನಗೋ ಸ್ಕರ ಶಪಿಸು ಅಂದನು. ಹಾಗೆ ಬಾಲಾಕನು ಬಿಳಾಮ ನನ್ನು ಪಿಸ್ಗಾದ ತುದಿಗೆ ಚೋಫೀಮನ ಬೈಲಿಗೆ ಕರ ಕೊಂಡು ಹೋಗಿ ಏಳು ಬಲಿಪೀಠಗಳನ್ನು ಕಟ್ಟಿ ಒಂದೊಂದು ಬಲಿಪೀಠದ ಮೇಲೆ ಒಂದೊಂದು ಹೋರಿಯನ್ನೂ ಒಂದೊಂದು ಟಗರನ್ನೂ ಅರ್ಪಿಸಿ ದನು.

15 He said to Balak, Stand here by your burnt offering, while I meet [Yahweh] yonder.ಆಗ ಅವನು ಬಾಲಾಕನಿಗೆ--ಇಲ್ಲಿ ನಿನ್ನ ದಹನಬಲಿಯ ಹತ್ತಿರ ನಿಂತುಕೋ; ನಾನು ಅಲ್ಲಿ ಕರ್ತನನ್ನು ಆಚೆಯಲ್ಲಿ ಎದುರುಗೊಳ್ಳುವೆನು ಅಂದನು.

16 Yahweh met Balaam, and put a word in his mouth, and said, Return to Balak, and thus shall you speak.ಕರ್ತನು ಬಿಳಾಮನ ಎದುರಿಗೆ ಬಂದು ಅವನ ಬಾಯೊಳಗೆ ವಾಕ್ಯವನ್ನಿಟ್ಟು--ನೀನು ಬಾಲಾಕನ ಬಳಿಗೆ ತಿರುಗಿ ಹೋಗಿ ಈ ಪ್ರಕಾರ ಮಾತನಾಡು ಅಂದನು.

17 He came to him, and, behold, he was standing by his burnt offering, and the princes of Moab with him. Balak said to him, What has Yahweh spoken?ಇವನು ಅವನ ಬಳಿಗೆ ಬಂದಾಗ ಇಗೋ, ಅವನೂ ಅವನ ಸಂಗಡ ಮೋವಾಬಿನ ಪ್ರಧಾನರೂ ಅವನ ದಹನಬಲಿಯ ಹತ್ತಿರ ನಿಂತುಕೊಂಡಿದ್ದರು;

18 He took up his parable, and said, Rise up, Balak, and hear; Listen to me, you son of Zippor:ಬಾಲಾ ಕನು ಅವನಿಗೆ--ಕರ್ತನು ಏನು ಹೇಳಿದ್ದಾನೆ ಅಂದನು. ಅವನು ಸಾಮ್ಯರೂಪವಾಗಿ--ಬಾಲಾಕನೇ, ಎದ್ದು ಕೇಳು; ಚಿಪ್ಪೋರನ ಮಗನೇ, ನನಗೆ ಕಿವಿಗೊಡು.

19 God is not a man, that he should lie, Neither the son of man, that he should repent: Has he said, and will he not do it? Or has he spoken, and will he not make it good?ಸುಳ್ಳಾಡುವ ಹಾಗೆ ದೇವರು ಮನುಷ್ಯನಲ್ಲ, ಪಶ್ಚಾತ್ತಾಪಪಡುವ ಹಾಗೆ ನರಪುತ್ರನಲ್ಲ; ಆತನು ನುಡಿದದ್ದನ್ನು ಮಾಡದಿರುವನೇ? ಮಾತನಾಡಿದ್ದನ್ನು ಆತನು ಸ್ಥಾಪಿಸನೇ?

20 Behold, I have received [commandment] to bless: He has blessed, and I can't reverse it.ಇಗೋ, ಆಶೀರ್ವದಿಸು ವದಕ್ಕೆ ಅಪ್ಪಣೆ ಹೊಂದಿದ್ದೇನೆ; ಆತನು ಆಶೀರ್ವದಿ ಸುತ್ತಿದ್ದಾನೆ; ನಾನು ಅದನ್ನು ಬದಲು ಮಾಡುವದ ಕ್ಕಾಗದು.

21 He has not saw iniquity in Jacob; Neither has he seen perverseness in Israel: Yahweh his God is with him, The shout of a king is among them.ಆತನು ಯಾಕೋಬನಲ್ಲಿ ಪಾಪವನ್ನು ಕಾಣಲಿಲ್ಲ; ಇಸ್ರಾಯೇಲನಲ್ಲಿ ವಕ್ರತೆಯನ್ನು ನೋಡಲಿಲ್ಲ; ಅವನ ದೇವರಾದ ಕರ್ತನು ಅವನ ಸಂಗಡ ಇದ್ದಾನೆ; ಅರಸನ ಜಯ ಧ್ವನಿಯು ಅವರಲ್ಲಿ ಉಂಟು.

22 God brings them forth out of Egypt; He has as it were the strength of the wild-ox.ದೇವರು ಅವರನ್ನು ಐಗುಪ್ತದೊಳಗಿಂದ ಹೊರಗೆ ಬರಮಾಡಿದ್ದಾನೆ. ಅವನಿಗೆ ಒಂದು ಕೊಂಬುಳ್ಳ ಪ್ರಾಣಿಯಂತೆ ಬಲ ಉಂಟು.

23 Surely there is no enchantment with Jacob; Neither is there any divination with Israel: Now shall it be said of Jacob and of Israel, What has God done!ನಿಶ್ಚಯ ವಾಗಿ ಯಾಕೋಬನಿಗೆ ವಿರೋಧವಾಗಿ ಶಕುನವಿಲ್ಲ; ಇಸ್ರಾಯೇಲನಿಗೆ ವಿರೋಧವಾಗಿ ಯಾವ ಕಣಿ ಇಲ್ಲ; ತತ್ಕಾಲದಲ್ಲಿ ದೇವರು ಏನು ಮಾಡಿದನೆಂದು ಯಾಕೋಬನ ವಿಷಯವಾಗಿಯೂ ಇಸ್ರಾಯೇಲಿನ ವಿಷಯವಾಗಿಯೂ ಹೇಳುವರು.

24 Behold, the people rises up as a lioness, As a lion does he lift himself up: He shall not lie down until he eat of the prey, Drink the blood of the slain.ಇಗೋ, ಜನವು ದೊಡ್ಡ ಸಿಂಹದ ಹಾಗೆ ಏಳುವದು; ಸಿಂಹದ ಮರಿಯ ಹಾಗೆ ಎದ್ದೇಳುವದು; ಅದು ಬೇಟೆಯನ್ನು ತಿಂದು ಹತವಾದವರ ರಕ್ತವನ್ನು ಕುಡಿಯುವ ವರೆಗೆ ಮಲಗದು ಅಂದನು.

25 Balak said to Balaam, Neither curse them at all, nor bless them at all.ಆಗ ಬಾಲಾಕನು ಬಿಳಾಮ ನಿಗೆ--ಅವರನ್ನು ಶಪಿಸಲೂ ಬೇಡ, ಆಶೀರ್ವದಿಸಲೂ ಬೇಡ ಅಂದನು.

26 But Balaam answered Balak, Didn't I tell you, saying, All that Yahweh speaks, that I must do?ಆದರೆ ಬಿಳಾಮನು ಪ್ರತ್ಯುತ್ತರ ವಾಗಿ ಬಾಲಾಕನಿಗೆ ಕರ್ತನು ಹೇಳುವದನ್ನೆಲ್ಲಾ ನಾನು ಮಾಡುವನೆಂದು ನಿನಗೆ ಹೇಳಲಿಲ್ಲವೋ? ಅಂದನು.

27 Balak said to Balaam, Come now, I will take you to another place; peradventure it will please God that you may curse me them from there.ಆಗ ಬಾಲಾಕನು ಬಿಳಾಮನಿಗೆ--ದಯಮಾಡಿ ಬಾ, ನಾನು ನಿನ್ನನ್ನು ಬೇರೆ ಒಂದು ಸ್ಥಳಕ್ಕೆ ಕರಕೊಂಡು ಹೋಗುವೆನು. ನೀನು ಅಲ್ಲಿಂದ ನನಗೋಸ್ಕರ ಅವ ರನ್ನು ಶಪಿಸುವದು ಒಂದು ವೇಳೆ ದೇವರಿಗೆ ಯುಕ್ತವಾಗಿ ದ್ದೀತು ಅಂದನು.

28 Balak took Balaam to the top of Peor, that looks down on the desert.ಆದಕಾರಣ ಬಾಲಾಕನು ಬಿಳಾಮನನ್ನು ಕಾಡಿಗೆದುರಾಗಿರುವ ಪೆಯೋರಿನ ತುದಿಗೆ ಕರಕೊಂಡು ಹೋದನು.

29 Balaam said to Balak, Build me here seven altars, and prepare me here seven bulls and seven rams.ಬಿಳಾಮನು ಬಾಲಾಕನಿಗೆ--ನನಗೆ ಇಲ್ಲಿ ಏಳು ಬಲಿಪೀಠಗಳನ್ನು ಕಟ್ಟಿ, ಏಳು ಹೋರಿಗಳನ್ನೂ ಏಳು ಟಗರುಗಳನ್ನೂ ಸಿದ್ಧಮಾಡು ಅಂದನು.

30 Balak did as Balaam had said, and offered up a bull and a ram on every altar.ಬಿಳಾಮನು ಹೇಳಿದ ಪ್ರಕಾರ ಬಾಲಾಕನು ಮಾಡಿ ಬಲಿಪೀಠದ ಮೇಲೆ ಒಂದೊಂದು ಹೋರಿಯನ್ನೂ ಒಂದೊಂದು ಟಗರನ್ನೂ ಅರ್ಪಿಸಿದನು.

Kannada Bible