Numbers 18 - BBE (Kannada)
1 And the Lord said to Aaron, You and your sons and your father's family are to be responsible for all wrongdoing in relation to the holy place: and you and your sons are to be responsible for the errors which come about in your work as priests.ಕರ್ತನು ಆರೋನನಿಗೆ--ನೀನೂ ನಿನ್ನ ಕುಮಾರರೂ ನಿನ್ನ ಪಿತೃಗಳ ಮನೆಯೂ ನಿನ್ನೊಂದಿಗೆ ಪರಿಶುದ್ಧ ಸ್ಥಳದ ಅಕ್ರಮವನ್ನು ಹೊತ್ತು ಕೊಳ್ಳಬೇಕು; ನೀನು ನಿನ್ನ ಕುಮಾರರ ಸಹಿತವಾಗಿ ನಿಮ್ಮ ಯಾಜಕತ್ವದ ಅಕ್ರಮವನ್ನು ಹೊತ್ತುಕೊಳ್ಳಬೇಕು.
2 Let your brothers, the family of Levi, come near with you, so that they may be joined with you and be your servants: but you and your sons with you are to go in before the ark of witness.ನಿಮ್ಮ ಪಿತೃವಾದ ಲೇವಿಯ ಗೋತ್ರದವರಾದ ನಿನ್ನ ಸಹೋದರರನ್ನು ಸಹ ನಿನ್ನ ಸಂಗಡ ಸೇರಿಸಿಕೋ. ಅವರು ನಿನ್ನ ಕೂಡ ಇದ್ದು ನಿನಗೆ ಸೇವೆ ಮಾಡಬೇಕು, ಆದರೆ ನೀನು ನಿನ್ನ ಮಕ್ಕಳ ಸಹಿತವಾಗಿ ಸಾಕ್ಷೀ ಗುಡಾರದ ಮುಂದೆ ಸೇವೆಮಾಡಬೇಕು;
3 They are to do your orders and be responsible for the work of the Tent; but they may not come near the vessels of the holy place or the altar, so that death may not overtake them or you.ಅವರು ನಿನ್ನ ಅಪ್ಪಣೆಯನ್ನೂ ಗುಡಾರವೆಲ್ಲಾದರ ಅಪ್ಪಣೆಯನ್ನೂ ಕಾಪಾಡಬೇಕು. ಪರಿಶುದ್ಧ ಸ್ಥಳದ ಸಾಮಾನುಗಳಿಗೂ ಬಲಿಪೀಠಕ್ಕೂ ಮಾತ್ರ ಅವರೂ ನೀವೂ ಸಾಯದ ಹಾಗೆ ಅವರು ಸವಿಾಪಕ್ಕೆ ಬರಬಾರದು.
4 They are to be joined with you in the care of the Tent of meeting, doing whatever is needed for the Tent: and no one of any other family may come near you.ಆದರೆ ಅವರು ನಿನ್ನ ಸಹಾಯಕರಾಗಿದ್ದು ಗುಡಾರದ ಎಲ್ಲಾ ಸೇವೆಗೋಸ್ಕರ ಸಭೆಯ ಗುಡಾರದ ಅಪ್ಪಣೆಯನ್ನು ಕಾಪಾಡಬೇಕು; ಪರಕೀಯನು ನಿಮ್ಮ ಸವಿಾಪಕ್ಕೆ ಬರ ಬಾರದು.
5 You are to be responsible for the holy place and the altar, so that wrath may never again come on the children of Israel.ಇಸ್ರಾಯೇಲ್ ಮಕ್ಕಳ ಮೇಲೆ ಇನ್ನು ಮುಂದೆ ಎಂದಿಗೂ ರೌದ್ರವು ಬಾರದಹಾಗೆ ಪರಿಶುದ್ಧ ಸ್ಥಳದ ಆಜ್ಞೆಯನ್ನೂ ಬಲಿಪೀಠದ ಆಜ್ಞೆಯನ್ನೂ ನೀವು ಕಾಪಾಡಬೇಕು.
6 Now, see, I have taken your brothers the Levites from among the children of Israel: they are given to you and to the Lord, to do the work of the Tent of meeting.ಇಗೋ, ನಾನು ನಿಮ್ಮ ಸಹೋದರ ರಾದ ಲೇವಿಯರನ್ನು ಇಸ್ರಾಯೇಲ್ ಮಕ್ಕಳೊ ಳಗಿಂದ ತೆಗೆದುಕೊಂಡಿದ್ದೇನೆ. ಸಭೆಯ ಗುಡಾರದ ಸೇವೆಯನ್ನು ಮಾಡುವದಕ್ಕೆ ಅವರು ಕರ್ತನಿಗೋಸ್ಕರ ನಿಮಗೆ ದಾನವಾಗಿ ಕೊಡಲ್ಪಟ್ಟವರಾಗಿದ್ದಾರೆ.
7 And you and your sons with you are to be responsible as priests for the altar and everything on it, and everything inside the veil; you are to do the work of priests; I have given you your position as priests; and any other man who comes near will be put to death.ಆದದರಿಂದ ನೀನು ನಿನ್ನ ಕುಮಾರರ ಸಹಿತವಾಗಿ ನಿಮ್ಮ ಯಾಜಕತ್ವವನ್ನು ಕಾಪಾಡಬೇಕು. ಬಲಿಪೀಠದ ಸಮಸ್ತ ಕಾರ್ಯಗಳಿಗೋಸ್ಕರ ಪರದೆಯ ಒಳಗೆ ನೀವು ಸೇವೆಮಾಡಬೇಕು. ನಿಮ್ಮ ಯಾಜಕತ್ವವನ್ನು ದಾನದ ಸೇವೆಯಾಗಿ ನಿಮಗೆ ಕೊಟ್ಟಿದ್ದೇನೆ. ಪರಕೀಯನು ಸವಿಾಪಕ್ಕೆ ಬಂದರೆ ಸಾಯಬೇಕು ಎಂದು ಹೇಳಿದನು.
8 And the Lord said to Aaron, See, I have given into your care my lifted offerings; even all the holy things of the children of Israel I have given to you and to your sons as your right for ever, because you have been marked with the holy oil.ಕರ್ತನು ಮಾತನಾಡಿ ಆರೋನನಿಗೆ--ಇಗೋ, ನಾನು ನಿನಗೆ ಎತ್ತುವ ಅರ್ಪಣೆಗಳ ಅಪ್ಪಣೆಗಳನ್ನು ಕೊಟ್ಟಿದ್ದೇನೆ. ಇಸ್ರಾಯೇಲ್ ಮಕ್ಕಳು ಪರಿಶುದ್ಧ ಮಾಡುವ ಎಲ್ಲಾದರಲ್ಲಿ ನಾನು ಅವುಗಳನ್ನು ಅಭಿಷೇಕ ಕ್ಕೋಸ್ಕರ ನಿನಗೂ ನಿನ್ನ ಮಕ್ಕಳಿಗೂ ನಿತ್ಯಕಟ್ಟಳೆಯಾಗಿ ಕೊಟ್ಟಿದ್ದೇನೆ.
9 This is to be yours of the most holy things, out of the fire offerings; every offering of theirs, every meal offering and sin-offering, and every offering which they make on account of error, is to be most holy for you and your sons.ಬೆಂಕಿಗೆ ಒಳಗಾಗದ ಅತೀ ಪರಿಶುದ್ಧ ವಾದವುಗಳಲ್ಲಿ ನಿನಗಾಗಬೇಕಾದವುಗಳು ಯಾವ ವೆಂದರೆ--ಅವರ ಅರ್ಪಣೆಗಳೆಲ್ಲಾ ಅಂದರೆ ಅವರು ನನಗೆ ತರುವ ಆಹಾರ ಸಮರ್ಪಣೆಗಳು ಪಾಪದ ಬಲಿಗಳು ಅಪರಾಧದ ಬಲಿಗಳು ಇವೆಲ್ಲಾ ಅತೀ ಪರಿಶುದ್ಧವಾಗಿ ನಿನಗೂ ನಿನ್ನ ಕುಮಾರರಿಗೂ ಇರಬೇಕು.
10 As most holy things they are to be your food: let every male have them for food; it is to be holy to you.ನೀನು ಅದನ್ನು ಪರಿಶುದ್ಧ ಸ್ಥಳದಲ್ಲಿ ತಿನ್ನಬೇಕು; ಎಲ್ಲಾ ಗಂಡಸರು ಅದನ್ನು ತಿನ್ನಬೇಕು. ಅದು ನಿನಗೆ ಪರಿಶುದ್ಧವಾಗಿರುವದು.
11 And this is yours: the lifted offering which they give and all the wave offerings of the children of Israel I have given to you and to your sons and to your daughters as your right for ever: everyone in your house who is clean may have them for food.ಇದು ನಿನ್ನದಾಗಿದೆ. ಅವರು ಕೊಟ್ಟ ಎತ್ತುವ ಅರ್ಪಣೆಯೂ ಇಸ್ರಾಯೇಲ್ ಮಕ್ಕಳು ಆಡಿಸುವ ಎಲ್ಲಾ ಅರ್ಪಣೆಗಳೂ; ಅವುಗಳನ್ನು ನಾನು ನಿನಗೂ ನಿನ್ನ ಕುಮಾರರಿಗೂ ಕುಮಾರ್ತೆಯರಿಗೂ ಶಾಶ್ವತ ಕಟ್ಟಳೆಯಾಗಿ ಕೊಟ್ಟಿದ್ದೇನೆ; ನಿನ್ನ ಮನೆಯಲ್ಲಿರುವ ಶುದ್ಧನಾದ ಪ್ರತಿಯೊಬ್ಬನು ಅದನ್ನು ತಿನ್ನಬಹುದು.
12 All the best of the oil and the wine and the grain, the first-fruits of them which they give to the Lord, to you have I given them.ಉತ್ತಮವಾದ ಎಲ್ಲಾ ಎಣ್ಣೆಯೂ ದ್ರಾಕ್ಷಾರಸವೂ ಗೋಧಿಯೂ ಅವರು ಕರ್ತನಿಗೆ ಕೊಡುವ ಅವುಗಳ ಪ್ರಥಮ ಫಲಗಳನ್ನೂ ನಿನಗೆ ಕೊಟ್ಟಿದ್ದೇನೆ.
13 The earliest produce from their land which they take to the Lord is to be yours; everyone in your house who is clean may have it for his food.ಅವರು ಕರ್ತನಿಗೆ ತರುವ ದೇಶದ ಎಲ್ಲವುಗಳ ಪ್ರಥಮ ಫಲಗಳು ನಿನ್ನವುಗಳಾಗಿರುವವು. ನಿನ್ನ ಮನೆಯಲ್ಲಿರುವ ಶುದ್ಧನಾದ ಪ್ರತಿಯೊಬ್ಬನ್ನು ಅದನ್ನು ತಿನ್ನಬಹುದು.
14 Everything given by oath to the Lord in Israel is to be yours.ಇಸ್ರಾಯೇಲ್ಯರಲ್ಲಿ ಆಣೆಯೊಂದಿಗೆ ಒಪ್ಪಿಸಿದ್ದೆಲ್ಲಾ ನಿನ್ನದಾಗಿರಬೇಕು.
15 The first birth of every living thing which is offered to the Lord, of man or beast, is to be yours; but for the first sons of man payment is to be made, and for the first young of unclean beasts.ಮನುಷ್ಯರಲ್ಲಾಗಲಿ ಪಶುಗಳ ಲ್ಲಾಗಲಿ ಕರ್ತನಿಗೆ ತರುವ ಎಲ್ಲಾ ಶರೀರಗಳಲ್ಲಿ ಚೊಚ್ಚಲಾದದ್ದೆಲ್ಲಾ ನಿನ್ನದಾಗಿರಬೇಕು; ಆದರೆ ಮನುಷ್ಯರ ಚೊಚ್ಚಲಾದದ್ದನ್ನೂ ಪವಿತ್ರವಾದ ಪಶುಗಳ ಚೊಚ್ಚಲಾದದ್ದನ್ನೂ ನೀನು ವಿಮೋಚಿಸಬೇಕು.
16 Payment is to be made for these when they are a month old, at the value fixed by you, a price of five shekels by the scale of the holy place, that is, twenty gerahs to the shekel.ಬಿಡಿಸತಕ್ಕವುಗಳನ್ನು ಒಂದು ತಿಂಗಳಿನ ಪ್ರಾಯ ದಿಂದ ಇಪ್ಪತ್ತು ಗೇರಗಳು ಅಂದರೆ ಪರಿಶುದ್ಧ ಶೇಕೆಲಿನ ಮೇರೆಗೆ ನಿನ್ನ ಎಣಿಕೆಯಲ್ಲಿ ಐದು ಶೇಕೆಲುಗಳ ಬೆಳ್ಳಿ ಯಿಂದ ವಿಮೋಚಿಸಿಕೊಳ್ಳಬೇಕು.
17 But no such payment may be made for the first birth of an ox or a sheep or a goat; these are holy: their blood is to be dropped on the altar, and their fat burned for an offering made by fire, a sweet smell to the Lord.ಆದರೆ ಪಶು ಕುರಿ ಮೇಕೆ ಇವುಗಳ ಚೊಚ್ಚಲನ್ನಾದರೂ ನೀನು ವಿಮೋಚಿಸಿಕೊಳ್ಳಬಾರದು; ಅವು ಪರಿಶುದ್ಧವಾಗಿವೆ; ಅವುಗಳ ರಕ್ತವನ್ನು ಬಲಿಪೀಠದ ಮೇಲೆ ಚಿಮುಕಿಸ ಬೇಕು; ಅವುಗಳ ಕೊಬ್ಬನ್ನು ಕರ್ತನಿಗೆ ದಹನ ವಾಗಿಯೂ ಸುವಾಸನೆಗಾಗಿಯೂ ಸುಡಬೇಕು.
18 Their flesh is to be yours; like the breast of the wave offering and the right leg, it is to be yours.ಆಡಿಸುವ ಬಲಿಯ ಎದೆಯೂ ಬಲ ಭುಜವೂ ನಿನ್ನದಾಗಿರುವ ಪ್ರಕಾರ ಅವುಗಳ ಮಾಂಸವೂ ನಿನ್ನ ದಾಗಿರಬೇಕು.
19 All the lifted offerings of the holy things which the children of Israel give to the Lord, I have given to you and to your sons and to your daughters as a right for ever. This is an agreement made with salt before the Lord, to you and to your seed for ever.ಇಸ್ರಾಯೇಲ್ ಮಕ್ಕಳು ಕರ್ತನಿಗೆ ಎತ್ತುವ ಪರಿಶುದ್ಧವಾದ ಅರ್ಪಣೆಗಳನ್ನೆಲ್ಲಾ ನಿನಗೂ ನಿನ್ನ ಕುಮಾರರಿಗೂ ಕುಮಾರ್ತೆಯರಿಗೂ ನಿತ್ಯ ಕಟ್ಟಳೆ ಯಾಗಿ ಕೊಟ್ಟಿದ್ದೇನೆ; ಇದು ಕರ್ತನ ಮುಂದೆ ನಿನಗೂ ನಿನ್ನ ಸಂಗಡ ಇರುವ ನಿನ್ನ ಸಂತತಿಗೂ ನಿತ್ಯವಾದ ಉಪ್ಪಿನ ಒಡಂಬಡಿಕೆಯಾಗಿರಬೇಕು.
20 And the Lord said to Aaron, You will have no heritage in their land, or any part among them; I am your part and your heritage among the children of Israel.ಕರ್ತನು ಆರೋನನಿಗೆ--ನಿನಗೆ ಅವರ ದೇಶದಲ್ಲಿ ಯಾವ ಸ್ವಾಸ್ತ್ಯವೂ ಇರಬಾರದು; ನಿನಗೆ ಅವರ ಮಧ್ಯದಲ್ಲಿ ಯಾವ ಪಾಲೂ ಇರಬಾರದು; ನಾನೇ ಇಸ್ರಾಯೇಲ್ ಮಕ್ಕಳ ಮಧ್ಯದಲ್ಲಿ ನಿನ್ನ ಪಾಲೂ ಸ್ವಾಸ್ತ್ಯವೂ ಆಗಿದ್ದೇನೆ.
21 And to the children of Levi I have given as their heritage all the tenths offered in Israel, as payment for the work they do, the work of the Tent of meeting.ಇಗೋ, ಅವರು ಸಭೆಯ ಗುಡಾರದ ಸೇವೆಯನ್ನು ಮಾಡುವದರಿಂದ ನಾನು ಲೇವಿಯ ಮಕ್ಕಳಿಗೆ ಅವರ ಸೇವೆಗೋಸ್ಕರ ಇಸ್ರಾ ಯೇಲ್ಯರಲ್ಲಿ ಹತ್ತನೆಯ ಒಂದು ಪಾಲನ್ನೆಲ್ಲಾ ಸ್ವಾಸ್ತ್ಯ ಕ್ಕಾಗಿ ಕೊಟ್ಟಿದ್ದೇನೆ.
22 In future the children of Israel are not to come near the Tent of meeting, so that death may not come to them because of sin.ಇಸ್ರಾಯೇಲ್ ಮಕ್ಕಳು ಪಾಪವನ್ನು ಹೊತ್ತುಕೊಂಡು ಸಾಯದ ಹಾಗೆ ಇನ್ನು ಮೇಲೆ ಸಭೆಯ ಗುಡಾರದ ಸವಿಾಪಕ್ಕೆ ಬರಬಾರದು.
23 But the Levites are to do the work of the Tent of meeting, and be responsible for errors in connection with it: this is a law for ever through all your generations; and among the children of Israel they will have no heritage.ಆದರೆ ಲೇವಿಯರೇ ಸಭೆಯ ಗುಡಾರದ ಸೇವೆ ಯನ್ನು ಮಾಡಬೇಕು; ಅವರೇ ಅವರ ಅಕ್ರಮವನ್ನು ಹೊತ್ತುಕೊಳ್ಳಬೇಕು; ಇದು ನಿಮ್ಮ ಸಂತತಿಗಳಿಗೆ ನಿತ್ಯ ಕಟ್ಟಳೆಯಾಗಿದೆ; ಇಸ್ರಾಯೇಲ್ ಮಕ್ಕಳ ಮಧ್ಯದಲ್ಲಿ ಅವರಿಗೆ ಸ್ವಾಸ್ತ್ಯವು ಇರಬಾರದು.
24 For the tenths which the children of Israel give as a lifted offering to the Lord I have given to the Levites as their heritage. and so I have said to them, Among the children of Israel they will have no heritage.ಇಸ್ರಾಯೇಲ್ ಮಕ್ಕಳು ಕರ್ತನಿಗೆ ಎತ್ತುವ ಅರ್ಪಣೆಯಾಗಿ ಅರ್ಪಿಸುವ ಹತ್ತನೆಯ ಒಂದು ಪಾಲನ್ನು ಲೇವಿಯರಿಗೆ ಸ್ವಾಸ್ತ್ಯಕ್ಕಾಗಿ ಕೊಟ್ಟಿದ್ದೇನೆ; ಆದಕಾರಣ ಇಸ್ರಾಯೇಲ್ ಮಕ್ಕಳ ಮಧ್ಯದಲ್ಲಿ ಅವರಿಗೆ ಸ್ವಾಸ್ತ್ಯವಿರಬಾರದೆಂದು ನಾನು ಅವರಿಗೆ ಹೇಳಿದ್ದೇನೆ ಅಂದನು.
25 And the Lord said to Moses,ಕರ್ತನು ಮೋಶೆಯ ಸಂಗಡ ಮಾತನಾಡಿ ಹೇಳಿ ದ್ದೇನಂದರೆ--
26 Say to the Levites, When you take from the children of Israel the tenth which I have given to you from them as your heritage, a tenth part of that tenth is to be offered as an offering lifted up before the Lord.ನೀನು ಲೇವಿಯರಿಗೆ ಹೀಗೆ ಮಾತ ನಾಡಿ ಅವರಿಗೆ ಹೇಳಬೇಕಾದದ್ದೇನಂದರೆ--ನೀವು ಇಸ್ರಾಯೇಲ್ ಮಕ್ಕಳ ಕಡೆಯಿಂದ ನಾನು ನಿಮಗೆ ಸ್ವಾಸ್ತ್ಯಕ್ಕಾಗಿ ಕೊಟ್ಟ ಹತ್ತನೆಯ ಒಂದು ಪಾಲನ್ನು ತಕ್ಕೊಂಡರೆ ನೀವು ಅದರಲ್ಲಿ ಕರ್ತನಿಗೆ ಹತ್ತನೆಯ ದರಿಂದ ಹತ್ತನೆಯದನ್ನು ಎತ್ತುವ ಅರ್ಪಣೆಯಾಗಿ ಅರ್ಪಿಸಬೇಕು.
27 And this lifted offering is to be put to your credit as if it was grain from the grain-floor and wine from the vines.ಇದು ನಿಮಗೆ ಕಣದ ಧಾನ್ಯದ ಹಾಗೆಯೂ ದ್ರಾಕ್ಷೇತೊಟ್ಟಿಯ ಪರಿಪೂರ್ಣತೆಯ ಹಾಗೆಯೂ ನಿಮ್ಮ ಎತ್ತುವ ಅರ್ಪಣೆಯಾಗಿಯೂ ನಿಮಗೆ ಎಣಿಸಲ್ಪಡುವದು.
28 So you are to make an offering lifted up to the Lord from all the tenths which you get from the children of Israel, giving out of it the Lord's lifted offering to Aaron the priest.ಈ ಪ್ರಕಾರ ನೀವು ಸಹ ಇಸ್ರಾಯೇಲ್ ಮಕ್ಕಳ ಕಡೆಯಿಂದ ತಕ್ಕೊಳ್ಳುವ ನಿಮ್ಮ ಎಲ್ಲಾ ಹತ್ತನೆಯವುಗಳಿಂದ ಕರ್ತನಿಗೆ ಎತ್ತುವ ಕಾಣಿಕೆಯನ್ನು ಅರ್ಪಿಸಬೇಕು; ನೀವು ಅದರಿಂದ ಕರ್ತ ನಿಗೆ ಎತ್ತುವ ಅರ್ಪಣೆಯನ್ನು ಯಾಜಕನಾದ ಆರೋನ ನಿಗೆ ಕೊಡಬೇಕು.
29 From everything given to you, let the best of it, the holy part of it, be offered as a lifted offering to the Lord.ನಿಮ್ಮ ಎಲ್ಲಾ ಕಾಣಿಕೆಗಳಲ್ಲಿ ಉತ್ತಮವಾದದ್ದನ್ನು ಅದರೊಳಗಿನ ಪರಿಶುದ್ಧವಾದ ಭಾಗವನ್ನೇ ಕರ್ತನಿಗೆ ಎತ್ತುವ ಅರ್ಪಣೆಯಾಗಿ ಅರ್ಪಿಸಬೇಕು.
30 Say to them, then, When the best of it is lifted up on high, it is to be put to the account of the Levites as the increase of the grain-floor and of the place where the grapes are crushed.ನೀನು ಅವರಿಗೆ ಹೇಳಬೇಕಾದದ್ದೇನಂದರೆ--ನೀವು ಅದರಲ್ಲಿ ಉತ್ತಮವಾದದ್ದನ್ನು ಎತ್ತಿದಾಗ ಅದು ಲೇವಿಯರಿಗೆ ಕಣದ ಆದಾಯದ ಹಾಗೆಯೂ ದ್ರಾಕ್ಷೇ ತೊಟ್ಟಿಯ ಆದಾಯದ ಹಾಗೆಯೂ ಎಣಿಸಲ್ಪಡುವದು.
31 It is to be your food, for you and your families in every place: it is your reward for your work in the Tent of meeting.ನೀವೂ ನಿಮ್ಮ ಮನೆಯವರೂ ಅದನ್ನು ಸಕಲ ಸ್ಥಳಗಳಲ್ಲಿ ತಿನ್ನಬಹುದು. ಇದು ಸಭೆಯ ಗುಡಾರದಲ್ಲಿ ನೀವು ಮಾಡುವ ಸೇವೆಗೋಸ್ಕರ ನಿಮಗೆ ಪ್ರತಿಫಲ ವಾಗಿದೆ.
32 And no sin will be yours on account of it, when the best of it has been lifted up on high; you are not to make a wrong use of the holy things of the children of Israel, so that death may not overtake you.ಆದಕಾರಣ ನೀವು ಅದರಲ್ಲಿಂದ ಅದರ ಉತ್ತಮವಾದದ್ದನ್ನು ಎತ್ತಿ ಅರ್ಪಿಸಿದಾಗ ನೀವು ಅದರ ದೆಸೆಯಿಂದ ಪಾಪವನ್ನು ಹೊತ್ತುಕೊಳ್ಳುವದಿಲ್ಲ; ಇಸ್ರಾಯೇಲ್ ಮಕ್ಕಳ ಪರಿಶುದ್ಧವಾದವುಗಳನ್ನು ಅಪವಿತ್ರ ಮಾಡದಿದ್ದರೆ ಸಾಯುವದಿಲ್ಲ ಅಂದನು.
Kannada Bible