Numbers 1 - DBY (Kannada)
1 And Jehovah spoke to Moses in the wilderness of Sinai in the tent of meeting, on the first of the second month, in the second year after their departure from the land of Egypt, saying,ಅವರು ಐಗುಪ್ತದೇಶದಿಂದ ಹೊರಟ ಎರಡನೆಯ ವರುಷದ ಎರಡನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಕರ್ತನು ಸೀನಾಯಿ ಅರಣ್ಯದಲ್ಲಿ ಸಭೆಯ ಗುಡಾರದೊಳಗೆ ಮೋಶೆಯ ಸಂಗಡ ಮಾತನಾಡಿ--
2 Take the sum of the whole assembly of the children of Israel, after their families, according to their fathers' houses, by the number of the names, every male, according to their polls;ಇಸ್ರಾಯೇಲ್ ಮಕ್ಕಳ ಸಮಸ್ತ ಸಭೆಯ ಲೆಕ್ಕವನ್ನು ಅವರ ಕುಟುಂಬಗಳ ಪ್ರಕಾರವಾಗಿಯೂ ಅವರ ತಂದೆಗಳ ಮನೆಗಳ ಪ್ರಕಾರ ವಾಗಿಯೂ ಗಂಡಸರೆಲ್ಲರ ಹೆಸರುಗಳ ಎಣಿಕೆಯೊಂದಿಗೆ ತಲೆ ತಲೆಗೂ ನೀವು ತಕ್ಕೊಳ್ಳಿರಿ.
3 from twenty years and upward, all that go forth to military service in Israel: ye shall number them according to their hosts, thou and Aaron.ಇಸ್ರಾಯೇಲಿನಲ್ಲಿ ಯುದ್ಧಕ್ಕೆ ಹೊರಡುವವರೆಲ್ಲರನ್ನು ಅಂದರೆ ಇಪ್ಪತ್ತು ವರುಷದವರನ್ನೂ ಅದಕ್ಕೆ ಹೆಚ್ಚಾದ ಪ್ರಾಯವುಳ್ಳವ ರನ್ನೂ ಅವರ ಸೈನ್ಯಗಳ ಪ್ರಕಾರ ನೀನೂ ಆರೋನನೂ ಲೆಕ್ಕಮಾಡಿರಿ.
4 And with you there shall be a man for every tribe, a man who is the head of his father's house.ತನ್ನ ತಂದೆಯ ಮನೆಗೆ ಮುಖ್ಯಸ್ಥನಾದ ಪ್ರತಿಯೊಬ್ಬನು ಒಂದೊಂದು ಗೋತ್ರಕ್ಕೋಸ್ಕರ ನಿಮ್ಮ ಸಂಗಡ ಇರಲಿ.
5 And these are the names of the men that shall stand with you: for Reuben, Elizur the son of Shedeur;ನಿಮ್ಮ ಸಂಗಡ ನಿಲ್ಲಬೇಕಾದ ಮನುಷ್ಯರ ಹೆಸರುಗಳು ಇವೇ: ರೂಬೇನ್ ಗೋತ್ರ ದಿಂದ ಶೆದೇಯೂರನ ಮಗನಾದ ಎಲೀಚೂರ್,
6 for Simeon, Shelumiel the son of Zurishaddai;ಸಿಮೆಯೋನ್ ಗೋತ್ರದಿಂದ ಚೂರೀಷದ್ದೈಯನ ಮಗನಾದ ಶೆಲುವಿಾಯೇಲ್,
7 for Judah, Nahshon the son of Amminadab;ಯೆಹೂದ ಗೋತ್ರ ದಿಂದ ಅವ್ಮೆಾನಾದಾಬನ ಮಗನಾದ ನಹಶೋನ್,
8 for Issachar, Nethaneel the son of Zuar;ಇಸ್ಸಾಕಾರ್ ಗೋತ್ರದಿಂದ ಚೂವಾರನ ಮಗನಾದ ನೆತನೇಲ್,
9 for Zebulun, Eliab the son of Helon;ಜೆಬುಲೂನ್ ಗೋತ್ರದಿಂದ ಹೇಲೋ ನನ ಮಗನಾದ ಎಲೀಯಾಬ್,
10 for the children of Joseph: for Ephraim, Elishama the son of Ammihud; for Manasseh, Gamaliel the son of Pedahzur;ಯೋಸೇಫನ ಮಕ್ಕಳ ಗೋತ್ರದಲ್ಲಿ ಎಫ್ರಾಯಾಮ್‌ನಿಂದ ಅವ್ಮೆಾ ಹೂದನ ಮಗನಾದ ಎಲೀಷಾಮಾ, ಮನಸ್ಸೆ ಗೋತ್ರ ದಿಂದ ಪೆದಾಚೂರನ ಮಗನಾದ ಗವ್ಲೆಾಯೇಲ್,
11 for Benjamin, Abidan the son of Gideoni;ಬೆನ್ಯಾವಿಾನ್ ಗೋತ್ರದಿಂದ ಗಿದ್ಯೋನಿಯ ಮಗ ನಾದ ಅಬೀದಾನ್,
12 for Dan, Ahiezer the son of Ammishaddai;ದಾನ್ ಗೋತ್ರದಿಂದ ಅವ್ಮೆಾಷದ್ದೈಯ ಮಗನಾದ ಅಹೀಗೆಜೆರ್,
13 for Asher, Pagiel the son of Ocran;ಆಶೇರ್ ಗೋತ್ರದಿಂದ ಒಕ್ರಾನನ ಮಗನಾದ ಪಗೀಯೆಲ್,
14 for Gad, Eliasaph the son of Deuel;ಗಾದ್ ಗೋತ್ರದಿಂದ ರೆಗೂವೇಲನ ಮಗನಾದ ಎಲ್ಯಾಸಾಫ್.
15 for Naphtali, Ahira the son of Enan.ನಫ್ತಾಲಿ ಗೋತ್ರದಿಂದ ಏನಾನನ ಮಗನಾದ ಅಹೀರನು,
16 These were those summoned of the assembly, princes of the tribes of their fathers, the heads of the thousands of Israel.ಸಭೆಯವರಲ್ಲಿ ಪ್ರಸಿದ್ಧವಾದವರೂ ತಮ್ಮ ತಂದೆಗಳ ಗೋತ್ರಗಳ ಪ್ರಭುಗಳೂ ಇಸ್ರಾಯೇಲಿನಲ್ಲಿ ಸಹಸ್ರಗಳ ಮುಖ್ಯ ಸ್ಥರೂ ಇವರೇ.
17 And Moses and Aaron took these men who are expressed by their names,ಹೆಸರುಗಳು ಹೇಳಲ್ಪಟ್ಟ ಈ ಮನುಷ್ಯರನ್ನು ಮೋಶೆ ಆರೋನರು ತಕ್ಕೊಂಡರು.
18 and gathered the whole assembly together on the first of the second month. And they declared their pedigrees after their families, according to their fathers' houses, by the number of the names, from twenty years old and upward, according to their polls.ಸಮಸ್ತ ಸಭೆಯನ್ನು ಎರಡನೇ ತಿಂಗಳಿನ ಮೊದಲನೇ ದಿವಸದಲ್ಲಿ ಕೂಡಿಸಿದರು; ಅವರು ತಮ್ಮ ಗೋತ್ರಗಳಿಗನುಸಾರ ವಾಗಿ ತಂದೆಗಳ ಮನೆಯ ಪ್ರಕಾರ ಹೆಸರುಗಳ ಲೆಕ್ಕವಿರುವ ಇಪ್ಪತ್ತು ವರುಷ ಮೊದಲುಗೊಂಡು ಹೆಚ್ಚಾದ ಪ್ರಾಯವುಳ್ಳವರು ತಲೆ ತಲೆಯಾಗಿ ಜನ್ಮಪತ್ರಿಕೆ ಬರೆಸಿಕೊಂಡರು.
19 As Jehovah had commanded Moses, so he numbered them in the wilderness of Sinai.ಕರ್ತನು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಅವನು ಸೀನಾಯಿ ಅರಣ್ಯದಲ್ಲಿ ಅವರನ್ನು ಲೆಕ್ಕಮಾಡಿದನು.
20 And the sons of Reuben, Israel's eldest son, their generations, after their families, according to their fathers' houses, by the number of the names, according to their polls, every male from twenty years old and upward, all that went forth to military service:ಇಸ್ರಾಯೇಲಿನ ಹಿರೀಮಗನಾದ ರೂಬೇನನ ಮಕ್ಕಳು, ಅವರ ಸಂತತಿಗಳ ಪ್ರಕಾರವಾಗಿಯೂ ಕುಟುಂಬಗಳ ಪ್ರಕಾರವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕ ದಿಂದ ಇಪ್ಪತ್ತು ವರುಷ ಮೊದಲುಗೊಂಡು ಹೆಚ್ಚಾದ ಪ್ರಾಯವುಳ್ಳವರು ಯುದ್ಧಕ್ಕೆ ಹೋಗಲು ಶಕ್ತರಾದ ಗಂಡಸರೆಲ್ಲರು
21 those that were numbered of them, of the tribe of Reuben, were forty-six thousand five hundred.ತಲೆ ತಲೆಯಾಗಿ ರೂಬೇನನ ಗೋತ್ರದಲ್ಲಿ ಎಣಿಸಲ್ಪಟ್ಟವರು ನಲವತ್ತಾರು ಸಾವಿರದ ಐದು ನೂರು.
22 Of the sons of Simeon: their generations, after their families, according to their fathers' houses, those that were numbered of them, by the number of the names, according to their polls, every male from twenty years old and upward, all that went forth to military service:ಸಿಮೆಯೋನನ ಮಕ್ಕಳು, ಅವರ ಗೋತ್ರಗಳ ಪ್ರಕಾರವಾಗಿಯೂ ತಂದೆಗಳ ಮನೆಯ ಪ್ರಕಾರ ವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದ ಗಂಡಸರೆಲ್ಲರು
23 those that were numbered of them, of the tribe of Simeon, were fifty-nine thousand three hundred.ಸಿಮೆಯೋನನ ಗೋತ್ರದಲ್ಲಿ ಎಣಿಸಲ್ಪಟ್ಟವರು ಐವತ್ತೊಂಭತ್ತು ಸಾವಿರದ ಮುನ್ನೂರು.
24 Of the sons of Gad: their generations, after their families, according to their fathers' houses, by the number of the names, from twenty years old and upward, all that went forth to military service:ಗಾದನ ಮಕ್ಕಳು, ಅವರ ಗೋತ್ರಗಳ ಪ್ರಕಾರ ವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದವರೆಲ್ಲರು
25 those that were numbered of them, of the tribe of Gad, were forty-five thousand six hundred and fifty.ಗಾದನ ಗೋತ್ರದಲ್ಲಿ ಎಣಿಸಲ್ಪಟ್ಟವರು ನಲವತ್ತೈದು ಸಾವಿರದ ಆರುನೂರ ಐವತ್ತು.
26 Of the sons of Judah: their generations, after their families, according to their fathers' houses, by the number of the names, from twenty years old and upward, all that went forth to military service:ಯೂದನ ಮಕ್ಕಳು, ಅವರ ಗೋತ್ರಗಳ ಪ್ರಕಾರ ವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದವರೆಲ್ಲರು
27 those that were numbered of them, of the tribe of Judah, were seventy-four thousand six hundred.ಯೆಹೂ ದನ ಗೋತ್ರದಲ್ಲಿ ಎಣಿಸಲ್ಪಟ್ಟವರು ಎಪ್ಪತ್ತನಾಲ್ಕು ಸಾವಿರದ ಆರುನೂರು.
28 Of the sons of Issachar: their generations, after their families, according to their fathers' houses, by the number of the names, from twenty years old and upward, all that went forth to military service:ಇಸ್ಸಾಕಾರನ ಮಕ್ಕಳು, ಅವರ ಗೋತ್ರಗಳ ಪ್ರಕಾರವಾಗಿಯೂ ತಂದೆಗಳ ಮನೆಯ ಪ್ರಕಾರ ವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯ ವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದವರೆಲ್ಲರು
29 those that were numbered of them, of the tribe of Issachar, were fifty-four thousand four hundred.ಇಸ್ಸಾಕಾರನ ಗೋತ್ರದಲ್ಲಿ ಎಣಿಸಲ್ಪಟ್ಟವರು ಐವತ್ತ ನಾಲ್ಕು ಸಾವಿರದ ನಾಲ್ಕುನೂರು.
30 Of the sons of Zebulun: their generations, after their families, according to their fathers' houses, by the number of the names, from twenty years old and upward, all that went forth to military service:ಜೆಬುಲೂನನ ಮಕ್ಕಳು, ಅವರ ಗೋತ್ರಗಳ ಪ್ರಕಾರವಾಗಿಯೂ ತಂದೆಗಳ ಮನೆಯ ಪ್ರಕಾರ ವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯ ವುಳ್ಳವರು ಯುದ್ದಕ್ಕೆ ಹೊರಡಲು ಶಕ್ತರಾದವರೆಲ್ಲರು
31 those that were numbered of them, of the tribe of Zebulun, were fifty-seven thousand four hundred.ಜೆಬುಲೂನ್ ಗೋತ್ರದಲ್ಲಿ ಎಣಿಸಲ್ಪಟ್ಟವರು ಐವತ್ತೇಳು ಸಾವಿರದ ನಾಲ್ಕುನೂರು.
32 Of the sons of Joseph: of the children of Ephraim: their generations, after their families, according to their fathers' houses, by the number of the names, from twenty years old and upward, all that went forth to military service:ಯೋಸೇಫನ ಮಕ್ಕಳಾದ ಎಫ್ರಾಯಾಮ್ ಮಕ್ಕಳು, ಅವರ ಗೋತ್ರಗಳ ಪ್ರಕಾರವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲು ಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದವರೆಲ್ಲರು
33 those that were numbered of them, of the tribe of Ephraim, were forty thousand five hundred.ಎಫ್ರಾಯಾಮ್‌ನ ಗೋತ್ರದಲ್ಲಿ ಎಣಿಸಲ್ಪಟ್ಟವರು ನಲವತ್ತು ಸಾವಿರದ ಐದುನೂರು.
34 Of the children of Manasseh: their generations, after their families, according to their fathers' houses, by the number of the names, from twenty years old and upward, all that went forth to military service:ಮನಸ್ಸೆಯ ಮಕ್ಕಳು, ಅವರ ಗೋತ್ರಗಳ ಪ್ರಕಾರ ವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ಕರಾದವರೆಲ್ಲರೂ
35 those that were numbered of them, of the tribe of Manasseh, were thirty-two thousand two hundred.ಮನ ಸ್ಸೆಯ ಗೋತ್ರದಲ್ಲಿ ಎಣಿಸಲ್ಪಟ್ಟವರು ಮೂವತ್ತೆರಡು ಸಾವಿರದ ಇನ್ನೂರು.
36 Of the sons of Benjamin: their generations, after their families, according to their fathers' houses, by the number of the names, from twenty years old and upward, all that went forth to military service:ಬೆನ್ಯಾವಿಾನ್ ಮಕ್ಕಳು, ಅವರ ಗೋತ್ರಗಳ ಪ್ರಕಾರವಾಗಿಯೂ ತಂದೆಗಳ ಮನೆಯ ಪ್ರಕಾರ ವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯ ವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದವರೆಲ್ಲರು
37 those that were numbered of them, of the tribe of Benjamin, were thirty-five thousand four hundred.ಬೆನ್ಯಾವಿಾನ್ ಗೋತ್ರದಲ್ಲಿ ಎಣಿಸಲ್ಪಟ್ಟವರು ಮೂವತ್ತೈದು ಸಾವಿರದ ನಾಲ್ಕುನೂರು.
38 Of the sons of Dan: their generations, after their families, according to their fathers' houses, by the number of the names, from twenty years old and upward, all that went forth to military service:ದಾನನ ಮಕ್ಕಳು, ಅವರ ಗೋತ್ರಗಳ ಪ್ರಕಾರ ವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದವರೆಲ್ಲರು
39 those that were numbered of them, of the tribe of Dan, were sixty-two thousand seven hundred.ದಾನನ ಗೋತ್ರದಲ್ಲಿ ಎಣಿಸಲ್ಪ ಟ್ಟವರು ಅರವತ್ತೆರಡು ಸಾವಿರದ ಏಳುನೂರು.
40 Of the sons of Asher: their generations, after their families, according to their fathers' houses, by the number of the names, from twenty years old and upward, all that went forth to military service:ಆಶೇರನ ಮಕ್ಕಳು, ಅವರ ಗೋತ್ರಗಳ ಪ್ರಕಾರ ವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದವರೆಲ್ಲರು
41 those that were numbered of them, of the tribe of Asher, were forty-one thousand five hundred.ಆಶೇರನ ಗೋತ್ರದಲ್ಲಿ ಎಣಿಸಲ್ಪಟ್ಟವರು ನಲವತ್ತೊಂದು ಸಾವಿರದ ಐದುನೂರು.
42 Of the sons of Naphtali: their generations, after their families, according to their fathers' houses, by the number of the names, from twenty years old and upward, all that went forth to military service:ನಫ್ತಾಲಿನ ಮಕ್ಕಳು, ಅವರ ಗೋತ್ರಗಳ ಪ್ರಕಾರ ವಾಗಿಯೂ ತಂದೆಗಳ ಮನೆಯ ಪ್ರಕಾರವಾಗಿಯೂ ವಂಶಾವಳಿಯ ಹೆಸರುಗಳ ಲೆಕ್ಕದಿಂದ ಇಪ್ಪತ್ತು ವರುಷ ಮೊದಲುಗೊಂಡು ಮೇಲ್ಪಟ್ಟ ಪ್ರಾಯವುಳ್ಳವರು ಯುದ್ಧಕ್ಕೆ ಹೊರಡಲು ಶಕ್ತರಾದವರೆಲ್ಲರು
43 those that were numbered of them, of the tribe of Naphtali, were fifty-three thousand four hundred.ನಫ್ತಾಲಿನ ಗೋತ್ರದಲ್ಲಿ ಎಣಿಸಲ್ಪಟ್ಟವರು ಐವತ್ತಮೂರು ಸಾವಿರದ ನಾಲ್ಕುನೂರು.
44 These are those that were numbered, whom Moses and Aaron numbered, and the princes of Israel, the twelve men: each one was for the house of his fathers.ಮೋಶೆ ಆರೋನರೂ ಇಸ್ರಾಯೇಲಿನ ಮುಖ್ಯಸ್ಥರೂ ಎಣಿಸಿದವರು ಇವರೇ. ಇವರು ತಮ್ಮ ತಮ್ಮ ತಂದೆಗಳ ಮನೆಗಳಿಗೆ ಒಬ್ಬೊಬ್ಬನಂತೆ ಹನ್ನೆರಡು ಮಂದಿಯಾಗಿದ್ದರು.
45 And all those that were numbered of the children of Israel, according to their fathers' houses, from twenty years old and upward, all that went forth to military service in Israel,ಹೀಗೆ ಇಸ್ರಾಯೇಲ್ ಮಕ್ಕಳಲ್ಲಿ ಎಣಿಸಲ್ಪಟ್ಟವ ರೆಲ್ಲರು ಅವರ ತಂದೆಗಳ ಮನೆಗಳ ಪ್ರಕಾರ ಇಪ್ಪತ್ತು ವರುಷದವರೂ ಅದಕ್ಕಿಂತ ಹೆಚ್ಚಾದ ಪ್ರಾಯವುಳ್ಳ ವರೂ ಇಸ್ರಾಯೇಲಿನಲ್ಲಿ ಯುದ್ಧಕ್ಕೆ ಹೊರಡಲು ಶಕ್ತರಾದವರೂ
46 all they that were numbered were six hundred and three thousand five hundred and fifty.ಆರು ಲಕ್ಷದ ಮೂರು ಸಾವಿರದ ಐದುನೂರ ಐವತ್ತು ಮಂದಿಯಾಗಿದ್ದರು.
47 But the Levites after the tribe of their fathers were not numbered among them.ಆದರೆ ಲೇವಿಯರು ತಮ್ಮ ತಂದೆಗಳ ಗೋತ್ರದ ಪ್ರಕಾರ ಅವರೊಳಗೆ ಎಣಿಸಲ್ಪಡಲಿಲ್ಲ.
48 For Jehovah had spoken to Moses, saying,ಇದಲ್ಲದೆ ಕರ್ತನು ಮಾತನಾಡಿ ಮೋಶೆಗೆ ಹೇಳಿದ್ದೇನಂದರೆ--
49 Only thou shalt not number the tribe of Levi, neither take the sum of them among the children of Israel.ಲೇವಿ ಗೋತ್ರವನ್ನು ಮಾತ್ರ ಎಣಿಸದೆ ಇಸ್ರಾ ಯೇಲ್ ಮಕ್ಕಳೊಳಗೆ ಅವರ ಲೆಕ್ಕವನ್ನು ತಕ್ಕೊಳ್ಳಬೇಡ.
50 But thou, appoint the Levites over the tabernacle of testimony, and over all the vessels thereof, and over all things that belong to it: they shall bear the tabernacle, and all its vessels; and they shall serve it, and round about the tabernacle shall they encamp;ಆದರೆ ನೀನು ಲೇವಿಯರನ್ನು ಸಾಕ್ಷಿಯ ಗುಡಾರ ಕ್ಕೋಸ್ಕರವೂ ಅದರ ಎಲ್ಲಾ ವಸ್ತುಗಳಿಗೋಸ್ಕರವೂ ಅದಕ್ಕೆ ಬೇಕಾದ ಎಲ್ಲವುಗಳಿಗೋಸ್ಕರವೂ ನೇಮಿಸು. ಅವರು ಗುಡಾರವನ್ನೂ ಅದರ ಎಲ್ಲಾ ವಸ್ತುಗಳನ್ನೂ ಹೊತ್ತುಕೊಳ್ಳುವರು, ಇದರ ಸೇವೆಮಾಡಿ ಗುಡಾರದ ಸುತ್ತಮುತ್ತಲೂ ಇಳಿದುಕೊಳ್ಳಬೇಕು.
51 and when the tabernacle setteth forward, the Levites shall take it down; and when the tabernacle encampeth, the Levites shall set it up; and the stranger that cometh near shall be put to death.ಗುಡಾರವು ಹೊರಡುವಾಗ ಲೇವಿಯರು ಅದನ್ನು ಬಿಚ್ಚಲಿ; ಗುಡಾರವು ಇಳಿಯುವಾಗ ಲೇವಿಯರು ಅದನ್ನು ನಿಲ್ಲಿಸಲಿ; ಪರಕೀಯನು ಸವಿಾಪಿಸಿದರೆ ಅವನು ಸಾಯಬೇಕು.
52 And the children of Israel shall encamp every man in his camp, and every man by his own standard, according to their hosts;ಇಸ್ರಾಯೇಲ್ ಮಕ್ಕಳು ತಮ್ಮ ತಮ್ಮ ಸೈನ್ಯಗಳ ಪ್ರಕಾರ ಒಬ್ಬೊಬ್ಬನು ತನ್ನ ದಂಡಿನ ಬಳಿಯಲ್ಲಿ ತನ್ನ ಧ್ವಜದ ಬಳಿಯಲ್ಲಿ ಇಳಿದುಕೊಳ್ಳಬೇಕು.
53 but the Levites shall encamp round about the tabernacle of testimony, that there come not wrath upon the assembly of the children of Israel; and the Levites shall keep the charge of the tabernacle of testimony.ಆದರೆ ಲೇವಿಯರು ಸಾಕ್ಷಿಯ ಗುಡಾರದ ಸುತ್ತಲೂ ಇಳಿದು ಕೊಳ್ಳಬೇಕು; ಹೀಗೆ ಇಸ್ರಾಯೇಲ್ ಮಕ್ಕಳ ಸಭೆಯ ಮೇಲೆ ಕೋಪಬಾರದಿರುವದು; ಲೇವಿಯರು ಸಾಕ್ಷಿಯ ಗುಡಾರವನ್ನು ಕಾಯುವವರಾಗಿರಬೇಕು.
54 And the children of Israel did so; according to all that Jehovah had commanded Moses, so did they.ಇಸ್ರಾಯೇಲ್ ಮಕ್ಕಳು ಹಾಗೆಯೇ ಮಾಡಿದರು. ಕರ್ತನು ಮೋಶೆಗೆ ಆಜ್ಞಾಪಿಸಿದ ಎಲ್ಲವುಗಳ ಪ್ರಕಾರವೇ ಅವರು ಮಾಡಿದರು.
Kannada Bible