Bible

Psalm 99 - WEB (Kannada)

1 Yahweh reigns! Let the peoples tremble. He sits enthroned among the cherubim. Let the earth be moved.ಕರ್ತನು ಆಳುತ್ತಾನೆ; ಜನಗಳು ನಡುಗಲಿ; ಆತನು ಕೆರೂಬಿಗಳ ಮಧ್ಯದಲ್ಲಿ ಕೂತಿ ದ್ದಾನೆ; ಭೂಮಿಯು ಕದಲಲಿ.

2 Yahweh is great in Zion. He is high above all the peoples.ಕರ್ತನು ಚೀಯೋನಿನಲ್ಲಿ ದೊಡ್ಡವನಾಗಿಯೂ ಎಲ್ಲಾ ಜನಗಳ ಮೇಲೆ ಉನ್ನತನಾಗಿಯೂ ಇದ್ದಾನೆ.

3 Let them praise your great and awesome name. He is Holy!ನಿನ್ನ ಭಯಂಕರವಾದ ಹೆಸರನ್ನು ಅವರು ಕೊಂಡಾ ಡಲಿ; ಅದು ಪರಿಶುದ್ಧವಾದದ್ದೇ.

4 The King's strength also loves justice. You do establish equity. You execute justice and righteousness in Jacob.ಅರಸನ ಬಲವು ನ್ಯಾಯವನ್ನು ಪ್ರೀತಿ ಮಾಡುತ್ತದೆ; ನೀನು ನೀತಿಯನ್ನು ಸ್ಥಿರಪಡಿಸುತ್ತೀ; ನ್ಯಾಯವನ್ನೂ ನೀತಿಯನ್ನೂ ಯಾಕೋ ಬಿನಲ್ಲಿ ನೀನು ಮಾಡಿದ್ದೀ.

5 Exalt Yahweh our God. Worship at his footstool. He is Holy!ನಮ್ಮ ದೇವರಾದ ಕರ್ತ ನನ್ನು ಉನ್ನತಪಡಿಸಿರಿ; ಆತನ ಪಾದ ಪೀಠದಲ್ಲಿ ಆರಾ ಧಿಸಿರಿ; ಆತನು ಪರಿಶುದ್ಧನೇ.

6 Moses and Aaron were among his priests, Samuel among those who call on his name; They called on Yahweh, and he answered them.ಆತನ ಯಾಜಕರಲ್ಲಿ ಮೋಶೆಯೂ ಆರೋನನೂ ಆತನ ಹೆಸರನ್ನು ಕರೆಯುವವರಲ್ಲಿ ಸಮುವೇಲನೂ; ಅವರು ಕರ್ತನನ್ನು ಕರೆದಾಗ ಆತನು ಅವರಿಗೆ ಉತ್ತರ ಕೊಟ್ಟನು.

7 He spoke to them in the pillar of cloud. They kept his testimonies, The statute that he gave them.ಆತನು ಮೇಘಸ್ತಂಭದಲ್ಲಿಂದ ಅವರ ಸಂಗಡ ಮಾತನಾಡಿದನು; ಆತನ ಸಾಕ್ಷಿಗಳನ್ನೂ ಆತನು ಅವರಿಗೆ ಕೊಟ್ಟ ನಿಯಮಗಳನ್ನೂ ಅವರು ಕೈಕೊಂಡರು.

8 You answered them, Yahweh our God. You are a God who forgave them, Although you took vengeance for their doings.ನಮ್ಮ ದೇವರಾದ ಓ ಕರ್ತನೇ, ನೀನು ಅವರಿಗೆ ಉತ್ತರಕೊಟ್ಟೆ; ಅವರ ಕೃತ್ಯಗಳಿಗೋಸ್ಕರ ನೀನು ಅವ ರಿಗೆ ಮುಯ್ಯಿಗೆ ಮುಯ್ಯಿ ಕೊಡುವಾತನಾಗಿದ್ದರೂ ಅವರನ್ನು ಕ್ಷಮಿಸುವ ದೇವರು ನೀನಾಗಿದ್ದೀ.

9 Exalt Yahweh, our God. Worship at his holy hill, For Yahweh, our God, is holy!ನಮ್ಮ ದೇವರಾದ ಕರ್ತನನ್ನು ಉನ್ನತಪಡಿಸಿರಿ; ಆತನ ಪರಿ ಶುದ್ಧ ಪರ್ವತದಲ್ಲಿ ಆರಾಧಿಸಿರಿ; ನಮ್ಮ ದೇವರಾದ ಕರ್ತನು ಪರಿಶುದ್ಧನೇ.

Kannada Bible