Bible

Mark 9 - ASV (Kannada)

1 And he said unto them, Verily I say unto you, There are some here of them that stand `by', who shall in no wise taste of death, till they see the kingdom of God come with power.ಆತನು ಅವರಿಗೆ--ಇಲ್ಲಿ ನಿಂತವರಲ್ಲಿ ಕೆಲವರು ದೇವರ ರಾಜ್ಯವು ಬಲದೊಂದಿಗೆ ಬರುವದನ್ನು ನೋಡುವವರೆಗೆ ಮರಣದ ರುಚಿಯನ್ನು ನೋಡುವದೇ ಇಲ್ಲ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು.

2 And after six days Jesus taketh with him Peter, and James, and John, and bringeth them up into a high mountain apart by themselves: and he was transfigured before them;ಯೇಸು ಆರು ದಿವಸಗಳಾದ ಮೇಲೆ ಪೇತ್ರ ಯಾಕೋಬ ಮತ್ತು ಯೋಹಾನರನ್ನು ತನ್ನೊಂದಿಗೆ ಕರೆದುಕೊಂಡು ಏಕಾಂತವಾಗಿ ಒಂದು ಎತ್ತರವಾದ ಬೆಟ್ಟಕ್ಕೆ ಹೋದನು; ಆಗ ಆತನು ಅವರ ಮುಂದೆ ರೂಪಾಂತರಗೊಂಡನು.

3 and his garments became glistering, exceeding white, so as no fuller on earth can whiten them.ಮತ್ತು ಆತನ ಉಡುಪು ಭೂಮಿಯ ಮೇಲಿರುವ ಯಾವ ಅಗಸನೂ ಬಿಳುಪು ಮಾಡಲಾರದಷು ಹಿಮದಂತೆ ಹೆಚ್ಚು ಬೆಳ್ಳಗಾಗಿ ಹೊಳೆಯುತ್ತಿತ್ತು.

4 And there appeared unto them Elijah with Moses: and they were talking with Jesus.ಆಗ ಅಲ್ಲಿ ಎಲೀಯನು ಮೋಶೆ ಯೊಂದಿಗೆ ಅವರಿಗೆ ಕಾಣಿಸಿಕೊಂಡು ಯೇಸುವಿನೊ ಂದಿಗೆ ಮಾತನಾಡುತ್ತಿದ್ದರು.

5 And Peter answereth and saith to Jesus, Rabbi, it is good for us to be here: and let us make three tabernacles; one for thee, and one for Moses, and one for Elijah.ಆಗ ಪೇತ್ರನು ಯೇಸು ವಿಗೆ-- ಬೋಧಕನೇ, ನಾವು ಇಲ್ಲೆ ಇರುವದು ನಮಗೆ ಒಳ್ಳೇದು; ನಿನಗೊಂದು ಮೋಶೆಗೊಂದು ಮತ್ತು ಎಲೀಯನಿಗೊಂದು ಮೂರು ಗುಡಾರಗಳನ್ನು ನಾವು ಕಟ್ಟುವೆವು ಎಂದು ಹೇಳಿದನು.

6 For he knew not what to answer; for they became sore afraid.ಅವನು ಏನು ಮಾತನಾಡಬೇಕೋ ಅವನಿಗೆ ತಿಳಿದಿರಲಿಲ್ಲ; ಯಾಕಂ ದರೆ ಅವರು ಬಹಳವಾಗಿ ಹೆದರಿದ್ದರು.

7 And there came a cloud overshadowing them: and there came a voice out of the cloud, This is my beloved Son: hear ye him.ಆಗ ಅಲ್ಲಿ ಮೋಡವು ಅವರ ಮೇಲೆ ಕವಿದುಕೊಂಡಿತು; ಮತ್ತು --ಈತನು ಪ್ರಿಯನಾಗಿರುವ ನನ್ನ ಮಗನು; ಈತನ ಮಾತನ್ನು ಕೇಳಿರಿ ಎಂದು ಹೇಳಿದ ಧ್ವನಿಯು ಮೋಡದೊಳಗಿಂದ ಬಂತು.

8 And suddenly looking round about, they saw no one any more, save Jesus only with themselves.ಕೂಡಲೆ ಅವರು ಸುತ್ತಲೂ ನೋಡಲಾಗಿ ತಮ್ಮೊಂದಿಗೆ ಯೇಸುವನ್ನು ಹೊರತು ಇನ್ನಾರನ್ನೂ ನೋಡಲಿಲ್ಲ.

9 And as they were coming down from the mountain, he charged them that they should tell no man what things they had seen, save when the Son of man should have risen again from the dead.ಅವರು ಬೆಟ್ಟದಿಂದಿಳಿದು ಬರುವಾಗ ಮನುಷ್ಯ ಕುಮಾರನು ಸತ್ತವರೊಳಗಿಂದ ಎದ್ದು ಬರುವ ವರೆಗೆ ತಾವು ಕಂಡವುಗಳನ್ನು ಯಾರಿಗೂ ಹೇಳಬಾರದೆಂದು ಆತನು ಅವರಿಗೆ ಖಂಡಿತವಾಗಿ ಹೇಳಿದನು.

10 And they kept the saying, questioning among themselves what the rising again from the dead should mean.ಮತ್ತು ಸತ್ತವರೊಳಗಿಂದ ಎದ್ದು ಬರುವದರ ಅರ್ಥವೇನೆಂದು ಅವರು ಒಬ್ಬರಿಗೊಬ್ಬರು ಪ್ರಶ್ನಿಸಿಕೊಳ್ಳುತ್ತಾ ಆ ಮಾತನ್ನು ತಮ್ಮೊಳಗೆ ಇಟ್ಟುಕೊಂಡರು.

11 And they asked him, saying, `How is it' that the scribes say that Elijah must first come?ಇದಲ್ಲದೆ ಅವರು ಆತನಿಗೆ--ಎಲೀಯನು ಮೊದಲು ಬರುವದು ಅಗತ್ಯವೆಂದು ಶಾಸ್ತ್ರಿಗಳು ಯಾಕೆ ಹೇಳುತ್ತಾರೆ ಎಂದು ಕೇಳಿದರು.

12 And he said unto them, Elijah indeed cometh first, and restoreth all things: and how is it written of the Son of man, that he should suffer many things and be set at nought?ಆತನು ಅವರಿಗೆ ಪ್ರತ್ಯುತ್ತರವಾಗಿ-- ನಿಜವಾಗಿಯೂ ಎಲೀಯನು ಮೊದಲು ಬಂದು ಎಲ್ಲವುಗಳನ್ನು ಯಥಾಸ್ಥಾನಪಡಿಸುತ್ತಾನೆ; ಆದರೆ ಮನುಷ್ಯಕುಮಾರನು ಬಹಳ ಶ್ರಮೆಗಳನ್ನನುಭವಿ ಸುವದು ಮತ್ತು ತಿರಸ್ಕರಿಸಲ್ಪಡುವದು ಅಗತ್ಯವೆಂದು ಆತನ ವಿಷಯವಾಗಿ ಬರೆದಿರುವದು ಹೇಗೆ?

13 But I say unto you, that Elijah is come, and they have also done unto him whatsoever they would, even as it is written of him.ಆದರೆ ನಾನು ನಿಮಗೆ ಹೇಳುವದೇನಂದರೆ-- ಎಲೀಯನು ನಿಜವಾಗಿಯೂ ಬಂದನು. ಅವನ ವಿಷಯವಾಗಿ ಬರೆದಿರುವಂತೆ ಅವರು ತಮ್ಮ ಮನಸ್ಸಿಗೆ ಬಂದ ಹಾಗೆ ಅವನಿಗೆ ಮಾಡಿದರು ಅಂದನು.

14 And when they came to the disciples, they saw a great multitude about them, and scribes questioning with them.ಆತನು ತನ್ನ ಶಿಷ್ಯರ ಬಳಿಗೆ ಬಂದಾಗ ಅವರ ಸುತ್ತಲೂ ದೊಡ್ಡ ಸಮೂಹವನ್ನೂ ಶಾಸ್ತ್ರಿಗಳು ಅವರೊಂದಿಗೆ ತರ್ಕಿಸುತ್ತಿರುವದನ್ನೂ ಕಂಡನು.

15 And straightway all the multitude, when they saw him, were greatly amazed, and running to him saluted him.ಕೂಡಲೆ ಜನರೆಲ್ಲರೂ ಆತನನ್ನು ನೋಡಿ ಬಹು ಆಶ್ಚರ್ಯಪಟ್ಟು ಓಡುತ್ತಾ ಬಂದು ಆತನನ್ನು ವಂದಿಸಿ ದರು.

16 And he asked them, What question ye with them?ಆಗ ಆತನು ಶಾಸ್ತ್ರಿಗಳಿಗೆ-- ಅವರೊಂದಿಗೆ ನೀವು ಏನು ತರ್ಕಮಾಡುತ್ತೀರಿ ಎಂದು ಕೇಳಿದನು.

17 And one of the multitude answered him, Teacher, I brought unto thee my son, who hath a dumb spirit;ಆಗ ಸಮೂಹದಲ್ಲಿ ಒಬ್ಬನು ಪ್ರತ್ಯುತ್ತರವಾಗಿ--ಬೋಧಕನೇ, ಮೂಕದೆವ್ವ ಹಿಡಿದ ನನ್ನ ಮಗನನ್ನು ನಿನ್ನ ಬಳಿಗೆ ತಕ್ಕೊಂಡು ಬಂದೆನು.

18 and wheresoever it taketh him, it dasheth him down: and he foameth, and grindeth his teeth, and pineth away: and I spake to thy disciples that they should cast it out; and they were not able.ಅದು ಅವನನ್ನು ತೆಗೆದುಕೊಂಡು ಹೋದಲ್ಲೆಲ್ಲಾ ಅವನನ್ನು ಒದ್ದಾಡಿಸುತ್ತದೆ; ಮತ್ತು ಅವನು ನೊರೆ ಸುರಿಸುತ್ತಾ ತನ್ನ ಹಲ್ಲು ಕಡಿಯುತ್ತಾ ಕುಂದಿ ಹೋಗುತ್ತಾನೆ; ಅದನ್ನು (ದೆವ್ವವನ್ನು) ಬಿಡಿಸಬೇಕೆಂದು ನಾನು ನಿನ ಶಿಷ್ಯರಿಗೆ ಹೇಳಿದೆನು; ಆದರೆ ಅವರಿಂದ ಆಗಲಿಲ್ಲ ಎಂದು ಹೇಳಿದನು.

19 And he answereth them and saith, O faithless generation, how long shall I be with you? how long shall I bear with you? bring him unto me.ಅದಕ್ಕಾತನು--ಓ ನಂಬಿಕೆ ಯಿಲ್ಲದ ಸಂತಾನವೇ, ಎಷ್ಟು ಕಾಲ ನಾನು ನಿಮ್ಮೊಂ ದಿಗೆ ಇರಲಿ? ಎಷ್ಟು ಕಾಲ ನಾನು ನಿಮ್ಮನ್ನು ಸಹಿಸಲಿ? ಅವನನ್ನು ನನ್ನ ಬಳಿಗೆ ತಕ್ಕೊಂಡು ಬನ್ನಿರಿ ಎಂದು ಹೇಳಿದನು.

20 And they brought him unto him: and when he saw him, straightway the spirit tare him grievously; and he fell on the ground, and wallowed foaming.ಆಗ ಅವರು ಅವನನ್ನು ಆತನ ಬಳಿಗೆ ತಂದರು; ಅವನು ಆತನನ್ನು ನೋಡಿದ ತಕ್ಷಣವೇ ಆ ಆತ್ಮವು ಅವನನ್ನು ಒದ್ದಾಡಿಸಿದ್ದರಿಂದ ಅವನು ನೆಲಕ್ಕೆ ಬಿದ್ದು ನೊರೆ ಸುರಿಸುತ್ತಾ ಹೊರಳಾಡಿದನು.

21 And he asked his father, How long time is it since this hath come unto him? And he said, From a child.ಆತನು ಅವನ ತಂದೆಗೆ--ಇದು ಅವನನ್ನು ಹಿಡಿದು ಎಷ್ಟು ಕಾಲವಾಯಿತು ಎಂದು ಕೇಳಲು ಅವನು-- ಬಾಲ್ಯದಿಂದಲೇ;

22 And oft-times it hath cast him both into the fire and into the waters, to destroy him: but if thou canst do anything, have compassion on us, and help us.ಅದು ಅವನನ್ನು ನಾಶಪಡಿಸಲು ಅನೇಕ ಸಾರಿ ಬೆಂಕಿಯೊಳಗೂ ನೀರಿನೊಳಗೂ ಹಾಕಿತು; ಆದರೆ ನೀನು ಏನಾದರೂ ಮಾಡಲು ಸಾಧ್ಯ ವಿದ್ದರೆ ನಮ್ಮ ಮೇಲೆ ಕರುಣೆಯಿಟ್ಟು ನಮಗೆ ಸಹಾಯ ಮಾಡು ಅಂದನು.

23 And Jesus said unto him, If thou canst! All things are possible to him that believeth.ಆಗ ಯೇಸು ಅವನಿಗೆ--ನೀನು ನಂಬುವದಾದರೆ ಆಗುವದು; ನಂಬುವವನಿಗೆ ಎಲ್ಲವು ಸಾಧ್ಯವೇ ಎಂದು ಹೇಳಿದನು.

24 Straightway the father of the child cried out, and said, I believe; help thou mine unbelief.ತಕ್ಷಣವೇ ಮಗುವಿನ ತಂದೆಯು--ಕರ್ತನೇ, ನಾನು ನಂಬು ತ್ತೇನೆ; ನನಗೆ ಅಪನಂಬಿಕೆ ಇಲ್ಲದಂತೆ ನೀನು ಸಹಾಯ ಮಾಡು ಎಂದು ಕಣ್ಣೀರಿನಿಂದ ಕೂಗಿ ಹೇಳಿದನು.

25 And when Jesus saw that a multitude came running together, he rebuked the unclean spirit, saying unto him, Thou dumb and deaf spirit, I command thee, come out of him, and enter no more into him.ಆಗ ಜನರು ಕೂಡಿಕೊಂಡು ಓಡಿ ಬರುವದನ್ನು ಯೇಸು ನೋಡಿ ಆ ಅಶುದ್ಧಾತ್ಮವನ್ನು ಗದರಿಸಿ ಅದಕ್ಕೆ --ಮೂಕ ಮತ್ತು ಕಿವುಡಾದ ಆತ್ಮವೇ, ನೀನು ಅವನೊಳಗಿಂದ ಹೊರಗೆ ಬಾ; ಇನ್ನೆಂದಿಗೂ ಅವ ನೊಳಗೆ ಸೇರದಿರು ಎಂದು ನಾನು ನಿನಗೆ ಖಂಡಿತವಾಗಿ ಹೇಳುತ್ತೇನೆ ಅಂದನು.

26 And having cried out, and torn him much, he came out: and `the boy' became as one dead; insomuch that the more part said, He is dead.ಆಗ ಅದು ಕೂಗಿ ಅವನನ್ನು ಬಹಳವಾಗಿ ಒದ್ದಾಡಿಸಿ ಅವನೊಳಗಿಂದ ಹೊರಗೆ ಬಂತು; ಮತ್ತು ಅವನು ಸತ್ತವನ ಹಾಗೆ ಬಿದ್ದದರಿಂದ ಅನೇಕರು--ಅವನು ಸತ್ತಿದ್ದಾನೆ ಅಂದರು.

27 But Jesus took him by the hand, and raised him up; and he arose.ಆದರೆ ಯೇಸು ಕೈ ಹಿಡಿದು ಅವನನ್ನು ಮೇಲಕ್ಕೆತ್ತಲು ಅವನು ಎದ್ದನು.

28 And when he was come into the house, his disciples asked him privately, `How is it' that we could not cast it out?ಆತನು ಮನೆಯೊಳಕ್ಕೆ ಬಂದಾಗ ಆತನ ಶಿಷ್ಯರು ಆತನಿಗೆ ಪ್ರತ್ಯೇಕವಾಗಿ--ಆ ಅಶುದ್ಧಾತ್ಮವನ್ನು ಹೊರಗೆ ಹಾಕುವದಕ್ಕೆ ನಮ್ಮಿಂದ ಯಾಕೆ ಆಗಲಿಲ್ಲ ಎಂದು ಕೇಳಿದರು.

29 And he said unto them, This kind can come out by nothing, save by prayer.ಆತನು ಅವರಿಗೆ--ಈ ತರವಾ ದದ್ದು ಪ್ರಾರ್ಥನೆ ಉಪವಾಸಗಳಿಂದ ಹೊರತು ಬೇರೆ ಯಾವದರಿಂದಲೂ ಹೊರಗೆ ಬರಲಾರದು ಅಂದನು.

30 And they went forth from thence, and passed through Galilee; and he would not that any man should know it.ಅವರು ಅಲ್ಲಿಂದ ಹೊರಟು ಗಲಿಲಾಯವನ್ನು ಹಾದುಹೋಗುತ್ತಿದ್ದರು. ಇದು ಯಾರಿಗೂ ತಿಳಿಯಬಾರದೆಂದು ಆತನಿಗೆ ಮನಸ್ಸಿತ್ತು.

31 For he taught his disciples, and said unto them, The Son of man is delivered up into the hands of men, and they shall kill him; and when he is killed, after three days he shall rise again.ಯಾಕಂದರೆ ಆತನು ತನ್ನ ಶಿಷ್ಯರಿಗೆ ಬೋಧಿಸುತ್ತಾ-- ಮನುಷ್ಯ ಕುಮಾರನು ಮನುಷ್ಯರ ಕೈಗಳಿಗೆ ಒಪ್ಪಿಸಲ್ಪಡುತ್ತಾನೆ; ಅವರು ಆತನನ್ನು ಕೊಲ್ಲುವರು; ಆತನು ಕೊಲ್ಲಲ್ಪಟ್ಟ ತರುವಾಯ ಮೂರನೆಯ ದಿನದಲ್ಲಿ ಏಳುವನು ಅಂದನು.

32 But they understood not the saying, and were afraid to ask him.ಆದರೆ ಅವರು ಆ ಮಾತನ್ನು ಗ್ರಹಿಸ ಲಿಲ್ಲ, ಮತ್ತು ಆತನನ್ನು ಕೇಳುವದಕ್ಕೂ ಭಯಪಟ್ಟರು.

33 And they came to Capernaum: and when he was in the house he asked them, What were ye reasoning on the way?ಆತನು ಕಪೆರ್ನೌಮಿಗೆ ಬಂದು ಮನೆಯಲ್ಲಿದ್ದಾಗ ಅವರಿಗೆ--ದಾರಿಯಲ್ಲಿ ನಿಮ್ಮೊಳಗೆ ನೀವು ಏನು ವಾಗ್ವಾದ ಮಾಡಿದಿರಿ ಎಂದು ಕೇಳಿದನು.

34 But they held their peace: for they had disputed one with another on the way, who `was' the greatest.ಆದರೆ ಅವರು ಸುಮ್ಮನಿದ್ದರು; ಯಾಕಂದರೆ ಅವರು ತಮ್ಮೊಳಗೆ ಯಾವನು ಅತಿ ದೊಡ್ಡವನಾಗಿರಬೇಕೆಂದು ದಾರಿ ಯಲ್ಲಿ ವಾಗ್ವಾದ ಮಾಡಿದ್ದರು.

35 And he sat down, and called the twelve; and he saith unto them, If any man would be first, he shall be last of all, and servant of all.ಆಗ ಆತನು ಕೂತುಕೊಂಡು ಹನ್ನೆರಡು ಮಂದಿಯನ್ನು ಕರೆದು ಅವರಿಗೆ--ಯಾವನಾದರೂ ಮೊದಲಿನವನಾಗಬೇ ಕೆಂದು ಇಷ್ಟಪಟ್ಟರೆ ಅವನು ಎಲ್ಲರಿಗಿಂತ ಕಡೆಯ ವನೂ ಎಲ್ಲರ ಸೇವಕನೂ ಆಗಿರಬೇಕು ಅಂದನು.

36 And he took a little child, and set him in the midst of them: and taking him in his arms, he said unto them,ಆತನು ಒಂದು ಮಗುವನ್ನು ತಕ್ಕೊಂಡು ಅದನ್ನು ಅವರ ಮಧ್ಯದಲ್ಲಿ ನಿಲ್ಲಿಸಿ ತನ್ನ ಕೈಗಳಲ್ಲಿ ಅದನ್ನು ಎತ್ತಿಕೊಂಡು ಅವರಿಗೆ--

37 Whosoever shall receive one of such little children in my name, receiveth me: and whosoever receiveth me, receiveth not me, but him that sent me.ಯಾವನಾದರೂ ಇಂಥ ಮಕ್ಕಳಲ್ಲಿ ಒಂದನ್ನು ನನ್ನ ಹೆಸರಿನಲ್ಲಿ ಅಂಗೀಕರಿಸಿದರೆ ನನ್ನನ್ನು ಅಂಗೀಕರಿಸುತ್ತಾನೆ; ಮತ್ತು ಯಾವನು ನನ್ನನ್ನು ಅಂಗೀಕರಿಸುವನೋ ಅವನು ನನ್ನನ್ನಲ್ಲದೆ ನನ್ನನ್ನು ಕಳುಹಿಸಿದಾತನನ್ನೇ ಅಂಗೀಕರಿಸುತ್ತಾನೆ ಅಂದನು.

38 John said unto him, Teacher, we saw one casting out demons in thy name; and we forbade him, because he followed not us.ಯೋಹಾನನು ಆತನಿಗೆ -- ಬೋಧಕನೇ, ನಮ್ಮನ್ನು ಹಿಂಬಾಲಿಸದವನೊಬ್ಬನು ನಿನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವದನ್ನು ನಾವು ನೋಡಿ ಅವನು ನಮ್ಮನ್ನು ಹಿಂಬಾಲಿಸುವವನಲ್ಲವಾದ್ದರಿಂದ ನಾವು ಅವನಿಗೆ ಅಡ್ಡಿಮಾಡಿದೆವು ಎಂದು ಹೇಳಿದನು.

39 But Jesus said, Forbid him not: for there is no man who shall do a mighty work in my name, and be able quickly to speak evil of me.ಆದರೆ ಯೇಸು--ಅವನಿಗೆ ಅಡ್ಡಿಮಾಡಬೇಡಿರಿ; ಯಾಕಂದರೆ ನನ್ನ ಹೆಸರಿನಲ್ಲಿ ಅದ್ಭುತಕಾರ್ಯವನ್ನು ಮಾಡಿ ನನ್ನ ವಿಷಯದಲ್ಲಿ ಹಗುರಾಗಿ ಕೆಟ್ಟದ್ದನ್ನು ಮಾತನಾಡುವ ಒಬ್ಬನಾದರೂ ಇಲ್ಲ.

40 For he that is not against us is for us.ಯಾಕಂದರೆ ನಮಗೆ ವಿರೋಧಿಯಾಗಿರದವನು ನಮ್ಮ ಪಕ್ಷದವ ನಾಗಿದ್ದಾನೆ.

41 For whosoever shall give you a cup of water to drink, because ye are Christ's, verily I say unto you, he shall in no wise lose his reward.ಇದಲ್ಲದೆ ನೀವು ಕ್ರಿಸ್ತನಿಗೆ ಸೇರಿದವ ರಾದದರಿಂದ ಯಾವನಾದರೂ ನನ್ನ ಹೆಸರಿನಲ್ಲಿ ನಿಮಗೆ ಒಂದು ತಂಬಿಗೆ ನೀರನ್ನು ಕೊಟ್ಟರೆ ಅವನು ತನ್ನ ಪ್ರತಿ ಫಲವನ್ನು ಕಳಕೊಳ್ಳುವದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.

42 And whosoever shall cause one of these little ones that believe on me to stumble, it were better for him if a great millstone were hanged about his neck, and he were cast into the sea.ನನ್ನನ್ನು ನಂಬುವ ಈ ಚಿಕ್ಕವರಲ್ಲಿ ಒಬ್ಬನಿಗೆ ಯಾವನಾದರೂ ಅಡ್ಡಿಯಾದರೆ ಅವನ ಕೊರಳಿಗೆ ಬೀಸುವ ಕಲ್ಲನ್ನು ತೂಗಹಾಕಿ ಅವ ನನ್ನು ಸಮುದ್ರದಲ್ಲಿ ಬಿಸಾಡಿಬಿಡುವದು ಅವನಿಗೆ ಒಳ್ಳೇದು.

43 And if thy hand cause thee to stumble, cut it off: it is good for thee to enter into life maimed, rather than having thy two hands to go into hell, into the unquenchable fire.ನಿನ್ನ ಕೈ ನಿನಗೆ ಅಭ್ಯಂತರ ಮಾಡಿದರೆ ಅದನ್ನು ಕಡಿದುಹಾಕು; ಯಾಕಂದರೆ ಎರಡು ಕೈಗಳು ಳ್ಳವನಾಗಿ ಎಂದಿಗೂ ಆರದ ಬೆಂಕಿಯ ನರಕದೊಳಗೆ ಹೋಗುವದಕ್ಕಿಂತ ಅಂಗಹೀನನಾಗಿ ಜೀವದಲ್ಲಿ ಸೇರು ವದು ನಿನಗೆ ಒಳ್ಳೇದು;

44 `where their worm dieth not, and the fire is not quenched.'ಅಲ್ಲಿ ಅವರ ಹುಳವು ಸಾಯುವದಿಲ್ಲ ಮತ್ತು ಬೆಂಕಿಯು ಆರುವದಿಲ್ಲ.

45 And if thy foot cause thee to stumble, cut it off: it is good for thee to enter into life halt, rather than having thy two feet to be cast into hell.ನಿನ್ನ ಕಾಲು ನಿನಗೆ ಅಭ್ಯಂತರ ಮಾಡಿದರೆ ಅದನ್ನು ಕಡಿದು ಹಾಕು; ಯಾಕಂದರೆ ನೀನು ಎರಡು ಕಾಲುಗಳುಳ್ಳವ ನಾಗಿ ಎಂದಿಗೂ ಆರದ ಬೆಂಕಿಯ ನರಕದೊಳಗೆ ಹಾಕ ಲ್ಪಡುವದಕ್ಕಿಂತ ಕುಂಟನಾಗಿ ಜೀವದಲ್ಲಿ ಸೇರುವದು ನಿನಗೆ ಒಳ್ಳೇದು.

46 `where their worm dieth not, and the fire is not quenched.'ಅಲ್ಲಿ ಅವರ ಹುಳವು ಸಾಯುವ ದಿಲ್ಲ ಮತ್ತು ಬೆಂಕಿಯು ಆರುವದಿಲ್ಲ.

47 And if thine eye cause thee to stumble, cast it out: it is good for thee to enter into the kingdom of God with one eye, rather than having two eyes to be cast into hell;ನಿನ್ನ ಕಣ್ಣು ನಿನಗೆ ಅಭ್ಯಂತರ ಮಾಡಿದರೆ ಅದನ್ನು ಕಿತ್ತುಬಿಡು; ಎರಡು ಕಣ್ಣುಗಳುಳ್ಳವನಾಗಿ ನರಕದ ಬೆಂಕಿಯಲ್ಲಿ ಹಾಕ ಲ್ಪಡುವದಕ್ಕಿಂತ ಒಂದು ಕಣ್ಣುಳ್ಳವನಾಗಿ ದೇವರ ರಾಜ್ಯ ದಲ್ಲಿ ಸೇರುವದು ನಿನಗೆ ಒಳ್ಳೇದು.

48 where their worm dieth not, and the fire is not quenched.ಅಲ್ಲಿ ಅವರ ಹುಳವು ಸಾಯುವದಿಲ್ಲ ಮತ್ತು ಬೆಂಕಿಯು ಆರುವದಿಲ್ಲ.

49 For every one shall be salted with fire.ಯಾಕಂದರೆ ಪ್ರತಿಯೊಬ್ಬನಿಗೂ ಬೆಂಕಿಯಿಂದ ಸಾರವಾಗಬೇಕು; ಮತ್ತು ಪ್ರತಿಯೊಂದು ಯಜ್ಞಕ್ಕೆ ಉಪ್ಪಿ ನಿಂದ ಸಾರವಾಗಬೇಕು.

50 Salt is good: but if the salt have lost its saltness, wherewith will ye season it? Have salt in yourselves, and be at peace one with another.ಉಪ್ಪು ಒಳ್ಳೆಯದು; ಆದರೆ ಉಪ್ಪು ತನ್ನ ಸಾರವನ್ನು ಕಳೆದುಕೊಂಡರೆ ಇನ್ನಾತರಿಂದ ನೀವು ಅದನ್ನು ರುಚಿಗೊಳಿಸುವಿರಿ? ನಿಮ್ಮೊಳಗೆ ಉಪ್ಪು ಇರಲಿ; ಮತ್ತು ಒಬ್ಬರ ಸಂಗಡಲೊಬ್ಬರು ಸಮಾಧಾನ ವಾಗಿರ್ರಿ ಅಂದನು.

Kannada Bible