Bible

Mark 8 - ASV (Kannada)

1 In those days, when there was again a great multitude, and they had nothing to eat, he called unto him his disciples, and saith unto them,ಆ ದಿವಸಗಳಲ್ಲಿ (ಯೇಸುವನ್ನು ಹಿಂಬಾಲಿಸುತ್ತಿದ್ದ) ದೊಡ್ಡ ಜನಸಮೂಹಕ್ಕೆ ಊಟಕ್ಕೇನೂ ಇರಲಿಲ್ಲ. ಆಗ ಯೇಸು ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಿಗೆ--

2 I have compassion on the multitude, because they continue with me now three days, and have nothing to eat:ಜನ ಸಮೂಹವನ್ನು ನಾನು ಕನಿಕರಿಸುತ್ತೇನೆ; ಯಾಕಂದರೆ ಮೂರು ದಿನ ಗಳಿಂದ ಇವರು ನನ್ನೊಂದಿಗಿದ್ದಾರೆ ಮತ್ತು ಅವರಿಗೆ ಊಟಕ್ಕೇನೂ ಇಲ್ಲ.

3 and if I send them away fasting to their home, they will faint on the way; and some of them are come from far.ನಾನು ಅವರನ್ನು ಉಪವಾಸ ವಾಗಿ ಅವರ ಮನೆಗಳಿಗೆ ಕಳುಹಿಸಿದರೆ ದಾರಿಯಲ್ಲಿ ಬಳಲಿ ಹೋಗುವರು; ಯಾಕಂದರೆ ಅವರಲ್ಲಿ ಕೆಲ ವರು ದೂರದಿಂದ ಬಂದಿದ್ದಾರೆ ಅಂದನು.

4 And his disciples answered him, Whence shall one be able to fill these men with bread here in a desert place?ಅದಕ್ಕೆ ಆತನ ಶಿಷ್ಯರು ಪ್ರತ್ಯುತ್ತರವಾಗಿ ಆತನಿಗೆ-- ಒಬ್ಬನು ಈ ಅಡವಿಯಲ್ಲಿ ರೊಟ್ಟಿಯಿಂದ ಈ ಜನರನ್ನು ಎಲ್ಲಿಂದ ತೃಪ್ತಿಪಡಿಸಾನು ಅಂದರು.

5 And he asked them, How many loaves have ye? And they said, Seven.ಆತನು ಅವರಿಗೆ--ನಿಮ್ಮಲ್ಲಿ ಎಷ್ಟು ರೊಟ್ಟಿಗಳಿವೆ ಎಂದು ಕೇಳಿದ್ದಕ್ಕೆ ಅವರು --ಏಳು ರೊಟ್ಟಿಗಳು ಇವೆ ಅಂದರು.

6 And he commandeth the multitude to sit down on the ground: and he took the seven loaves, and having given thanks, he brake, and gave to his disciples, to set before them; and they set them before the multitude.ಆಗ ಜನರು ನೆಲದ ಮೇಲೆ ಕೂತುಕೊಳ್ಳುವಂತೆ ಆತನು ಅಪ್ಪಣೆ ಕೊಟ್ಟು ಆ ಏಳು ರೊಟ್ಟಿಗಳನ್ನು ತಕ್ಕೊಂಡು ಸ್ತೋತ್ರ ಮಾಡಿ ಮುರಿದು ಜನರಿಗೆ ಹಂಚುವದಕ್ಕಾಗಿ ತನ್ನ ಶಿಷ್ಯರಿಗೆ ಕೊಟ್ಟನು; ಅವರು ಜನರಿಗೆ ಹಂಚಿದರು.

7 And they had a few small fishes: and having blessed them, he commanded to set these also before them.ಇದಲ್ಲದೆ ಅವರಲ್ಲಿ ಕೆಲವು ಸಣ್ಣ ವಿಾನುಗಳಿದ್ದವು; ಆತನು ಅವುಗಳನ್ನೂ ಆಶೀರ್ವದಿಸಿ ಅವರಿಗೆ ಹಂಚು ವಂತೆ ಆಜ್ಞಾಪಿಸಿದನು.

8 And they ate, and were filled: and they took up, of broken pieces that remained over, seven baskets.ಅವರೆಲ್ಲರೂ ತಿಂದು ತೃಪ್ತರಾ ದರು; ಮುರಿದ ಮಿಕ್ಕತುಂಡುಗಳನ್ನು ಅವರು ಏಳು ಪುಟ್ಟಿ ತುಂಬಿದರು.

9 And they were about four thousand: and he sent them away.ಊಟಮಾಡಿದವರು ಸುಮಾರು ನಾಲ್ಕು ಸಾವಿರ ಮಂದಿ; ಆತನು ಅವರನ್ನು ಕಳುಹಿಸಿ ಬಿಟ್ಟನು.

10 And straightway he entered into the boat with his disciples, and came into the parts of Dalmanutha.ಕೂಡಲೆ ಆತನು ತನ್ನ ಶಿಷ್ಯರೊಂದಿಗೆ ಒಂದು ದೋಣಿಯನ್ನು ಹತ್ತಿದಲ್ಮನೂಥ ಭಾಗಗಳಿಗೆ ಬಂದನು.

11 And the Pharisees came forth, and began to question with him, seeking of him a sign from heaven, trying him.ಆಗ ಫರಿಸಾಯರು ಬಂದು ಆತನನ್ನು ಶೋಧಿಸು ವದಕ್ಕಾಗಿ ಆಕಾಶದಲ್ಲಿ ತಮಗೆ ಒಂದು ಸೂಚಕ ಕಾರ್ಯವನ್ನು ಮಾಡಬೇಕೆಂದು ಕೇಳಿ ಆತನೊಂದಿಗೆ ತರ್ಕಿಸುವದಕ್ಕೆ ಆರಂಭಿಸಿದರು.

12 And he sighed deeply in his spirit, and saith, Why doth this generation seek a sign? verily I say unto you, There shall no sign be given unto this generation.ಆತನು ತನ್ನ ಆತ್ಮದಲ್ಲಿ ದೀರ್ಘವಾಗಿ ನಿಟ್ಟುಸಿರುಬಿಟ್ಟು--ಈ ಸಂತ ತಿಯು ಸೂಚಕಕಾರ್ಯವನ್ನು ಹುಡುಕುವದು ಯಾಕೆ? ಈ ಸಂತತಿಗೆ ಯಾವ ಸೂಚಕಕಾರ್ಯವೂ ಕೊಡಲ್ಪಡು ವದಿಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು.

13 And he left them, and again entering into `the boat' departed to the other side.ಆತನು ಅವರನ್ನು ಬಿಟ್ಟು ತಿರಿಗಿ ದೋಣಿಯನ್ನು ಹತ್ತಿ ಆಚೇದಡಕ್ಕೆ ಹೊರಟು ಹೋದನು.

14 And they forgot to take bread; and they had not in the boat with them more than one loaf.ಆಗ ಶಿಷ್ಯರು ರೊಟ್ಟಿಯನ್ನು ತಕ್ಕೊಳ್ಳುವದಕ್ಕೆ ಮರೆತಿದ್ದರು; ಇದಲ್ಲದೆ ದೋಣಿಯಲ್ಲಿ ಅವರಿಗೆ ಒಂದು ರೊಟ್ಟಿಗಿಂತ ಹೆಚ್ಚೇನೂ ಇರಲಿಲ್ಲ.

15 And he charged them, saying, Take heed, beware of the leaven of the Pharisees and the leaven of Herod.ಆತನು ಅವರಿಗೆ--ಫರಿಸಾಯರ ಹುಳಿಯ ವಿಷಯ ದಲ್ಲಿಯೂ ಹೆರೋದನ ಹುಳಿಯ ವಿಷಯದಲ್ಲಿಯೂ ನೀವು ಎಚ್ಚರಿಕೆಯಿಂದ ಇರ್ರಿ ಎಂದು ಖಂಡಿತವಾಗಿ ಹೇಳಿದನು.

16 And they reasoned one with another, saying, We have no bread.ಆಗ ಅವರು ತಮ್ಮೊಳಗೆ--ನಮಗೆ ರೊಟ್ಟಿ ಇಲ್ಲದಿರುವದರಿಂದಲೇ ಹೀಗೆ ಹೇಳುತ್ತಾನೆಂದು ಅವರು ತರ್ಕಿಸಿಕೊಂಡರು.

17 And Jesus perceiving it saith unto them, Why reason ye, because ye have no bread? do ye not yet perceive, neither understand? have ye your heart hardened?ಯೇಸು ಅದನ್ನು ತಿಳಿದುಕೊಂಡು ಅವರಿಗೆ ಹೇಳಿದ್ದೇನಂದರೆನಿಮ್ಮಲ್ಲಿ ರೊಟ್ಟಿ ಇಲ್ಲವೆಂದು ಯಾಕೆ ತರ್ಕಿಸಿಕೊಳ್ಳುತ್ತೀರಿ? ನೀವು ಇನ್ನೂ ಗ್ರಹಿಸದೆಯೂ ತಿಳಿದುಕೊಳ್ಳದೆಯೂ ಇದ್ದೀರೋ? ನೀವು ನಿಮ್ಮ ಹೃದಯವನ್ನು ಇನ್ನೂ ಕಠಿಣಮಾಡಿಕೊಂಡಿದ್ದಿರೋ?

18 Having eyes, see ye not? and having ears, hear ye not? and do ye not remember?ಕಣ್ಣುಗಳಿದ್ದೂ ನೀವು ನೋಡುವದಿಲ್ಲವೋ? ಕಿವಿಗಳಿದ್ದೂ ನೀವು ಕೆಳುವ ದಿಲ್ಲವೋ? ಮತ್ತು ನೀವು ಜ್ಞಾಪಕಮಾಡಿಕೊಳ್ಳುವದಿ ಲ್ಲವೋ?

19 When I brake the five loaves among the five thousand, how many baskets full of broken pieces took ye up? They say unto him, Twelve.ನಾನು ಆ ಐದು ರೊಟ್ಟಿಗಳನ್ನು ಐದು ಸಾವಿರ ಜನರ ಮಧ್ಯದಲ್ಲಿ ಮುರಿದಾಗ ಎಷ್ಟು ಪುಟ್ಟಿಗಳ ತುಂಬ ರೊಟ್ಟಿಯ ತುಂಡುಗಳನ್ನು ಎತ್ತಿದಿರಿ ಎಂದು ಕೇಳಲು ಅವರು ಆತನಿಗೆ--ಹನ್ನೆರಡು ಅಂದರು.

20 And when the seven among the four thousand, how many basketfuls of broken pieces took ye up? And they say unto him, Seven.ಮತ್ತು ಆ ಏಳು ರೊಟ್ಟಿಗಳನ್ನು ನಾಲ್ಕು ಸಾವಿರ ಜನರ ಮಧ್ಯದಲ್ಲಿ ಮುರಿದಾಗ ಎಷ್ಟು ಪುಟ್ಟಿಗಳ ತುಂಬ ತುಂಡುಗಳನ್ನು ಎತ್ತಿದಿರಿ ಎಂದು ಕೇಳಲು ಅವರು--ಏಳು ಅಂದರು.

21 And he said unto them, Do ye not yet understand?ಯೇಸು ಅವರಿಗೆ--ಹಾಗಾದರೆ ನೀವು ಗ್ರಹಿಸದೆ ಇರುವದು ಹೇಗೆ ಎಂದು ಹೇಳಿದನು.

22 And they come unto Bethsaida. And they bring to him a blind man, and beseech him to touch him.ತರುವಾಯ ಆತನು ಬೇತ್ಸಾಯಿದಕ್ಕೆ ಬಂದಾಗ ಅವರು ಒಬ್ಬ ಕುರುಡನನ್ನು ಆತನ ಬಳಿಗೆ ತಂದು ಅವನನ್ನು ಮುಟ್ಟಬೇಕೆಂದು ಆತನನ್ನು ಬೇಡಿಕೊಂಡರು.

23 And he took hold of the blind man by the hand, and brought him out of the village; and when he had spit on his eyes, and laid his hands upon him, he asked him, Seest thou aught?ಆತನು ಆ ಕುರುಡನ ಕೈಹಿಡಿದು ಊರಿನ ಹೊರಗೆ ಕರಕೊಂಡು ಹೋಗಿ ಅವನ ಕಣ್ಣುಗಳ ಮೇಲೆ ಉಗುಳಿ ತನ್ನ ಕೈಗಳನ್ನು ಅವನ ಮೇಲೆ ಇಟ್ಟು ಏನಾದರೂ ಕಾಣುತ್ತದೋ ಎಂದು ಅವನನ್ನು ಕೇಳಿದನು.

24 And he looked up, and said, I see men; for I behold `them' as trees, walking.ಅವನು ಮೇಲಕ್ಕೆ ನೋಡಿ--ಮನುಷ್ಯರು ಮರಗಳ ಹಾಗೆ ನಡೆದಾಡುವದನ್ನು ನೋಡುತ್ತೇನೆ ಅಂದನು.

25 Then again he laid his hands upon his eyes; and he looked stedfastly, and was restored, and saw all things clearly.ತರುವಾಯ ಆತನು ತಿರಿಗಿ ಅವನ ಕಣ್ಣುಗಳ ಮೇಲೆ ತನ್ನ ಕೈಗಳನ್ನಿಟ್ಟು ಅವನು ಮೇಲಕ್ಕೆ ನೋಡುವಂತೆ ಮಾಡಿದನು; ಆಗ ಅವನು ಗುಣಹೊಂದಿದವನಾಗಿ ಪ್ರತಿ ಮನುಷ್ಯನನ್ನು ಸ್ಪಷ್ಟವಾಗಿ ನೋಡಿದನು.

26 And he sent him away to his home, saying, Do not even enter into the village.ತರುವಾಯ ಆತನು ಅವನಿಗೆ--ನೀನು ಊರೊಳಕ್ಕೆ ಹೋಗಬೇಡ ಇಲ್ಲವೆ ಊರಲ್ಲಿ ಯಾರಿಗೂ ಹೇಳಬೇಡ ಎಂದು ಹೇಳಿ ಅವನನ್ನು ಅವನ ಮನೆಗೆ ಕಳುಹಿಸಿ ಬಿಟ್ಟನು.

27 And Jesus went forth, and his disciples, into the villages of Caesarea Philippi: and on the way he asked his disciples, saying unto them, Who do men say that I am?ತರುವಾಯ ಯೇಸುವೂ ಆತನ ಶಿಷ್ಯರೂ ಕೈಸ ರೈಯ ಫಿಲಿಪ್ಪಿ ಊರುಗಳಿಗೆ ಹೋದರು. ಆತನು ದಾರಿ ಯಲ್ಲಿ ತನ್ನ ಶಿಷ್ಯರಿಗೆ--ನಾನು ಯಾರೆಂದು ಜನರು ಅನ್ನುತ್ತಾರೆ ಎಂದು ಕೇಳಿದನು.

28 And they told him, saying, John the Baptist; and others, Elijah; but others, One of the prophets.ಅವರು ಪ್ರತ್ಯುತ್ತರ ವಾಗಿ--ಬಾಪ್ತಿಸ್ಮ ಮಾಡಿಸುವ ಯೋಹಾನನು; ಮತ್ತೆ ಕೆಲವರು--ಎಲೀಯನು; ಇನ್ನು ಕೆಲವರು--ಪ್ರವಾದಿ ಗಳಲ್ಲಿ ಒಬ್ಬನು ಅನ್ನುತ್ತಾರೆ ಎಂದು ಹೇಳಿದರು.

29 And he asked them, But who say ye that I am? Peter answereth and saith unto him, Thou art the Christ.ಅದಕ್ಕೆ ಆತನು ಅವರಿಗೆ -- ಆದರೆ ನಾನು ಯಾರೆಂದು ನೀವು ಅನ್ನುತ್ತೀರಿ ಎಂದು ಕೇಳಲು ಪೇತ್ರನು ಪ್ರತ್ಯುತ್ತರವಾಗಿ ಆತನಿಗೆ--ನೀನು ಕ್ರಿಸ್ತನೇ ಅಂದನು.

30 And he charged them that they should tell no man of him.ತನ್ನ ವಿಷಯ ವಾಗಿ ಅವರು ಯಾರಿಗೂ ಹೇಳಬಾರದೆಂದು ಆತನು ಅವರಿಗೆ ಖಂಡಿತವಾಗಿ ಹೇಳಿದನು.

31 And he began to teach them, that the Son of man must suffer many things, and be rejected by the elders, and the chief priests, and the scribes, and be killed, and after three days rise again.ಮನುಷ್ಯ ಕುಮಾರನು ಅನೇಕ ಶ್ರಮೆಗಳನ್ನು ಅನುಭವಿಸಿ ಹಿರಿಯ ರಿಂದಲೂ ಪ್ರಧಾನ ಯಾಜಕರಿಂದಲೂ ಶಾಸ್ತ್ರಿಗಳಿಂ ದಲೂ ತಿರಸ್ಕರಿಸಲ್ಪಟ್ಟವನಾಗಿ ಕೊಲ್ಲಲ್ಪಟ್ಟು ಮೂರು ದಿವಸಗಳಾದ ಮೇಲೆ ಏಳುವದು ಅವಶ್ಯವೆಂದು ಅವ ರಿಗೆ ಬೋಧಿಸಲಾರಂಭಿಸಿದನು.

32 And he spake the saying openly. And Peter took him, and began to rebuke him.ಆತನು ಆ ಮಾತನ್ನು ಸ್ಪಷ್ಟವಾಗಿ ಹೇಳಿದ್ದರಿಂದ ಪೇತ್ರನು ಆತನ ಕೈ ಹಿಡಿದು ಆತನನ್ನು ಗದರಿಸಲಾರಂಭಿಸಿದನು.

33 But he turning about, and seeing his disciples, rebuked Peter, and saith, Get thee behind me, Satan; for thou mindest not the things of God, but the things of men.ಆದರೆ ಆತನು ತಿರುಗಿಕೊಂಡು ತನ್ನ ಶಿಷ್ಯರ ಕಡೆಗೆ ನೋಡಿ ಪೇತ್ರನನ್ನು ಗದರಿಸಿ--ಸೈತಾನನೇ ನನ್ನ ಹಿಂದೆ ಹೋಗು; ಯಾಕಂದರೆ ನೀನು ಯೋಚಿಸುವಂಥದ್ದು ದೇವರವುಗಳಲ್ಲ, ಆದರೆ ಮನುಷ್ಯರವುಗಳೇ ಎಂದು ಹೇಳಿದನು.

34 And he called unto him the multitude with his disciples, and said unto them, If any man would come after me, let him deny himself, and take up his cross, and follow me.ಆತನು ಜನರನ್ನು ತನ್ನ ಶಿಷ್ಯರ ಕೂಡ ತನ್ನ ಬಳಿಗೆ ಕರೆದು ಅವರಿಗೆ--ಯಾವನಾದರೂ ನನ್ನ ಹಿಂದೆ ಬರುವದಾದರೆ ಅವನು ತನ್ನನ್ನು ನಿರಾಕರಿಸಿ ತನ್ನ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿ ಸಲಿ.

35 For whosoever would save his life shall lose it; and whosoever shall lose his life for my sake and the gospel's shall save it.ಯಾಕಂದರೆ ತನ್ನ ಪ್ರಾಣವನ್ನು ಉಳಿಸಿಕೊಳ್ಳ ಬೇಕೆಂದಿರುವ ಯಾವನಾದರೂ ಅದನ್ನು ಕಳಕೊಳ್ಳು ವನು; ಆದರೆ ನನ್ನ ನಿಮಿತ್ತವಾಗಿಯೂ ಸುವಾರ್ತೆಯ ನಿಮಿತ್ತವಾಗಿಯೂ ಯಾವನು ತನ್ನ ಪ್ರಾಣವನ್ನು ಕಳ ಕೊಳ್ಳುವನೋ ಅವನು ಅದನ್ನು ಉಳಿಸಿಕೊಳ್ಳುವನು.

36 For what doth it profit a man, to gain the whole world, and forfeit his life?ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿ ಕೊಂಡರೂ ತನ್ನ ಸ್ವಂತ ಆತ್ಮವನ್ನು ನಷ್ಟಪಡಿಸಿಕೊಂಡರೆ ಅವನಿಗೆ ಲಾಭವೇನು?

37 For what should a man give in exchange for his life?ಇಲ್ಲವೆ ಒಬ್ಬನು ತನ್ನ ಆತ್ಮಕ್ಕೆ ಬದಲಾಗಿ ಏನು ಕೊಡುವನು?

38 For whosoever shall be ashamed of me and of my words in this adulterous and sinful generation, the Son of man also shall be ashamed of him, when he cometh in the glory of his Father with the holy angels.ಆದದರಿಂದ ಯಾವನಾದರೂ ವ್ಯಭಿಚಾರಿಣಿಯಾದ ಈ ಪಾಪಿಷ್ಠ ಸಂತತಿಯಲ್ಲಿ ನನ್ನ ಮತ್ತು ನನ್ನ ಮಾತುಗಳ ವಿಷಯ ವಾಗಿ ನಾಚಿಕೊಳ್ಳುವನೋ ಅವನ ವಿಷಯದಲ್ಲಿ ಮನುಷ್ಯಕುಮಾರನು ಸಹ ತನ್ನ ತಂದೆಯ ಮಹಿಮೆ ಯಲ್ಲಿ ಪರಿಶುದ್ಧ ದೂತರೊಡನೆ ಬರುವಾಗ ನಾಚಿ ಕೊಳ್ಳುವನು ಎಂದು ಹೇಳಿದನು.

Kannada Bible