Mark 16 - ASV (Kannada)
1 And when the sabbath was past, Mary Magdalene, and Mary the `mother' of James, and Salome, bought spices, that they might come and anoint him.ಸಬ್ಬತ್ತು ಕಳೆದ ಮೇಲೆ ಮಗ್ದಲದ ಮರಿಯಳೂ ಯಾಕೋಬನ ತಾಯಿ ಯಾದ ಮರಿಯಳೂ ಮತ್ತು ಸಲೋಮೆಯೂ ಆತನಿಗೆ ಹಚ್ಚುವದಕ್ಕಾಗಿ ಸುಗಂಧದ್ರವ್ಯಗಳನ್ನು ಕೊಂಡು ಕೊಂಡು ಬಂದರು.
2 And very early on the first day of the week, they come to the tomb when the sun was risen.ವಾರದ ಮೊದಲನೆಯ ದಿನ ನಸುಕಿನಲ್ಲಿ ಸೂರ್ಯನು ಉದಯಿಸುವಾಗ ಅವರು ಸಮಾಧಿಯ ಬಳಿಗೆ ಬಂದರು,
3 And they were saying among themselves, Who shall roll us away the stone from the door of the tomb?ಅವರು--ಸಮಾಧಿಯ ಬಾಗಲಿನಿಂದ ಆ ಕಲ್ಲನ್ನು ನಮಗೋಸ್ಕರ ಯಾರು ಉರುಳಿಸುವರು ಎಂದು ತಮ್ಮತಮ್ಮೊಳಗೆ ಮಾತನಾಡಿ ಕೊಂಡರು.
4 and looking up, they see that the stone is rolled back: for it was exceeding great.ಯಾಕಂದರೆ ಅದು ಬಹಳ ದೊಡ್ಡದಾ ಗಿತ್ತು. ಆದರೆ ಅವರು ನೋಡಿ ಆ ಕಲ್ಲು ಉರುಳಿಸ ಲ್ಪಟ್ಟದ್ದನ್ನು ಕಂಡರು.
5 And entering into the tomb, they saw a young man sitting on the right side, arrayed in a white robe; and they were amazed.ಅವರು ಸಮಾಧಿಯೊಳಕ್ಕೆ ಪ್ರವೇಶಿಸಿದವರಾಗಿ ಉದ್ದವಾದ ಬಿಳಿ ಉಡುಪನ್ನು ತೊಟ್ಟುಕೊಂಡಿದ್ದ ಒಬ್ಬ ಯೌವನಸ್ಥನು ಬಲಗಡೆಯಲ್ಲಿ ಕೂತಿರುವದನ್ನು ಕಂಡು ಭಯಭ್ರಾಂತರಾದರು.
6 And he saith unto them, Be not amazed: ye seek Jesus, the Nazarene, who hath been crucified: he is risen; he is not here: behold, the place where they laid him!ಆದರೆ ಅವನು ಅವರಿಗೆ--ಭಯಪಡಬೇಡಿರಿ, ಶಿಲುಬೆಗೆ ಹಾಕಲ್ಪಟ್ಟ ನಜರೇತಿನ ಯೇಸುವನ್ನು ಹುಡುಕುತ್ತಿದ್ದೀರಿ; ಆತನು ಎದ್ದಿದ್ದಾನೆ; ಇಲ್ಲಿ ಇಲ್ಲ, ಆತನನ್ನು ಇಟ್ಟಿದ್ದ ಸ್ಥಳವನ್ನು ನೋಡಿರಿ;
7 But go, tell his disciples and Peter, He goeth before you into Galilee: there shall ye see him, as he said unto you.ಆದರೆ ನೀವು ಹೊರಟುಹೋಗಿ ಆತನು ನಿಮಗೆ ಹೇಳಿದಂತೆ ನಿಮ್ಮ ಮುಂದೆ ಗಲಿಲಾಯಕ್ಕೆ ಹೋಗುತ್ತಾನೆ; ಅಲ್ಲಿ ನೀವು ಆತನನ್ನು ಕಾಣುವಿರಿ ಎಂದು ಆತನ ಶಿಷ್ಯರಿಗೆ ಮತ್ತು ಪೇತ್ರನಿಗೆ ಹೇಳಿರಿ ಅಂದನು.
8 And they went out, and fled from the tomb; for trembling and astonishment had come upon them: and they said nothing to any one; for they were afraid.ಆಗ ಅವರು ಬೇಗನೆ ಹೊರಟು ಸಮಾಧಿಯ ಬಳಿಯಿಂದ ಓಡಿಹೋದರು; ಯಾಕಂದರೆ ಅವರು ಆಶ್ಚರ್ಯದಿಂದ ನಡುಗುತ್ತಿದ್ದರು; ಇದಲ್ಲದೆ ಅವರು ಹೆದರಿದವರಾದದರಿಂದ ಯಾರಿಗೂ ಏನೂ ಹೇಳಲಿಲ್ಲ.
9 Now when he was risen early on the first day of the week, he appeared first to Mary Magdalene, from whom he had cast out seven demons.ಹೀಗಿರಲಾಗಿ ವಾರದ ಮೊದಲನೆಯ ದಿನದ ಬೆಳಿಗ್ಗೆ ಯೇಸು ಎದ್ದಮೇಲೆ ಆತನು ಮೊದಲು ತಾನು ಏಳು ದೆವ್ವಗಳನ್ನು ಬಿಡಿಸಿದ್ದ ಮಗ್ದಲದ ಮರಿಯಳಿಗೆ ಕಾಣಿಸಿಕೊಂಡನು.
10 She went and told them that had been with him, as they mourned and wept.ಆತನ ಸಂಗಡ ಇದ್ದವರು ಶೋಕಿಸಿ ಅಳುತ್ತಿರುವಾಗ ಆಕೆಯು ಹೋಗಿ ಅವರಿಗೆ ಹೇಳಿದಳು.
11 And they, when they heard that he was alive, and had been seen of her, disbelieved.ಆದರೆ ಆತನು ಬದುಕಿದ್ದಾನೆಂದೂ ಆಕೆಯು ಆತನನ್ನು ನೋಡಿದ್ದಾಳೆಂದೂ ಅವರು ಕೇಳಿದರು; ಆದರೂ ನಂಬಲಿಲ್ಲ.
12 And after these things he was manifested in another form unto two of them, as they walked, on their way into the country.ಇದಾದ ಮೇಲೆ ಅವರಲ್ಲಿ ಇಬ್ಬರು ಒಂದು ಗ್ರಾಮಕ್ಕೆ ನಡೆದು ಹೋಗುತ್ತಿದ್ದಾಗ ಆತನು ಅವರಿಗೆ ಬೇರೊಂದು ರೂಪದಲ್ಲಿ ಕಾಣಿಸಿಕೊಂಡನು.
13 And they went away and told it unto the rest: neither believed they them.ಅವರು ಹೋಗಿ ಉಳಿದವರಿಗೆ ತಿಳಿಸಿದರು; ಆದರೆ ಅವರನ್ನೂ ಅವರು ನಂಬಲಿಲ್ಲ.
14 And afterward he was manifested unto the eleven themselves as they sat at meat; and he upbraided them with their unbelief and hardness of heart, because they believed not them that had seen him after he was risen.ತರುವಾಯ ಊಟಕ್ಕೆ ಕೂತಿದ್ದ ಹನ್ನೊಂದು ಮಂದಿಗೆ ಆತನು ಕಾಣಿಸಿಕೊಂಡು ತಾನು ಎದ್ದು ಬಂದಮೇಲೆ ತನ್ನನ್ನು ನೋಡಿದವರನ್ನು ನಂಬಲಿಲ್ಲ ವಾದ ಕಾರಣ ಅವರ ಅಪನಂಬಿಕೆಗೂ ಹೃದಯದ ಕಾಠಿಣ್ಯಕ್ಕೂ ಆತನು ಅವರನ್ನು ಗದರಿಸಿದನು.
15 And he said unto them, Go ye into all the world, and preach the gospel to the whole creation.ಆತನು ಅವರಿಗೆ--ನೀವು ಸಮಸ್ತ ಲೋಕಕ್ಕೆ ಹೋಗಿ ಎಲ್ಲಾ ಸೃಷ್ಟಿಗೆ ಸುವಾರ್ತೆಯನ್ನು ಸಾರಿರಿ.
16 He that believeth and is baptized shall be saved; but he that disbelieveth shall be condemned.ನಂಬಿ ಬಾಪ್ತಿಸ್ಮ ಮಾಡಿಸಿಕೊಳ್ಳುವವನು ರಕ್ಷಣೆ ಹೊಂದುವನು. ಆದರೆ ನಂಬದೆ ಹೋಗುವವನು ದಂಡನೆಗೆ ಗುರಿಯಾಗುವನು.
17 And these signs shall accompany them that believe: in my name shall they cast out demons; they shall speak with new tongues;ಇದಲ್ಲದೆ ನಂಬುವವರಿಂದ ಈ ಸೂಚಕಕಾರ್ಯಗಳು ಉಂಟಾಗುವವು; ಅವರು ನನ್ನ ಹೆಸರಿನಲ್ಲಿ ದೆವ್ವಗಳನ್ನು ಬಿಡಿಸುವರು; ಅವರು ಹೊಸ ಭಾಷೆಗಳಲ್ಲಿ ಮಾತನಾಡುವರು;
18 they shall take up serpents, and if they drink any deadly thing, it shall in no wise hurt them; they shall lay hands on the sick, and they shall recover.ಅವರು ಸರ್ಪಗಳನ್ನು ಎತ್ತುವರು; ಮರಣಕರವಾದದ್ದೇ ನಾದರೂ ಕುಡಿದರೆ ಅದು ಅವರಿಗೆ ಯಾವ ಕೇಡನ್ನೂ ಮಾಡುವದಿಲ್ಲ; ಅವರು ರೋಗಿಗಳ ಮೇಲೆ ಕೈಗಳನ್ನಿಡು ವಾಗ ಅವರು ಸ್ವಸ್ಥರಾಗುವರು ಎಂದು ಹೇಳಿದನು.
19 So then the Lord Jesus, after he had spoken unto them, was received up into heaven, and sat down at the right hand of God.ಹೀಗೆ ಕರ್ತನು ಅವರೊಂದಿಗೆ ಮಾತನಾಡಿದ ನಂತರ ಆತನು ಮೇಲಕ್ಕೆ ಪರಲೋಕದಲ್ಲಿ ಸ್ವೀಕರಿ ಸಲ್ಪಟ್ಟು ದೇವರ ಬಲಪಾರ್ಶ್ವದಲ್ಲಿ ಕೂತುಕೊಂಡನು.
20 And they went forth, and preached everywhere, the Lord working with them, and confirming the word by the signs that followed. Amen.ಮತ್ತು ಅವರು ಹೊರಟುಹೋಗಿ ಎಲ್ಲಾ ಕಡೆಯಲ್ಲಿ ಸಾರಿದರು. ಇದಲ್ಲದೆ ಕರ್ತನು ಅವರ ಜೊತೆಯಲ್ಲಿ ಕೆಲಸಮಾಡುತ್ತಾ ನಡೆದ ಸೂಚಕ ಕಾರ್ಯಗಳಿಂದ ವಾಕ್ಯವನ್ನು ಸ್ಥಿರಪಡಿಸುತ್ತಾ ಇದ್ದನು. ಆಮೆನ್.
Kannada Bible