Bible

Luke 6 - DBY (Kannada)

1 And it came to pass on [the] second-first sabbath, that he went through cornfields, and his disciples were plucking the ears and eating [them], rubbing [them] in their hands.ಇದಾದ ಮೇಲೆ ಮೊದಲನೇ ಸಬ್ಬತ್ತಿನ ತರುವಾಯ ಎರಡನೇ ಸಬ್ಬತ್ತಿನಲ್ಲಿ ಆತನು ಪೈರಿನ ಹೊಲಗಳನ್ನು ದಾಟಿಹೋಗುತ್ತಿದ್ದನು. ಆಗ ಆತನ ಶಿಷ್ಯರು ತೆನೆಗಳನ್ನು ಕಿತ್ತು ತಮ್ಮ ಕೈಗಳಲ್ಲಿ ಹೊಸಗಿಕೊಂಡು ತಿನ್ನುತ್ತಿದ್ದರು.

2 But some of the Pharisees said to them, Why do ye what is not lawful to do on the sabbath?ಆದರೆ ಫರಿಸಾಯ ರಲ್ಲಿ ಕೆಲವರು ಅವರಿಗೆ--ಸಬ್ಬತ್‌ ದಿನಗಳಲ್ಲಿ ಮಾಡ ಬಾರದ್ದನ್ನು ನೀವು ಯಾಕೆ ಮಾಡುತ್ತೀರಿ ಅಂದರು.

3 And Jesus answering said to them, Have ye not read so much as this, what David did when he hungered, he and those who were with him,ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವರಿಗೆ--ದಾವೀದನೂ ತನ್ನ ಜೊತೆ ಇದ್ದವರೂ ಹಸಿದಾಗ

4 how he entered into the house of God and took the shewbread and ate, and gave to those also who were with him, which it is not lawful that [any] eat, unless the priests alone?ಅವನು ದೇವರ ಮನೆಯೊಳಗೆ ಹೋಗಿ ಯಾಜಕರು ಹೊರತು ಬೇರೆಯವರು ತಿನ್ನುವದು ನ್ಯಾಯವಲ್ಲದ ಸಮ್ಮುಖ ರೊಟ್ಟಿಯನ್ನು ತೆಗೆದುಕೊಂಡು ತಿಂದು ತನ್ನ ಜೊತೆಯಲ್ಲಿದ್ದವರಿಗೆ ಸಹ ಹೇಗೆ ಕೊಟ್ಟನೆಂಬದನು ನೀವು ಓದಲಿಲ್ಲವೇ ಅಂದನು.

5 And he said to them, The Son of man is Lord of the sabbath also.ಆತನು ಅವ ರಿಗೆ--ಮನುಷ್ಯಕುಮಾರನು ಸಬ್ಬತ್ತಿಗೂ ಒಡೆಯನಾಗಿ ದ್ದಾನೆ ಅಂದನು.

6 And it came to pass on another sabbath also that he entered into the synagogue and taught; and there was a man there, and his right hand was withered.ಇದಾದ ಮೇಲೆ ಇನ್ನೊಂದು ಸಬ್ಬತ್ತಿನಲ್ಲಿ ಸಹ ಆತನು ಸಭಾಮಂದಿರದೊಳಕ್ಕೆ ಪ್ರವೇಶಿಸಿ ಬೋಧಿಸಿ ದನು; ಅಲ್ಲಿ ಬಲಗೈ ಬತ್ತಿದ ಒಬ್ಬ ಮನುಷ್ಯನಿದ್ದನು.

7 And the scribes and the Pharisees were watching if he would heal on the sabbath, that they might find something of which to accuse him.ಆಗ ಶಾಸ್ತ್ರಿಗಳೂ ಫರಿಸಾಯರೂ ಆತನಿಗೆ ವಿರೋಧ ವಾಗಿ ತಪ್ಪು ಕಂಡುಹಿಡಿಯಬೇಕೆಂದು ಆತನು ಆ ಸಬ್ಬತ್‌ ದಿನದಲ್ಲಿ ಅವನನ್ನು ಸ್ವಸ್ಥಮಾಡುವನೇನೋ ಎಂದು ಕಾಯುತ್ತಿದ್ದರು.

8 But *he* knew their thoughts, and said to the man who had the withered hand, Get up, and stand in the midst. And having risen up he stood [there].ಆದರೆ ಆತನು ಅವರ ಆಲೋಚನೆಗಳನ್ನು ತಿಳಿದುಕೊಂಡು ಕೈ ಬತ್ತಿದವನಾದ ಆ ಮನುಷ್ಯನಿಗೆ--ಎದ್ದು ನಡುವೆ ನಿಂತುಕೋ ಅಂದಾಗ ಅವನು ಎದ್ದು ನಿಂತುಕೊಂಡನು.

9 Jesus therefore said to them, I will ask you if it is lawful on the sabbath to do good, or to do evil? to save life, or to destroy [it]?ತರು ವಾಯ ಯೇಸು ಅವರಿಗೆ--ನಿಮಗೆ ಒಂದು ಸಂಗತಿ ಯನ್ನು ನಾನು ಕೇಳುತ್ತೇನೆ; ಸಬ್ಬತ್‌ ದಿನಗಳಲ್ಲಿ ಒಳ್ಳೇದನ್ನು ಮಾಡುವದು ನ್ಯಾಯವೋ? ಇಲ್ಲವೆ ಕೆಟ್ಟದ್ದು ಮಾಡುವದೋ? ಪ್ರಾಣವನ್ನು ರಕ್ಷಿಸುವದೋ, ಇಲ್ಲವೆ ಅದನ್ನು ನಾಶಮಾಡುವದೋ ಅಂದನು.

10 And having looked around on them all, he said to him, Stretch out thy hand. And he did [so] and his hand was restored as the other.ಆತನು ಅವರೆಲ್ಲರ ಸುತ್ತಲೂ ನೋಡಿ ಆ ಮನುಷ್ಯನಿಗೆ--ನಿನ್ನ ಕೈ ಮುಂದಕ್ಕೆ ಚಾಚು ಅಂದನು. ಅವನು ಹಾಗೆಯೇ ಮಾಡಿದನು; ಆಗ ಅವನ ಕೈ ಗುಣವಾಗಿ ಮತ್ತೊಂದರಂತೆ ಆಯಿತು.

11 But *they* were filled with madness, and they spoke together among themselves what they should do to Jesus.ಆಗ ಅವರು ಕೋಪದಿಂದ ತುಂಬಿದವರಾಗಿ ಯೇಸುವಿಗೆ ತಾವು ಏನು ಮಾಡಬೇಕೆಂದು ಒಬ್ಬರಿಗೊಬ್ಬರು ಮಾತನಾಡಿಕೊಂಡರು.

12 And it came to pass in those days that he went out into the mountain to pray, and he spent the night in prayer to God.ಇದಾದ ಮೇಲೆ ಆತನು ಆ ದಿವಸಗಳಲ್ಲಿ ಪ್ರಾರ್ಥಿಸುವದಕ್ಕಾಗಿ ಒಂದು ಬೆಟ್ಟಕ್ಕೆ ಹೋಗಿ ರಾತ್ರಿ ಯೆಲ್ಲಾ ದೇವರಿಗೆ ಪ್ರಾರ್ಥಿಸಿದನು.

13 And when it was day he called his disciples, and having chosen out twelve from them, whom also he named apostles:ಬೆಳಗಾದ ಮೇಲೆ ಆತನು ತನ್ನ ಶಿಷ್ಯರನ್ನು ತನ್ನ ಹತ್ತಿರಕ್ಕೆ ಕರೆದು ಅವರಲ್ಲಿ ಹನ್ನೆರಡು ಮಂದಿಯನ್ನು ಆರಿಸಿಕೊಂಡದ್ದಲ್ಲದೆ ಅವರಿಗೆ ಅಪೊಸ್ತಲರೆಂದು ಹೆಸರಿಟ್ಟನು.

14 Simon, to whom also he gave the name of Peter, and Andrew his brother, [and] James and John, [and] Philip and Bartholomew,ಅವರು (ಆತನು ಪೇತ್ರನೆಂದು ಕರೆದ) ಸೀಮೋನ, ಅವನ ಸಹೋದರನಾದ ಅಂದ್ರೆಯ, ಯಾಕೋಬ,ಯೋಹಾನ, ಫಿಲಿಪ್ಪ, ಬಾರ್ತೊಲೊಮಾಯ,

15 [and] Matthew and Thomas, James the [son] of Alphaeus and Simon who was called Zealot,ಮತ್ತಾಯ, ತೋಮ, ಅಲ್ಫಾಯನ ಮಗನಾದ ಯಾಕೋಬ, ಮತಾಭಿಮಾನಿಯೆಂದು ಕರೆಯಲ್ಪಟ್ಟ ಸೀಮೋನ,

16 [and] Judas [brother] of James, and Judas Iscariote, who was also [his] betrayer;ಯಾಕೋಬನ ಸಹೋದರನಾದ ಯೂದ, ಮತ್ತು ದ್ರೋಹಿಯಾದ ಇಸ್ಕರಿಯೋತ ಯೂದ ಎಂಬವರೇ.

17 and having descended with them, he stood on a level place, and a crowd of his disciples, and a great multitude of the people from all Judaea and Jerusalem, and the sea coast of Tyre and Sidon, who came to hear him, and to be healed of their diseases;ಆತನು ಅವರೊಂದಿಗೆ ಕೆಳಗಿಳಿದು ಸಮ ಭೂಮಿಯ ಮೇಲೆ ನಿಂತಿದ್ದಾಗ ಆತನ ಶಿಷ್ಯರ ಗುಂಪು ಅಲ್ಲದೆ ಯೂದಾಯ ಯೆರೂಸಲೇಮಿನಿಂದಲೂ ತೂರ್‌ ಸೀದೋನಿನ ಸಮುದ್ರತೀರದಿಂದಲೂ ಆತನ ಉಪದೇಶವನ್ನು ಕೇಳುವದಕ್ಕೂ ತಮ್ಮ ರೋಗಗಳಿಂದ ಸ್ವಸ್ಥರಾಗುವದಕ್ಕೂ ಜನರು ದೊಡ್ಡ ಸಮೂಹವಾಗಿ ಬಂ

18 and those that were beset by unclean spirits were healed.ಅಶುದ್ಧಾತ್ಮಗಳಿಂದ ಪೀಡಿತರಾದವರೂ ಬಂದು ಸ್ವಸ್ಥರಾದರು.

19 And all the crowd sought to touch him, for power went out from him and healed all.ಆಗ ಸಮೂಹವೆಲ್ಲಾ ಆತ ನನ್ನು ಮುಟ್ಟಬೇಕೆಂದು ಪ್ರಯತ್ನಿಸಿದರು; ಯಾಕಂದರೆ ಆತನಿಂದ ಶಕ್ತಿಯು ಹೊರಟು ಅವರೆಲ್ಲರನ್ನು ಸ್ವಸ್ಥ ಮಾಡಿತು.

20 And *he*, lifting up his eyes upon his disciples, said, Blessed [are] ye poor, for yours is the kingdom of God.ಆತನು ತನ್ನ ಕಣ್ಣುಗಳನ್ನೆತ್ತಿ ತನ್ನ ಶಿಷ್ಯರ ಕಡೆಗೆ ನೋಡಿ--ಬಡವರಾದ ನೀವು ಧನ್ಯರು; ಯಾಕಂದರೆ ದೇವರ ರಾಜ್ಯವು ನಿಮ್ಮದೇ.

21 Blessed ye that hunger now, for ye shall be filled. Blessed ye that weep now, for ye shall laugh.ಈಗ ಹಸಿದವರಾದ ನೀವು ಧನ್ಯರು; ಯಾಕಂದರೆ ನೀವು ತೃಪ್ತಿ ಹೊಂದುವಿರಿ. ಈಗ ಅಳುವವರಾದ ನೀವು ಧನ್ಯರು; ಯಾಕಂದರೆ ನೀವು ನಗುವಿರಿ.

22 Blessed are ye when men shall hate you, and when they shall separate you [from them], and shall reproach [you], and cast out your name as wicked, for the Son of man's sake:ಮನುಷ್ಯಕುಮಾರನ ನಿಮಿತ್ತ ಜನರು ನಿಮ್ಮನ್ನು ಹಗೆಮಾಡಿ ನಿಮ್ಮನ್ನು ಬಹಿಷ್ಕರಿಸಿ ನಿಂದಿಸಿ ನಿಮ್ಮ ಹೆಸರನ್ನು ಕೆಟ್ಟದ್ದೆಂದು ತೆಗೆದುಹಾಕಿದರೆ ನೀವು ಧನ್ಯರು.

23 rejoice in that day and leap for joy, for behold, your reward is great in the heaven, for after this manner did their fathers act toward the prophets.ಆ ದಿನದಲ್ಲಿ ನೀವು ಸಂತೋಷ ಪಡಿರಿ. ಉಲ್ಲಾಸದಿಂದ ಕುಣಿದಾಡಿರಿ; ಯಾಕಂದರೆ ಇಗೋ, ಪರಲೋಕದಲ್ಲಿ ನಿಮ್ಮ ಬಹುಮಾನವು ದೊಡ್ಡದು; ಅವರ ಪಿತೃಗಳು ಪ್ರವಾದಿಗಳಿಗೆ ಅದೇ ರೀತಿಯಲ್ಲಿ ಮಾಡಿದರು.

24 But woe to you rich, for ye have received your consolation.ಆದರೆ ಐಶ್ವರ್ಯವಂತರೇ, ನಿಮಗೆ ಅಯ್ಯೋ! ನೀವು ನಿಮ್ಮ ಆದರಣೆಯನ್ನು ಹೊಂದಿದ್ದೀರಿ.

25 Woe to you that are filled, for ye shall hunger. Woe to you who laugh now, for ye shall mourn and weep.ತೃಪ್ತಿಯಿಂದಿರುವವರೇ, ನಿಮಗೆ ಅಯ್ಯೋ! ಯಾಕಂದರೆ ನಿಮಗೆ ಹಸಿವೆಯಾಗುವದು. ಈಗ ನಗುವವರೇ, ನಿಮಗೆ ಅಯ್ಯೋ! ನೀವು ಶೋಕಿಸಿ ಅಳುವಿರಿ.

26 Woe, when all men speak well of you, for after this manner did their fathers to the false prophets.ಎಲ್ಲಾ ಜನರು ನಿಮ್ಮ ವಿಷಯದಲ್ಲಿ ಒಳ್ಳೇದಾಗಿ ಮಾತನಾಡಿದರೆ ನಿಮಗೆ ಅಯ್ಯೋ! ಅವರ ಪಿತೃಗಳು ಸುಳ್ಳು ಪ್ರವಾದಿಗಳಿಗೆ ಹಾಗೆಯೇ ಮಾಡಿದರು.

27 But to you that hear I say, Love your enemies; do good to those that hate you;ಆದರೆ ಕೇಳುವವರಾದ ನಿಮಗೆ ನಾನು ಹೇಳುವ ದೇನಂದರೆ--ನಿಮ್ಮ ವೈರಿಗಳನ್ನು ಪ್ರೀತಿಸಿರಿ, ನಿಮ್ಮನ್ನು ಹಗೆಮಾಡುವವರಿಗೆ ಒಳ್ಳೇದನ್ನು ಮಾಡಿರಿ.

28 bless those that curse you; pray for those who use you despitefully.ನಿಮ್ಮನ್ನು ಶಪಿಸುವವರನ್ನು ಆಶೀರ್ವದಿಸಿರಿ ಮತ್ತು ನಿಮ್ಮನ್ನು ಅವಮಾನ ಪಡಿಸುವವರಿಗೋಸ್ಕರ ಪ್ರಾರ್ಥಿಸಿರಿ.

29 To him that smites thee on the cheek, offer also the other; and from him that would take away thy garment, forbid not thy body-coat also.ಒಂದು ಕೆನ್ನೆಯ ಮೇಲೆ ನಿನ್ನನ್ನು ಹೊಡೆಯುವವನಿಗೆ ಮತ್ತೊಂದನ್ನು ಸಹ ಕೊಡು; ನಿನ್ನ ಮೇಲಂಗಿಯನ್ನು ತಕ್ಕೊಳ್ಳುವವನಿಗೆ ನಿನ್ನ ಒಳಂಗಿಯನ್ನು ತಡೆಯಬೇಡ.

30 To every one that asks of thee, give; and from him that takes away what is thine, ask it not back.ನಿನ್ನಿಂದ ಕೇಳುವ ಪ್ರತಿ ಮನುಷ್ಯನಿಗೆ ಕೊಡು; ನಿನ್ನ ಸೊತ್ತನ್ನು ತಕ್ಕೊಳ್ಳುವವನಿಂದ ಅವುಗಳನ್ನು ತಿರಿಗಿ ಕೇಳಬೇಡ.

31 And as ye wish that men should do to you, do *ye* also to them in like manner.ಜನರು ನಿಮಗೆ ಏನು ಮಾಡಬೇಕೆಂದು ನೀವು ಕೋರುತ್ತೀರೋ ನೀವು ಸಹ ಅವರಿಗೆ ಅದ ರಂತೆಯೇ ಮಾಡಿರಿ.

32 And if ye love those that love you, what thank is it to you? for even sinners love those that love them.ನಿಮ್ಮನ್ನು ಪ್ರೀತಿಸುವವರನ್ನೇ ನೀವು ಪ್ರೀತಿಸಿದರೆ ನಿಮಗೇನು ಹೊಗಳಿಕೆ ಬಂದೀತು? ಯಾಕಂದರೆ ಪಾಪಿಗಳು ಸಹ ತಮ್ಮನ್ನು ಪ್ರೀತಿಸುವವ ರನ್ನೇ ಪ್ರೀತಿಸುತ್ತಾರೆ.

33 And if ye do good to those that do good to you, what thank is it to you? for even sinners do the same.ನಿಮಗೆ ಒಳ್ಳೇದನ್ನು ಮಾಡು ವವರಿಗೆ ನೀವು ಒಳ್ಳೇದನ್ನು ಮಾಡಿದರೆ ನಿಮಗೇನು ಹೊಗಳಿಕೆ ಬಂದೀತು? ಯಾಕಂದರೆ ಪಾಪಿಗಳು ಸಹ ಅದರಂತೆಯೇ ಮಾಡುತ್ತಾರೆ.

34 And if ye lend to those from whom ye hope to receive, what thank is it to you? [for] even sinners lend to sinners that they may receive the like.ಯಾರಿಂದ ತಿರಿಗಿ ಪಡಕೊಳ್ಳಬೇಕೆಂದು ನಿರೀಕ್ಷಿಸುತ್ತಿರೋ ಅಂಥವರಿಗೆ ಸಾಲಕೊಟ್ಟರೆ ನಿಮಗೇನು ಹೊಗಳಿಕೆ ಬಂದೀತು? ಯಾಕಂದರೆ ಪಾಪಿಗಳು ಸಹ ಹಾಗೆಯೇ ತಾವು ಕೊಟ್ಟಷ್ಟು ತಿರಿಗಿ ಪಡೆಯುವಂತೆ ಪಾಪಿಗಳಿಗೆ ಸಾಲ ಕೊಡುತ್ತಾರೆ.

35 But love your enemies, and do good, and lend, hoping for nothing in return, and your reward shall be great, and ye shall be sons of [the] Highest; for *he* is good to the unthankful and wicked.ಆದರೆ ನೀವು ನಿಮ್ಮ ವೈರಿಗಳನ್ನು ಪ್ರೀತಿಸಿರಿ, ಮತ್ತು ಒಳ್ಳೇದನ್ನು ಮಾಡಿರಿ. ಏನನ್ನೂ ತಿರಿಗಿ ನಿರೀಕ್ಷಿಸದೆ ಸಾಲ ಕೊಡಿರಿ; ಆಗ ನಿಮ್ಮ ಬಹುಮಾನವು ದೊಡ್ಡದಾಗಿರುವದು; ನೀವು ಮಹೋ ನ್ನತನ ಮಕ್ಕಳಾಗಿರುವಿರಿ; ಯಾಕಂದರೆ ಆತನು ಕೃತಜ್ಞತೆ ಯಿಲ್ಲದವರಿಗೂ ಕೆಟ್ಟವರಿಗೂ ದಯೆಯುಳ್ಳವನಾಗಿ ದ್ದಾನೆ,

36 Be ye therefore merciful, even as your Father also is merciful.ನಿಮ್ಮ ತಂದೆಯು ಕರುಣೆಯುಳ್ಳವನಾಗಿರುವ ಪ್ರಕಾರ ನೀವೂ ಕರುಣೆಯುಳ್ಳವರಾಗಿರ್ರಿ.

37 And judge not, and ye shall not be judged; condemn not, and ye shall not be condemned. Remit, and it shall be remitted to you.ತೀರ್ಪು ಮಾಡಬೇಡಿರಿ; ಆಗ ನಿಮಗೂ ತೀರ್ಪಾಗುವದಿಲ್ಲ. ಖಂಡಿಸಬೇಡಿರಿ; ಆಗ ನಿಮಗೂ ಖಂಡನೆಯಾಗುವದಿಲ್ಲ. ಕ್ಷಮಿಸಿರಿ; ಆಗ ನಿಮಗೂ ಕ್ಷಮಿಸಲ್ಪಡುವದು.

38 Give, and it shall be given to you; good measure, pressed down, and shaken together, and running over, shall be given into your bosom: for with the same measure with which ye mete it shall be measured to you again.ಕೊಡಿರಿ, ಆಗ ನಿಮಗೂ ಕೊಡ ಲ್ಪಡುವದು. ಒಳ್ಳೆಯ ಅಳತೆ ಒತ್ತಿ ಅಲ್ಲಾಡಿಸಿ ಹೊರಗೆ ಚೆಲ್ಲುವಂತೆ ಮನುಷ್ಯರು ನಿಮ್ಮ ಉಡಿಲಲ್ಲಿ ಹಾಕುವರು; ಯಾಕಂದರೆ ನೀವು ಅಳೆಯುವ ಅಳತೆಯಿಂದಲೇ ನಿಮಗೂ ತಿರಿಗಿ ಅಳೆಯಲ್ಪಡುವದು.

39 And he spoke also a parable to them: Can a blind [man] lead a blind [man]? shall not both fall into [the] ditch?ಆತನು ಒಂದು ಸಾಮ್ಯವನ್ನು ಅವರಿಗೆ ಹೇಳಿ ದನು--ಕುರುಡನು ಕುರುಡನನ್ನು ನಡಿಸಬಲ್ಲನೋ? (ನಡಿಸಿದರೆ) ಅವರಿಬ್ಬರೂ ಕುಣಿಯಲ್ಲಿ ಬೀಳುವದಿ ಲ್ಲವೋ?

40 The disciple is not above his teacher, but every one that is perfected shall be as his teacher.ತನ್ನ ಗುರುವಿಗಿಂತ ಶಿಷ್ಯನು ಹೆಚ್ಚಿನವನಲ್ಲ; ಆದರೆ ಪರಿಪೂರ್ಣನಾಗಿರುವ ಪ್ರತಿಯೊಬ್ಬನು ತನ್ನ ಗುರುವಿನಂತೆ ಇರುವನು.

41 But why lookest thou on the mote which is in the eye of thy brother, but perceivest not the beam which is in thine own eye?ನಿನ್ನ ಸ್ವಂತ ಕಣ್ಣಿನಲ್ಲಿರುವ ತೊಲೆಯನ್ನು ನೀನು ತಿಳಿದುಕೊಳ್ಳದೆ ನಿನ್ನ ಸಹೋದರನ ಕಣ್ಣಿನಲ್ಲಿರುವ ರವೆಯನ್ನು ಯಾಕೆ ನೋಡುತ್ತೀ?

42 or how canst thou say to thy brother, Brother, allow [me], I will cast out the mote that is in thine eye, thyself not seeing the beam that is in thine eye? Hypocrite, cast out first the beam out of thine eye, and then thou shalt see clear to cast out the mote which is in the eye of thy brother.ಇಲ್ಲವೆ ನಿನ್ನ ಸ್ವಂತ ಕಣ್ಣಿನಲ್ಲಿರುವ ತೊಲೆಯನ್ನು ನೀನು ನೋಡದೆ ನಿನ್ನ ಸಹೋದರನಿಗೆ--ಸಹೋದರನೇ, ನಿನ್ನ ಕಣ್ಣಿನಲ್ಲಿ ರುವ ರವೆಯನ್ನು ತೆಗೆಯುವೆನೆಂದು ನೀನು ಹೇಗೆ ಹೇಳುವದು? ಕಪಟಿಯೇ, ಮೊದಲು ನಿನ್ನ ಸ್ವಂತ ಕಣ್ಣಿನಲ್ಲಿರುವ ತೊಲೆಯನ್ನು ತೆಗೆದುಹಾಕು; ಆಮೇಲೆ ನಿನ್ನ ಸಹೊ

43 For there is no good tree which produces corrupt fruit, nor a corrupt tree which produces good fruit;ಒಳ್ಳೇಮರವು ಕೆಟ್ಟ ಫಲವನ್ನು ಫಲಿಸುವದಿಲ್ಲ; ಇಲ್ಲವೆ ಕೆಟ್ಟಮರವು ಒಳ್ಳೇಫಲವನ್ನು ಫಲಿಸುವದಿಲ್ಲ.

44 for every tree is known by its own fruit, for figs are not gathered from thorns, nor grapes vintaged from a bramble.ಪ್ರತಿಯೊಂದು ಮರವು ಅದರ ಫಲದಿಂದಲೇ ಗೊತ್ತಾಗುವದು. ಯಾಕಂದರೆ ಮುಳ್ಳುಗಳಲ್ಲಿ ಮನುಷ್ಯರು ಅಂಜೂರ ಗಳನ್ನು ಕೂಡಿಸುವದಿಲ್ಲ; ಇಲ್ಲವೆ ಗಜ್ಜುಗದ ಪೊದೆಯಲ್ಲಿ ದ್ರಾಕ್ಷೇಗಳನ್ನು ಕೂಡಿಸುವದಿಲ್ಲ.

45 The good man, out of the good treasure of his heart, brings forth good; and the wicked [man] out of the wicked, brings forth what is wicked: for out of the abundance of the heart his mouth speaks.ಒಳ್ಳೇಮನುಷ್ಯನು ತನ್ನ ಹೃದಯದ ಒಳ್ಳೇಬೊಕ್ಕಸದಿಂದ ಒಳ್ಳೆಯದನ್ನೇ ಹೊರಗೆ ತರುತ್ತಾನೆ; ಆದರೆ ಕೆಟ್ಟಮನುಷ್ಯನು ತನ್ನ ಹೃದಯದ ಕೆಟ್ಟಬೊಕ್ಕಸದಿಂದ ಕೆಟ್ಟದ್ದನ್ನೇ ಹೊರಗೆ ತರುತ್ತಾನೆ. ಯಾಕಂದರೆ ಹೃದಯದ ಸಮೃದ್ಧಿಯಿಂದ ಅವನ ಬಾಯಿ ಮಾತನಾಡುತ್ತದೆ.

46 And why call ye me, Lord, Lord, and do not the things that I say?ನನ್ನನ್ನು ನೀವು--ಕರ್ತನೇ, ಕರ್ತನೇ ಎಂದು ಕರೆದು ನಾನು ಹೇಳುವವುಗಳನ್ನು ನೀವು ಮಾಡದೆ ಇರುವದು ಯಾಕೆ?

47 Every one that comes to me, and hears my words and does them, I will shew you to whom he is like.ಯಾವನು ನನ್ನ ಬಳಿಗೆ ಬಂದು ನಾನು ಹೇಳುವವುಗಳನ್ನು ಕೇಳಿ ಅವುಗಳನ್ನು ಮಾಡು ತ್ತಾನೋ ಅವನು ಯಾರಿಗೆ ಸಮಾನನಾಗಿದ್ದಾನೆಂದು ನಾನು ನಿಮಗೆ ತೋರಿಸುತ್ತೇನೆ.

48 He is like a man building a house, who dug and went deep, and laid a foundation on the rock; but a great rain coming, the stream broke upon that house, and could not shake it, for it had been founded on the rock.ಅವನು ಆಳವಾಗಿ ಅಗಿದು ಬಂಡೆಯ ಮೇಲೆ ಅಸ್ತಿವಾರವನ್ನು ಹಾಕಿ ಮನೆಯನ್ನು ಕಟ್ಟಿದ ಮನುಷ್ಯನಿಗೆ ಸಮಾನನಾಗಿದ್ದಾನೆ; ಪ್ರಳಯವು ಎದ್ದು ಪ್ರವಾಹವು ಆ ಮನೆಗೆ ರಭಸ ವಾಗಿ ಬಡಿದರೂ ಅದನ್ನು ಕದಲಿಸಲಿಕ್ಕಾಗದೆ ಹೋಯಿತು; ಯಾಕಂದರೆ ಅದು ಬಂಡೆಯ ಮೇಲೆ ಕಟ್ಟಲ್ಪಟ್ಟಿತು.

49 And he that has heard and not done, is like a man who has built a house on the ground without [a] foundation, on which the stream broke, and immediately it fell, and the breach of that house was great.ಆದರೆ (ನನ್ನ ಮಾತುಗಳನ್ನು) ಕೇಳಿ ಅದರಂತೆ ಮಾಡದೆ ಇರುವವನು ಅಸ್ತಿವಾರ ವಿಲ್ಲದೆ ಮಣ್ಣಿನ ಮೇಲೆ ಮನೆಯನ್ನು ಕಟ್ಟಿದ ಮನುಷ್ಯನಿಗೆ ಹೋಲಿಕೆಯಾಗಿದ್ದಾನೆ; ಪ್ರವಾಹವು ಅದಕ್ಕೆ ರಭಸವಾಗಿ ಬಡಿದದ್ದರಿಂದ ಕೂಡಲೆ ಅದು ಬಿತ್ತು; ಇದರಿಂದ ಆ ಮನೆಯ ನಾಶನವು ದೊಡ್ಡದಾಗಿತ್ತು.

Kannada Bible