Luke 20 - WEB (Kannada)
1 It happened on one of those days, as he was teaching the people in the temple and preaching the Gospel, that the {TR adds "chief"}priests and scribes came to him with the elders.ಇದಾದ ಮೇಲೆ ಆ ದಿವಸಗಳಲ್ಲಿ ಒಂದು ದಿನ ಆತನು ದೇವಾಲಯದಲ್ಲಿ ಜನರಿಗೆ ಬೋಧಿಸುತ್ತಾ ಸುವಾರ್ತೆಯನ್ನು ಸಾರುತ್ತಿದ್ದಾಗ ಪ್ರಧಾನ ಯಾಜಕರು ಶಾಸ್ತ್ರಿಗಳು ಹಿರಿಯರ ಕೂಡ ಆತನ ಬಳಿಗೆ ಬಂದು
2 They asked him, "Tell us: by what authority do you do these things? Or who is giving you this authority?"ಆತನೊಂದಿಗೆ ಮಾತನಾ ಡುತ್ತಾ--ನೀನು ಇವುಗಳನ್ನು ಯಾವ ಅಧಿಕಾರದಿಂದ ಮಾಡುತ್ತೀ? ಇಲ್ಲವೆ ನಿನಗೆ ಈ ಅಧಿಕಾರವನ್ನು ಕೊಟ್ಟವನು ಯಾರು? ನಮಗೆ ಹೇಳು ಅಂದರು.
3 He answered them, "I also will ask you one question. Tell me:ಅದಕ್ಕೆ ಆತನು ಪ್ರತ್ಯುತ್ತರವಾಗಿ ಅವರಿಗೆ--ನಾನು ಸಹ ನಿಮ್ಮನ್ನು ಒಂದು ವಿಷಯ ಕೇಳುತ್ತೇನೆ, ನನಗೆ ಉತ್ತರಕೊಡಿರಿ
4 the baptism of John, was it from heaven, or from men?"ಯೋಹಾನನ ಬಾಪ್ತಿಸ್ಮವು ಪರಲೋಕ ದಿಂದಲೋ ಇಲ್ಲವೆ ಮನುಷ್ಯರಿಂದಲೋ ಎಂದು ಕೇಳಿದನು.
5 They reasoned with themselves, saying, "If we say, 'From heaven,' he will say, 'Why didn't you believe him?'ಆಗ ಅವರು ತಮ್ಮೊಳಗೆ--ಪರಲೋಕ ದಿಂದ ಎಂದು ನಾವು ಹೇಳಿದರೆ ಆತನು--ನೀವು ಯಾಕೆ ಅವನನ್ನು ನಂಬಲಿಲ್ಲ ಎಂದು ಹೇಳುವನು.
6 But if we say, 'From men,' all the people will stone us, for they are persuaded that John was a prophet."ಆದರೆ--ಮನುಷ್ಯ ರಿಂದ ಎಂದು ನಾವು ಹೇಳಿದರೆ ಎಲ್ಲಾ ಜನರು ನಮಗೆ ಕಲ್ಲೆಸೆಯುವರು. ಯಾಕಂದರೆ ಯೋಹಾನನು ಪ್ರವಾದಿಯೆಂದು ಅವರು ಒಪ್ಪಿದ್ದಾರೆ ಎಂದು ಅಂದುಕೊಂಡು
7 They answered that they didn't know where it was from.ಅವರು--ಅದು ಎಲ್ಲಿಂ ದಲೋ ನಾವು ಅರಿಯೆವು ಎಂದು ಉತ್ತರಕೊಟ್ಟರು.
8 Jesus said to them, "Neither will I tell you by what authority I do these things."ಆಗ ಯೇಸು ಅವರಿಗೆ--ಇವುಗಳನ್ನು ನಾನು ಯಾವ ಅಧಿಕಾರದಿಂದ ಮಾಡುತ್ತೇನೆಂದು ನಾನೂ ನಿಮಗೆ ಹೇಳುವದಿಲ್ಲ ಅಂದನು.
9 He began to tell the people this parable. "A {NU (in brackets) and TR add "certain"}man planted a vineyard, and rented it out to some farmers, and went into another country for a long time.ಇದಲ್ಲದೆ ಆತನು ಜನರಿಗೆ ಈ ಸಾಮ್ಯವನ್ನು ಹೇಳುವದಕ್ಕೆ ಪ್ರಾರಂಭಿಸಿ--ಒಬ್ಬಾನೊಬ್ಬ ಮನುಷ್ಯನು ದ್ರಾಕ್ಷೇತೋಟವನ್ನು ನೆಟ್ಟು ಅದನ್ನು ಒಕ್ಕಲಿಗರಿಗೆ ವಾರಕ್ಕೆ ಕೊಟ್ಟು ಬಹುಕಾಲದ ವರೆಗೆ ಒಂದು ದೂರ ದೇಶಕ್ಕೆ ಹೊರಟುಹೋದನು.
10 At the proper season, he sent a servant to the farmers to collect his share of the fruit of the vineyard. But the farmers beat him, and sent him away empty.ಫಲ ಕಾಲದಲ್ಲಿ ಅವನು ತನಗೆ ಬರಬೇಕಾಗಿದ್ದ ದ್ರಾಕ್ಷೇ ತೊಟದ ಫಲವನ್ನು ಕೊಡುವಂತೆ ಅವನು ತನ್ನ ಆಳನ್ನು ಅವರ ಬಳಿಗೆ ಕಳುಹಿಸಿಕೊಟ್ಟನು. ಆದರೆ ಆ ಒಕ್ಕಲಿಗರು ಅವನನ್ನು ಹೊಡೆದು ಬರಿದಾಗಿ ಕಳುಹಿಸಿಬಿಟ್ಟರು.
11 He sent yet another servant, and they also beat him, and treated him shamefully, and sent him away empty.ಅವನು ಇನ್ನೊಬ್ಬ ಆಳನ್ನು ತಿರಿಗಿ ಕಳುಹಿಸಿದನು. ಅವರು ಅವನನ್ನು ಸಹ ಹೊಡೆದು ಅವಮಾನಪಡಿಸಿ ಬರಿದಾಗಿ ಕಳುಹಿಸಿಬಿಟ್ಟರು.
12 He sent yet a third, and they also wounded him, and threw him out.ಅವನು ತಿರಿಗಿ ಮೂರನೆಯವನನ್ನು ಕಳುಹಿಸಿದನು; ಆಗ ಅವರು ಅವನನ್ನು ಸಹ ಗಾಯಪಡಿಸಿ ಹೊರಗೆ ಹಾಕಿದರು.
13 The lord of the vineyard said, 'What shall I do? I will send my beloved son. It may be that seeing him, they will respect him.'ಆಗ ದ್ರಾಕ್ಷೇತೋಟದ ಯಜಮಾನನು--ನಾನೇನು ಮಾಡಲಿ? ನಾನು ನನ್ನ ಪ್ರಿಯ ಮಗನನ್ನೇ ಕಳುಹಿ ಸುವೆನು. ಅವರು ಇವನನ್ನು ನೋಡಿಯಾದರೂ ಇವ ನನ್ನು ಗೌರವಿಸಿಯಾರು ಎಂದು ಅಂದುಕೊಂಡನು.
14 "But when the farmers saw him, they reasoned among themselves, saying, 'This is the heir. Come, let's kill him, that the inheritance may be ours.'ಆದರೆ ಒಕ್ಕಲಿಗರು ಅವನನ್ನು ನೋಡಿದಾಗ ತಮ್ಮತಮ್ಮೊಳಗೆ--ಇವನೇ ಬಾಧ್ಯಸ್ಥನು; ಬನ್ನಿರಿ, ಇವ ನನ್ನು ಕೊಂದುಹಾಕೋಣ ಬಾಧ್ಯತೆಯು ನಮ್ಮದಾಗು ತ್ತದೆ ಎಂದು ಆಲೋಚನೆ ಮಾಡಿಕೊಂಡರು.
15 They threw him out of the vineyard, and killed him. What therefore will the lord of the vineyard do to them?ಅವರು ಅವನನ್ನು ದ್ರಾಕ್ಷೇ ತೋಟದ ಹೊರಗೆಹಾಕಿ ಕೊಂದರು. ಹೀಗಿರಲು ದ್ರಾಕ್ಷೇತೋಟದ ಯಜ ಮಾನನು ಅವರಿಗೆ ಏನು ಮಾಡುವನು?
16 He will come and destroy these farmers, and will give the vineyard to others." When they heard it, they said, "May it never be!"ಅವನು ಬಂದು ಈ ಒಕ್ಕಲಿಗರನ್ನು ಸಂಹರಿಸಿ ದ್ರಾಕ್ಷೇತೋಟ ವನ್ನು ಬೇರೆಯವರಿಗೆ ಕೊಡುವನು ಅಂದನು. ಅವರು ಇದನ್ನು ಕೇಳಿ--ಹಾಗೆ ಎಂದಿಗೂ ಆಗಬಾರದು ಅಂದರು.
17 But he looked at them, and said, "Then what is this that is written, 'The stone which the builders rejected, The same was made the chief cornerstone?'ಆಗ ಆತನು ಅವರನ್ನು ನೋಡಿ--ಹಾಗಾದರೆ ಮನೇ ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು ಎಂದು ಬರೆದಿರು ವದು ಏನು?
18 "Everyone who falls on that stone will be broken to pieces, But it will crush whomever it falls on to dust."ಯಾವನಾದರೂ ಆ ಕಲ್ಲಿನ ಮೇಲೆ ಬಿದ್ದರೆ ತುಂಡುತುಂಡಾಗುವನು. ಆದರೆ ಇದು ಯಾರ ಮೇಲೆ ಬೀಳುವದೋ ಅವನನ್ನು ಅದು ಅರೆದು ಪುಡಿಪುಡಿ ಮಾಡುವದು ಅಂದನು.
19 The chief priests and the scribes sought to lay hands on Him that very hour, but they feared the people--for they knew He had spoken this parable against them.ಅದೇ ಗಳಿಗೆಯಲ್ಲಿ ಪ್ರಧಾನಯಾಜಕರೂ ಶಾಸ್ತ್ರಿಗಳೂ ಆತನ ಮೇಲೆ ಕೈ ಹಾಕುವದಕ್ಕೆ ಹವಣಿ ಸಿದರು; ಯಾಕಂದರೆ ಅತನು ತಮಗೆ ವಿರೋಧ ವಾಗಿಯೇ ಈ ಸಾಮ್ಯವನ್ನು ಹೇಳಿದ್ದನೆಂದು ಅವರು ತಿಳಿದುಕೊಂಡಿದ್ದರು; ಆದರೆ ಅವರು ಜನರಿಗೆ ಭಯಪಟ್ಟರು.
20 They watched him, and sent out spies, who pretended to be righteous, that they might trap him in something he said, so as to deliver him up to the power and authority of the governor.ಅವರು ಆತನನ್ನು ಹೊಂಚಿ ನೋಡಿದವರಾಗಿ ಮಾತಿನಲ್ಲಿ ಆತನನ್ನು ಸಿಕ್ಕಿಸುವಂತೆಯೂ ಅಧಿಪತಿಯ ಬಲಕ್ಕೆ ಮತ್ತು ಅಧಿಕಾರಕ್ಕೆ ಒಪ್ಪಿಸುವಂತೆಯೂ ತಾವು ನೀತಿವಂತರೆಂದು ನಟಿಸುವ ಗೂಢಾಚಾರರನ್ನು ಕಳುಹಿಸಿದರು.
21 They asked him, "Teacher, we know that you say and teach what is right, and aren't partial to anyone, but truly teach the way of God.ಆಗ ಅವರು ಆತನಿಗೆ--ಗುರುವೇ, ನೀನು ಮುಖದಾಕ್ಷಿಣ್ಯವಿಲ್ಲದೆ ಸರಿಯಾಗಿ ಮಾತನಾಡಿ ಬೋಧಿ ಸುತ್ತೀ; ದೇವರ ಮಾರ್ಗವನ್ನು ಸತ್ಯವಾಗಿ ಬೋಧಿಸು ವವನಾಗಿದ್ದೀಯೆಂದು ನಾವು ಬಲ್ಲೆವು.
22 Is it lawful for us to pay taxes to Caesar, or not?"ಆದರೆ ಕೈಸರನಿಗೆ ಕಪ್ಪವನ್ನು ಸಲ್ಲಿಸುವದು ನ್ಯಾಯವೋ ಅಥವಾ ಅಲ್ಲವೋ ಎಂದು ಕೇಳಿದರು.
23 But he perceived their craftiness, and said to them, "Why do you test me?ಆದರೆ ಆತನು ಅವರ ಕುಯುಕ್ತಿಯನ್ನು ತಿಳಿದು ಅವರಿಗೆ--ನನ್ನನ್ನು ಯಾಕೆ ಶೋಧಿಸುತ್ತೀರಿ?
24 Show me a denarius. Whose image and inscription are on it?" They answered, "Caesar's."ನನಗೆ ಒಂದು ನಾಣ್ಯವನ್ನು ತೋರಿಸಿರಿ. ಇದಕ್ಕೆ ಯಾವನ ರೂಪವೂ ಮೇಲ್ಬರಹವೂ ಇದೆ ಎಂದು ಅವರನ್ನು ಕೇಳಲು ಅವರು ಪ್ರತ್ಯುತ್ತರವಾಗಿ--ಕೈಸರನದು ಅಂದರು.
25 He said to them, "Then give to Caesar the things that are Caesar's, and to God the things that are God's."ಆತನು ಅವರಿಗೆ--ಹಾಗಾದರೆ ಕೈಸರನಿಗೆ ಸಂಬಂಧಪಟ್ಟವುಗಳನ್ನು ಕೈಸರನಿಗೂ ದೇವರಿಗೆ ಸಂಬಂಧಪಟ್ಟವುಗಳನ್ನು ದೇವರಿಗೂ ಸಲ್ಲಿಸಿರಿ ಅಂದನು.
26 They weren't able to trap him in his words before the people. They marveled at his answer, and were silent.ಆಗ ಅವರು ಜನರ ಮುಂದೆ ಆತನನ್ನು ಮಾತುಗಳಲ್ಲಿ ಸಿಕ್ಕಿಸಲಾರದೆ ಆತನ ಉತ್ತರಗಳಿಗಾಗಿ ಆಶ್ಚರ್ಯಪಟ್ಟು ಸುಮ್ಮನಿದ್ದರು.
27 Some of the Sadducees came to him, those who deny that there is a resurrection.ಇದಲ್ಲದೆ ಪುನರುತ್ಥಾನವನ್ನು ಅಲ್ಲಗಳೆಯುವ ಸದ್ದುಕಾಯರಲ್ಲಿ ಕೆಲವರು ಆತನ ಬಳಿಗೆ ಬಂದು ಆತನಿಗೆ--
28 They asked him, "Teacher, Moses wrote to us that if a man's brother dies having a wife, and he is childless, his brother should take the wife, and raise up children for his brother.ಬೋಧಕನೇ, ಹೆಂಡತಿ ಇದ್ದ ಒಬ್ಬ ಮನುಷ್ಯನು ಮಕ್ಕಳಿಲ್ಲದೆ ಸತ್ತರೆ ಅವನ ಸಹೋದರನು ಅವನ ಹೆಂಡತಿಯನ್ನು ಮದುವೆಯಾಗಿ ತನ್ನ ಸಹೋ ದರನಿಗಾಗಿ ಸಂತಾನವನ್ನು ಪಡೆಯಬೇಕೆಂದು ಮೋಶೆಯು ನಮಗೆ ಬರೆದುಕೊಟ್ಟನು.
29 There were therefore seven brothers. The first took a wife, and died childless.ಹೀಗೆ ಏಳು ಮಂದಿ ಸಹೋದರರು ಇರಲಾಗಿ ಮೊದಲನೆಯವನು ಮದುವೆಯಾಗಿ ಮಕ್ಕಳಿಲ್ಲದೆ ಸತ್ತನು.
30 The second took her as wife, and he died childless.ಎರಡನೆಯ ವನು ಆಕೆಯನ್ನು ಮದುವೆಯಾಗಿ ಮಕ್ಕಳಿಲ್ಲದೆ ಸತ್ತನು.
31 The third took her, and likewise the seven all left no children, and died.ಮೂರನೆಯವನು ಆಕೆಯನ್ನು ಮದುವೆಯಾದನು; ಅದೇ ರೀತಿಯಲ್ಲಿ ಏಳು ಜನರು ಸಹ ಮದುವೆಯಾಗಿ ಮಕ್ಕಳಿಲ್ಲದೆ ಸತ್ತರು.
32 Afterward the woman also died.ಕಡೇ ದಾಗಿ ಆ ಹೆಂಗಸು ಸಹ ಸತ್ತಳು.
33 Therefore in the resurrection whose wife of them will she be? For the seven had her as a wife."ಹಾಗಾದರೆ ಪುನರುತ್ಥಾನದಲ್ಲಿ ಆಕೆಯು ಅವರೊಳಗೆ ಯಾರ ಹೆಂಡತಿಯಾಗಿರುವಳು? ಯಾಕಂದರೆ ಏಳು ಮಂದಿಯೂ ಅವಳನ್ನು ಹೆಂಡತಿ ಯನ್ನಾಗಿ ಮಾಡಿಕೊಂಡಿದ್ದರು ಅಂದರು.
34 Jesus said to them, "The children of this age marry, and are given in marriage.ಅದಕ್ಕೆ ಯೇಸು ಪ್ರತ್ಯುತ್ತರವಾಗಿ ಅವರಿಗೆ--ಈ ಲೋಕದ ಮಕ್ಕಳು ಮದುವೆಮಾಡಿಕೊಳ್ಳುತ್ತಾರೆ ಮತ್ತು ಮದುವೆ ಮಾಡಿಕೊಡುತ್ತಾರೆ.
35 But those who are considered worthy to attain to that age and the resurrection from the dead, neither marry, nor are given in marriage.ಆದರೆ ಆ ಲೋಕವನ್ನೂ ಸತ್ತವರೊಳಗಿಂದ ಪುನರುತ್ಥಾನವನ್ನೂ ಹೊಂದುವದಕ್ಕೆ ಯೋಗ್ಯರೆಂದು ಎಣಿಸಲ್ಪಡುವವರು ಮದುವೆ ಮಾಡಿ ಕೊಳ್ಳುವದೂ ಇಲ್ಲ ಇಲ್ಲವೆ ಮದುವೆ ಮಾಡಿಕೊಡು ವದೂ ಇಲ್ಲ.
36 For they can't die any more, for they are like the angels, and are children of God, being children of the resurrection.ಇದಲ್ಲದೆ ಅವರು ಇನ್ನೆಂದಿಗೂ ಸಾಯುವದಿಲ್ಲ; ಯಾಕಂದರೆ ಅವರು ದೂತರಿಗೆ ಸರಿಸಮಾನರೂ ಪುನರುತ್ಥಾನದ ಮಕ್ಕಳೂ ಆಗಿರುವದ ರಿಂದ ಅವರು ದೇವರ ಮಕ್ಕಳಾಗಿದ್ದಾರೆ.
37 But that the dead are raised, even Moses showed at the bush, when he called the Lord 'The God of Abraham, the God of Isaac, and the God of Jacob.'ಮೋಶೆಯು ಸಹ ಪೊದೆಯ ಹತ್ತಿರ ಕರ್ತನು ಅಬ್ರಹಾಮನ ದೇವರೂ ಇಸಾಕನ ದೇವರೂ ಯಾಕೋಬನ ದೇವರೂ ಎಂದು ಕರೆದಾಗ ಸತ್ತವರು ಎಬ್ಬಿಸಲ್ಪಡು ತ್ತಾರೆಂಬದನ್ನು ವ್ಯಕ್ತಪಡಿಸಿದನು.
38 Now he is not the God of the dead, but of the living, for all are alive to him."ಯಾಕಂದರೆ ಆತನು ಜೀವಿಸುವವರಿಗೇ ದೇವರಾಗಿದ್ದಾನೆ, ಸತ್ತವರಿ ಗಲ್ಲ; ಯಾಕಂದರೆ ಎಲ್ಲರೂ ಆತನಿಗಾಗಿ ಜೀವಿಸುತ್ತಾರೆ ಅಂದನು.
39 Some of the scribes answered, "Teacher, you speak well."ಆಗ ಶಾಸ್ತ್ರಿಗಳಲ್ಲಿ ಕೆಲವರು ಪ್ರತ್ಯುತ್ತರ ವಾಗಿ--ಬೋಧಕನೇ, ನೀನು ಸರಿಯಾಗಿ ಹೇಳಿದ್ದೀ ಅಂದರು.
40 They didn't dare to ask him any more questions.ಅವರು ಆತನಿಗೆ ಯಾವ ಪ್ರಶ್ನೆಯನ್ನೂ ಕೇಳುವದಕ್ಕೆ ಧೈರ್ಯಗೊಳ್ಳಲಿಲ್ಲ.
41 He said to them, "Why do they say that the Christ is David's son?ಆತನು ಅವ ರಿಗೆ--ಕ್ರಿಸ್ತನು ದಾವೀದನ ಮಗನೆಂದು ಅವರು ಹೇಳುವದು ಹೇಗೆ?
42 David himself says in the book of Psalms, 'The Lord said to my Lord, "Sit at my right hand,ದಾವೀದನು ತಾನೇ ಕೀರ್ತನೆ ಗಳ ಪುಸ್ತಕದಲ್ಲಿ--ಕರ್ತನು ನನ್ನ ಕರ್ತನಿಗೆ--
43 Until I make your enemies the footstool of your feet."'ನಾನು ನಿನ್ನ ವೈರಿಗಳನ್ನು ನಿನ್ನ ಪಾದಗಳ ಪೀಠವಾಗಿ ಮಾಡುವ ವರೆಗೂ ನನ್ನ ಬಲಪಾರ್ಶ್ವದಲ್ಲಿ ನೀನು ಕೂತುಕೊಂಡಿರು ಎಂದು ಹೇಳಿದನು.
44 "David therefore calls him Lord, so how is he his son?"ಆದಕಾರಣ ದಾವೀದನು ಆತನನ್ನು ಕರ್ತನು ಎಂದು ಕರೆಯುವಾಗ ಆತನು ಅವನಿಗೆ ಮಗನಾಗುವದು ಹೇಗೆ ಎಂದು ಕೇಳಿದನು.
45 In the hearing of all the people, he said to his disciples,ಅಮೇಲೆ ಜನರೆಲ್ಲರೂ ಕೇಳುತ್ತಿದ್ದಾಗ ಆತನು ತನ್ನ ಶಿಷ್ಯರಿಗೆ--
46 "Beware of the scribes, who like to walk in long robes, and love greetings in the marketplaces, the best seats in the synagogues, and the best places at feasts;ನಿಲುವಂಗಿಗಳನ್ನು ತೊಟ್ಟುಕೊಂಡು ತಿರುಗಾಡುವದಕ್ಕೆ ಬಯಸುವವರೂ ಸಂತೆಗಳಲ್ಲಿ ವಂದನೆಗಳನ್ನೂ ಸಭಾಮಂದಿರಗಳಲ್ಲಿ ಅತ್ಯುನ್ನತ ಸ್ಥಾನ ಗಳನ್ನೂ ಔತಣಗಳಲ್ಲಿ ಮುಖ್ಯಸ್ಥಾನಗಳನ್ನೂ ಪ್ರೀತಿಸುವ ವರಾದ ಶಾಸ್ತ್ರಿಗಳ ವಿಷಯದಲ್ಲಿ ಎಚ್ಚರಿಕೆಯಾಗಿರ್ರಿ;
47 who devour widows' houses, and for a pretense make long prayers: these will receive greater condemnation."ಇವರು ವಿಧವೆಯರ ಮನೆಗಳನ್ನು ನುಂಗಿ ತೋರಿಕೆ ಗಾಗಿ ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತಾರೆ; ಇವರೇ ಹೆಚ್ಚಾದ ದಂಡನೆಯನ್ನು ಹೊಂದುವರು ಅಂದನು.
Kannada Bible