Bible

Luke 18 - YLT (Kannada)

1 And he spake also a simile to them, that it behoveth `us' always to pray, and not to faint,ಜನರು ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥಿಸತಕ್ಕದ್ದೆಂದು ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದನು--

2 saying, `A certain judge was in a certain city -- God he is not fearing, and man he is not regarding --ಒಂದಾನೊಂದು ಪಟ್ಟಣದಲ್ಲಿ ಒಬ್ಬ ನ್ಯಾಯಾಧಿಪತಿ ಇದ್ದನು. ಅವನು ದೇವರಿಗೆ ಭಯಪಡದವನೂ ಮನುಷ್ಯರನ್ನು ಲಕ್ಷ್ಯ ಮಾಡದವನೂ ಆಗಿದ್ದನು.

3 and a widow was in that city, and she was coming unto him, saying, Do me justice on my opponent,ಆ ಪಟ್ಟಣದಲ್ಲಿದ್ದ ಒಬ್ಬ ವಿಧವೆಯು ಅವನ ಬಳಿಗೆ ಬಂದು--ನನ್ನ ಪ್ರತಿ ವಾದಿಗೂ ನನಗೂ ನ್ಯಾಯತೀರಿಸು ಎಂದು ಹೇಳಿ ಕೊಳ್ಳುತ್ತಿದ್ದಳು.

4 and he would not for a time, but after these things he said in himself, Even if God I do not fear, and man do not regard,ಅವನು ಸ್ವಲ್ಪಕಾಲದವರೆಗೆ ಮನಸ್ಸಿಲ್ಲ ದವನಾಗಿದ್ದನು; ತರುವಾಯ ಅವನು ತನ್ನೊಳಗೆ--ನಾನು ದೇವರಿಗೆ ಭಯಪಡುವದಿಲ್ಲ, ಮನುಷ್ಯರನ್ನು ಲಕ್ಷ್ಯಮಾಡುವದೂ ಇಲ್ಲ.

5 yet because this widow doth give me trouble, I will do her justice, lest, perpetually coming, she may plague me.'ಅದಾಗ್ಯೂ ಈ ವಿಧವೆಯು ನನಗೆ ತೊಂದರೆ ಕೊಟ್ಟು ಪದೇ ಪದೇ ನನ್ನ ಬಳಿಗೆ ಬಂದು ನನ್ನನ್ನು ದಣಿಸದಂತೆ ನಾನು ಅವಳಿಗೆ ನ್ಯಾಯತೀರಿಸುವೆನು ಎಂದು ಅಂದುಕೊಂಡನು.

6 And the Lord said, `Hear ye what the unrighteous judge saith:ಕರ್ತನು--ಈ ಅನ್ಯಾಯಗಾರನಾದ ನ್ಯಾಯಾಧಿ ಪತಿಯು ಅಂದುಕೊಂಡದ್ದನ್ನು ಕೇಳಿರಿ.

7 and shall not God execute the justice to His choice ones, who are crying unto Him day and night -- bearing long in regard to them?ದೇವರಾದು ಕೊಂಡವರು ಆತನಿಗೆ ಹಗಲು ರಾತ್ರಿ ಮೊರೆಯಿಡು ವಾಗ ಆತನು ಅವರ ವಿಷಯದಲ್ಲಿ ಬಹಳವಾಗಿ ತಡಮಾಡಿದರೂ ಅವರ ನ್ಯಾಯವನ್ನು ತೀರಿಸದೆ ಇರುವನೇ?

8 I say to you, that He will execute the justice to them quickly; but the Son of Man having come, shall he find the faith upon the earth?'ಆತನು ಬೇಗನೆ ಅವರಿಗೆ ನ್ಯಾಯ ತೀರಿಸುವನೆಂದು ನಾನು ನಿಮಗೆ ಹೇಳುತ್ತೇನೆ. ಆದಾಗ್ಯೂ ಮನುಷ್ಯಕುಮಾರನು ಬಂದಾಗ ಭೂಮಿಯ ಮೇಲೆ ನಂಬಿಕೆಯನ್ನು ಕಾಣುವನೋ ಅಂದನು.

9 And he spake also unto certain who have been trusting in themselves that they were righteous, and have been despising the rest, this simile:ತಾವು ನೀತಿವಂತರೆಂದು ತಮ್ಮಲ್ಲಿಯೇ ಭರವಸ ವನ್ನಿಟ್ಟುಕೊಂಡು ಬೇರೆಯವರನ್ನು ಅಸಡ್ಡೆ ಮಾಡಿದ ಕೆಲವರಿಗೆ ಈ ಸಾಮ್ಯವನ್ನು ಹೇಳಿದನು.

10 `Two men went up to the temple to pray, the one a Pharisee, and the other a tax-gatherer;ಇಬ್ಬರು ಪ್ರಾರ್ಥನೆ ಮಾಡುವದಕ್ಕೆ ದೇವಾಲಯದೊಳಗೆ ಹೋದರು; ಒಬ್ಬನು ಫರಿಸಾಯನು, ಮತ್ತೊಬ್ಬನು ಸುಂಕದವನು.

11 the Pharisee having stood by himself, thus prayed: God, I thank Thee that I am not as the rest of men, rapacious, unrighteous, adulterers, or even as this tax-gatherer;ಫರಿಸಾಯನು ನಿಂತುಕೊಂಡು ತನ್ನೊಳಗೆ ಹೀಗೆ ಪ್ರಾರ್ಥಿಸುತ್ತಾ--ದೇವರೇ, ಸುಲು ಕೊಳ್ಳುವವರೂ ಅನೀತಿವಂತರೂ ವ್ಯಭಿಚಾರಿಗಳೂ ಆಗಿರುವ ಮಿಕ್ಕಾದವರಂತೆ ಇಲ್ಲವೆ ಈ ಸುಂಕದವನ ಹಾಗೆ ನಾನು ಅಲ್ಲ, ಆದದರಿಂದ ನಾನು ನಿನಗೆ ಸ್ತೋತ್ರ ಸಲ್ಲಿಸುತ್ತೇನೆ.

12 I fast twice in the week, I give tithes of all things -- as many as I possess.ನಾನು ವಾರದಲ್ಲಿ ಎರಡು ಸಾರಿ ಉಪವಾಸ ಮಾಡುತ್ತೇನೆ; ನನಗಿರುವದೆ ಲ್ಲವುಗಳಲ್ಲಿ ದಶಾಂಶ ಕೊಡುತ್ತೇನೆ ಎಂದು ಹೇಳಿದನು.

13 `And the tax-gatherer, having stood afar off, would not even the eyes lift up to the heaven, but was smiting on his breast, saying, God be propitious to me -- the sinner!ಆದರೆ ಸುಂಕದವನು ದೂರದಲ್ಲಿ ನಿಂತುಕೊಂಡು ಆಕಾಶದ ಕಡೆಗೆ ಕಣ್ಣೆತ್ತಿ ನೋಡುವದಕ್ಕೂ ಮನಸ್ಸಿಲ್ಲದೆ ತನ್ನ ಎದೆಯನ್ನು ಬಡುಕೊಳ್ಳುತ್ತಾ--ದೇವರು ಪಾಪಿ ಯಾದ ನನ್ನನ್ನು ಕರುಣಿಸಲಿ ಅಂದನು.

14 I say to you, this one went down declared righteous, to his house, rather than that one: for every one who is exalting himself shall be humbled, and he who is humbling himself shall be exalted.'ಇವನೇ ಫರಿಸಾಯನಿಗಿಂತ ನೀತಿವಂತನೆಂದು ನಿರ್ಣಯಿಸಲ್ಪಟ್ಟ ವನಾಗಿ ತನ್ನ ಮನೆಗೆ ಹೋದನು; ಯಾಕಂದರೆ ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು ಮತ್ತು ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು ಎಂದು ನಾನು ನಿಮಗೆ ಹೇಳುತ್ತೇನೆ ಅಂದನು.

15 And they were bringing near also the babes, that he may touch them, and the disciples having seen did rebuke them,ತರುವಾಯ ಚಿಕ್ಕಮಕ್ಕಳನ್ನು ಸಹ ಯೇಸು ಮುಟ್ಟುವಂತೆ ಜನರು ಅವುಗಳನ್ನು ಆತನ ಬಳಿಗೆ ತಂದಾಗ ಆತನ ಶಿಷ್ಯರು ಇದನ್ನು ನೋಡಿ ಅವರನು ಗದರಿಸಿದರು.

16 and Jesus having called them near, said, `Suffer the little children to come unto me, and forbid them not, for of such is the reign of God;ಆದರೆ ಯೇಸು ಅವರನ್ನು ತನ್ನ ಹತ್ತಿರಕ್ಕೆ ಕರೆದು--ಚಿಕ್ಕ ಮಕ್ಕಳನ್ನು ನನ್ನ ಹತ್ತಿರಕ್ಕೆ ಬರುವಂತೆ ಬಿಡಿರಿ; ಅವುಗಳಿಗೆ ಅಡ್ಡಿ ಮಾಡಬೇಡಿರಿ; ಯಾಕಂದರೆ ದೇವರ ರಾಜ್ಯವು ಅಂಥವರದೇ.

17 verily I say to you, Whoever may not receive the reign of God as a little child, may not enter into it.'ಯಾವನಾದರೂ ಈ ಚಿಕ್ಕ ಮಗುವಿನಂತೆ ದೇವರ ರಾಜ್ಯವನ್ನು ಅಂಗೀಕರಿಸದಿರುವನೋ ಅವನು ಅದರೊಳಗೆ ಸೇರುವದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು.

18 And a certain ruler questioned him, saying, `Good teacher, what having done -- shall I inherit life age-during?'ಆಗ ಒಬ್ಬಾನೊಬ್ಬ ಅಧಿಕಾರಿಯು ಆತನಿಗೆ--ಒಳ್ಳೇ ಬೋಧಕನೇ, ನಾನು ನಿತ್ಯಜೀವವನ್ನು ಬಾಧ್ಯ ವಾಗಿ ಹೊಂದುವದಕ್ಕೆ ಏನು ಮಾಡಬೇಕು ಎಂದು ಕೇಳಿದನು.

19 And Jesus said to him, `Why me dost thou call good? no one `is' good, except One -- God;ಅದಕ್ಕೆ ಯೇಸು ಅವನಿಗೆ--ನೀನು ನನ್ನನ್ನು ಒಳ್ಳೆಯವನೆಂದು ಯಾಕೆ ಕರೆಯುತ್ತೀ? ದೇವರೊಬ್ಬನೇ ಹೊರತು ಒಳ್ಳೆಯವನು ಯಾವನೂ ಇಲ್ಲ.

20 the commands thou hast known: Thou mayest not commit adultery, Thou mayest do no murder, Thou mayest not steal, Thou mayest not bear false witness, Honour thy father and thy mother.'ವ್ಯಭಿಚಾರ ಮಾಡಬೇಡ, ನರಹತ್ಯ ಮಾಡ ಬೇಡ, ಕದಿಯಬೇಡ, ಸುಳ್ಳುಸಾಕ್ಷಿ ಹೇಳಬೇಡ, ನಿನ್ನ ತಂದೆಯನ್ನು ಮತ್ತು ನಿನ್ನ ತಾಯಿಯನ್ನು ಸನ್ಮಾನಿಸಬೇಕು ಎಂಬ ಆಜ್ಞೆಗಳನ್ನು ನೀನು ಬಲ್ಲವನಾಗಿದ್ದೀ ಅಂದನು.

21 And he said, `All these I did keep from my youth;'ಅದಕ್ಕವನು--ನನ್ನ ಬಾಲ್ಯದಿಂದ ನಾನು ಇವೆಲ್ಲವು ಗಳನ್ನು ಕೈಕೊಂಡಿದ್ದೇನೆ ಎಂದು ಹೇಳಿದನು.

22 and having heard these things, Jesus said to him, `Yet one thing to thee is lacking; all things -- as many as thou hast -- sell, and distribute to the poor, and thou shalt have treasure in heaven, and come, be following me;'ಆಗ ಯೇಸು ಇವುಗಳನ್ನು ಕೇಳಿ ಅವನಿಗೆ--ಆದಾಗ್ಯೂ ನಿನಗೆ ಒಂದು ಕೊರತೆ ಇದೆ; ನಿನಗೆ ಇರುವದೆಲ್ಲವನ್ನು ಮಾರಿ ಬಡವರಿಗೆ ಹಂಚಿಕೊಡು; ಪರಲೋಕದಲ್ಲಿ ನಿನಗೆ ಸಂಪತ್ತು ಇರುವದು; ಬಂದು ನನ್ನನ್ನು ಹಿಂಬಾ ಲಿಸು ಅಂದನು.

23 and he, having heard these things, became very sorrowful, for he was exceeding rich.ಅವನು ಇದನ್ನು ಕೇಳಿ ಬಹಳ ದುಃಖವುಳ್ಳವನಾದನು; ಯಾಕಂದರೆ ಅವನು ಬಹಳ ಐಶ್ವರ್ಯವಂತನಾಗಿದ್ದನು.

24 And Jesus having seen him become very sorrowful, said, `How hardly shall those having riches enter into the reign of God!ಅವನು ಬಹಳ ವ್ಯಥೆಗೊಂಡದ್ದನ್ನು ಯೇಸು ನೋಡಿ--ಐಶ್ವರ್ಯ ವಂತರು ದೇವರ ರಾಜ್ಯದಲ್ಲಿ ಸೇರುವದು ಎಷ್ಟೋ ಕಷ್ಟ.

25 for it is easier for a camel through the eye of a needle to enter, than for a rich man into the reign of God to enter.'ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ತೂರುವದು ಸುಲಭ ಎಂದು ಹೇಳಿದನು.

26 And those who heard, said, `And who is able to be saved?'ಇದನ್ನು ಕೇಳಿದವರು--ಹಾಗಾದರೆ ರಕ್ಷಣೆ ಹೊಂದುವವರು ಯಾರು? ಅಂದರು.

27 and he said, `The things impossible with men are possible with God.'ಅದಕ್ಕೆ ಆತನು--ಮನುಷ್ಯರಿಗೆ ಅಸಾಧ್ಯವಾದವುಗಳು ದೇವರಿಗೆ ಸಾಧ್ಯವಾಗಿವೆ ಎಂದು ಹೇಳಿದನು.

28 And Peter said, `Lo, we left all, and did follow thee;'ಆಗ ಪೇತ್ರನು--ಇಗೋ, ನಾವು ಎಲ್ಲವನ್ನು ಬಿಟ್ಟು ನಿನ್ನನ್ನು ಹಿಂಬಾಲಿಸಿದ್ದೇವೆ ಎಂದು ಹೇಳಿದ್ದಕ್ಕೆ

29 and he said to them, `Verily I say to you, that there is not one who left house, or parents, or brothers, or wife, or children, for the sake of the reign of God,ಆತನು ಅವರಿಗೆ--ಒಬ್ಬನು ಮನೆ ಯನ್ನಾದರೂ ತಂದೆತಾಯಿಗಳನ್ನಾದರೂ ಸಹೋದರರನ್ನಾದರೂ ಹೆಂಡತಿಯನ್ನಾದರೂ ಇಲ್ಲವೆ ಮಕ್ಕಳ ನ್ನಾದರೂ ದೇವರ ರಾಜ್ಯಕ್ಕೋಸ್ಕರ ಬಿಟ್ಟುಬಿಡುವವನು

30 who may not receive back manifold more in this time, and in the coming age, life age-during.'ಈ ಕಾಲದಲ್ಲಿ ಅತ್ಯಧಿಕವಾದವುಗಳನ್ನೂ ಬರುವ ಲೋಕದಲ್ಲಿ ನಿತ್ಯಜೀವವನ್ನೂ ಹೊಂದಿಯೇ ಹೊಂದು ವನು ಎಂದು ನಾನು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ ಅಂದನು.

31 And having taken the twelve aside, he said unto them, `Lo, we go up to Jerusalem, and all things shall be completed -- that have been written through the prophets -- to the Son of Man,ಇದಲ್ಲದೆ ಆತನು ಹನ್ನೆರಡು ಮಂದಿಯನ್ನು ಹತ್ತಿರಕ್ಕೆ ಕರೆದು ಅವರಿಗೆ--ಇಗೋ, ನಾವು ಯೆರೂಸ ಲೇಮಿಗೆ ಹೋಗುತ್ತೇವೆ; ಮನುಷ್ಯಕುಮಾರನ ವಿಷಯ ದಲ್ಲಿ ಪ್ರವಾದಿಗಳಿಂದ ಬರೆಯಲ್ಪಟ್ಟವುಗಳೆಲ್ಲವೂ ನೆರವೇರಬೇಕು.

32 for he shall be delivered up to the nations, and shall be mocked, and insulted, and spit upon,ಆತನು ಅನ್ಯಜನಗಳಿಗೆ ಒಪ್ಪಿಸಲ್ಪ ಡುವನು; ಅವರು ಆತನನ್ನು ಹಾಸ್ಯಮಾಡುವವರಾಗಿ ಅವಮಾನ ಮಾಡುತ್ತಾ ಆತನ ಮೇಲೆ ಉಗುಳುವರು.

33 and having scourged they shall put him to death, and on the third day he shall rise again.'ಇದಲ್ಲದೆ ಅವರು ಆತನನ್ನು ಕೊರಡೆಗಳಿಂದ ಹೊಡೆದು ಕೊಲ್ಲುವರು. ಮೂರನೆಯ ದಿನದಲ್ಲಿ ಆತನು ತಿರಿಗಿ ಏಳುವನು ಅಂದನು.

34 And they none of these things understood, and this saying was hid from them, and they were not knowing the things said.ಆದರೆ ಶಿಷ್ಯರು ಇವುಗಳಲ್ಲಿ ಒಂದನ್ನೂ ಗ್ರಹಿಸಲಿಲ್ಲ; ಈ ಮಾತು ಅವರಿಗೆ ಮರೆಯಾಗಿದ್ದದರಿಂದ ಆತನು ಹೇಳಿದವು ಗಳನ್ನು ಅವರು ತಿಳಿಯಲಿಲ್ಲ.

35 And it came to pass, in his coming nigh to Jericho, a certain blind man was sitting beside the way begging,ಇದಾದ ಮೇಲೆ ಆತನು ಯೆರಿಕೋವಿನ ಸವಿಾಪಕ್ಕೆ ಬಂದಾಗ ಒಬ್ಬಾನೊಬ್ಬ ಕುರುಡನು ದಾರಿಯ ಬದಿಯಲ್ಲಿ ಕೂತುಕೊಂಡು ಭಿಕ್ಷೆ ಬೇಡು ತ್ತಿದ್ದನು;

36 and having heard a multitude going by, he was inquiring what this may be,ಜನಸಮೂಹವು ಹಾದುಹೋಗುವದನ್ನು ಇವನು ಕೇಳಿಸಿಕೊಂಡು ಅದೇನೆಂದು ವಿಚಾರಿಸಿದನು.

37 and they brought him word that Jesus the Nazarene doth pass by,ನಜರೇತಿನವನಾದ ಯೇಸು ಹಾದು ಹೋಗುತ್ತಿದ್ದಾ ನೆಂದು ಅವರು ಅವನಿಗೆ ಹೇಳಿದರು.

38 and he cried out, saying, `Jesus, Son of David, deal kindly with me;'ಆಗ ಅವನು--ಯೇಸುವೇ, ದಾವೀದನಕುಮಾರನೇ, ನನ್ನ ಮೇಲೆ ಕರುಣೆಯಿಡು ಎಂದು ಕೂಗಿಕೊಂಡನು.

39 and those going before were rebuking him, that he might be silent, but he was much more crying out, `Son of David, deal kindly with me.'ಮುಂದೆ ಹೋಗುತ್ತಿದ್ದವರು ಅವನು ಸುಮ್ಮನಿರು ವಂತೆ ಅವನನ್ನು ಗದರಿಸಿದರು. ಆದರೂ ಅವನು--ದಾವೀದನಕುಮಾರನೇ, ನನ್ನ ಮೇಲೆ ಕರುಣೆಯಿಡು ಎಂದು ಮತ್ತಷ್ಟು ಹೆಚ್ಚಾಗಿ ಕೂಗಿಕೊಂಡನು.

40 And Jesus having stood, commanded him to be brought unto him, and he having come nigh, he questioned him,ಆಗ ಯೇಸು ನಿಂತುಕೊಂಡು ಅವನನ್ನು ತನ್ನ ಬಳಿಗೆ ಕರತರುವಂತೆ ಅಪ್ಪಣೆಕೊಟ್ಟನು; ಅವನು ಆತನ ಬಳಿಗೆ ಬಂದಾಗ ಆತನು ಅವನಿಗೆ--

41 saying, `What wilt thou I shall do to thee?' and he said, `Sir, that I may receive sight.'ನಾನು ನಿನಗೆ ಏನು ಮಾಡಬೇಕೆಂದು ಕೋರುತ್ತೀ ಎಂದು ಕೇಳಿದನು. ಅದಕ್ಕವನು--ಕರ್ತನೇ, ನಾನು ದೃಷ್ಟಿಹೊಂದುವಂತೆ ಮಾಡು ಅಂದನು.

42 And Jesus said to him, `Receive thy sight; thy faith hath saved thee;'ಆಗ ಯೇಸು ಅವನಿಗೆ-- ನೀನು ದೃಷ್ಟಿ ಹೊಂದಿದವನಾಗು; ನಿನ್ನ ನಂಬಿಕೆಯೇ ನಿನ್ನನ್ನು ರಕ್ಷಿಸಿಯದೆ ಅಂದನು.

43 and presently he did receive sight, and was following him, glorifying God; and all the people, having seen, did give praise to God.ಕೂಡಲೆ ಅವನು ತನ್ನ ದೃಷ್ಟಿಹೊಂದಿದನು. ಆಗ ಅವನು ದೇವರನ್ನು ಮಹಿಮೆಪಡಿಸುತ್ತಾ ಆತನನ್ನು ಹಿಂಬಾಲಿಸಿದನು; ಎಲ್ಲಾ ಜನರು ಅದನ್ನು ನೋಡಿ ದೇವರಿಗೆ ಕೊಂಡಾಟ ಸಲ್ಲಿಸಿದರು.

Kannada Bible