Luke 18 - ASV (Kannada)
1 And he spake a parable unto them to the end that they ought always to pray, and not to faint;ಜನರು ಬೇಸರಗೊಳ್ಳದೆ ಯಾವಾಗಲೂ ಪ್ರಾರ್ಥಿಸತಕ್ಕದ್ದೆಂದು ಆತನು ಅವರಿಗೆ ಒಂದು ಸಾಮ್ಯವನ್ನು ಹೇಳಿದನು--
2 saying, There was in a city a judge, who feared not God, and regarded not man:ಒಂದಾನೊಂದು ಪಟ್ಟಣದಲ್ಲಿ ಒಬ್ಬ ನ್ಯಾಯಾಧಿಪತಿ ಇದ್ದನು. ಅವನು ದೇವರಿಗೆ ಭಯಪಡದವನೂ ಮನುಷ್ಯರನ್ನು ಲಕ್ಷ್ಯ ಮಾಡದವನೂ ಆಗಿದ್ದನು.
3 and there was a widow in that city; and she came oft unto him, saying, Avenge me of mine adversary.ಆ ಪಟ್ಟಣದಲ್ಲಿದ್ದ ಒಬ್ಬ ವಿಧವೆಯು ಅವನ ಬಳಿಗೆ ಬಂದು--ನನ್ನ ಪ್ರತಿ ವಾದಿಗೂ ನನಗೂ ನ್ಯಾಯತೀರಿಸು ಎಂದು ಹೇಳಿ ಕೊಳ್ಳುತ್ತಿದ್ದಳು.
4 And he would not for a while: but afterward he said within himself, Though I fear not God, nor regard man;ಅವನು ಸ್ವಲ್ಪಕಾಲದವರೆಗೆ ಮನಸ್ಸಿಲ್ಲ ದವನಾಗಿದ್ದನು; ತರುವಾಯ ಅವನು ತನ್ನೊಳಗೆ--ನಾನು ದೇವರಿಗೆ ಭಯಪಡುವದಿಲ್ಲ, ಮನುಷ್ಯರನ್ನು ಲಕ್ಷ್ಯಮಾಡುವದೂ ಇಲ್ಲ.
5 yet because this widow troubleth me, I will avenge her, lest she wear me out by her continual coming.ಅದಾಗ್ಯೂ ಈ ವಿಧವೆಯು ನನಗೆ ತೊಂದರೆ ಕೊಟ್ಟು ಪದೇ ಪದೇ ನನ್ನ ಬಳಿಗೆ ಬಂದು ನನ್ನನ್ನು ದಣಿಸದಂತೆ ನಾನು ಅವಳಿಗೆ ನ್ಯಾಯತೀರಿಸುವೆನು ಎಂದು ಅಂದುಕೊಂಡನು.
6 And the Lord said, Hear what the unrighteous judge saith.ಕರ್ತನು--ಈ ಅನ್ಯಾಯಗಾರನಾದ ನ್ಯಾಯಾಧಿ ಪತಿಯು ಅಂದುಕೊಂಡದ್ದನ್ನು ಕೇಳಿರಿ.
7 And shall not God avenge his elect, that cry to him day and night, and `yet' he is longsuffering over them?ದೇವರಾದು ಕೊಂಡವರು ಆತನಿಗೆ ಹಗಲು ರಾತ್ರಿ ಮೊರೆಯಿಡು ವಾಗ ಆತನು ಅವರ ವಿಷಯದಲ್ಲಿ ಬಹಳವಾಗಿ ತಡಮಾಡಿದರೂ ಅವರ ನ್ಯಾಯವನ್ನು ತೀರಿಸದೆ ಇರುವನೇ?
8 I say unto you, that he will avenge them speedily. Nevertheless, when the Son of man cometh, shall he find faith on the earth?ಆತನು ಬೇಗನೆ ಅವರಿಗೆ ನ್ಯಾಯ ತೀರಿಸುವನೆಂದು ನಾನು ನಿಮಗೆ ಹೇಳುತ್ತೇನೆ. ಆದಾಗ್ಯೂ ಮನುಷ್ಯಕುಮಾರನು ಬಂದಾಗ ಭೂಮಿಯ ಮೇಲೆ ನಂಬಿಕೆಯನ್ನು ಕಾಣುವನೋ ಅಂದನು.
9 And he spake also this parable unto certain who trusted in themselves that they were righteous, and set all others at nought:ತಾವು ನೀತಿವಂತರೆಂದು ತಮ್ಮಲ್ಲಿಯೇ ಭರವಸ ವನ್ನಿಟ್ಟುಕೊಂಡು ಬೇರೆಯವರನ್ನು ಅಸಡ್ಡೆ ಮಾಡಿದ ಕೆಲವರಿಗೆ ಈ ಸಾಮ್ಯವನ್ನು ಹೇಳಿದನು.
10 Two men went up into the temple to pray; the one a Pharisee, and the other a publican.ಇಬ್ಬರು ಪ್ರಾರ್ಥನೆ ಮಾಡುವದಕ್ಕೆ ದೇವಾಲಯದೊಳಗೆ ಹೋದರು; ಒಬ್ಬನು ಫರಿಸಾಯನು, ಮತ್ತೊಬ್ಬನು ಸುಂಕದವನು.
11 The Pharisee stood and prayed thus with himself, God, I thank thee, that I am not as the rest of men, extortioners, unjust, adulterers, or even as this publican.ಫರಿಸಾಯನು ನಿಂತುಕೊಂಡು ತನ್ನೊಳಗೆ ಹೀಗೆ ಪ್ರಾರ್ಥಿಸುತ್ತಾ--ದೇವರೇ, ಸುಲು ಕೊಳ್ಳುವವರೂ ಅನೀತಿವಂತರೂ ವ್ಯಭಿಚಾರಿಗಳೂ ಆಗಿರುವ ಮಿಕ್ಕಾದವರಂತೆ ಇಲ್ಲವೆ ಈ ಸುಂಕದವನ ಹಾಗೆ ನಾನು ಅಲ್ಲ, ಆದದರಿಂದ ನಾನು ನಿನಗೆ ಸ್ತೋತ್ರ ಸಲ್ಲಿಸುತ್ತೇನೆ.
12 I fast twice in the week; I give tithes of all that I get.ನಾನು ವಾರದಲ್ಲಿ ಎರಡು ಸಾರಿ ಉಪವಾಸ ಮಾಡುತ್ತೇನೆ; ನನಗಿರುವದೆ ಲ್ಲವುಗಳಲ್ಲಿ ದಶಾಂಶ ಕೊಡುತ್ತೇನೆ ಎಂದು ಹೇಳಿದನು.
13 But the publican, standing afar off, would not lift up so much as his eyes unto heaven, but smote his breast, saying, God, be thou merciful to me a sinner.ಆದರೆ ಸುಂಕದವನು ದೂರದಲ್ಲಿ ನಿಂತುಕೊಂಡು ಆಕಾಶದ ಕಡೆಗೆ ಕಣ್ಣೆತ್ತಿ ನೋಡುವದಕ್ಕೂ ಮನಸ್ಸಿಲ್ಲದೆ ತನ್ನ ಎದೆಯನ್ನು ಬಡುಕೊಳ್ಳುತ್ತಾ--ದೇವರು ಪಾಪಿ ಯಾದ ನನ್ನನ್ನು ಕರುಣಿಸಲಿ ಅಂದನು.
14 I say unto you, This man went down to his house justified rather than the other: for every one that exalteth himself shall be humbled; but he that humbleth himself shall be exalted.ಇವನೇ ಫರಿಸಾಯನಿಗಿಂತ ನೀತಿವಂತನೆಂದು ನಿರ್ಣಯಿಸಲ್ಪಟ್ಟ ವನಾಗಿ ತನ್ನ ಮನೆಗೆ ಹೋದನು; ಯಾಕಂದರೆ ತನ್ನನ್ನು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನು ತಗ್ಗಿಸಲ್ಪಡುವನು ಮತ್ತು ತನ್ನನ್ನು ತಗ್ಗಿಸಿಕೊಳ್ಳುವವನು ಹೆಚ್ಚಿಸಲ್ಪಡುವನು ಎಂದು ನಾನು ನಿಮಗೆ ಹೇಳುತ್ತೇನೆ ಅಂದನು.
15 And they were bringing unto him also their babes, that he should touch them: but when the disciples saw it, they rebuked them.ತರುವಾಯ ಚಿಕ್ಕಮಕ್ಕಳನ್ನು ಸಹ ಯೇಸು ಮುಟ್ಟುವಂತೆ ಜನರು ಅವುಗಳನ್ನು ಆತನ ಬಳಿಗೆ ತಂದಾಗ ಆತನ ಶಿಷ್ಯರು ಇದನ್ನು ನೋಡಿ ಅವರನು ಗದರಿಸಿದರು.
16 But Jesus called them unto him, saying, Suffer the little children to come unto me, and forbid them not: for to such belongeth the kingdom of God.ಆದರೆ ಯೇಸು ಅವರನ್ನು ತನ್ನ ಹತ್ತಿರಕ್ಕೆ ಕರೆದು--ಚಿಕ್ಕ ಮಕ್ಕಳನ್ನು ನನ್ನ ಹತ್ತಿರಕ್ಕೆ ಬರುವಂತೆ ಬಿಡಿರಿ; ಅವುಗಳಿಗೆ ಅಡ್ಡಿ ಮಾಡಬೇಡಿರಿ; ಯಾಕಂದರೆ ದೇವರ ರಾಜ್ಯವು ಅಂಥವರದೇ.
17 Verily I say unto you, Whosoever shall not receive the kingdom of God as a little child, he shall in no wise enter therein.ಯಾವನಾದರೂ ಈ ಚಿಕ್ಕ ಮಗುವಿನಂತೆ ದೇವರ ರಾಜ್ಯವನ್ನು ಅಂಗೀಕರಿಸದಿರುವನೋ ಅವನು ಅದರೊಳಗೆ ಸೇರುವದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ ಅಂದನು.
18 And a certain ruler asked him, saying, Good Teacher, what shall I do to inherit eternal life?ಆಗ ಒಬ್ಬಾನೊಬ್ಬ ಅಧಿಕಾರಿಯು ಆತನಿಗೆ--ಒಳ್ಳೇ ಬೋಧಕನೇ, ನಾನು ನಿತ್ಯಜೀವವನ್ನು ಬಾಧ್ಯ ವಾಗಿ ಹೊಂದುವದಕ್ಕೆ ಏನು ಮಾಡಬೇಕು ಎಂದು ಕೇಳಿದನು.
19 And Jesus said unto him, Why callest thou me good? none is good, save one, `even' God.ಅದಕ್ಕೆ ಯೇಸು ಅವನಿಗೆ--ನೀನು ನನ್ನನ್ನು ಒಳ್ಳೆಯವನೆಂದು ಯಾಕೆ ಕರೆಯುತ್ತೀ? ದೇವರೊಬ್ಬನೇ ಹೊರತು ಒಳ್ಳೆಯವನು ಯಾವನೂ ಇಲ್ಲ.
20 Thou knowest the commandments, Do not commit adultery, Do not kill, Do not steal, Do not bear false witness, Honor thy father and mother.ವ್ಯಭಿಚಾರ ಮಾಡಬೇಡ, ನರಹತ್ಯ ಮಾಡ ಬೇಡ, ಕದಿಯಬೇಡ, ಸುಳ್ಳುಸಾಕ್ಷಿ ಹೇಳಬೇಡ, ನಿನ್ನ ತಂದೆಯನ್ನು ಮತ್ತು ನಿನ್ನ ತಾಯಿಯನ್ನು ಸನ್ಮಾನಿಸಬೇಕು ಎಂಬ ಆಜ್ಞೆಗಳನ್ನು ನೀನು ಬಲ್ಲವನಾಗಿದ್ದೀ ಅಂದನು.
21 And he said, All these things have I observed from my youth up.ಅದಕ್ಕವನು--ನನ್ನ ಬಾಲ್ಯದಿಂದ ನಾನು ಇವೆಲ್ಲವು ಗಳನ್ನು ಕೈಕೊಂಡಿದ್ದೇನೆ ಎಂದು ಹೇಳಿದನು.
22 And when Jesus heard it, he said unto him, One thing thou lackest yet: sell all that thou hast, and distribute unto the poor, and thou shalt have treasure in heaven: and come, follow me.ಆಗ ಯೇಸು ಇವುಗಳನ್ನು ಕೇಳಿ ಅವನಿಗೆ--ಆದಾಗ್ಯೂ ನಿನಗೆ ಒಂದು ಕೊರತೆ ಇದೆ; ನಿನಗೆ ಇರುವದೆಲ್ಲವನ್ನು ಮಾರಿ ಬಡವರಿಗೆ ಹಂಚಿಕೊಡು; ಪರಲೋಕದಲ್ಲಿ ನಿನಗೆ ಸಂಪತ್ತು ಇರುವದು; ಬಂದು ನನ್ನನ್ನು ಹಿಂಬಾ ಲಿಸು ಅಂದನು.
23 But when he heard these things, he became exceeding sorrowful; for he was very rich.ಅವನು ಇದನ್ನು ಕೇಳಿ ಬಹಳ ದುಃಖವುಳ್ಳವನಾದನು; ಯಾಕಂದರೆ ಅವನು ಬಹಳ ಐಶ್ವರ್ಯವಂತನಾಗಿದ್ದನು.
24 And Jesus seeing him said, How hardly shall they that have riches enter into the kingdom of God!ಅವನು ಬಹಳ ವ್ಯಥೆಗೊಂಡದ್ದನ್ನು ಯೇಸು ನೋಡಿ--ಐಶ್ವರ್ಯ ವಂತರು ದೇವರ ರಾಜ್ಯದಲ್ಲಿ ಸೇರುವದು ಎಷ್ಟೋ ಕಷ್ಟ.
25 For it is easier for a camel to enter in through a needle's eye, than for a rich man to enter into the kingdom of God.ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ತೂರುವದು ಸುಲಭ ಎಂದು ಹೇಳಿದನು.
26 And they that heard it said, Then who can be saved?ಇದನ್ನು ಕೇಳಿದವರು--ಹಾಗಾದರೆ ರಕ್ಷಣೆ ಹೊಂದುವವರು ಯಾರು? ಅಂದರು.
27 But he said, The things which are impossible with men are possible with God.ಅದಕ್ಕೆ ಆತನು--ಮನುಷ್ಯರಿಗೆ ಅಸಾಧ್ಯವಾದವುಗಳು ದೇವರಿಗೆ ಸಾಧ್ಯವಾಗಿವೆ ಎಂದು ಹೇಳಿದನು.
28 And Peter said, Lo, we have left our own, and followed thee.ಆಗ ಪೇತ್ರನು--ಇಗೋ, ನಾವು ಎಲ್ಲವನ್ನು ಬಿಟ್ಟು ನಿನ್ನನ್ನು ಹಿಂಬಾಲಿಸಿದ್ದೇವೆ ಎಂದು ಹೇಳಿದ್ದಕ್ಕೆ
29 And he said unto them, Verily I say unto you, There is no man that hath left house, or wife, or brethren, or parents, or children, for the kingdom of God's sake,ಆತನು ಅವರಿಗೆ--ಒಬ್ಬನು ಮನೆ ಯನ್ನಾದರೂ ತಂದೆತಾಯಿಗಳನ್ನಾದರೂ ಸಹೋದರರನ್ನಾದರೂ ಹೆಂಡತಿಯನ್ನಾದರೂ ಇಲ್ಲವೆ ಮಕ್ಕಳ ನ್ನಾದರೂ ದೇವರ ರಾಜ್ಯಕ್ಕೋಸ್ಕರ ಬಿಟ್ಟುಬಿಡುವವನು
30 who shall not receive manifold more in this time, and in the world to come eternal life.ಈ ಕಾಲದಲ್ಲಿ ಅತ್ಯಧಿಕವಾದವುಗಳನ್ನೂ ಬರುವ ಲೋಕದಲ್ಲಿ ನಿತ್ಯಜೀವವನ್ನೂ ಹೊಂದಿಯೇ ಹೊಂದು ವನು ಎಂದು ನಾನು ನಿಮಗೆ ನಿಶ್ಚಯವಾಗಿ ಹೇಳುತ್ತೇನೆ ಅಂದನು.
31 And he took unto him the twelve, and said unto them, Behold, we go up to Jerusalem, and all the things that are written through the prophets shall be accomplished unto the Son of man.ಇದಲ್ಲದೆ ಆತನು ಹನ್ನೆರಡು ಮಂದಿಯನ್ನು ಹತ್ತಿರಕ್ಕೆ ಕರೆದು ಅವರಿಗೆ--ಇಗೋ, ನಾವು ಯೆರೂಸ ಲೇಮಿಗೆ ಹೋಗುತ್ತೇವೆ; ಮನುಷ್ಯಕುಮಾರನ ವಿಷಯ ದಲ್ಲಿ ಪ್ರವಾದಿಗಳಿಂದ ಬರೆಯಲ್ಪಟ್ಟವುಗಳೆಲ್ಲವೂ ನೆರವೇರಬೇಕು.
32 For he shall be delivered up unto the Gentiles, and shall be mocked, and shamefully treated, and spit upon:ಆತನು ಅನ್ಯಜನಗಳಿಗೆ ಒಪ್ಪಿಸಲ್ಪ ಡುವನು; ಅವರು ಆತನನ್ನು ಹಾಸ್ಯಮಾಡುವವರಾಗಿ ಅವಮಾನ ಮಾಡುತ್ತಾ ಆತನ ಮೇಲೆ ಉಗುಳುವರು.
33 and they shall scourge and kill him: and the third day he shall rise again.ಇದಲ್ಲದೆ ಅವರು ಆತನನ್ನು ಕೊರಡೆಗಳಿಂದ ಹೊಡೆದು ಕೊಲ್ಲುವರು. ಮೂರನೆಯ ದಿನದಲ್ಲಿ ಆತನು ತಿರಿಗಿ ಏಳುವನು ಅಂದನು.
34 And they understood none of these things; and this saying was hid from them, and they perceived not the things that were said.ಆದರೆ ಶಿಷ್ಯರು ಇವುಗಳಲ್ಲಿ ಒಂದನ್ನೂ ಗ್ರಹಿಸಲಿಲ್ಲ; ಈ ಮಾತು ಅವರಿಗೆ ಮರೆಯಾಗಿದ್ದದರಿಂದ ಆತನು ಹೇಳಿದವು ಗಳನ್ನು ಅವರು ತಿಳಿಯಲಿಲ್ಲ.
35 And it came to pass, as he drew nigh unto Jericho, a certain blind man sat by the way side begging:ಇದಾದ ಮೇಲೆ ಆತನು ಯೆರಿಕೋವಿನ ಸವಿಾಪಕ್ಕೆ ಬಂದಾಗ ಒಬ್ಬಾನೊಬ್ಬ ಕುರುಡನು ದಾರಿಯ ಬದಿಯಲ್ಲಿ ಕೂತುಕೊಂಡು ಭಿಕ್ಷೆ ಬೇಡು ತ್ತಿದ್ದನು;
36 and hearing a multitude going by, he inquired what this meant.ಜನಸಮೂಹವು ಹಾದುಹೋಗುವದನ್ನು ಇವನು ಕೇಳಿಸಿಕೊಂಡು ಅದೇನೆಂದು ವಿಚಾರಿಸಿದನು.
37 And they told him that Jesus of Nazareth passeth by.ನಜರೇತಿನವನಾದ ಯೇಸು ಹಾದು ಹೋಗುತ್ತಿದ್ದಾ ನೆಂದು ಅವರು ಅವನಿಗೆ ಹೇಳಿದರು.
38 And he cried, saying, Jesus, thou son of David, have mercy on me.ಆಗ ಅವನು--ಯೇಸುವೇ, ದಾವೀದನಕುಮಾರನೇ, ನನ್ನ ಮೇಲೆ ಕರುಣೆಯಿಡು ಎಂದು ಕೂಗಿಕೊಂಡನು.
39 And they that went before rebuked him, that he should hold his peace: but he cried out the more a great deal, Thou son of David, have mercy on me.ಮುಂದೆ ಹೋಗುತ್ತಿದ್ದವರು ಅವನು ಸುಮ್ಮನಿರು ವಂತೆ ಅವನನ್ನು ಗದರಿಸಿದರು. ಆದರೂ ಅವನು--ದಾವೀದನಕುಮಾರನೇ, ನನ್ನ ಮೇಲೆ ಕರುಣೆಯಿಡು ಎಂದು ಮತ್ತಷ್ಟು ಹೆಚ್ಚಾಗಿ ಕೂಗಿಕೊಂಡನು.
40 And Jesus stood, and commanded him to be brought unto him: and when he was come near, he asked him,ಆಗ ಯೇಸು ನಿಂತುಕೊಂಡು ಅವನನ್ನು ತನ್ನ ಬಳಿಗೆ ಕರತರುವಂತೆ ಅಪ್ಪಣೆಕೊಟ್ಟನು; ಅವನು ಆತನ ಬಳಿಗೆ ಬಂದಾಗ ಆತನು ಅವನಿಗೆ--
41 What wilt thou that I should do unto thee? And he said, Lord, that I may receive my sight.ನಾನು ನಿನಗೆ ಏನು ಮಾಡಬೇಕೆಂದು ಕೋರುತ್ತೀ ಎಂದು ಕೇಳಿದನು. ಅದಕ್ಕವನು--ಕರ್ತನೇ, ನಾನು ದೃಷ್ಟಿಹೊಂದುವಂತೆ ಮಾಡು ಅಂದನು.
42 And Jesus said unto him, Receive thy sight; thy faith hath made thee whole.ಆಗ ಯೇಸು ಅವನಿಗೆ-- ನೀನು ದೃಷ್ಟಿ ಹೊಂದಿದವನಾಗು; ನಿನ್ನ ನಂಬಿಕೆಯೇ ನಿನ್ನನ್ನು ರಕ್ಷಿಸಿಯದೆ ಅಂದನು.
43 And immediately he received his sight, and followed him, glorifying God: and all the people, when they saw it, gave praise unto God.ಕೂಡಲೆ ಅವನು ತನ್ನ ದೃಷ್ಟಿಹೊಂದಿದನು. ಆಗ ಅವನು ದೇವರನ್ನು ಮಹಿಮೆಪಡಿಸುತ್ತಾ ಆತನನ್ನು ಹಿಂಬಾಲಿಸಿದನು; ಎಲ್ಲಾ ಜನರು ಅದನ್ನು ನೋಡಿ ದೇವರಿಗೆ ಕೊಂಡಾಟ ಸಲ್ಲಿಸಿದರು.
Kannada Bible