Leviticus 9 - ASV (Kannada)
1 And it came to pass on the eighth day, that Moses called Aaron and his sons, and the elders of Israel;1 ಎಂಟನೆಯ ದಿನದಲ್ಲಿ ಆದದ್ದೇನಂದರೆ, ಮೋಶೆಯು ಆರೋನನನ್ನೂ ಅವನ ಕುಮಾರರನ್ನೂ ಇಸ್ರಾಯೇಲಿನ ಹಿರಿಯರನ್ನೂ ಕರೆ ದನು;
2 and he said unto Aaron, Take thee a calf of the herd for a sin-offering, and a ram for a burnt-offering, without blemish, and offer them before Jehovah.ಅವನು ಆರೋನನಿಗೆ ಹೇಳಿದ್ದೇನಂದರೆ--ಪಾಪದ ಬಲಿಗಾಗಿ ಒಂದು ಎಳೆಯ ಕರುವನ್ನೂ ದಹನ ಬಲಿಗಾಗಿ ದೋಷವಿಲ್ಲದ ಟಗರನ್ನೂ ನೀನು ತೆಗೆದು ಕೊಂಡು ಅವುಗಳನ್ನು ಕರ್ತನ ಸನ್ನಿಧಿಯಲ್ಲಿ ಸಮರ್ಪಿಸು.
3 And unto the children of Israel thou shalt speak, saying, Take ye a he-goat for a sin-offering; and a calf and a lamb, both a year old, without blemish, for a burnt-offering;ನೀನು ಇಸ್ರಾಯೇಲ್ ಮಕ್ಕಳಿಗೆ ಹೇಳಬೇಕಾದದ್ದೇ ನಂದರೆ--ಪಾಪದ ಬಲಿಗಾಗಿ ಮೇಕೆಗಳಲ್ಲಿ ಮರಿ ಯನ್ನೂ ದಹನಬಲಿಗಾಗಿ ದೋಷವಿಲ್ಲದ ಒಂದು ವರ್ಷದ ಕರುವನ್ನೂ ಒಂದು ವರ್ಷದ ಕುರಿಮರಿ ಯನ್ನೂ ತೆಗೆದುಕೊಳ್ಳಬೇಕು.
4 and an ox and a ram for peace-offerings, to sacrifice before Jehovah; and a meal-offering mingled with oil: for to-day Jehovah appeareth unto you.ಕರ್ತನ ಮುಂದೆ ಯಜ್ಞಕ್ಕೆ ಸಮಾಧಾನ ಬಲಿಗಳಿಗಾಗಿ ಹೋರಿಯನ್ನೂ ಟಗರನ್ನೂ ಸಹ ತೆಗೆದುಕೊಳ್ಳಬೇಕು; ಆಹಾರದ ಅರ್ಪಣೆಯು ಎಣ್ಣೆಯೊಂದಿಗೆ ಬೆರೆತಿರಬೇಕು; ಈ ದಿನವೇ ಕರ್ತನು ನಿಮಗೆ ಕಾಣಿಸಿಕೊಳ್ಳುವನು.
5 And they brought that which Moses commanded before the tent of meeting: and all the congregation drew near and stood before Jehovah.ಮೋಶೆಯು ಆಜ್ಞಾಪಿಸಿದವುಗಳನ್ನು ಅವರು ಸಭೆಯ ಗುಡಾರದ ಮುಂದೆ ತಂದರು; ಸಭೆಯೆಲ್ಲವೂ ಹತ್ತಿರ ಬಂದು ಕರ್ತನ ಮುಂದೆ ನಿಂತಿತು.
6 And Moses said, This is the thing which Jehovah commanded that ye should do: and the glory of Jehovah shall appear unto you.ಆಗ ಮೋಶೆಯು--ಕರ್ತನು ಆಜ್ಞಾಪಿಸಿದ್ದು ಇದೇ, ನೀವು ಇದನ್ನು ಮಾಡಿರಿ; ಕರ್ತನ ಮಹಿಮೆಯು ನಿಮಗೆ ಕಾಣಿಸಿಕೊಳ್ಳುವದು ಅಂದನು.
7 And Moses said unto Aaron, Draw near unto the altar, and offer thy sin-offering, and thy burnt-offering, and make atonement for thyself, and for the people; and offer the oblation of the people, and make atonement for them; as Jehovah commanded.ಮೋಶೆಯು ಆರೋನನಿಗೆ--ಯಜ್ಞವೇದಿಯ ಹತ್ತಿರಕ್ಕೆ ಹೋಗಿ ಕರ್ತನು ಆಜ್ಞಾಪಿಸಿದಂತೆಯೇ ನಿನ್ನ ಪಾಪದಬಲಿಯನ್ನೂ ದಹನಬಲಿಯನ್ನೂ ಅರ್ಪಿಸಿ, ನಿನಗಾಗಿಯೂ ಜನರಿಗಾಗಿಯೂ ಪ್ರಾಯಶ್ಚಿತ್ತವನ್ನು ಮಾಡು; ಜನರ ಸಮರ್ಪಣೆಗಳನ್ನು ಸಮರ್ಪಿಸಿ ಅವರಿ ಗಾಗಿಯೂ ಪ್ರಾಯಶ್ಚಿತ್ತವನ್ನು ಮಾಡು ಅಂದನು.
8 So Aaron drew near unto the altar, and slew the calf of the sin-offering, which was for himself.ಆದದರಿಂದ ಆರೋನನು ಯಜ್ಞವೇದಿಯ ಕಡೆಗೆ ಹೋಗಿ ತನಗಾಗಿ ಪಾಪದ ಬಲಿಯ ಕರುವನ್ನು ವಧಿಸಿದನು.
9 And the sons of Aaron presented the blood unto him; and he dipped his finger in the blood, and put it upon the horns of the altar, and poured out the blood at the base of the altar:ಆಗ ಆರೋನನ ಕುಮಾರರು ಅವನ ಬಳಿಗೆ ರಕ್ತವನ್ನು ತಂದರು; ಅವನು ಆ ರಕ್ತದಲ್ಲಿ ತನ್ನ ಬೆರಳನ್ನು ಅದ್ದಿ ಅದನ್ನು ಯಜ್ಞವೇದಿಯ ಕೊಂಬು ಗಳಿಗೆ ಹಚ್ಚಿದನು; ಉಳಿದ ರಕ್ತವನ್ನು ಯಜ್ಞವೇದಿಯ ಅಡಿಯಲ್ಲಿ ಹೊಯ್ದನು.
10 but the fat, and the kidneys, and the caul from the liver of the sin-offering, he burnt upon the altar; as Jehovah commanded Moses.ಆದರೆ ಪಾಪದ ಬಲಿಯ ಕೊಬ್ಬು, ಮೂತ್ರಜನಕಾಂಗಗಳು ಕಲಿಜದ ಮೇಲಿನ ಪೊರೆ ಇವುಗಳನ್ನು ಕರ್ತನು ಮೋಶೆಗೆ ಆಜ್ಞಾಪಿಸಿ ದ್ದಂತೆಯೇ ಅವನು ಯಜ್ಞವೇದಿಯ ಮೇಲೆ ಸುಟ್ಟನು.
11 And the flesh and the skin he burnt with fire without the camp.ಮಾಂಸವನ್ನೂ ಚರ್ಮವನ್ನೂ ಅವನು ಪಾಳೆಯದ ಹೊರಗೆ ಬೆಂಕಿಯಿಂದ ಸುಟ್ಟನು.
12 And he slew the burnt-offering; and Aaron's sons delivered unto him the blood, and he sprinkled it upon the altar round about.ಅವನು ದಹನ ಬಲಿಯನ್ನು ವಧಿಸಿದಾಗ ಆರೋನನ ಕುಮಾರರು ಅವನಿಗೆ ರಕ್ತವನ್ನು ತಂದು ಕೊಟ್ಟರು, ಅದನ್ನು ಅವನು ಯಜ್ಞವೇದಿಯ ಮೇಲೆ ಸುತ್ತಲೂ ಚಿಮುಕಿಸಿದನು.
13 And they delivered the burnt-offering unto him, piece by piece, and the head: and he burnt them upon the altar.ಅವರು ಅವನಿಗೆ ದಹನಬಲಿಯನ್ನೂ ಅವುಗಳ ತುಂಡುಗಳೊಂದಿಗೆ ತಲೆಯನ್ನೂ ತಂದುಕೊಡಲು ಅವನು ಅವುಗಳನ್ನು ಯಜ್ಞವೇದಿಯ ಮೇಲೆ ಸುಟ್ಟನು.
14 And he washed the inwards and the legs, and burnt them upon the burnt-offering on the altar.ಅವನು ಕರುಳುಗಳನ್ನೂ ಕಾಲುಗಳನ್ನೂ ತೊಳೆದು ಅವುಗಳನ್ನು ಯಜ್ಞವೇದಿಯ ಮೇಲಿನ ದಹನಬಲಿಯ ಮೇಲೆ ಸುಟ್ಟನು.
15 And he presented the people's oblation, and took the goat of the sin-offering which was for the people, and slew it, and offered it for sin, as the first.ಅವನು ಜನರ ಬಲಿಯನ್ನು ತಂದು, ಮೇಕೆಯನ್ನು ತೆಗೆದುಕೊಂಡು, ಜನರಿಗಾಗಿ ಪಾಪ ಬಲಿಯಾಗಿರು ವದನ್ನು ವಧಿಸಿ, ಮೊದಲನೆಯದರ ಹಾಗೆ ಪಾಪಕ್ಕಾಗಿ ಅದನ್ನು ಸಮರ್ಪಿಸಿದನು.
16 And he presented the burnt-offering, and offered it according to the ordinance.ಅವನು ದಹನಬಲಿ ಯನ್ನು ತಂದು ಕ್ರಮದ ಪ್ರಕಾರವೇ ಅದನ್ನು ಸಮರ್ಪಿಸಿದನು.
17 And he presented the meal-offering, and filled his hand therefrom, and burnt it upon the altar, besides the burnt-offering of the morning.ಅವನು ಆಹಾರ ಸಮರ್ಪಣೆ ಯನ್ನು ತಂದು ಅದರಲ್ಲಿ ಒಂದು ಹಿಡಿ ತೆಗೆದುಕೊಂಡು ಯಜ್ಞವೇದಿಯ ಮೇಲೆ ಬೆಳಗಿನ ದಹನಬಲಿಯ ಪಕ್ಕದಲ್ಲಿ ಅದನ್ನು ಸುಟ್ಟನು.
18 He slew also the ox and the ram, the sacrifice of peace-offerings, which was for the people: and Aaron's sons delivered unto him the blood, which he sprinkled upon the altar round about,ಅವನು ಜನರಿಗಾಗಿ ಹೋರಿಯನ್ನೂ ಟಗರನ್ನೂ ಸಮಾಧಾನ ಬಲಿಗಳ ಯಜ್ಞಕ್ಕಾಗಿ ವಧಿಸಿದನು; ಆರೋನನ ಕುಮಾರರು ರಕ್ತವನ್ನು ಅವನ ಬಳಿಗೆ ತರಲು ಅವನು ಅದನ್ನು ಯಜ್ಞವೇದಿಯ ಮೇಲೆ ಸುತ್ತಲೂ ಚಿಮುಕಿಸಿದನು.
19 and the fat of the ox and of the ram, the fat tail, and that which covereth `the inwards', and the kidneys, and the caul of the liver:ಹೋರಿ ಟಗರಿನ ಕೊಬ್ಬನ್ನೂ ಹಿಂಭಾಗವನ್ನೂ ಕರುಳುಗಳನ್ನು ಮುಚ್ಚುವ ಮೂತ್ರಜನಕಾಂಗಗಳನ್ನೂ ಕಲಿಜದ ಮೇಲಿರುವ ಪೊರೆಯನ್ನೂ
20 and they put the fat upon the breasts, and he burnt the fat upon the altar:ಅವರು ಎದೆ ಭಾಗಗಳ ಮೇಲೆ ಕೊಬ್ಬನ್ನು ಇಟ್ಟಾಗ ಅವನು ಯಜ್ಞ ವೇದಿಯ ಮೇಲೆ ಸುಟ್ಟನು.
21 and the breasts and the right thigh Aaron waved for a wave-offering before Jehovah; as Moses commanded.ಮೋಶೆಯು ಆಜ್ಞಾಪಿಸಿ ದಂತೆ ಆರೋನನು ಎದೆಯ ಭಾಗಗಳನ್ನು ಬಲಭುಜ ವನ್ನು ಆಡಿಸಿ ಕರ್ತನ ಮುಂದೆ ಸಮರ್ಪಣೆಗಾಗಿ ಆಡಿಸಿದನು.
22 And Aaron lifted up his hands toward the people, and blessed them; and he came down from offering the sin-offering, and the burnt-offering, and the peace-offerings.ಆರೋನನು ಜನರ ಕಡೆಗೆ ತನ್ನ ಕೈಗಳನ್ನು ಎತ್ತಿ ಅವರನ್ನು ಆಶೀರ್ವದಿಸಿ ಪಾಪದ ಬಲಿಯನ್ನೂ ದಹನಬಲಿಯನ್ನೂ ಸಮಾಧಾನದ ಬಲಿಗಳನ್ನೂ ಸಮರ್ಪಿಸಿದ ಮೇಲೆ ಇಳಿದು ಬಂದನು.
23 And Moses and Aaron went into the tent of meeting, and came out, and blessed the people: and the glory of Jehovah appeared unto all the people.ಮೋಶೆಯೂ ಆರೋನನೂ ಸಭೆಯ ಗುಡಾರದ ಒಳಗೆ ಹೋಗಿ ಹೊರಗೆ ಬಂದು ಜನರನ್ನು ಆಶೀರ್ವ ದಿಸಿದರು; ಆಗ ಕರ್ತನ ಮಹಿಮೆಯು ಜನರೆಲ್ಲರಿಗೂ ಕಾಣಿಸಿತು.
24 And there came forth fire from before Jehovah, and consumed upon the altar the burnt-offering and the fat: and when all the people saw it, they shouted, and fell on their faces.ಆಗ ಅಲ್ಲಿ ಕರ್ತನ ಸನ್ನಿಧಿಯಿಂದ ಬೆಂಕಿಯು ಬಂದು ಯಜ್ಞವೇದಿಯ ಮೇಲಿದ್ದ ದಹನ ಬಲಿಯನ್ನೂ ಕೊಬ್ಬನ್ನೂ ದಹಿಸಿಬಿಟ್ಟಿತು. ಜನರೆಲ್ಲರೂ ಇದನ್ನು ನೋಡಿ ಆರ್ಭಟಿಸಿ ಅಡ್ಡಬಿದ್ದರು.
Kannada Bible