Bible

Leviticus 16 - YLT (Kannada)

1 And Jehovah speaketh unto Moses, after the death of the two sons of Aaron, in their drawing near before Jehovah, and they die;ಆರೋನನ ಇಬ್ಬರು ಗಂಡುಮಕ್ಕಳು ಕರ್ತನ ಸನ್ನಿಧಿಯಲ್ಲಿ ಅರ್ಪಣೆಮಾಡಿ ಸತ್ತ ನಂತರ ಕರ್ತನು ಮೋಶೆಯೊಂದಿಗೆ ಮಾತನಾಡಿದನು.

2 yea, Jehovah saith unto Moses, `Speak unto Aaron thy brother, and he cometh not in at all times unto the sanctuary within the vail, unto the front of the mercy-seat, which `is' upon the ark, and he dieth not, for in a cloud I am seen upon the mercy-seat.ಆಗ ಕರ್ತನು ಮೋಶೆಗೆ--ಅವನು ಸಾಯದಂತೆ ಮಂಜೂಷದ ಮೇಲಿರುವ ಕರುಣಾಸನದ ಮುಂದಿ ರುವ ಪರದೆಯ ಒಳಗೆ ಪರಿಶುದ್ಧವಾದ ಸ್ಥಳಕ್ಕೆ ಎಲ್ಲಾ ಸಮಯಗಳಲ್ಲಿ ಬಾರದಿರಲಿ; ಕರುಣಾಸನದ ಮೇಲೆ ಮೇಘದೊಳಗೆ ನಾನು ಪ್ರತ್ಯಕ್ಷನಾಗುವೆನು.

3 `With this doth Aaron come in unto the sanctuary; with a bullock, a son of the herd, for a sin-offering, and a ram for a burnt-offering;ಆರೋನನು ಪಾಪಬಲಿಗಾಗಿ ಒಂದು ಹೋರಿಯನ್ನು ದಹನಬಲಿಗಾಗಿ ಒಂದು ಟಗರನ್ನು ತೆಗೆದುಕೊಂಡು ಪರಿಶುದ್ಧವಾದ ಸ್ಥಳಕ್ಕೆ ಬರಬೇಕು.

4 a holy linen coat he putteth on, and linen trousers are on his flesh, and with a linen girdle he girdeth himself, and with a linen mitre he wrappeth himself up; they `are' holy garments; and he hath bathed with water his flesh, and hath put them on.ಅವನು ಪರಿ ಶುದ್ಧವಾದ ನಾರುಬಟ್ಟೆಯ ಮೇಲಂಗಿಯನ್ನು ತೊಟ್ಟು ಕೊಂಡು ತನ್ನ ಶರೀರದ ಮೇಲೆ ನಾರುಬಟ್ಟೆಯ ಇಜಾರುಗಳನ್ನು ಹಾಕಿಕೊಳ್ಳಬೇಕು ಮತ್ತು ನಾರಿನ ನಡುಕಟ್ಟನ್ನು ಕಟ್ಟಿಕೊಂಡು ನಾರಿನ ಮುಂಡಾಸವನ್ನು ಧರಿಸಬೇಕು. ಇವು ಪವಿತ್ರವಾದ ಉಡುಪುಗಳು; ಆದಕಾರಣ ಅವನು ತನ್ನ ಶರೀರವನ್ನು ನೀರಿನಿಂದ ತೊಳೆದುಕೊಂಡು ಅವುಗಳನ್ನು ಧರಿಸಿಕೊಳ್ಳಬೇಕು.

5 `And from the company of the sons of Israel he taketh two kids of the goats for a sin-offering, and one ram for a burnt-offering;ಅವನು ಪರಿ ಶುದ್ಧವಾದ ನಾರುಬಟ್ಟೆಯ ಮೇಲಂಗಿಯನ್ನು ತೊಟ್ಟು ಕೊಂಡು ತನ್ನ ಶರೀರದ ಮೇಲೆ ನಾರುಬಟ್ಟೆಯ ಇಜಾರುಗಳನ್ನು ಹಾಕಿಕೊಳ್ಳಬೇಕು ಮತ್ತು ನಾರಿನ ನಡುಕಟ್ಟನ್ನು ಕಟ್ಟಿಕೊಂಡು ನಾರಿನ ಮುಂಡಾಸವನ್ನು ಧರಿಸಬೇಕು. ಇವು ಪವಿತ್ರವಾದ ಉಡುಪುಗಳು; ಆದಕಾರಣ ಅವನು ತನ್ನ ಶರೀರವನ್ನು ನೀರಿನಿಂದ ತೊಳೆದುಕೊಂಡು ಅವುಗಳನ್ನು ಧರಿಸಿಕೊಳ್ಳಬೇಕು.

6 and Aaron hath brought near the bullock of the sin-offering which is his own, and hath made atonement for himself, and for his house;ಇದಲ್ಲದೆ ಆರೋನನು ತನಗೋಸ್ಕರ ಪಾಪಬಲಿ ಗಾಗಿ ತನ್ನ ಹೋರಿಯನ್ನು ಸಮರ್ಪಿಸಿ ತನ್ನ ಮನೆಯ ವರಿಗೋಸ್ಕರವೂ ಪ್ರಾಯಶ್ಚಿತ್ತಮಾಡಬೇಕು.

7 and he hath taken the two goats, and hath caused them to stand before Jehovah, at the opening of the tent of meeting.ಅವನು ಎರಡು ಮೇಕೆಗಳನ್ನು ತೆಗೆದುಕೊಂಡು ಸಭೆಯ ಗುಡಾರದ ಬಾಗಿಲ ಬಳಿಗೆ ತಂದು ಅವುಗಳನ್ನು ಕರ್ತನ ಎದುರಿನಲ್ಲಿ ನಿಲ್ಲಿಸಬೇಕು.

8 `And Aaron hath given lots over the two goats, one lot for Jehovah, and one lot for a goat of departure;ಆರೋನನು ಆ ಎರಡು ಆಡುಗಳಿಗಾಗಿ ಚೀಟು ಹಾಕಬೇಕು; ಒಂದು ಚೀಟು ಕರ್ತನಿಗೋಸ್ಕರ ಮತ್ತೊಂದು ಚೀಟು ಪಾಪ ಪಶುವಿ ಗೋಸ್ಕರ.

9 and Aaron hath brought near the goat on which the lot for Jehovah hath gone up, and hath made it a sin-offering.ಆರೋನನು ಕರ್ತನ ಚೀಟು ಬಿದ್ದ ಆಡನ್ನು ತಂದು ಅದನ್ನು ಪಾಪಬಲಿಗಾಗಿ ಸಮರ್ಪಿಸ ಬೇಕು.

10 `And the goat on which the lot for a goat of departure hath gone up is caused to stand living before Jehovah to make atonement by it, to send it away for a goat of departure into the wilderness.ಆದರೆ ಪಾಪ ಪಶುವಿಗಾಗಿ ಚೀಟು ಬಿದ್ದ ಆ ಆಡನ್ನು ತನ್ನೊಂದಿಗೆ ಪ್ರಾಯಶ್ಚಿತ್ತಮಾಡುವದ ಕ್ಕಾಗಿ ಕರ್ತನ ಸನ್ನಿಧಿಯಲ್ಲಿ ಸಜೀವವಾಗಿ ನಿಲ್ಲಿಸಿ ಅದನ್ನು ಪಾಪ ಪಶುವಾಗಿ ಕಾಡಿನಲ್ಲಿ ಹೋಗುವಂತೆ ಬಿಟ್ಟುಬಿಡಬೇಕು.

11 `And Aaron hath brought near the bullock of the sin-offering which is his own, and hath made atonement for himself, and for his house, and hath slaughtered the bullock of the sin-offering which `is' his own,ಇದಲ್ಲದೆ ಆರೋನನು ಪಾಪಬಲಿಗಾಗಿರುವ ಹೋರಿಯನ್ನು ತನಗೋಸ್ಕರವೂ ತನ್ನ ಮನೆತನದವರಿ ಗೋಸ್ಕರವೂ ಪ್ರಾಯಶ್ಚಿತ್ತಮಾಡಿ, ಪಾಪಬಲಿಗಾಗಿ ಆ ಹೋರಿಯನ್ನು ವಧಿಸಬೇಕು.

12 and hath taken the fulness of the censer of burning coals of fire from off the altar, from before Jehovah, and the fulness of his hands of thin spice-perfume, and hath brought `it' within the vail;ಅವನು ಕರ್ತನ ಸನ್ನಿಧಿಯಲ್ಲಿರುವ ಯಜ್ಞವೇದಿಯಿಂದ ಧೂಪ ಸುಡುವ ಪಾತ್ರೆಯ ತುಂಬ ಬೆಂಕಿಯಿಂದ ಉರಿಯುವ ಕೆಂಡ ಗಳನ್ನು ಮತ್ತು ತನ್ನ ಕೈಗಳ ತುಂಬ ಸಣ್ಣದಾಗುವಂತೆ ಕಟ್ಟಿದ ಧೂಪವನ್ನು ತೆಗೆದುಕೊಂಡು ಅದನ್ನು ತೆರೆಯ ಒಳಗಡೆ ತರಬೇಕು.

13 and he hath put the perfume on the fire before Jehovah, and the cloud of the perfume hath covered the mercy-seat which `is' on the testimony, and he dieth not.ಅವನು ಸಾಯದ ಹಾಗೆ ಆ ಧೂಪದ ಹೊಗೆಯು ಸಾಕ್ಷಿಯ ಮೇಲಿರುವ ಕೃಪಾಸನವು ಮುಚ್ಚಿಕೊಳ್ಳುವಂತೆ ಆ ಧೂಪವನ್ನು ಕರ್ತನ ಎದುರಿನಲ್ಲಿ ಉರಿಯುವ ಕೆಂಡಗಳ ಮೇಲೆ ಹಾಕಬೇಕು.

14 `And he hath taken of the blood of the bullock, and hath sprinkled with his finger on the front of the mercy-seat eastward; even at the front of the mercy-seat he doth sprinkle seven times of the blood with his finger.ಆ ಹೋರಿಯ ರಕ್ತದಿಂದ ತೆಗೆದು ಕೊಂಡು ಕೃಪಾಸನದ ಮೇಲೆ ಪೂರ್ವಕ್ಕೆ ತನ್ನ ಬೆರಳಿನಿಂದ ಚಿಮುಕಿಸಬೇಕು; ಕೃಪಾಸನದ ಮುಂದೆ ಆ ರಕ್ತವನ್ನು ತನ್ನ ಬೆರಳಿನಿಂದ ಏಳು ಸಾರಿ ಚಿಮುಕಿಸಬೆಕು.

15 `And he hath slaughtered the goat of the sin-offering which `is' the people's, and hath brought in its blood unto the inside of the vail, and hath done with its blood as he hath done with the blood of the bullock, and hath sprinkled it on the mercy-seat, and at the front of the mercy-seat,ತರುವಾಯ ಅವನು ಜನರಿಗೋಸ್ಕರ ಪಾಪಬಲಿ ಯಾಗಿರುವ ಆಡನ್ನು ವಧಿಸಿ ಅದರ ರಕ್ತವನ್ನು ತೆರೆಯ ಒಳಗಡೆ ತಂದು ಹೋರಿಯ ರಕ್ತದಿಂದ ಮಾಡಿ ದಂತೆಯೇ ಕೃಪಾಸನದ ಮೇಲೆಯೂ ಮುಂದೆಯೂ ಚಿಮುಕಿಸಬೇಕು.

16 and he hath made atonement for the sanctuary because of the uncleanness of the sons of Israel, and because of their transgressions in all their sins; and so he doth for the tent of meeting which is tabernacling with them in the midst of their uncleannesses.ಇಸ್ರಾಯೇಲಿನ ಮಕ್ಕಳ ಅಶುದ್ಧ ತ್ವದ ನಿಮಿತ್ತವಾಗಿಯೂ ಅವರ ಪಾಪಗಳಲ್ಲಿರುವ ಎಲ್ಲಾ ಅಪರಾಧಗಳಿಗಾಗಿಯೂ ಅವನು ಪರಿಶುದ್ಧ ಸ್ಥಳಕ್ಕಾಗಿ ಪ್ರಾಯಶ್ಚಿತ್ತಮಾಡಬೇಕು. ಅವರ ಅಶುದ್ಧ ತ್ವದ ಮಧ್ಯದಲ್ಲಿ ಉಳಿದವರಿಗೋಸ್ಕರ ಸಭೆಯಗುಡಾರಕ್ಕೂ ಅದರಂತೆಯೇ ಮಾಡಬೇಕು.

17 `And no man is in the tent of meeting in his going in to make atonement in the sanctuary, till his coming out; and he hath made atonement for himself, and for his house, and for all the assembly of Israel.ಅವನು ಪ್ರಾಯಶ್ಚಿತ್ತಮಾಡುವದಕ್ಕಾಗಿ ಪರಿಶುದ್ಧ ಸ್ಥಳಕ್ಕೆ ಹೋಗಿರುವಾಗ ತನಗೋಸ್ಕರವೂ ತನ್ನ ಮನೆಯ ವರೆಲ್ಲರಿಗೋಸ್ಕರವೂ ಇಸ್ರಾಯೇಲ್ಯರ ಸಭೆ ಯವರೆಲ್ಲರಿಗೋಸ್ಕರವೂ ಪ್ರಾಯಶ್ಚಿತ್ತಮಾಡಿ ಹೊರಗೆ ಬರುವ ತನಕ ಸಭೆಯ ಗುಡಾರದಲ್ಲಿ ಒಬ್ಬ ಮನುಷ್ಯನಾದರೂ ಇರಬಾರದು.

18 `And he hath gone out unto the altar which `is' before Jehovah, and hath made atonement for it; and he hath taken of the blood of the bullock, and of the blood of the goat, and hath put on the horns of the altar round about;ಇದಲ್ಲದೆ ಅವನು ಕರ್ತನ ಎದುರಿನಲ್ಲಿರುವ ಯಜ್ಞವೇದಿಯ ಬಳಿಗೆ ಬಂದು ಅದಕ್ಕೋಸ್ಕರ ಪ್ರಾಯಶ್ಚಿತ್ತವನ್ನುಮಾಡಬೇಕು; ಹೋರಿಯ ರಕ್ತವನ್ನೂ ಆಡಿನ ರಕ್ತವನ್ನೂ ತೆಗೆದು ಕೊಂಡು ಯಜ್ಞವೇದಿಯ ಸುತ್ತಲೂ ಇರುವ ಕೊಂಬು ಗಳಿಗೆ ಹಚ್ಚಬೇಕು.

19 and he hath sprinkled on it of the blood with his finger seven times, and hath cleansed it, and hath hallowed it from the uncleannesses of the sons of Israel.ಇದಲ್ಲದೆ ಅವನು ಏಳು ಸಾರಿ ಅದರ ಮೇಲೆ ಬೆರಳಿನಿಂದ ರಕ್ತವನ್ನು ಚಿಮುಕಿಸಿ ಅದನ್ನು ಶುದ್ಧಮಾಡಬೇಕು ಇಸ್ರಾಯೇಲ್‌ ಮಕ್ಕಳ ಅಶುದ್ಧತೆಯಿಂದ ಅದನ್ನು ಶುದ್ಧಮಾಡಬೇಕು.

20 `And he hath ceased from making atonement `for' the sanctuary, and the tent of meeting, and the altar, and hath brought near the living goat;ಹೀಗೆ ಪರಿಶುದ್ಧ ಸ್ಥಳದಲ್ಲಿಯೂ ಸಭೆಯ ಗುಡಾರದಲ್ಲಿಯೂ ಯಜ್ಞವೇದಿಗೂ ಪ್ರಾಯಶ್ಚಿತ್ತವನ್ನು ಮಾಡಿ ಮುಗಿಸಿದ ಮೇಲೆ ಅವನು ಒಂದು ಜೀವವುಳ್ಳ ಆಡನ್ನು ತರಬೇಕು.

21 and Aaron hath laid his two hands on the head of the living goat, and hath confessed over it all the iniquities of the sons of Israel, and all their transgressions in all their sins, and hath put them on the head of the goat, and hath sent `it' away by the hand of a fit man into the wilderness;ಆರೋನನು ಆ ಜೀವವುಳ್ಳ ಆಡಿನ ತಲೆಯ ಮೇಲೆ ತನ್ನ ಎರಡೂ ಕೈಗಳನ್ನು ಇಟ್ಟು ಇಸ್ರಾಯೇಲ್‌ ಮಕ್ಕಳ ಎಲ್ಲಾ ಅಕ್ರಮಗಳನ್ನೂ ಎಲ್ಲಾ ಪಾಪಗಳಲ್ಲಿರುವ ದ್ರೋಹಗಳನ್ನೂ ಅರಿಕೆ ಮಾಡಿ ಅವುಗಳನ್ನು ಆಡಿನ ತಲೆಯ ಮೇಲೆ ಇರಿಸಿ ಯೋಗ್ಯನಾದ ಒಬ್ಬ ಮನುಷ್ಯನ ಕೈಯಿಂದ ಅದನ್ನು ಅಡವಿಯೊಳಗೆ ಕಳುಹಿಸಿಬಿಡಬೇಕು.

22 and the goat hath borne on him all their iniquities unto a land of separation. `And he hath sent the goat away into the wilderness,ಆ ಆಡು ಅವರ ಎಲ್ಲಾ ಅಕ್ರಮಗಳನ್ನು ನಿರ್ಜನವಾದ ಸ್ಥಳಕ್ಕೆ ತೆಗೆದುಕೊಂಡು ಹೋಗುವಂತೆ ಆ ಆಡನ್ನು ಅಡವಿಗೆ ಬಿಟ್ಟುಬಿಡಬೇಕು.

23 and Aaron hath come in unto the tent of meeting, and hath stripped off the linen garments which he had put on in his going in unto the sanctuary, and hath placed them there;ಆರೋನನು ಸಭೆಯ ಗುಡಾರದೊಳಗೆ ಬಂದು ತಾನು ಪರಿಶುದ್ಧ ಸ್ಥಳದೊಳಕ್ಕೆ ಹೋಗುವಾಗ ತೊಟ್ಟು ಕೊಂಡಿದ್ದ ನಾರಿನ ಬಟ್ಟೆಗಳನ್ನು ತೆಗೆದುಹಾಕಿ ಅವುಗ ಳನ್ನು ಅಲ್ಲಿಯೇ ಬಿಡಬೇಕು.

24 and he hath bathed his flesh with water in the holy place, and hath put on his garments, and hath come out, and hath made his burnt-offering, and the burnt-offering of the people, and hath made atonement for himself and for the people;ಅವನು ಪರಿಶುದ್ಧ ಸ್ಥಳದಲ್ಲಿ ತನ್ನ ಶರೀರವನ್ನು ನೀರಿನಿಂದ ತೊಳೆದು ತನ್ನ ಬಟ್ಟೆಗಳನ್ನು ಧರಿಸಿಕೊಂಡು ಹೊರಗೆ ಬಂದು ತನ್ನ ದಹನಬಲಿಯನ್ನೂ ಜನರ ದಹನಬಲಿಯನ್ನೂ ಸಮ ರ್ಪಿಸಿ ತನಗೋಸ್ಕರವೂ ಜನರಿಗೋಸ್ಕರವೂ ಪ್ರಾಯ ಶ್ಚಿತ್ತಮಾಡಬೇಕು.

25 and with the fat of the sin-offering he doth make perfume on the altar.ಪಾಪಬಲಿಯ ಕೊಬ್ಬು ಯಜ್ಞ ವೇದಿಯ ಮೇಲೆ ಸುಡಲ್ಪಡಬೇಕು.

26 `And he who is sending away the goat for a goat of departure doth wash his garments, and hath bathed his flesh with water, and afterwards he cometh in unto the camp.ಪಾಪ ಪಶುವಿಗಾಗಿ ಆಡನ್ನು ಹೋಗಲು ಬಿಟ್ಟ ವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ತನ್ನ ಶರೀರ ವನ್ನು ನೀರಿನಲ್ಲಿ ತೊಳೆದುಕೊಂಡ ಮೇಲೆ ಅವನು ಪಾಳೆಯದೊಳಕ್ಕೆ ಬರಬೇಕು.

27 `And the bullock of the sin-offering, and the goat of the sin-offering, whose blood hath been brought in to make atonement in the sanctuary, doth `one' bring out unto the outside of the camp, and they have burnt with fire their skins, and their flesh, and their dung;ಇದಲ್ಲದೆ ಪರಿಶುದ್ಧ ಸ್ಥಳದಲ್ಲಿ ಪ್ರಾಯಶ್ಚಿತ್ತ ಮಾಡುವದಕ್ಕಾಗಿ ಯಾವದರ ರಕ್ತವು ತರಲ್ಪಟ್ಟಿತೋ ಆ ಪಾಪಬಲಿಯ ಹೋರಿಯನ್ನು ಮತ್ತು ಪಾಪಬಲಿಯ ಆಡನ್ನು ಪಾಳೆಯದ ಆಚೆಗೆ ತೆಗೆದುಕೊಂಡು ಹೋಗಿ ಅವುಗಳ ಚರ್ಮವನ್ನೂ ಮಾಂಸವನ್ನೂ ಸಗಣಿಯನ್ನೂ ಸುಡಬೇಕು.

28 and he who is burning them doth wash his garments, and hath bathed his flesh with water, and afterwards he cometh in unto the camp.ಅವು ಗಳನ್ನು ಸುಡುವವನು ತನ್ನ ಬಟ್ಟೆಗಳನ್ನು ಒಗೆದು ಕೊಂಡು ಶರೀರವನ್ನು ನೀರಿನಲ್ಲಿ ತೊಳೆದುಕೊಂಡ ನಂತರ ಪಾಳೆಯದೊಳಕ್ಕೆ ಬರಬೇಕು.

29 `And it hath been to you for a statute age-during, in the seventh month, in the tenth of the month, ye humble yourselves, and do no work -- the native, and the sojourner who is sojourning in your midst;ನೀವು ಏಳನೆಯ ತಿಂಗಳಿನ ಹತ್ತನೆಯ ದಿನದಲ್ಲಿ ನಿಮ್ಮಲ್ಲಿ ಒಬ್ಬ ಸ್ವದೇಶದವನಾಗಲಿ ಪ್ರವಾಸಿಯಾಗಿರುವ ಪರಕೀಯನಾಗಲಿ ನಿಮ್ಮ ಆತ್ಮಗಳನ್ನು ಕುಂದಿಸಿ ಯಾವ ಕೆಲಸವನ್ನೂ ಮಾಡದಂತೆ ಇದು ನಿಮಗೆ ಶಾಶ್ವತವಾದ ಒಂದು ನಿಯಮವಾಗಿರುವದು.

30 for on this day he maketh atonement for you, to cleanse you; from all your sins before Jehovah ye are clean;ಯಾಕಂದರೆ ನೀವು ಕರ್ತನ ಸನ್ನಿಧಿಯಲ್ಲಿ ನಿಮ್ಮ ಎಲ್ಲಾ ಪಾಪಗಳಿಂದ ಶುದ್ಧರಾಗಿರುವಂತೆ ನಿಮ್ಮನ್ನು ಶುದ್ಧೀಕರಿಸುವ ಹಾಗೆ ಆ ದಿನದಲ್ಲಿ ಯಾಜಕನು ನಿಮಗೋಸ್ಕರ ಪ್ರಾಯಶ್ಚಿತ್ತ ವನ್ನು ಮಾಡುವನು.

31 it `is' to you a sabbath of rest, and ye have humbled yourselves -- a statute age-during.ಇದೇ ನಿಮಗೆ ವಿಶ್ರಾಂತಿಯ ಸಬ್ಬತ್ತಾಗಿರುವದು. ನಿಮಗೆ ನಿತ್ಯವಾದ ನಿಯಮ ವಿರುವಂತೆ ನಿಮ್ಮ ಪ್ರಾಣಗಳನ್ನು ಕುಂದಿಸಬೇಕು.

32 `And the priest whom he doth anoint, and whose hand he doth consecrate to act as priest instead of his father, hath made atonement, and hath put on the linen garments, the holy garments;ಯಾವನು ತನ್ನ ತಂದೆಯ ಬದಲಾಗಿ ಯಾಜಕ ಉದ್ಯೋಗಕ್ಕೋಸ್ಕರ ಅಭಿಷೇಕಿಸಲ್ಪಟ್ಟವನಾಗಿ ಪ್ರತಿಷ್ಠಿಸ ಲ್ಪಟ್ಟಿದ್ದಾನೋ ಆ ಯಾಜಕನು ಪ್ರಾಯಶ್ಚಿತ್ತವನ್ನು ಮಾಡಬೇಕು.

33 and he hath made atonement `for' the holy sanctuary; and `for' the tent of meeting, even `for' the altar he doth make atonement; yea, for the priests, and for all the people of the assembly he maketh atonement.ಅವನು ಪರಿಶುದ್ಧ ಉಡುಪುಗಳಾದ ನಾರು ಬಟ್ಟೆಗಳನ್ನು ಧರಿಸಿಕೊಳ್ಳಬೇಕು. ಹೀಗೆ ಅವನು ಪರಿಶುದ್ಧ ಸ್ಥಳಕ್ಕಾಗಿ ಪ್ರಾಯಶ್ಚಿತ್ತಮಾಡಬೇಕು. ಇದ ಲ್ಲದೆ ಸಭೆಯ ಗುಡಾರಕ್ಕಾಗಿಯೂ ಯಜ್ಞವೇದಿ ಗಾಗಿಯೂ ಪ್ರಾಯಶ್ಚಿತ್ತಮಾಡಬೇಕು. ಯಾಜಕರಿ ಗಾಗಿಯೂ ಸಭೆಯ ಎಲ್ಲಾ ಜನರಿಗೋಸ್ಕರವೂ ಪ್ರಾಯಶ್ಚಿತ್ತಮಾಡಬೇಕು.

34 `And this hath been to you for a statute age-during, to make atonement for the sons of Israel, because of all their sins, once in a year;' and he doth as Jehovah hath commanded Moses.ಹೀಗೆ ಇಸ್ರಾಯೇಲಿನ ಮಕ್ಕಳ ಎಲ್ಲಾ ಪಾಪಗಳಿಗಾಗಿ ವರ್ಷಕ್ಕೊಂದಾವರ್ತಿ ಪ್ರಾಯಶ್ಚಿತ್ತಮಾಡುವಂತೆ ಇದು ನಿಮಗೆ ನಿರಂತರ ವಾದ ನಿಯಮವಾಗಿರುವದು ಎಂದು ಹೇಳಿದನು. ಕರ್ತನು ಮೋಶೆಗೆ ಆಜ್ಞಾಪಿಸಿದಂತೆಯೇ ಆರೋನನು ಮಾಡಿದನು.

Kannada Bible