Leviticus 15 - ASV (Kannada)
1 And Jehovah spake unto Moses and to Aaron, saying,ಕರ್ತನು ಮೋಶೆ ಆರೋನರೊಂದಿಗೆ ಮಾತನಾಡಿ ಹೇಳಿದ್ದೇನಂದರೆ--
2 Speak unto the children of Israel, and say unto them, When any man hath an issue out of his flesh, because of his issue he is unclean.ಇಸ್ರಾ ಯೇಲಿನ ಮಕ್ಕಳೊಂದಿಗೆ ಹೇಳಬೇಕಾದದ್ದೇನಂದರೆಯಾವ ಮನುಷ್ಯನಿಗಾದರೂ ಅವರ ಶರೀರದಲ್ಲಿ ಮೇಹಸ್ರಾವ ಇರುವದಾಗಿದ್ದರೆ ಆ ಸ್ರಾವದ ನಿಮಿತ್ತ ವಾಗಿ ಅವನು ಅಶುದ್ಧನಾಗಿರುವನು.
3 And this shall be his uncleanness in his issue: whether his flesh run with his issue, or his flesh be stopped from his issue, it is his uncleanness.ಅವನ ಸ್ರಾವ ದಲ್ಲಿ ಅದು ಅವನ ಅಶುದ್ಧತೆಯಾಗಿರುವದು; ಅವನ ಶರೀರವು ತನ್ನ ಸ್ರಾವದಿಂದ ಹರಿಯುವದಾಗಿದ್ದರೂ ತನ್ನ ಸ್ರಾವವು ಅವನ ಶರೀರದಲ್ಲಿ ನಿಂತುಹೋಗಿದ್ದರೂ ಅದು ಅವನ ಅಶುದ್ಧತೆಯಾಗಿರುವದು.
4 Every bed whereon he that hath the issue lieth shall be unclean; and everything whereon he sitteth shall be unclean.ಸ್ರಾವವಿರು ವವನು ಮಲಗುವ ಪ್ರತಿಯೊಂದು ಹಾಸಿಗೆಯು ಅಶುದ್ಧವಾದದ್ದು; ಅವನು ಕೂತುಕೊಳ್ಳುವ ಪ್ರತಿ ಯೊಂದು ವಸ್ತುವು ಅಶುದ್ಧವಾಗಿರುವದು.
5 And whosoever toucheth his bed shall wash his clothes, and bathe himself in water, and be unclean until the even.ಅವನ ಹಾಸಿಗೆಯನ್ನು ಮುಟ್ಟುವವನು ತನ್ನ ಬಟ್ಟೆಗಳನ್ನು ಒಗೆದು ಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಸಾಯಂಕಾಲದ ವರೆಗೆ ಅವನು ಅಶುದ್ಧನಾಗಿರಬೇಕು.
6 And he that sitteth on anything whereon he that hath the issue sat shall wash his clothes, and bathe himself in water, and be unclean until the even.ಇದಲ್ಲದೆ ಸ್ರಾವವಿರುವವನು ಕೂತುಕೊಂಡ ಯಾವುದೇ ವಸ್ತು ವಿನ ಮೇಲೆ ಕೂತುಕೊಳ್ಳುವವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು. ಸಾಯಂಕಾಲದ ವರೆಗೆ ಅವನು ಅಶುದ್ಧನಾಗಿರುವನು.
7 And he that toucheth the flesh of him that hath the issue shall wash his clothes, and bathe himself in water, and be unclean until the even.ಸ್ರಾವವಿರುವವನ ಶರೀರವನ್ನು ಮುಟ್ಟುವವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡ ಬೇಕು ಸಾಯಂಕಾಲದ ವರೆಗೆ ಅವನು ಅಶುದ್ಧನಾಗಿರ ಬೇಕು.
8 And if he that hath the issue spit upon him that is clean, then he shall wash his clothes, and bathe himself in water, and be unclean until the even.ಶುದ್ಧನಾಗಿರುವನ ಮೇಲೆ ಸ್ರಾವವಿರುವವನು ಉಗುಳಿದರೆ ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು, ಸಾಯಂಕಾಲದ ವರೆಗೆ ಅವನು ಅಶುದ್ಧನಾಗಿರಬೇಕು.
9 And what saddle soever he that hath the issue rideth upon shall be unclean.ಸ್ರಾವವುಳ್ಳವನು ಏರಿಕೂತುಕೊಂಡಿದ್ದ ತಡಿಯು ಅಶುದ್ಧವಾಗಿರುವದು.
10 And whosoever toucheth anything that was under him shall be unclean until the even: and he that beareth those things shall wash his clothes, and bathe himself in water, and be unclean until the even.ಇದಲ್ಲದೆ ಅವನ ಕೆಳಗಿರುವ ಯಾವದಾದರೂ ವಸ್ತುವನ್ನು ಮುಟ್ಟಿದವನು ಸಾಯಂಕಾಲದ ವರೆಗೆ ಅಶುದ್ಧನಾಗಿರಬೇಕು; ಅವುಗಳಲ್ಲಿ ಯಾವದನ್ನಾದರೂ ಹೊತ್ತುಕೊಳ್ಳುವವನು ತನ್ನ ಬಟ್ಟೆಗಳನ್ನು ಒಗೆದು ಕೊಂಡು ನೀರಿನಲ್ಲಿ ಸ್ನಾನಮಾಡಬೇಕು ಸಾಯಂಕಾಲದ ವರೆಗೆ ಅವನು ಅಶುದ್ಧನಾಗಿರುವನು.
11 And whomsoever he that hath the issue toucheth, without having rinsed his hands in water, he shall wash his clothes, and bathe himself in water, and be unclean until the even.ಸ್ರಾವವುಳ್ಳ ವನು ತನ್ನ ಕೈಗಳನ್ನು ನೀರಿನಿಂದ ತೊಳೆದುಕೊಳ್ಳದೆ ಯಾರನ್ನಾದರೂ ಮುಟ್ಟಿದರೆ ಅವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು; ಸಾಯಂಕಾಲದ ವರೆಗೆ ಅವನು ಅಶುದ್ಧನಾಗಿರಬೇಕು.
12 And the earthen vessel, which he that hath the issue toucheth, shall be broken; and every vessel of wood shall be rinsed in water.ಸ್ರಾವವುಳ್ಳವನು ಮುಟ್ಟಿದ ಮಣ್ಣಿನ ಪಾತ್ರೆಯನ್ನು ಒಡೆಯಬೇಕು, ಮರದ ಪ್ರತಿಯೊಂದು ಪಾತ್ರೆಯನ್ನು ನೀರಿನಲ್ಲಿ ಜಾಲಿಸಿ ತೊಳೆಯಬೇಕು.
13 And when he that hath an issue is cleansed of his issue, then he shall number to himself seven days for his cleansing, and wash his clothes; and he shall bathe his flesh in running water, and shall be clean.ಸ್ರಾವವುಳ್ಳವನು ತನ್ನ ಸ್ರಾವದಿಂದ ಶುದ್ಧನಾದರೆ ತನ್ನ ಶುದ್ಧತೆಗಾಗಿ ಏಳು ದಿನಗಳನ್ನು ಲೆಕ್ಕಮಾಡಿ ತನ್ನ ಬಟ್ಟೆಗಳನ್ನು ಒಗೆದುಕೊಳ್ಳಬೇಕು. ಇದಲ್ಲದೆ ಹರಿಯುವ ನೀರಿನಲ್ಲಿ ತನ್ನ ಶರೀರವನ್ನು ತೊಳೆದುಕೊಳ್ಳಬೇಕು; ಆಗ ಅವನು ಶುದ್ಧನಾಗಿರುವನು.
14 And on the eighth day he shall take to him two turtle-doves, or two young pigeons, and come before Jehovah unto the door of the tent of meeting, and give them unto the priest:ಎಂಟನೆಯ ದಿನದಲ್ಲಿ ಅವನು ತನಗಾಗಿ ಎರಡು ಬೆಳವಕ್ಕಿಗಳನ್ನು ಇಲ್ಲವೆ ಎರಡು ಪಾರಿವಾಳದ ಮರಿಗಳನ್ನು ತೆಗೆದು ಕೊಂಡು ಸಭೆಯ ಗುಡಾರದ ಬಾಗಿಲ ಬಳಿ ಕರ್ತನ ಎದುರಿನಲ್ಲಿ ಬಂದು ಅವುಗಳನ್ನು ಯಾಜಕನಿಗೆ ಕೊಡಬೇಕು.
15 and the priest shall offer them, the one for a sin-offering, and the other for a burnt-offering; and the priest shall make atonement for him before Jehovah for his issue.ಆಗ ಯಾಜಕನು ಒಂದನ್ನು ಪಾಪಬಲಿ ಗಾಗಿ ಇನ್ನೊಂದನ್ನು ದಹನಬಲಿಗಾಗಿ ಅವುಗಳನ್ನು ಸಮರ್ಪಿಸಬೇಕು; ಯಾಜಕನು ಅವನ ಸ್ರಾವಕ್ಕೋಸ್ಕರ ಕರ್ತನ ಎದುರಿನಲ್ಲಿ ಪ್ರಾಯಶ್ಚಿತ್ತವನ್ನು ಮಾಡಬೇಕು.
16 And if any man's seed of copulation go out from him, then he shall bathe all his flesh in water, and be unclean until the even.ಒಬ್ಬನಿಗೆ ವೀರ್ಯವು ಹೊರಟುಹೋದರೆ ಅವನು ತನ್ನ ಶರೀರವನ್ನೆಲ್ಲಾ ನೀರಿನಲ್ಲಿ ತೊಳೆದು ಸಾಯಂಕಾ ಲದ ವರೆಗೆ ಅಶುದ್ಧನಾಗಿರಬೇಕು.
17 And every garment, and every skin, whereon is the seed of copulation, shall be washed with water, and be unclean until the even.ವೀರ್ಯವು ಬಿದ್ದ ಪ್ರತಿಯೊಂದು ಬಟ್ಟೆ ಮತ್ತು ಪ್ರತಿಯೊಂದು ಚರ್ಮ ನೀರಿನಿಂದ ತೊಳೆಯಲ್ಪಟ್ಟು ಸಾಯಂಕಾಲದ ವರೆಗೆ ಅಶುದ್ಧವಾಗಿರಬೇಕು.
18 The woman also with whom a man shall lie with seed of copulation, they shall both bathe themselves in water, and be unclean until the even.ಇದಲ್ಲದೆ ಸ್ತ್ರೀಯೊಂದಿಗೆ ಒಬ್ಬನು ಮಲಗಿ ವೀರ್ಯವನ್ನು ಬಿಟ್ಟಿದ್ದರೆ ಅವರಿಬ್ಬರೂ ನೀರಿನಲ್ಲಿ ಸ್ನಾನಮಾಡಬೇಕು, ಸಾಯಂಕಾಲದ ವರೆಗೆ ಅಶುದ್ಧರಾಗಿರಬೇಕು.
19 And if a woman have an issue, `and' her issue in her flesh be blood, she shall be in her impurity seven days: and whosoever toucheth her shall be unclean until the even.ಒಬ್ಬ ಸ್ತ್ರೀಗೆ ತನ್ನ ಶರೀರದಲ್ಲಿ ರಕ್ತಸ್ರಾವವಿದ್ದರೆ ಅವಳು ಏಳು ದಿವಸಗಳ ವರೆಗೆ ಪ್ರತ್ಯೇಕಿಸಲ್ಪಡಬೇಕು. ಅವಳನ್ನು ಯಾವನಾದರೂ ಮುಟ್ಟಿದರೆ ಅವನು ಸಾಯಂಕಾಲದ ವರೆಗೆ ಅಶುದ್ಧನಾಗಿರಬೇಕು;
20 And everything that she lieth upon in her impurity shall be unclean: everything also that she sitteth upon shall be unclean.ಅವಳು ಮುಟ್ಟಾದಾಗ ಅವಳು ಮಲಗುವ ಪ್ರತಿಯೊಂದು ವಸ್ತುವು ಅಶುದ್ಧವಾಗಿರಬೇಕು. ಅವಳು ಕೂತುಕೊ ಳ್ಳುವ ಪ್ರತಿಯೊಂದು ವಸ್ತುವು ಅಶುದ್ಧವಾಗಿರಬೇಕು.
21 And whosoever toucheth her bed shall wash his clothes, and bathe himself in water, and be unclean until the even.ಅವಳ ಹಾಸಿಗೆಯನ್ನು ಮುಟ್ಟುವವನು ತನ್ನ ಬಟ್ಟೆ ಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು; ಸಾಯಂಕಾಲದ ವರೆಗೆ ಅವನು ಅಶುದ್ಧನಾಗಿರಬೇಕು.
22 And whosoever toucheth anything that she sitteth upon shall wash his clothes, and bathe himself in water, and be unclean until the even.ಅವಳು ಕೂತುಕೊಂಡಿರುವ ಯಾವದನ್ನಾದರೂ ಮುಟ್ಟಿದವನು ತನ್ನ ಬಟ್ಟೆಗಳನ್ನು ಒಗೆದುಕೊಂಡು ಅವನು ನೀರಿನಲ್ಲಿ ಸ್ನಾನಮಾಡಬೇಕು, ಸಾಯಂಕಾಲದ ವರೆಗೆ ಅಶುದ್ಧನಾಗಿರಬೇಕು.
23 And if it be on the bed, or on anything whereon she sitteth, when he toucheth it, he shall be unclean until the even.ಇದಲ್ಲದೆ ಅವಳ ಹಾಸಿಗೆಯ ಮೇಲಾಗಲಿ ಇಲ್ಲವೆ ಅವಳು ಕೂತುಕೊಂಡ ಯಾವದರ ಮೇಲಾಗಲಿ ಇರುವದನ್ನು ಮುಟ್ಟಿ ದವನು ಸಾಯಂಕಾಲದ ವರೆಗೆ ಅಶುದ್ಧನಾಗಿರಬೇಕು.
24 And if any man lie with her, and her impurity be upon him, he shall be unclean seven days; and every bed whereon he lieth shall be unclean.ಯಾವನಾದರೂ ಅವಳೊಂದಿಗೆ ಮಲಗಿದರೆ ಅವಳ ಸಾರವು (ಹೊಲೆ) ಅವನಿಗೆ ತಗಲಿದರೆ ಅವನು ಏಳು ದಿವಸ ಅಶುದ್ಧನಾಗಿರಬೇಕು; ಅವನು ಮಲಗಿ ಕೊಳ್ಳುವ ಹಾಸಿಗೆಯೆಲ್ಲಾ ಅಶುದ್ಧವಾಗಿರುವದು.
25 And if a woman have an issue of her blood many days not in the time of her impurity, or if she have an issue beyond the time of her impurity; all the days of the issue of her uncleanness she shall be as in the days of her impurity: she is unclean.ಇದಲ್ಲದೆ ಹೆಂಗಸಿಗೆ ಅವಳ ಮುಟ್ಟಿನ ಕಾಲಕ್ಕಿಂತಲೂ ಹೆಚ್ಚು ದಿನ ರಕ್ತಸ್ರಾವವು ಇದ್ದರೆ ಇಲ್ಲವೆ ಮುಟ್ಟಾಗಿದ್ದ ಕಾಲದಲ್ಲಾಗುವ ರಕ್ತಸ್ರಾವಕ್ಕಿಂತ ಹೆಚ್ಚಾಗಿ ಹರಿ ಯುತ್ತಿದ್ದರೆ ಅವಳ ಸ್ರಾವದ ಅಶುದ್ಧತ್ವದ ಎಲ್ಲಾ ದಿನ ಗಳು ಅವಳ ಮುಟ್ಟಿನ ದಿನಗಳಂತೆ ಇರಬೇಕು; ಅವಳು ಅಶುದ್ಧಳಾಗಿರುವಳು.
26 Every bed whereon she lieth all the days of her issue shall be unto her as the bed of her impurity: and everything whereon she sitteth shall be unclean, as the uncleanness of her impurity.ಅವಳ ಸ್ರಾವದ ಎಲ್ಲಾ ದಿನಗಳಲ್ಲಿ ಅವಳು ಮಲಗಿಕೊಳ್ಳುವ ಪ್ರತಿಯೊಂದು ಹಾಸಿಗೆಯೂ ಅವಳ ಮುಟ್ಟಿನ ಹಾಸಿಗೆಯಂತಿರಬೇಕು; ಅವಳು ಕೂತುಕೊಳ್ಳುವದೆಲ್ಲವೂ ಅವಳ ಪ್ರತ್ಯೇಕದ ಮುಟ್ಟಿನ ಅಶುದ್ಧತೆಯಂತೆಯೇ ಅಶುದ್ಧವಾಗಿರುವದು.
27 And whosoever toucheth those things shall be unclean, and shall wash his clothes, and bathe himself in water, and be unclean until the even.ಯಾವನಾದರು ಆ ವಸ್ತುಗಳನ್ನು ಮುಟ್ಟಿದರೆ ಅಶುದ್ಧ ನಾಗಿರುವನು, ತನ್ನ ಬಟ್ಟೆಗಳನ್ನು ಒಗೆದುಕೊಂಡು ನೀರಿನಲ್ಲಿ ಸ್ನಾನಮಾಡಬೇಕು, ಸಾಯಂಕಾಲದ ವರೆಗೆ ಅಶುದ್ಧನಾಗಿರುವನು.
28 But if she be cleansed of her issue, then she shall number to herself seven days, and after that she shall be clean.ಅವಳು ತನ್ನ ಸ್ರಾವದಿಂದ ಶುದ್ಧಳಾದ ದಿನದಿಂದ ಏಳು ದಿನ ಲೆಕ್ಕಿಸಬೇಕು ತರು ವಾಯ ಅವಳು ಶುದ್ಧಳಾಗಿರುವಳು.
29 And on the eighth day she shall take unto her two turtle-doves, or two young pigeons, and bring them unto the priest, to the door of the tent of meeting.ಎಂಟನೆಯ ದಿನದಲ್ಲಿ ಅವಳು ಎರಡು ಬೆಳವಕ್ಕಿಗಳನ್ನಾಗಿಲಿ ಎರಡು ಪಾರಿವಾಳದ ಮರಿಗಳನ್ನಾಗಲಿ ತೆಗೆದುಕೊಂಡು ಸಭೆಯ ಗುಡಾರದ ಬಾಗಿಲ ಬಳಿ ಯಾಜಕನ ಬಳಿಗೆ ತರ ಬೇಕು.
30 And the priest shall offer the one for a sin-offering, and the other for a burnt-offering; and the priest shall make atonement for her before Jehovah for the issue of her uncleanness.ಯಾಜಕನು ಒಂದನ್ನು ಪಾಪಬಲಿಗಾ ಗಿಯೂ ಇನ್ನೊಂದನ್ನು ದಹನಬಲಿಗಾಗಿಯೂ ಸಮ ರ್ಪಿಸಬೇಕು; ಯಾಜಕನು ಅವಳಿಗಾಗಿ ಅವಳ ಅಶುದ್ಧ ತೆಯ ಸ್ರಾವದ ವಿಷಯದಲ್ಲಿ ಕರ್ತನ ಎದುರಿನಲ್ಲಿ ಪ್ರಾಯಶ್ಚಿತ್ತಮಾಡಬೇಕು.
31 Thus shall ye separate the children of Israel from their uncleanness, that they die not in their uncleanness, when they defile my tabernacle that is in the midst of them.ಹೀಗೆ ನೀವು ಇಸ್ರಾಯೇಲ್ ಮಕ್ಕಳನ್ನು ಅವರ ಅಶುದ್ಧತ್ವದಿಂದ ಪ್ರತ್ಯೇಕಿಸಬೇಕು; ಆಗ ಅವರು ತಮ್ಮ ಮಧ್ಯದಲ್ಲಿರುವ ನನ್ನ ಗುಡಾರವನ್ನು ಹೊಲೆಮಾಡದೆ ತಮ್ಮ ಅಶುದ್ಧತ್ವದಿಂದ ಸಾಯುವದಿಲ್ಲ.
32 This is the law of him that hath an issue, and of him whose seed of copulation goeth from him, so that he is unclean thereby;ಮೇಹಸ್ರಾವವುಳ್ಳವನಿಗೂ ವೀರ್ಯಸ್ರಾವವುಳ್ಳ ವನಿಗೂ ಅವುಗಳಿಂದ ಅಶುದ್ಧವಾಗುವವರಿಗೂ ಇರುವ ನಿಯಮವು ಇದೇ.
33 and of her that is sick with her impurity, and of him that hath an issue, of the man, and of the woman, and of him that lieth with her that is unclean.ಮುಟ್ಟು ಎಂಬ ರೋಗವಿರು ವವಳಿಗೂ ಮೇಹಸ್ರಾವವಿರುವ ಗಂಡಸಿಗೂ ಹೆಂಗಸಿಗೂ ಅಶುದ್ಧವಾದವಳ ಸಂಗಡ ಮಲಗಿದವನಿಗೂ ಇರುವ ನಿಯಮವು ಇದೇ.
Kannada Bible