Leviticus 14 - YLT (Kannada)
1 And Jehovah speaketh unto Moses, saying,ತರುವಾಯ ಕರ್ತನು ಮೋಶೆಯೊಂದಿಗೆ ಮಾತನಾಡಿ ಹೇಳಿದ್ದೇನಂದರೆ--
2 `This is a law of the leper, in the day of his cleansing, that he hath been brought in unto the priest,ಕುಷ್ಠ ರೋಗಿಯು ತನ್ನ ಶುದ್ಧತೆಯ ದಿನದಲ್ಲಿ ಮಾಡತಕ್ಕ ನಿಯಮವು ಇದೇ: ಅವನು ಯಾಜಕನ ಬಳಿಗೆ ತರಲ್ಪಡಬೇಕು.
3 and the priest hath gone out unto the outside of the camp, and the priest hath seen, and lo, the plague of leprosy hath ceased from the leper,ಯಾಜಕನು ಪಾಳೆಯದ ಆಚೆಗೆ ಹೊರಟು ಹೋಗಬೇಕು; ಇಗೋ, ಕುಷ್ಠ ವ್ಯಾಧಿಯು ಕುಷ್ಠರೋಗಿಯನ್ನು ಬಿಟ್ಟು ಅವನು ಸ್ವಸ್ಥನಾದನೆಂದು ಯಾಜಕನು ನೋಡಿದರೆ
4 and the priest hath commanded, and he hath taken for him who is to be cleansed, two clean living birds, and cedar wood, and scarlet, and hyssop.ಆಗ ಶುದ್ಧಮಾಡಿಸಿ ಕೊಳ್ಳುವವನಿಗೊಸ್ಕರ ಜೀವವುಳ್ಳ ಶುದ್ಧವಾದ ಎರಡು ಪಕ್ಷಿಗಳನ್ನೂ ದೇವದಾರು ಕಟ್ಟಿಗೆಯನ್ನೂ ರಕ್ತವರ್ಣ ವುಳ್ಳ ದಾರವನ್ನೂ ಮತ್ತು ಹಿಸ್ಸೋಪನ್ನೂ ತೆಗೆದುಕೊಳ್ಳು ವಂತೆ ಯಾಜಕನು ಆಜ್ಞಾಪಿಸಬೇಕು.
5 `And the priest hath commanded, and he hath slaughtered the one bird upon an earthen vessel, over running water;ಆ ಪಕ್ಷಿಗಳಲ್ಲಿ ಒಂದನ್ನು ಹರಿಯುವ ನೀರಿನ ಮೇಲೆ ಮಣ್ಣಿನ ಪಾತ್ರೆ ಯಲ್ಲಿ ಕೊಲ್ಲಬೇಕೆಂದು ಯಾಜಕನು ಆಜ್ಞಾಪಿಸಬೇಕು.
6 `as to' the living bird, he taketh it, and the cedar wood, and the scarlet, and the hyssop, and hath dipped them and the living bird in the blood of the slaughtered bird, over the running water,ಇದಲ್ಲದೆ ಜೀವವುಳ್ಳ ಪಕ್ಷಿಯನ್ನೂ ದೇವದಾರು ಕಟ್ಟಿಗೆಯನ್ನೂ ರಕ್ತವರ್ಣ ದಾರವನ್ನೂ ಹಿಸ್ಸೋಪನ್ನೂ ತೆಗೆದುಕೊಂಡು ಹರಿಯುವ ನೀರಿನ ಬಳಿಯಲ್ಲಿ ಕೊಲ್ಲಲ್ಪಟ್ಟ ಆ ಪಕ್ಷಿಯ ರಕ್ತದಲ್ಲಿ ಅದ್ದಿ
7 and he hath sprinkled on him who is to be cleansed from the leprosy seven times, and hath pronounced him clean, and hath sent out the living bird on the face of the field.ಕುಷ್ಠದಿಂದ ಶುದ್ಧಪಡಿಸಿಕೊಳ್ಳುವವನ ಮೇಲೆ ಏಳು ಸಾರಿ ಚಿಮುಕಿಸಿ ಅವನನ್ನು ಶುದ್ಧನೆಂದು ನುಡಿದು ಆ ಜೀವವುಳ್ಳ ಪಕ್ಷಿಯನ್ನು ಬಯಲಾದ ಹೊಲದಲ್ಲಿ ಬಿಟ್ಟು ಬಿಡ ಬೇಕು.
8 `And he who is to be cleansed hath washed his garments, and hath shaved all his hair, and hath bathed with water, and hath been clean, and afterwards he doth come in unto the camp, and hath dwelt at the outside of his tent seven days.ಶುದ್ಧವಾಗುವದಕ್ಕಿರುವವನು ತನ್ನ ಬಟ್ಟೆಗಳನ್ನು ತೊಳೆದುಕೊಂಡವನಾಗಿ ಎಲ್ಲಾ ಕೂದಲನ್ನು ಕ್ಷೌರ ಮಾಡಿಕೊಂಡು ಶುದ್ಧನಾಗುವಂತೆ ತನ್ನನ್ನು ನೀರಿನಲ್ಲಿ ತೊಳೆದುಕೊಳ್ಳಬೇಕು; ತರುವಾಯ ಅವನು ಪಾಳೆಯ ದೊಳಗೆ ಬಂದು ತನ್ನ ಡೇರೆಯೊಳಗೆ ಏಳು ದಿನಗಳ ವರೆಗೆ ಕಾಯಬೇಕು.
9 `And it hath been, on the seventh day -- he shaveth all his hair, his head, and his beard, and his eyebrows, even all his hair he doth shave, and he hath washed his garments, and hath bathed his flesh with water, and hath been clean.ಆದರೆ ಏಳೆನೆಯ ದಿನದಲ್ಲಿ ಅವನು ತನ್ನ ತಲೆಯ ಎಲ್ಲಾ ಕೂದಲನ್ನೂ ಗಡ್ಡವನ್ನೂ ಕಣ್ಣು ಹುಬ್ಬುಗಳನ್ನೂ ಮಾತ್ರವಲ್ಲದೆ ತನ್ನ ಎಲ್ಲಾ ಕೂದಲನ್ನೂ ಕ್ಷೌರಮಾಡಿಸಿಕೊಳ್ಳಬೇಕು; ಅವನು ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು; ಇದಲ್ಲದೆ ತನ್ನ ದೇಹವನ್ನು ಸಹ ನೀರಿನಲ್ಲಿ ತೊಳೆಯಬೇಕು. ಆಗ ಅವನು ಶುದ್ಧನಾಗಿರುವನು.
10 `And on the eighth day he taketh two lambs, perfect ones, and one ewe-lamb, daughter of a year, a perfect one, and three tenth deals of flour `for' a present, mixed with oil, and one log of oil.ಎಂಟನೆಯ ದಿವಸದಲ್ಲಿ ಅವನು ದೋಷವಿಲ್ಲದ ಎರಡು ಕುರಿಮರಿ ಗಳನ್ನು ಒಂದು ವರುಷದ ದೋಷವಿಲ್ಲದ ಹೆಣ್ಣು ಕುರಿಯನ್ನು ಆಹಾರ ಸಮರ್ಪಣೆಗಾಗಿ ಹತ್ತರಲ್ಲಿ ಮೂರರಷ್ಟು ಎಣ್ಣೆ ಬೆರೆಸಿದ ನಯವಾದ ಹಿಟ್ಟನ್ನೂ ಒಂದು ಸೇರಿನಷ್ಟು ಎಣ್ಣೆಯನ್ನೂ ತೆಗೆದುಕೊಳ್ಳಬೇಕು.
11 `And the priest who is cleansing hath caused the man who is to be cleansed to stand with them before Jehovah, at the opening of the tent of meeting,ಅವನನ್ನು ಶುದ್ಧಪಡಿಸುವ ಯಾಜಕನು ಶುದ್ಧ ಪಡಿಸಿಕೊಳ್ಳುವವನನ್ನೂ ಆ ವಸ್ತುಗಳನ್ನೂ ಸಭೆಯ ಗುಡಾರದ ಬಾಗಿಲಿನ ಬಳಿಯಲ್ಲಿ ಕರ್ತನ ಮುಂದೆ ನಿಲ್ಲಿಸಬೇಕು.
12 and the priest hath taken the one he-lamb, and hath brought it near for a guilt-offering, also the log of oil, and hath waved them -- a wave offering before Jehovah.ಆಗ ಯಾಜಕನು ಒಂದು ಗಂಡು ಕುರಿಮರಿಯನ್ನೂ ಒಂದು ಸೇರಿನಷ್ಟು ಎಣ್ಣೆಯನ್ನೂ ತೆಗೆದುಕೊಂಡು ಅಪರಾಧ ಬಲಿಗಾಗಿ ಸಮರ್ಪಿಸಿ ಅವುಗಳನ್ನು ಆಡಿಸುವ ಸಮರ್ಪಣೆಗಾಗಿ ಕರ್ತನ ಎದುರಿನಲ್ಲಿ ಆಡಿಸಬೇಕು.
13 `And he hath slaughtered the lamb in the place where he slaughtereth the sin-offering and the burnt-offering, in the holy place; for like the sin-offering the guilt-offering is to the priest; it `is' most holy.ಇದಲ್ಲದೆ ಅವನು ಆ ಕುರಿಮರಿಯನ್ನು ಪರಿಶುದ್ಧ ಸ್ಥಳದಲ್ಲಿ ಪಾಪಬಲಿಯನ್ನೂ ದಹನಬಲಿಯನ್ನೂ ವಧಿಸುವ ಸ್ಥಳದಲ್ಲಿ ವಧಿಸಬೇಕು; ಯಾಕಂದರೆ ಪಾಪಬಲಿಯಂತೆಯೇ ಅಪರಾಧ ಬಲಿಯೂ ಯಾಜಕನದಾಗಿದೆ, ಅದು ಅತಿ ಪರಿಶುದ್ಧವಾದದ್ದು.
14 `And the priest hath taken of the blood of the guilt-offering, and the priest hath put on the tip of the right ear of him who is to be cleansed, and on the thumb of his right hand, and on the great toe of his right foot;ಯಾಜಕನು ಅಪರಾಧ ಬಲಿ ಯಲ್ಲಿ ಸ್ವಲ್ಪ ರಕ್ತವನ್ನು ತೆಗೆದುಕೊಳ್ಳಬೇಕು ಅದನ್ನು ಶುದ್ಧಪಡಿಸಿಕೊಳ್ಳುವವನ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆರಳಿಗೆ ಹಚ್ಚಬೇಕು.
15 and the priest hath taken of the log of oil, and hath poured on the left palm of the priest,ಯಾಜಕನು ಸೇರೆಣ್ಣೆಯಲ್ಲಿ ಸ್ವಲ್ಪ ತೆಗೆದುಕೊಂಡು ತನ್ನ ಸ್ವಂತ ಎಡ ಅಂಗೈಯಲ್ಲಿ ಹೊಯ್ಯಬೇಕು.
16 and the priest hath dipped his right finger in the oil which `is' on his left palm, and hath sprinkled of the oil with his finger seven times before Jehovah.ಯಾಜಕನು ತನ್ನ ಎಡಗೈಯಲ್ಲಿರುವ ಎಣ್ಣೆಯಲ್ಲಿ ತನ್ನ ಬಲಗೈ ಬೆರಳನ್ನು ಅದ್ದಿ ಬೆರಳಿನಿಂದ ಎಣ್ಣೆಯನ್ನು ಏಳುಸಾರಿ ಕರ್ತನ ಎದುರಿನಲ್ಲಿ ಚಿಮುಕಿಸ ಬೇಕು.
17 `And of the residue of the oil which `is' on his palm, the priest putteth on the tip of the right ear of him who is to be cleansed, and on the thumb of his right hand, and on the great toe of his right foot, on the blood of the guilt-offering;ತನ್ನ ಕೈಯಲ್ಲಿ ಮಿಕ್ಕಿದ ಎಣ್ಣೆಯನ್ನು ಯಾಜಕನು ಶುದ್ಧಪಡಿಸಿಕೊಳ್ಳವವನ ಬಲಗಿವಿಯ ತುದಿಗೂ ಮತ್ತು ಬಲಗೈಯ ಹೆಬ್ಬೆರಳಿಗೆ ಬಲಗಾಲಿನ ಹೆಬ್ಬೆರಳಿಗೆ ಹಚ್ಚ ಬೇಕು.
18 and the remnant of the oil which `is' on the palm of the priest, he putteth on the head of him who is to be cleansed, and the priest hath made atonement for him before Jehovah.ಯಾಜಕನ ಕೈಯಲ್ಲಿ ಮಿಕ್ಕಿದ್ದ ಆ ಎಣ್ಣೆಯನ್ನು ಶುದ್ಧಪಡಿಸಿಕೊಳ್ಳುವವನ ತಲೆಯ ಮೇಲೆ ಹೊಯ್ಯ ಬೇಕು. ಯಾಜಕನು ಅವನಿಗಾಗಿ ಕರ್ತನ ಎದುರಿನಲ್ಲಿ ಪ್ರಾಯಶ್ಚಿತ್ತಮಾಡಬೇಕು.
19 `And the priest hath made the sin-offering, and hath made atonement for him who is to be cleansed from his uncleanness, and afterwards he doth slaughter the burnt-offering;ಇದಲ್ಲದೆ ಯಾಜಕನು ಪಾಪದ ಬಲಿಯನ್ನು ಸಮರ್ಪಿಸಿ ಶುದ್ಧಪಡಿಸಿಕೊಳ್ಳುವ ವನಿಗೋಸ್ಕರ ಅವನ ಅಶುದ್ಧತೆಗಾಗಿ ಪ್ರಾಯಶ್ಚಿತ್ತ ಮಾಡಬೇಕು; ತರುವಾಯ ಅವನು ದಹನಬಲಿಯನ್ನು ವಧಿಸಬೇಕು.
20 and the priest hath caused the burnt-offering to ascend, also the present, on the altar, and the priest hath made atonement for him, and he hath been clean.ಯಾಜಕನು ದಹನಬಲಿಯನ್ನೂ ಆಹಾರ ಸಮರ್ಪಣೆಯನ್ನೂ ಯಜ್ಞವೇದಿಯ ಮೇಲೆ ಸಮರ್ಪಿಸಬೇಕು. ಇದಲ್ಲದೆ ಯಾಜಕನು ಅವನಿಗೋ ಸ್ಕರ ಪ್ರಾಯಶ್ಚಿತ್ತವನ್ನು ಮಾಡಬೇಕು. ಆಗ ಅವನು ಶುದ್ಧನಾಗಿರುವನು.
21 `And if he `is' poor, and his hand is not reaching `these things', then he hath taken one lamb -- a guilt-offering, for a wave-offering, to make atonement for him, and one-tenth deal of flour mixed with oil for a present, and a log of oil,ಅವನು ಬಡವನಾಗಿದ್ದರೆ ಅಷ್ಟೊಂದು ತರುವದಕ್ಕೆ ಆಗದಿದ್ದರೆ ತನ್ನ ಪ್ರಾಯಶ್ಚಿತ್ತ ಅಪರಾಧದ ಬಲಿಗಾಗಿ ಆಡಿಸುವದಕ್ಕೆ ಒಂದು ಕುರಿ ಮರಿಯನ್ನೂ ಎಣ್ಣೆಬೆರೆಸಿದ ಹತ್ತರಲ್ಲೊಂದು ಭಾಗ ನಯವಾದ ಹಿಟ್ಟನ್ನೂ ಒಂದು ಸೇರಿನಷ್ಟು ಎಣ್ಣೆಯನ್ನೂ
22 and two turtle-doves, or two young pigeons, which his hand reacheth to, and one hath been a sin-offering, and the one a burnt-offering;ಅವನಿಂದಾಗುವಷ್ಟು ಎರಡು ಬೆಳವಗಳನ್ನು ಎರಡು ಪಾರಿವಾಳದ ಮರಿಗಳನ್ನು ತಕ್ಕೊಳ್ಳಬೇಕು; ಅವುಗಳಲ್ಲಿ ಒಂದು ಪಾಪಬಲಿಗಾಗಿಯೂ ಇನ್ನೊಂದು ದಹನ ಬಲಿಗಾಗಿಯೂ ಇರುವದು.
23 and he hath brought them in on the eighth day for his cleansing unto the priest, unto the opening of the tent of meeting, before Jehovah.ಅವನು ತನ್ನ ಅಶುದ್ಧತೆ ಗಾಗಿ ಎಂಟನೆಯ ದಿನದಲ್ಲಿ ಇವುಗಳನ್ನು ಸಭೆಯ ಗುಡಾರದ ಬಾಗಿಲ ಬಳಿಗೆ ಯಾಜಕನ ಹತ್ತಿರಕ್ಕೆ ಕರ್ತನ ಎದುರಿನಲ್ಲಿ ತರಬೇಕು.
24 `And the priest hath taken the lamb of the guilt-offering, and the log of oil, and the priest hath waved them -- a wave-offering before Jehovah;ಯಾಜಕನು ಅಪರಾಧದ ಬಲಿಯ ಆ ಕುರಿಮರಿಯನ್ನೂ ಸೇರಿನಷ್ಟು ಎಣ್ಣೆಯನ್ನೂ ತೆಗೆದುಕೊಳ್ಳಬೇಕು. ಯಾಜಕನು ಕರ್ತನ ಸನ್ನಿಧಿಯಲ್ಲಿ ಆಡಿಸುವ ಸಮರ್ಪಣೆಗಾಗಿ ಅವುಗಳನ್ನು ಆಡಿಸಬೇಕು.
25 and he hath slaughtered the lamb of the guilt-offering, and the priest hath taken of the blood of the guilt-offering, and hath put on the tip of the right ear of him who is to be cleansed, and on the thumb of his right hand, and on the great toe of his right foot;ಅವನು ಅಪರಾಧದ ಬಲಿಗಾಗಿ ಕುರಿಮರಿಯನ್ನು ವಧಿಸಬೇಕು. ಅಪರಾಧದ ಬಲಿಯ ಸ್ವಲ್ಪ ರಕ್ತವನ್ನು ಯಾಜಕನು ತೆಗೆದುಕೊಂಡು ಶುದ್ಧಪಡಿಸಿಕೊಳ್ಳುವವನ ಬಲಗಿವಿಯ ತುದಿಗೂ ಮೇಲೆಯೂ ಅವನ ಬಲಗೈಯ ಹೆಬ್ಬೆರಳಿಗೆ ಹಚ್ಚಬೇಕು.
26 and the priest doth pour of the oil on the left palm of the priest;ಮತ್ತು ಯಾಜಕನು ತನ್ನ ಎಡ ಅಂಗೈಯಲ್ಲಿ ಎಣ್ಣೆಯನ್ನು ಹೊಯಿದುಕೊಂಡು
27 and the priest hath sprinkled with his right finger of the oil which `is' on his left palm, seven times before Jehovah.ತನ್ನ ಬಲಗೈ ಬೆರಳಿನಿಂದ ತನ್ನ ಎಡಗೈಯಲ್ಲಿರುವ ಸ್ವಲ್ಪ ಎಣ್ಣೆಯನ್ನು ಏಳುಸಾರಿ ಕರ್ತನ ಎದುರಿನಲ್ಲಿ ಚಿಮುಕಿಸಬೇಕು.
28 `And the priest hath put of the oil which `is' on his palm, on the tip of the right ear of him who is to be cleansed, and on the thumb of his right hand, and on the great toe of his right foot, on the place of the blood of the guilt-offering;ಮತ್ತು ಯಾಜಕನು ತನ್ನ ಕೈಯಲ್ಲಿದ್ದ ಎಣ್ಣೆಯನ್ನು ಶುದ್ಧಪಡಿಸಿಕೊಳ್ಳುವವನ ಬಲಗಿವಿಯ ತುದಿಗೂ ಬಲಗೈಯ ಹೆಬ್ಬೆರಳಿಗೂ ಬಲಗಾಲಿನ ಹೆಬ್ಬೆರ ಳಿಗೂ ಅಪರಾಧಬಲಿಯ ರಕ್ತವನ್ನು ಹಚ್ಚಿದ ಸ್ಥಳದ ಮೇಲೆಯೂ ಹಚ್ಚಬೇಕು.
29 and the remnant of the oil which `is' on the palm of the priest he doth put on the head of him who is to be cleansed, to make atonement for him, before Jehovah.ಯಾಜಕನ ಕೈಯಲ್ಲಿ ಮಿಕ್ಕಿದ್ದ ಎಣ್ಣೆಯನ್ನು ಶುದ್ಧಪಡಿಸಿಕೊಳ್ಳುವವನ ತಲೆಯ ಮೇಲೆ ಹೊಯ್ದು ಕರ್ತನ ಎದುರಿನಲ್ಲಿ ಅವನಿಗಾಗಿ ಪ್ರಾಯಶ್ಚಿತ್ತಮಾಡಬೇಕು.
30 `And he hath made the one of the turtle-doves, or of the young pigeons (from that which his hand reacheth to,ಅವನು ತನ್ನ ಸ್ಥಿತಿಗೆ ತಕ್ಕಂತೆ ಒಂದು ಬೆಳವವನ್ನಾಗಲಿ ಪಾರಿವಾಳದ ಮರಿಯ ನ್ನಾಗಲಿ ಸಮರ್ಪಿಸಬೇಕು.
31 `even' that which his hand reacheth to), the one a sin-offering, and the one a burnt offering, besides the present, and the priest hath made atonement for him who is to be cleansed before Jehovah.ಅದರಂತೆಯೇ ಅವನು ತನ್ನಿಂದಾಗುವಷ್ಟು ಮೇರೆಗೆ ಒಂದನ್ನು ಪಾಪಬಲಿಗಾಗಿ ಇನ್ನೊಂದನ್ನು ದಹನಬಲಿಗಾಗಿ ಆಹಾರ ಸಮರ್ಪಣೆ ಯೊಂದಿಗೆ ಸಮರ್ಪಿಸಬೇಕು; ಶುದ್ಧಪಡಿಸಿಕೊಳ್ಳುವವ ನಿಗೋಸ್ಕರ ಯಾಜಕನು ಕರ್ತನ ಎದುರಿನಲ್ಲಿ ಪ್ರಾಯ ಶ್ಚಿತ್ತವನ್ನುಮಾಡಬೇಕು.
32 This `is' a law of him in whom `is' a plague of leprosy, whose hand reacheth not to his cleansing.'ಕುಷ್ಠರೋಗವುಳ್ಳವನಿಗಾಗಿ ಶುದ್ಧತೆಮಾಡಿಸಿಕೊಳ್ಳುವದರಲ್ಲಿ ಕೈಯಿಂದ ಆಗದಿರುವ ವನಿಗೆ ತನ್ನ ಶುದ್ಧತೆಗಾಗಿ ಇರುವ ನಿಯಮವು ಇದೇ.
33 And Jehovah speaketh unto Moses, and unto Aaron, saying,ಕರ್ತನು ಮೋಶೆ ಮತ್ತು ಆರೋನರೊಂದಿಗೆ ಮಾತನಾಡಿ ಹೇಳಿದ್ದೇನಂದರೆ--
34 `When ye come in unto the land of Canaan, which I am giving to you for a possession, and I have put a plague of leprosy in a house `in' the land of your possession;ನಾನು ನಿಮಗೆ ಸ್ವಾಸ್ತ್ಯವಾಗಿ ಕೊಡುವದಕ್ಕಿರುವ ಕಾನಾನ್ ದೇಶದೊ ಳಗೆ ನೀವು ಬಂದಾಗ ನಿಮಗೆ ಸ್ವಾಸ್ತ್ಯವಾಗಿ ಕೊಡುವ ಮನೆಯಲ್ಲಿ ಕುಷ್ಠವನ್ನು ಬರಮಾಡಿದಾಗ
35 then hath he whose the house `is' come in and declared to the priest, saying, As a plague hath appeared to me in the house;ಆ ಮನೆ ಯವನು ಯಾಜಕನ ಬಳಿಗೆ ಬಂದು--ನನ್ನ ಮನೆಯಲ್ಲಿ ವ್ಯಾಧಿಯಿರುವ ಹಾಗೆ ನನಗೆ ಕಾಣುತ್ತದೆ ಎಂದು ಹೇಳಬೇಕು.
36 and the priest hath commanded, and they have prepared the house before the priest cometh in to see the plague (that all which `is' in the house be not unclean), and afterwards doth the priest come in to see the house;ಆಗ ಯಾಜಕನು ಆ ಮನೆಯಲ್ಲಿ ವ್ಯಾಧಿಯನ್ನು ನೋಡುವದಕ್ಕೆ ಹೋಗುವ ಮೊದಲು ಆ ಮನೆಯೊಳಗೆ ಇರುವವುಗಳು ಅಶುದ್ಧಮಾಡಲ್ಪಡ ದಂತೆ ಆ ಮನೆಯು ಬರಿದು ಮಾಡಲ್ಪಡಬೇಕೆಂದು ಆಜ್ಞಾಪಿಸಬೇಕು; ತರುವಾಯ ಯಾಜಕನು ಮನೆಯನ್ನು ನೋಡುವದಕ್ಕೆ ಒಳಗೆ ಹೋಗಬೇಕು.
37 and he hath seen the plague, and lo, the plague `is' in the walls of the house, hollow strakes, very green or very red, and their appearance `is' lower than the wall,ಅವನು ಆ ವ್ಯಾಧಿಯನ್ನು ನೋಡಿದಾಗ ಇಗೋ, ಆ ವ್ಯಾಧಿಯು ಮನೆಯ ಗೋಡೆಗಳಲ್ಲಿಯಾದರೂ ತಗ್ಗಾದ ಸಾಲು ಗಳಲ್ಲಿ ಹಸುರಾಗಿಯಾದರೂ ಕೆಂಪಾಗಿ ಗೋಡೆಯ ಮಟ್ಟಕ್ಕಿಂತ ತಗ್ಗಿನಲ್ಲಿ ತೋರಿಬಂದರೆ
38 and the priest hath gone out of the house unto the opening of the house, and hath shut up the house seven days.ಯಾಜಕನು ಆ ಮನೆಯ ಹೊರಗೆ ಮನೆಯಬಾಗಿಲ ಬಳಿಗೆ ಹೋಗಿ ಅದನ್ನು ಏಳು ದಿವಸಗಳ ವರೆಗೆ ಮುಚ್ಚಿಡಬೇಕು.
39 `And the priest hath turned back on the seventh day, and hath seen, and lo, the plague hath spread in the walls of the house,ಏಳನೆಯ ದಿನದಲ್ಲಿ ಯಾಜಕನು ತಿರಿಗಿಬಂದು ನೋಡಿದಾಗ ಇಗೋ, ಆ ವ್ಯಾಧಿಯು ಮನೆಯ ಗೋಡೆಗಳಲ್ಲಿ ಹರಡಿಕೊಂಡಿದ್ದರೆ
40 and the priest hath commanded, and they have drawn out the stones in which the plague `is', and have cast them unto the outside of the city, unto an unclean place;ವ್ಯಾಧಿಯುಳ್ಳ ಕಲ್ಲುಗಳನ್ನು ಅವರು ತೆಗೆದು ಪಟ್ಟಣದ ಆಚೆಗೆ ಅಶುದ್ಧ ಸ್ಥಳದಲ್ಲಿ ಬಿಸಾಡಬೇಕೆಂದೂ
41 and the house he doth cause to be scraped within round about, and they have poured out the clay which they have scraped off, at the outside of the city, at an unclean place;ಆ ಮನೆಯ ಒಳ ಭಾಗದಲ್ಲಿ ಸುತ್ತಲೂ ಕೆರೆದು, ಕೆರೆದ ಧೂಳನ್ನು ಪಟ್ಟಣದ ಹೊರಗೆ ಅಶುದ್ಧ ಸ್ಥಳದಲ್ಲಿ ಸುರಿಯ ಬೇಕೆಂದೂ
42 and they have taken other stones, and brought `them' in unto the place of the stones, and other clay he taketh and hath daubed the house.ಅವರು ಆ ಕಲ್ಲುಗಳಿಗೆ ಬದಲಾಗಿ ಬೇರೆ ಕಲ್ಲುಗಳನ್ನು ತೆಗೆದುಕೊಳ್ಳಬೇಕೆಂದೂ ಯಾಜಕನು ಆಜ್ಞಾಪಿಸಬೇಕು; ಅವನು ಬೇರೆ ಗಾರೆಯಿಂದ ಆ ಮನೆಗೆ ಗಿಲಾವು ಮಾಡಬೇಕು.
43 `And if the plague return, and hath broken out in the house, after he hath drawn out the stones, and after the scraping of the house, and after the daubing;ಅವನು ಆ ಮನೆಯ ಕಲ್ಲುಗಳನ್ನು ತೆಗೆಸಿ ಅದನ್ನು ಕೆರೆದು ಗಿಲಾವು ಮಾಡಿಸಿದ ಮೇಲೆ ಆ ವ್ಯಾಧಿಯು ತಿರಿಗಿ ಕಾಣಬಂದರೆ
44 then hath the priest come in and seen, and lo, the plague hath spread in the house; it `is' a fretting leprosy in the house; it `is' unclean.ಯಾಜಕನು ಬಂದು ನೋಡ ಬೇಕು. ಆಗ ಇಗೋ, ವ್ಯಾಧಿಯು ಮನೆಯಲ್ಲಿ ಹರಡಿ ಕೊಂಡಿದ್ದರೆ ಆ ಮನೆಯಲ್ಲಿ ಅದೊಂದು ಪೀಡಿ ಸುವ ಕುಷ್ಠವಾಗಿರುವದು; ಅದು ಅಶುದ್ಧವಾದದ್ದು.
45 `And he hath broken down the house, its stones, and its wood, and all the clay of the house, and he hath brought `them' forth unto the outside of the city, unto an unclean place.ಅವನು ಆ ಮನೆಯನ್ನು ಕೆಡವಿಹಾಕಿ ಅದರ ಕಲ್ಲು ಗಳನ್ನೂ ಮರಗಳನ್ನೂ ಆ ಮನೆಯ ಎಲ್ಲಾ ಧೂಳನ್ನೂ ತೆಗೆದು ಅವುಗಳನ್ನು ಪಟ್ಟಣದ ಹೊರಗೆ ಅಶುದ್ಧವಾದ ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕು.
46 `And he who is going in unto the house all the days he hath shut it up, is unclean till the evening;ಇದಲ್ಲದೆ ಆ ಮನೆಯು ಮುಚ್ಚಲ್ಪಟ್ಟ ಕಾಲದಲ್ಲೆಲ್ಲಾ ಅದರೊಳಗೆ ಹೋಗುವವನು ಸಾಯಂಕಾಲದ ವರೆಗೆ ಅಶುದ್ಧ ನಾಗಿರುವನು.
47 and he who is lying in the house doth wash his garments; and he who is eating in the house doth wash his garments.ಆ ಮನೆಯೊಳಗೆ ಮಲಗಿಕೊಳ್ಳುವ ವನೂ ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು, ಅಲ್ಲದೆ ಆ ಮನೆಯೊಳಗೆ ತಿನ್ನುವವನೂ ತನ್ನ ಬಟ್ಟೆಗಳನ್ನು ತೊಳೆದುಕೊಳ್ಳಬೇಕು.
48 `And if the priest certainly come in, and hath seen, and lo, the plague hath not spread in the house after the daubing of the house, then hath the priest pronounced the house clean, for the plague hath been healed.ಆದರೆ ಯಾಜಕನು ಒಳಗೆ ಬಂದು ಅದನ್ನು ನೋಡಿದಾಗ ಇಗೋ, ಗಿಲಾವು ಮಾಡಿದ ನಂತರ ಆ ಮನೆಯಲ್ಲಿ ಆ ವ್ಯಾಧಿಯು ಹರಡಿಕೊಂಡಿರದಿದ್ದರೆ ಆ ಮನೆಯು ಶುದ್ಧವೆಂದು ಯಾಜಕನು ನಿರ್ಣಯಿಸ ಬೇಕು. ಆ ವ್ಯಾಧಿಯು ಸ್ವಸ್ಥವಾಯಿತು.
49 `And he hath taken for the cleansing of the house two birds, and cedar wood, and scarlet, and hyssop;ಆ ಮನೆ ಯನ್ನು ಶುದ್ಧಪಡಿಸುವದಕ್ಕೊಸ್ಕರ ಎರಡು ಪಕ್ಷಿಗಳನ್ನೂ ದೇವದಾರು ಕಟ್ಟಿಗೆಯನ್ನೂ ರಕ್ತವರ್ಣವುಳ್ಳ ದಾರವನ್ನೂ ಹಿಸ್ಸೋಪನ್ನೂ ತೆಗೆದುಕೊಳ್ಳಬೇಕು.
50 and he hath slaughtered the one bird upon an earthen vessel, over running water;ಆ ಪಕ್ಷಿಗಳಲ್ಲಿ ಒಂದನ್ನು ಹರಿಯುವ ನೀರಿನ ಮೇಲೆ ಒಂದು ಮಣ್ಣಿನ ಪಾತ್ರೆಯಲ್ಲಿ ವಧಿಸಬೇಕು.
51 and he hath taken the cedar wood, and the hyssop, and the scarlet, and the living bird, and hath dipped them in the blood of the slaughtered bird, and in the running water, and hath sprinkled upon the house seven times.ತರುವಾಯ ದೇವದಾರು ಕಟ್ಟಿಗೆಯನ್ನೂ ಹಿಸ್ಸೋಪನ್ನೂ ರಕ್ತವರ್ಣವುಳ್ಳ ದಾರ ವನ್ನೂ ಸಜೀವವುಳ್ಳ ಪಕ್ಷಿಯನ್ನೂ ತೆಗೆದುಕೊಂಡು ಅವುಗಳನ್ನು ವಧಿಸಲ್ಪಟ್ಟ ಪಕ್ಷಿಯ ರಕ್ತದಲ್ಲಿ ಮತ್ತು ಹರಿಯುವ ನೀರಿನಲ್ಲಿ ಅದ್ದಿ ಏಳುಸಾರಿ ಆ ಮನೆಗೆ ಚಿಮುಕಿಸಬೇಕು.
52 `And he hath cleansed the house with the blood of the bird, and with the running water, and with the living bird, and with the cedar wood, and with the hyssop, and with the scarlet;ಅವನು ಪಕ್ಷಿಯ ರಕ್ತದಿಂದಲೂ ಹರಿಯುವ ನೀರಿನಿಂದಲೂ ಸಜೀವವುಳ್ಳ ಪಕ್ಷಿ ಯಿಂದಲೂ ದೇವದಾರು ಕಟ್ಟಿಗೆಯಿಂದಲೂ ಹಿಸ್ಸೋಪಿ ನಿಂದಲೂ ರಕ್ತವರ್ಣವುಳ್ಳ ದಾರದಿಂದಲೂ ಆ ಮನೆ ಯನ್ನು ಶುದ್ಧೀಕರಿಸಬೇಕು.
53 and he hath sent away the living bird unto the outside of the city unto the face of the field, and hath made atonement for the house, and it hath been clean.ಆದರೆ ಸಜೀವವುಳ್ಳ ಆ ಪಕ್ಷಿಯನ್ನು ಪಟ್ಟಣದ ಆಚೆಗೆ ಬಯಲಾದ ಹೊಲ ಗಳಲ್ಲಿ ಹೋಗಬಿಡಬೇಕು; ಆ ಮನೆಗೋಸ್ಕರ ಪಾಪದ ಪ್ರಾಯಶ್ಚಿತ್ತವನ್ನು ಮಾಡಬೇಕು; ಆಗ ಅದು ಶುದ್ಧ ವಾಗಿರುವದು.
54 `This `is' the law for every plague of the leprosy and for scall,ಎಲ್ಲಾ ವಿಧವಾದ ಕುಷ್ಠವ್ಯಾಧಿಗೂ ಇಸಬಿಗೂ
55 and for leprosy of a garment, and of a house,ಬಟ್ಟೆಯ ಮತ್ತು ಮನೆಯ ಕುಷ್ಠಕ್ಕೂ
56 and for a rising, and for a scab, and for a bright spot, --ಬಾವು ಚರ್ಮವ್ಯಾಧಿಗೂ ಹೊಳೆಯುವ ಕಲೆಗೂ ನಿಯಮವು ಇದೇ.
57 to direct in the day of being unclean, and in the day of being clean; this `is' the law of the leprosy.'ಅದು ಯಾವಾಗ ಅಶುದ್ಧವಾಗಿರುತ್ತದೋಯಾವಾಗ ಶುದ್ಧವಾಗಿರುತ್ತದೋ ಎಂದು ಅದನ್ನು ಬೋಧಿಸುವ ಹಾಗೆ ಕುಷ್ಠರೋಗದ ವಿಷಯದಲ್ಲಿರುವ ನಿಯಮವು ಇದೇ.
Kannada Bible