Bible

Lamentations 5 - YLT (Kannada)

1 Remember, O Jehovah, what hath befallen us, Look attentively, and see our reproach.ಓ ಕರ್ತನೇ, ನನ್ನ ಮೇಲೆ ಬಂದ ದುರ್ಗತಿಯನ್ನು ಜ್ಞಾಪಕಮಾಡಿಕೋ ಪರಿಗಣಿಸು, ನಮ್ಮ ನಿಂದೆಯನ್ನು ನೋಡು.

2 Our inheritance hath been turned to strangers, Our houses to foreigners.ನಮ್ಮ ಸ್ವಾಸ್ತ್ಯವು ಅಪರಿಚಿತರಿಗೂ ನಮ್ಮ ಮನೆಗಳು ಅನ್ಯರಿಗೂ ವಶ ವಾದವು.

3 Orphans we have been -- without a father, our mothers `are' as widows.ನಾವು ಅನಾಥರು ತಂದೆ ಇಲ್ಲದವರು, ನಮ್ಮ ತಾಯಿಂದಿರು ವಿಧವೆಯರು.

4 Our water for money we have drunk, Our wood for a price doth come.ನಾವು ನಮ್ಮ ನೀರನ್ನು ಹಣ ಕೊಟ್ಟು ಕುಡಿದಿದ್ದೇವೆ, ನಮ್ಮ ಸೌದೆಯು ನಮಗೆ ಮಾರಲ್ಪಟ್ಟಿದೆ.

5 For our neck we have been pursued, We have laboured -- there hath been no rest for us.ನಮ್ಮ ಕುತ್ತಿಗೆಗಳು ಹಿಂಸೆಗೊಳ ಗಾದವು; ನಾವು ವಿಶ್ರಾಂತಿಯಿಲ್ಲದೆ ಕಷ್ಟಪಡುತ್ತೇವೆ.

6 `To' Egypt we have given a hand, `To' Asshur, to be satisfied with bread.ರೊಟ್ಟಿಯಿಂದ ತೃಪ್ತಿಪಡುವದಕ್ಕಾಗಿ ನಮ್ಮ ಕೈಯನ್ನು ಐಗುಪ್ತ್ಯರಿಗೂ ಅಶ್ಶೂರ್ಯರಿಗೂ ಕೊಟ್ಟಿದ್ದೇವೆ.

7 Our fathers have sinned -- they are not, We their iniquities have borne.ನಮ್ಮ ತಂದೆಗಳು ಪಾಪ ಮಾಡಿ ಇಲ್ಲದೆ ಹೋದರು; ನಾವು ಅವರ ಅಕ್ರಮಗಳನ್ನು ಹೊರುತ್ತೇವೆ.

8 Servants have ruled over us, A deliverer there is none from their hand.ಆಳುಗಳು ನಮ್ಮ ಮೇಲೆ ಆಳಿದ್ದಾರೆ; ಯಾರೂ ಅವರ ಕೈಯಿಂದ ನಮ್ಮನ್ನು ತಪ್ಪಿಸುವದಿಲ್ಲ.

9 With our lives we bring in our bread, Because of the sword of the wilderness.ಅಡವಿ ಕತ್ತಿಯ ನಿಮಿತ್ತ ಪ್ರಾಣ ಸಂಕಟದಿಂದ ನಮಗೆ ರೊಟ್ಟಿ ಸಿಕ್ಕಿದೆ.

10 Our skin as an oven hath been burning, Because of the raging of the famine.ಭಯಂಕರವಾದ ಕ್ಷಾಮದಿಂದ ನಮ್ಮ ಚರ್ಮ ಒಲೆಯ ಹಾಗೆ ಕಪ್ಪಾಗಿದೆ.

11 Wives in Zion they have humbled, Virgins -- in cities of Judah.ಅವರು ಚೀಯೋನಿನಲ್ಲಿ ಹೆಂಗಸರನ್ನೂ ಯೆಹೂದದ ನಗರಗಳಲ್ಲಿ ಕನ್ಯೆಯರನ್ನೂ ಕೆಡಿಸಿದರು.

12 Princes by their hand have been hanged, The faces of elders have not been honoured.ಪ್ರಭುಗಳು ಅವರ ಕೈಯಿಂದ ಗಲ್ಲಿಗೇರಿಸಲ್ಪಟ್ಟರು; ಹಿರಿಯರ ಮುಖಗಳು ಗೌರವಿ ಸಲ್ಪಡಲಿಲ್ಲ.

13 Young men to grind they have taken, And youths with wood have stumbled.ಅವರು ಯೌವನಸ್ಥರನ್ನು ಅರೆಯು ವದಕ್ಕೆ ತೆಗೆದುಕೊಂಡರು; ಮಕ್ಕಳು ಕಟ್ಟಿಗೆಯ ಕೆಳಗೆ ಬಿದ್ದರು.

14 The aged from the gate have ceased, Young men from their song.ಹಿರಿಯರು ಬಾಗಿಲನ್ನು ಪ್ರವೇಶಿಸುವದೂ ಯೌವನಸ್ಥರು ಸಂಗೀತವನ್ನು ಹಾಡುವದೂ ನಿಂತು ಹೋಯಿತು.

15 Ceased hath the joy of our heart, Turned to mourning hath been our dancing.ನಮ್ಮ ಹೃದಯದ ಸಂತೋಷವು ನಿಂತುಹೋಯಿತು; ನಮ್ಮ ನಾಟ್ಯವು ದುಃಖದ ಕಡೆಗೆ ತಿರುಗಿತು.

16 Fallen hath the crown `from' our head, Wo `is' now to us, for we have sinned.ಕಿರೀಟವು ನಮ್ಮ ತಲೆಯ ಮೇಲಿಂದ ಬಿದ್ದು ಹೋಯಿತು; ನಮಗೆ ಅಯ್ಯೋ, ನಾವು ಪಾಪಮಾಡಿದ್ದೇವೆ.

17 For this hath our heart been sick, For these have our eyes been dim.ಇದಕ್ಕಾಗಿ ನಮ್ಮ ಹೃದಯವು ದುರ್ಬಲವಾಗಿದೆ; ಇವುಗಳಿಂದ ನಮ್ಮ ಕಣ್ಣುಗಳು ಮೊಬ್ಬಾಗಿವೆ.

18 For the mount of Zion -- that is desolate, Foxes have gone up on it.ಚೀಯೋನ್‌ ಪರ್ವತವು ಹಾಳಾಗಿರು ವದರಿಂದಲೇ ನರಿಗಳು ಅವುಗಳ ಮೇಲೆ ತಿರುಗಾಡು ವವು.

19 Thou, O Jehovah, to the age remainest, Thy throne to generation and generation.ಓ ಕರ್ತನೇ, ನೀನು ಎಂದೆಂದಿಗೂ ಇರುತ್ತೀ. ನಿನ್ನ ಸಿಂಹಾಸನವು ತಲತಲಾಂತರಗಳ ವರೆಗೂ ಇರು ವದು.

20 Why for ever dost Thou forget us? Thou forsakest us for length of days!ಆದಕಾರಣ ನೀನು ನಮ್ಮನ್ನು ಮರೆಯು ವದೇಕೆ? ಯಾಕೆ ನಮ್ಮನ್ನು ಇಷ್ಟು ಕಾಲ ಕೈಬಿಟ್ಟಿದ್ದೀ?

21 Turn us back, O Jehovah, unto Thee, And we turn back, renew our days as of old.ಕರ್ತನೇ, ನಮ್ಮನ್ನು ನಿನ್ನ ಕಡೆಗೆ ತಿರುಗಿಸು; ಆಗ ನಾವು ತಿರುಗಿಕೊಳ್ಳುವೆವು, ಹಳೆಯ ದಿನಗಳ ಹಾಗೆ ನಮ್ಮ ದಿನಗಳನ್ನು ನೂತನಮಾಡು.

22 For hast Thou utterly rejected us? Thou hast been wroth against us -- exceedingly?ಆದರೆ ನಮ್ಮನ್ನು ಪೂರ್ಣವಾಗಿ ತಳ್ಳಿಬಿಟ್ಟಿರುವಿ; ನಮಗೆ ವಿರುದ್ಧವಾಗಿ ನೀನು ಬಹಳ ಕೋಪಗೊಂಡಿರುವಿ.

Kannada Bible