Bible

Psalm 95 - WEB (Kannada)

1 Oh come, let's sing to Yahweh. Let's shout aloud to the rock of our salvation!ಬನ್ನಿರಿ, ಕರ್ತನಿಗೆ ಉತ್ಸಾಹ ಧ್ವನಿಮಾಡುವಾ ನಮ್ಮ ರಕ್ಷಣೆಯ ಬಂಡೆಗೆ ಜಯಧ್ವನಿ ಮಾಡೋಣ.

2 Let's come before his presence with thanksgiving. Let's extol him with songs!ಸ್ತೋತ್ರದಿಂದ ಆತನ ಸನ್ನಿಧಿಯ ಮುಂದೆ ಬಂದು ಕೀರ್ತನೆಗಳಿಂದ ಆತನಿಗೆ ಆನಂದದ ಧ್ವನಿಮಾಡೋಣ.

3 For Yahweh is a great God, A great King above all gods.ಕರ್ತನು ದೊಡ್ಡ ದೇವರೂ ಎಲ್ಲಾ ದೇವರುಗಳ ಮೇಲೆ ದೊಡ್ಡ ಅರಸನೂ ಆಗಿದ್ದಾನೆ.

4 In his hand are the deep places of the earth. The heights of the mountains are also his.ಆತನ ಕೈಯಲ್ಲಿ ಭೂಮಿಯ ಆಳವಾದ ಸ್ಥಳಗಳು ಅವೆ; ಬೆಟ್ಟಗಳ ಬಲವು ಆತನದೇ.

5 The sea is his, and he made it. His hands formed the dry land.ಸಮುದ್ರವು ಆತನದು; ಆತನು ಅದನ್ನು ಮಾಡಿದನು; ಆತನ ಕೈಗಳು ಒಣಭೂಮಿಯನ್ನು ರೂಪಿಸಿದವು.

6 Oh come, let's worship and bow down. Let's kneel before Yahweh, our Maker,ಬನ್ನಿರಿ, ನಮ್ಮನ್ನು ಉಂಟುಮಾಡಿದ ಕರ್ತನ ಮುಂದೆ ಮೊಣಕಾಲು ಊರೋಣ ಆತನಿಗೆ ಎರಗಿ ಆರಾಧಿಸೋಣ.

7 For he is our God. We are the people of his pasture, And the sheep in his care. Today, oh that you would hear his voice!ಆತನು ನಮ್ಮ ದೇವರು; ನಾವು ಆತನು ಮೇಯಿಸುವ ಜನರೂ ಆತನ ಕೈ ಕೆಳಗಿರುವ ಹಿಂಡೂ ಆಗಿದ್ದೇವೆ. ನೀವು ಈ ಹೊತ್ತು ಆತನ ಸ್ವರವನ್ನು ಕೇಳಿದರೆ

8 Don't harden your heart, as at Meribah, As in the day of Massah in the wilderness,ಅರಣ್ಯದಲ್ಲಿ ಆದ ಶೋಧನೆಯ ದಿವಸದಲ್ಲಿ ಕೋಪವನ್ನೆಬ್ಬಿಸಿದಂತೆ ನಿಮ್ಮ ಹೃದ ಯವನ್ನು ಕಠಿಣಮಾಡಿಕೊಳ್ಳಬೇಡಿರಿ.

9 When your fathers tempted me, Tested me, and saw my work.ಅಲ್ಲಿ ನಿಮ್ಮ ತಂದೆಗಳು ನನ್ನನ್ನು ಶೋಧಿಸಿ, ಪರೀಕ್ಷಿಸಿದರು; ನನ್ನ ಕೆಲಸವನ್ನು ನೋಡಿದರು.

10 Forty long years I was grieved with that generation, And said, "It is a people that errs in their heart. They have not known my ways."ನಾಲ್ವತ್ತು ವರುಷ ಆ ಸಂತತಿಗೆ ಬೇಸರಗೊಂಡು--ಇವರು ತಮ್ಮ ಹೃದಯ ದಲ್ಲಿ ತಪ್ಪಿ ಹೋಗುವ ಜನರಾಗಿದ್ದಾರೆ; ನನ್ನ ಮಾರ್ಗ ಗಳನ್ನು ಅವರು ಅರಿಯರು ಅಂದೆನು.

11 Therefore I swore in my wrath, "They won't enter into my rest."ಆದದರಿಂದ ನನ್ನ ವಿಶ್ರಾಂತಿಯಲ್ಲಿ ಅವರು ಪ್ರವೇಶಿಸರೆಂದು ಕೋಪ ದಿಂದ ಆಣೆ ಇಟ್ಟುಕೊಂಡೆನು.

Kannada Bible